KSRTC BUS: ಸರ್ಕಾರಿ ಬಸ್ ನಲ್ಲಿ ಪ್ರಯಾಣ ಮಾಡುವವರಿಗೆ ಕೆಎಸ್ಆರ್ಟಿಸಿ ಸಾರಿಗೆ ಸಂಸ್ಥೆಯಿಂದ ಲಕ್ಷ ಲಕ್ಷ ದಂಡ ವಸೂಲಿ.!!
KSRTC BUS: ಹಲೋ ಸ್ನೇಹಿತರೇ, ಇಂದಿನ ಈ ಲೇಖನಕ್ಕೆ ಸ್ವಾಗತ, ಈ ಲೇಖನದ ಮುಖಾಂತರ ತಮಗೆಲ್ಲರಿಗೂ ತಿಳಿಸುವ ವಿಷಯ ಏನೆಂದರೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೆಎಸ್ಆರ್ಟಿಸಿ (KSRTC) ರಾಜ್ಯದ ಎಲ್ಲಾ ಭಾಗಗಳಿಗೆ ಸಾರಿಗೆ ಸೇವೆಗಳನ್ನು ಒದಗಿಸುತ್ತದೆ. ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯದಲ್ಲೂ ಉತ್ತಮ ಸೇವೆಗೆ ಹೆಸರುವಾಸಿಯಾಗಿದೆ. ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೆ ತಂದಿದ್ದು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಲಭ್ಯವಿದೆ. ಆದರೆ ಪುರುಷರಿಗೆ ಈ ಅವಕಾಶವಿಲ್ಲ. ಕೆಲವರು ಟಿಕೆಟ್ ಇಲ್ಲದೆ ಪ್ರಯಾಣ ಮಾಡಿ ದಂಡವನ್ನು ಕಟ್ಟಿದ್ದಾರೆ.
ನಮ್ಮ ರಾಜ್ಯದ ಸರ್ಕಾರಿ ಸಾರಿಗೆ ಬಸ್ ನಲ್ಲಿ ಟಿಕೆಟ್ ರಹಿತ ಪ್ರಯಾಣ, ಹಾಗೂ ಕಳ್ಳತನದಂತಹ ಸಾಕಷ್ಟು ಪ್ರಕರಣಗಳು ವರದಿಯಾಗಿವೆ. ಇದಕ್ಕೆ ಸಂಬಂಧಿಸಿದಂತೆ ಜೂನ್‌ನಲ್ಲಿ ಸಾರಿಗೆ ಸಚಿವಾಲಯದ ಅಧಿಕಾರಿಗಳು ಯೋಜಿತ ಮಾರ್ಗದಲ್ಲಿ ಸಾವಿರಾರು ಬಸ್ ಗಳನ್ನು ಪರಿಶೀಲಿಸಿದ್ದಾರೆ. ಕಳೆದ ತಿಂಗಳು ಅಧಿಕಾರಿಗಳು 43,126 ಬಸ್ ಗಳನ್ನು ತಪಾಸಣೆ ನಡೆಸಿ ಸೂಕ್ತ ಕ್ರಮ ಕೈಗೊಂಡಿದ್ದರು.
ಇದನ್ನೂ ಓದಿ: Gruhalakshmi Scheme 2024: ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 1 ರಿಂದ ಹೊಸ ರೂಲ್ಸ್ ಜಾರಿ.!! ಸರ್ಕಾರದ ಹೊಸ ನಿರ್ಧಾರ ಇಲ್ಲಿದೆ.!!
ರಾಜ್ಯ ಮತ್ತು ನೆರೆಯ ರಾಜ್ಯಗಳಲ್ಲಿ ಕೆಎಸ್‌ಆರ್‌ಟಿಸಿ ಸೇವೆಗಳನ್ನು ಸಲ್ಲಿಸುತ್ತಿರುವಾಗ ಪರಿಶೀಲಿಸಿದಾಗ ಸರಿಸುಮಾರು 3,522 ಕಳ್ಳತನ ದಂತಹ ಪ್ರಕರಣಗಳು ಪತ್ತೆಯಾಗಿವೆ. ಹಾಗೂ ಸುಮಾರು 3,610 ಪ್ರಯಾಣಿಕರು ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿರುವ ಪ್ರಕರಣವು ಸಹ ದಾಖಲಾಗಿವೆ.
ಈ ಟಿಕೆಟ್‌ಗಳಿಲ್ಲದೆ ಪ್ರಯಾಣಿಕರು ಪ್ರಯಾಣಿಸುವುದು ಕಾನೂನುಬಾಹಿರ ಎಂದು ಅಧಿಕಾರಿಗಳು ತಿಳಿಸಿದ್ದು, ಮುಂದೆ ಹಾಗೆ ಮಾಡದಂತೆ ಎಚ್ಚರಿಕೆ ನೀಡಿದರು. ಟಿಕೆಟ್ ಇಲ್ಲದೆ ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಂದ ಸಾರಿಗೆ ಇಲಾಖೆಯ ಅಧಿಕಾರಿಗಳು ಒಟ್ಟು ₹5,97,517 ರೂಪಾಯಿಗಳನ್ನು ದಂಡದ ರೂಪದಲ್ಲಿ ವಸೂಲಿ ಮಾಡಿದ್ದಾರೆ.
ಇದನ್ನೂ ಓದಿ: Goat Farming Subsidy Scheme 2024: ಮೇಕೆ ಹಾಗೂ ಕುರಿ ಸಾಕಾಣಿಕೆಗೆ ರಾಜ್ಯ ಸರ್ಕಾರದಿಂದ ಸಿಗಲಿದೆ ಸಹಾಯಧನ.!!
ಒಟ್ಟು 3,522 ಸಂಖ್ಯೆಯಲ್ಲಿ ಕಳ್ಳತನವಾಗಿದ್ದು, ಸುಮಾರು ₹82,946 ರೂ. ಗಳನ್ನು ಪತ್ತೆ ಮಾಡುವುದರ ಮೂಲಕ ಈ ಅಪರಾಧಿ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕ ಬಸ್‌ಗಳಲ್ಲಿ ಪ್ರಯಾಣಿಸುವಾಗ ಕಡ್ಡಾಯವಾಗಿ ಟಿಕೆಟ್ ಅಥವಾ ಪಾಸ್ ಖರೀದಿಸುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಪ್ರಕಟಣೆಯಲ್ಲಿ ಪ್ರಯಾಣಿಕರಿಗೆ ತಿಳಿಸಿದೆ.
ಇತರೆ ವಿಷಯಗಳು:
ಈ ಯೋಜನೆ ಅಡಿಯಲ್ಲಿ ರೈತರಿಗೆ ₹10,000 ರೂ. ಹಣ ಸಿಗಲಿದೆ.!! ಅರ್ಜಿಯನ್ನು ಸಲ್ಲಿಸಲು ಲಿಂಕ್ ಇಲ್ಲಿದೆ.!!