ಉಚಿತ ಬಸ್ ಪಾಸ್ : ರಾಜ್ಯ ಸರ್ಕಾರವು ಹಿರಿಯ ನಾಗರಿಕರಿಗೆಲ್ಲಾರಿಗೂ ಸಹ ದೊಡ್ಡ ಗುಡ್ ನ್ಯೂಸ್ ನೀಡಿದೆ.!! ಅದೇನೆಂದು ಇಲ್ಲಿ ತಿಳಿಯಿರಿ.!!
ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ನಂತರ ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಶಕ್ತಿ ಯೋಜನೆಯು ಅನೇಕ ಮಹಿಳೆಯರಿಗೆ ಅವರ ದೈನಂದಿನ ಪ್ರಯಾಣದಲ್ಲಿ ಸಹಾಯ ಮಾಡಿದೆ ಎಂದು ಹೇಳಬಹುದು, ವಿಶೇಷವಾಗಿ ಇದು ಉಚಿತ ಬಸ್ ಸೇವೆಯಾಗಿದೆ. ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರಿಗು ಸಹ ಉಚಿತ ಪ್ರಯಾಣ ನೀಡಬೇಕು ಎಂಬ ಬೇಡಿಕೆಗಳು ಇದೀಗ ಕೇಳಿ ಬರುತ್ತಿದೆ, ಇದರ ಬೆನ್ನಲ್ಲೇ ರಾಜ್ಯದ ಎಲ್ಲಾ ಹಿರಿಯ ನಾಗರಿಕರಿಗೆ ಅತ್ಯಂತ ಖುಷಿ ಸುದ್ಧಿ ಬಂದಿದೆ.
Table of Contents
ಹಿರಿಯ ನಾಗರಿಕರು ಉಚಿತ ಬಸ್ ಪಾಸ್ ಗಾಗಿ ತಮ್ಮ ಅರ್ಜಿಯನ್ನೂ ಸಲ್ಲಿಸುವ ಅವಕಾಶವನ್ನು ರಾಜ್ಯ ಸರ್ಕಾರವು ಇದೀಗ ಕಲ್ಪಿಸಿದೆ. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಪ್ರತಿ ವರ್ಷ ಉಚಿತ ಬಸ್ ಪಾಸ್ ಗೆ ಅರ್ಜಿ ಸಲ್ಲಿಸಲು ಉತ್ತೇಜನ ನೀಡಿದ್ದು, ಈ ಬಾರಿಯೂ ಸಹ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಅರ್ಜಿಯನ್ನು ಹೇಗೆ ಸಲ್ಲಿಸಬೇಕು, ಕಾರ್ಯವಿಧಾನಗಳು ಮತ್ತು ಇತರ ವಿವರಗಳನ್ನು ನಾವು ನಿಮಗೆ ವಿವರವಾದ ಮಾಹಿತಿಯನ್ನು ಒದಗಿಸುತ್ತೇವೆ.
ಉಚಿತ ಬಸ್ ಪಾಸ್ : ಯಾರಿಗೆಲ್ಲಾ ಮೀಸಲಾತಿ ಕಲ್ಪಿಸಲಾಗಿದೆ.!
ಹೆಚ್ಚಿನ ಬಸ್ಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲಾಗಿದೆ ಮತ್ತು 25% ವಯಸ್ಸಾದವರಿಗೆ ಮೀಸಲಾತಿ ಕಲ್ಪಿಸಲಾಗಿದೆ. ಆದ್ದರಿಂದ ನೀವು (ಉಚಿತ ಹಿರಿಯ ನಾಗರಿಕ ಬಸ್ ಕಾರ್ಡ್) ಅನ್ನು ಹೊಂದಿದ್ದರೆ ನೀವು OLA ಹಾಗೂ KSRTC ಮತ್ತು BMTC ಮೂಲಕ ಪ್ರಯಾಣಿಸಬಹುದು. ಕೆಲವು ಬಸ್ಗಳು ಉಚಿತ ಇರುತ್ತವೆ, ಇನ್ನು ಕೆಲವು ಬಸ್ಗಳಲ್ಲಿ ಕಡಿಮೆ ದರದಲ್ಲಿ ಅಂದರೆ ರಿಯಾಯಿತಿ ದರದಲ್ಲಿ ನೀವು ಪ್ರಯಾಣಿಸಬಹುದು.
