HDFC Scholarship 2024: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ರಾಜ್ಯದಲ್ಲಿ ಶಿಕ್ಷಣ ಕಲಿಯಲು ಹಣವಿಲ್ಲದೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮತ್ತು ಬಡತನದಲ್ಲಿ ಶಿಕ್ಷಣ ಕಲಿಯಲು ಸಹಾಯವಾಗಲೆಂದು 75,000 ರವರಿಗೆ ಸ್ಕಾಲರ್ಶಿಪ್ ಸಿಗುತ್ತಿದೆ ವಿದ್ಯಾರ್ಥಿಗಳು ಕೂಡಲೇ ಇದರ ಸಲುಪಯೋಗ ಪಡೆದುಕೊಳ್ಳಲು ಕೆಳಗೆ ನೀಡಿರುವ ಮಾಹಿತಿ ಸಂಪೂರ್ಣ ಓದಿ.
ಹೌದು ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂದು HDFC ಪರಿವರ್ತನ್ ಸ್ಕಾಲರ್ಶಿಪ್ ಮೂಲಕ ಸಹಾಯ ಮಾಡುತ್ತಿದೆ, ಈ ಸ್ಕಾಲರ್ಶಿಪ್ ಗೆ ಹೇಗೆ ಅರ್ಜಿ ಸಲ್ಲಿಸುವುದು? ಮತ್ತು ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕು? ಮತ್ತು ಇನ್ನು ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ.
HDFC ಪರಿವರ್ತನ್ ಸ್ಕಾಲರ್ಶಿಪ್ ಪ್ರಯೋಜನಗಳು:
- ವಿದ್ಯಾರ್ಥಿಗಳು 1ನೇ ತರಗತಿಯಿಂದ 6ನೇ ತರಗತಿ ಓದುತ್ತಿದ್ದವರಿಗೆ: 15 ಸಾವಿರ ವರೆಗೆ ಸ್ಕಾಲರ್ಶಿಪ್ ನೀಡುತ್ತಿದೆ.
- ವಿದ್ಯಾರ್ಥಿಗಳು 7ನೇ ತರಗತಿಯಿಂದ 12ನೇ ತರಗತಿ ಓದುತ್ತಿದ್ದವರಿಗೆ: 18 ಸಾವಿರ ವರೆಗೆ ಸ್ಕಾಲರ್ಶಿಪ್ ನೀಡುತ್ತಿದೆ.
- ಪದವಿ ಪೂರ್ವ ಹಾಗೂ ಸ್ನಾತಕೋತ್ತರ ಓದುತ್ತಿರುವ ವಿದ್ಯಾರ್ಥಿಗಳಿಗೆ: 35,000 ವರೆಗೆ ಸ್ಕಾಲರ್ಶಿಪ್ ನೀಡುತ್ತಿದೆ.
- ವೃತ್ತಿಪರ ಸ್ನಾತಕೋತ್ತರ ಓದುತ್ತಿರುವ ವಿದ್ಯಾರ್ಥಿಗಳಿಗೆ: 75,000 ವರೆಗೆ ಸ್ಕಾಲರ್ಶಿಪ್ ನೀಡುತ್ತಿದೆ.
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ವಿದ್ಯಾರ್ಥಿ ಹಿಂದಿನ ವರ್ಷದ ಅಂಕಪಟ್ಟಿ
- ವಿದ್ಯಾರ್ಥಿಯ ಫೋಟೋ
- ಯಾವುದಾದರೂ ಗುರುತಿನ ಪುರಾವೆ
- ಸದ್ಯದ ವರ್ಷದ ಪ್ರವೇಶ ರಸೀದಿ
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್
ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಕೊನೆಯ ದಿನಾಂಕ:
ಆಸಕ್ತ ವಿದ್ಯಾರ್ಥಿಗಳು ಮೇಲೆ ನೀಡಿರುವ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಮತ್ತು ಮೇಲೆ ನೀಡಿರುವ ದಾಖಲೆಗಳೊಂದಿಗೆ ನಿಮ್ಮ ಹತ್ತಿರದ ಕಂಪ್ಯೂಟರ್ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ HDFC ಪರಿವರ್ತನ್ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಕೊನೆಯ ದಿನಾಂಕ: 31-12-2024