Ration Card Update: ನವೆಂಬರ್ 30ರವಳಗೆ ಈ ಕೆಲಸಮಾಡಿ.! ಇಲ್ಲದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತದೆ!

Ration Card Update: ನವೆಂಬರ್ 30ರವಳಗೆ ಈ ಕೆಲಸಮಾಡಿ.! ಇಲ್ಲದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತದೆ!

Ration Card E-kyc Update: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ರಾಜ್ಯದಲ್ಲಿ  ಅನ್ನಭಾಗ್ಯ ಅಕ್ಕಿ ಹಿಡಿದು ಸರ್ಕಾರಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಈ ಒಂದು ರೇಷನ್ ಕಾರ್ಡ್ ಮುಖ್ಯ ದಾಖಲೆ ಆಗಿದೆ. ರಾಜ್ಯದಲ್ಲಿ ಈಗಾಗಲೇ 22ಕ್ಕೂ ಹೆಚ್ಚು ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ಗಳು ರದ್ದಾಗಿವೆ. ನಿಮ್ಮ ರೇಷನ್ ಕಾರ್ಡ್ ರದ್ದಾಗ ಬೇಡವೆಂದರೆ ನೀವು ಕೂಡಲೇ ಈ ಕೆಲಸ ಮಾಡಿ, ಇದರ ಸಂಪೂರ್ಣ ಮಾಹಿತಿ ಕೆಳಗೆ ನೀಡಿದ ಓದಿ.

ಹೌದು ರಾಜ್ಯದಲ್ಲಿ 22ಕ್ಕೂ ಹೆಚ್ಚು ಬಿಪಿಎಲ್ ರೇಷನ್ ಕಾರ್ಡ್ ಗಳು ರದ್ದಾಗುತ್ತಿವೆ ಮತ್ತು ಎಪಿಎಲ್ ಕಾರ್ಡಗೆ ವರ್ಗಾವಣೆ ಮಾಡಲಾಗುತ್ತಿದೆ. ಹಾಗೂ ಬಡತನ ರೇಖೆಗಿಂತ ಕೆಳಗಡೆ ಇದ್ದರೂ ಸಹ ಬಿಪಿಎಲ್ ರೇಷನ್ ಕಾರ್ಡ್ ರದ್ದು ಮಾಡಲಾಗುತ್ತಿದೆ ಯಾಕೆಂದರೆ ನೀವು ರೇಷನ್ ಕಾರ್ಡ್ ಈ ಕೆವೈಸಿ ಮಾಡದೆ ಇರುವ ಕಾರಣದಿಂದ ನಿಮ್ಮ ರೇಷನ್ ಕಾರ್ಡ್ ಗಳು ರದ್ದಾಗುತ್ತಿವೆ. ರೇಷನ್ ಕಾರ್ಡ್ ಈ ಕೆವೈಸಿ ಯಾಕೆ ಮಾಡಿಸಬೇಕು? ಮತ್ತು ಎಲ್ಲಿ ಮಾಡಿಸಬೇಕು? ರೇಷನ್ ಕಾರ್ಡ್ ಈ ಕೆವೈಸಿ ಮಾಡಿಸಲು ಕೊನೆಯ ದಿನಾಂಕ? ಹಾಗೂ ಇನ್ನೂ ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಿದೆ.

Ration Card E-kyc ಯಾಕೆ ಮಾಡಿಸಬೇಕು:

ರಾಜ್ಯದಲ್ಲಿ ಕೆಲವೊಂದು ತಿಂಗಳ ಹಿಂದೆ ರೇಷನ್ ಕಾರ್ಡ್ ಈ ಕೆ ವೈ ಸಿ ಮಾಡಿಸಲು ಕೆಲವಷ್ಟು ತಿಂಗಳವರೆಗೆ ಕಾಲಾವಕಾಶವನ್ನು ನೀಡಿದ್ದರು, ಈ ಕೆ ವೈ ಸಿ ಮಾಡುವುದರಿಂದ ನಿಮ್ಮ ರೇಷನ್ ಕಾರ್ಡ್ ನಲ್ಲಿ ಯಾವುದೇ ತಪ್ಪು ದಾಖಲೆಗಳು ಅಥವಾ ಬಡತನ ರೇಖೆಗಿಂತ ಮೇಲ್ಗಡೆ ಇರುವ ಜನರು ಪಡೆದುಕೊಂಡಿರುವ ರೇಷನ್ ಕಾರ್ಡ್ ತಿಳಿದುಕೊಳ್ಳಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿತ್ತು. ಆದರೆ ಈ ಒಂದು ರೇಷನ್ ಕಾರ್ಡ್ ಈ ಕೆವೈಸಿ ಬಗ್ಗೆ ಸಾಕಷ್ಟು ಜನರು ತಲೆ ಕೆಡಿಸಿಕೊಂಡಿಲ್ಲ, ಈ ಕೆವೈಸಿ ಮಾಡದೆ ಇರುವ ರೇಷನ್ ಕಾರ್ಡ್ ಗಳನ್ನು ಆಹಾರ ಇಲಾಖೆ ರದ್ದುಗೊಳಿಸಲಾಗುತ್ತಿದೆ.

Ration Card E-kyc ಎಲ್ಲಿ ಮಾಡಿಸಬೇಕು ಮತ್ತು ಕೊನೆಯ ದಿನಾಂಕ:

ನೀವು ನಿಮ್ಮ ರೇಷನ್ ಕಾರ್ಡಗೆ ಈ ಕೆವೈಸಿ ಮಾಡಿಸಬೇಕಾದರೆ ನಿಮ್ಮ ಹತ್ತಿರದ ಪಡಿತರ ಚೀಟಿ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲೇ ಬೇಕಾಗುವ ದಾಖಲೆಗಳೊಂದಿಗೆ ನೀವು ನವೆಂಬರ್ 30ನೇ ತಾರೀಖಿನ ಒಳಗಾಗಿ ರೇಷನ್ ಕಾರ್ಡ್ ಈ ಕೆವೈಸಿ ಮಾಡಿಸಬಹುದು. ಇನ್ನು ಯಾರು ಈ ಕೆವೈಸಿ ಪೂರ್ಣಗೊಳಿಸಿಲ್ಲ ಕೂಡಲೇ ನಿಮ್ಮ ಈ ಕೆವೈಸಿ ಪೂರ್ಣಗೊಳಿಸಿ ನಿಮ್ಮ ರೇಷನ್ ಕಾರ್ಡ್ ಉಳಿಸಿ.

Leave a Comment