ಉಚಿತ ಬಸ್ ಪಾಸ್ : ಅರ್ಜಿ ಸಲ್ಲಿಸಲು ಈ ಎಲ್ಲಾ ದಾಖಲೆಗಳು ಅಗತ್ಯವಿದೆ.!
- ಆಧಾರ್ ಕಡ್ಡಾಯ ಜೆರಾಕ್ಸ್
- ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ.
- ಭಾರತೀಯ ರೆಸಿಡೆನ್ಸಿ ಪುರಾವೆ ಹೊಂದಿರಬೇಕು.
- ನಿಮ್ಮ ಫೋನ್ ನಂಬರ್.
- ಪಾಸ್ಪೋರ್ಟ್ ಸೈಜ್ ಪೋಟೋ.
ಉಚಿತ ಬಸ್ ಪಾಸ್ : ಅರ್ಜಿಯನ್ನು ಹೇಗೆ & ಎಲ್ಲಿ ಸಲ್ಲಿಸಬೇಕು.?
ಈ ವ್ಯವಸ್ಥೆಯು ವಯಸ್ಸಾದವರಿಗೆ ಮಾತ್ರ ಲಭ್ಯವಿದೆ. ಅರ್ಹ ಅಭ್ಯರ್ಥಿಗಳು ತಮ್ಮ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ತಮ್ಮ ಹತ್ತಿರದ (ಕರ್ನಾಟಕ ಒನ್) ಅಥವಾ (ಗ್ರಾಮ ಒನ್) ಹಾಗೂ ತಮ್ಮ ಹತ್ತಿರದ ಯಾವುದೇ ಕಂಪ್ಯೂಟರ್ ಕೇಂದ್ರಗಳಿಗೆ ಭೇಟಿ ನೀಡಿ ಅವರ ಅರ್ಜಿಯನ್ನೂ ಸಲ್ಲಿಸಬಹುದು. ಈ ರೀತಿ ಆನ್‌ಲೈನ್‌ನಲ್ಲಿ ಸಲ್ಲಿಸುವ ಅರ್ಜಿಗಳು ಸಂಬಂಧಪಟ್ಟ ಇಲಾಖೆಯ ಅಧೀನದಲ್ಲಿದ್ದು, ಅರ್ಜಿಯನ್ನು ಅನುಮೋದಿಸಿದ ನಂತರ ಬಸ್ ಪಾಸ್ ನೀಡಲಾಗುವುದು. ಹಿರಿಯರಿಗೆ ವಿಮಾನ, ರೈಲು ಮತ್ತು ಬಸ್ ಟಿಕೆಟ್‌ಗಳಲ್ಲಿ ರಿಯಾಯಿತಿಗಳಿವೆ. ಜೊತೆಗೆ ಆದಾಯ ತೆರಿಗೆ ವಿನಾಯತಿಯೂ ಇದ್ದು ಈ ಎಲ್ಲಾ ಸೌಕರ್ಯಗಳನ್ನು ಸದುಪಯೋಗ ಪಡೆದುಕೊಳ್ಳುವ ಜಾಣ್ಮೆ ಹೊಂದಿರಬೇಕು.
ಇತರೆ ವಿಷಯಗಳು:
KSRTC BUS: ಸರ್ಕಾರಿ ಬಸ್ ನಲ್ಲಿ ಪ್ರಯಾಣ ಮಾಡುವವರಿಗೆ ಕೆಎಸ್ಆರ್ಟಿಸಿ ಸಾರಿಗೆ ಸಂಸ್ಥೆಯಿಂದ ಲಕ್ಷ ಲಕ್ಷ ದಂಡ ವಸೂಲಿ.!!
ಈ ಯೋಜನೆ ಅಡಿಯಲ್ಲಿ ರೈತರಿಗೆ ₹10,000 ರೂ. ಹಣ ಸಿಗಲಿದೆ.!! ಅರ್ಜಿಯನ್ನು ಸಲ್ಲಿಸಲು ಲಿಂಕ್ ಇಲ್ಲಿದೆ.!!