ಹೊಸದಾಗಿ ಮದುವೆಯಾಗುವವರಿಗೆ ಕೇಂದ್ರ ಸರ್ಕಾರದಿಂದ ಸಿಕ್ತು ಸಿಹಿ ಸುದ್ಧಿ.!! ಕೇಂದ್ರ ಸರ್ಕಾರದಿಂದ ನವವಿವಾಹಿತರಿಗೆ ಸಿಗಲಿದೆ ₹2.50 ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನ.!!

ನಮಸ್ಕಾರ ಸ್ನೇಹಿತರೇ, ಹೊಸದಾಗಿ ಮದುವೆಯಾಗುವವರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ನವ ದಂಪತಿಗಳಿಗೆ ₹2.50 ಲಕ್ಷ ರೂ. ವಿವಾಹ ಪ್ರೋತ್ಸಾಹಧನವನ್ನು ಒದಗಿಸಲಾಗುತ್ತಿದೆ. ಇದು ಯಾವ ರೀತಿಯ ಯೋಜನೆ? ಈ ಯೋಜನೆಯಿಂದಾಗಿ ಯಾರೆಲ್ಲಾ ಪ್ರಯೋಜನವನ್ನು ಪಡೆಯಬಹುದು? ಈ ಯೋಜನೆಗೆ ಯಾವೆಲ್ಲಾ ಅರ್ಹತೆಗಳು ಇರಬೇಕು? ಈ ಎಲ್ಲಾ ಮಾಹಿತಿಯನ್ನು ನೀವು ಈ ಕೆಳಗಿನ ಲೇಖನದಲ್ಲಿ ಕಾಣಬಹುದು.

ಡಾ. ಅಂಬೇಡ್ಕರ್ ವಿವಾಹ ಫೌಂಡೇಶನ್ ಯೋಜನೆಯ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು!

  • ಭಾರತೀಯ ಸಮಾಜ ಮುನ್ನಡೆಯಲು ಮತ್ತು ಬೆಳೆಯಬೇಕಾದರೆ ಜಾತಿ ಅಸಮಾನತೆ ತೊಲಗಬೇಕು. ಈ ಪರಿಣಾಮವಾಗಿ, ಅಂತರ್ಜಾತಿ ವಿವಾಹಗಳನ್ನು ಉತ್ತೇಜಿಸಲು ಬಲವಾಗಿ ಸಲಹೆ ನೀಡಲಾಗುತ್ತದೆ.
  • ಪ್ರತಿ ದಂಪತಿಗಳು ರೂ.ಗಳ ಗಣನೀಯ ಮೊತ್ತವನ್ನು ಪಡೆಯಲು ಅವಕಾಶವನ್ನು ಹೊಂದಿರುತ್ತಾರೆ. ಕೇಂದ್ರ ಸರ್ಕಾರದಿಂದ 2.50 ಲಕ್ಷ ರೂ.
  • ಹಣವನ್ನು ದಂಪತಿಗಳಿಗೆ ಎರಡು ಕಂತುಗಳಲ್ಲಿ ನೀಡಲಾಗುವುದು, ಅವರಿಗೆ ಆರ್ಥಿಕ ಭದ್ರತೆಯನ್ನು ನೀಡುತ್ತದೆ.
  • ಕೇಂದ್ರ ಸರ್ಕಾರವು ಈ ಕಾರ್ಯಕ್ರಮವನ್ನು ಎರಡು ವರ್ಷಗಳ ಪರೀಕ್ಷಾ ಯೋಜನೆಯಾಗಿ ನಡೆಸಲು ಮೊದಲು ಆಯ್ಕೆ ಮಾಡಿತು. ಗುರಿಗಳ ಸಾಧನೆಯು ನಿಯಮಿತ ಯೋಜನೆಯ ಸ್ಥಿತಿಯನ್ನು ನೀಡುವುದಕ್ಕೆ ಕಾರಣವಾಗುತ್ತದೆ.
  • ಪ್ರತಿ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿನ ಜಿಲ್ಲಾ ಪ್ರಾಧಿಕಾರವು ಔಪಚಾರಿಕ ವಿವಾಹ ಸಮಾರಂಭವನ್ನು ಸ್ಥಾಪಿಸುವ ಮತ್ತು ಅನುದಾನದ ಹಣವನ್ನು ಹಂಚಿಕೆ ಮಾಡುವ ಉಸ್ತುವಾರಿ ವಹಿಸುತ್ತದೆ.

ಇದನ್ನೂ ಓದಿ: ಉಚಿತ ಬಸ್ ಪ್ರಯಾಣ: SSLC Exam-3 ಪರೀಕ್ಷೆ ಬರೆಯಲು ಹೋಗುವ ಎಲ್ಲಾ ವಿದ್ಯಾರ್ಥಿಗಳಿಗೆ KSRTC ಯಿಂದ ಉಚಿತ ಪ್ರಯಾಣ!

ನವವಿವಾಹಿತರಿಗೆ ₹2.50 ಲಕ್ಷ ಪ್ರೋತ್ಸಾಹಧನ
ನವವಿವಾಹಿತರಿಗೆ ₹2.50 ಲಕ್ಷ ಪ್ರೋತ್ಸಾಹಧನ

ಡಾ. ಅಂಬೇಡ್ಕರ್ ವಿವಾಹ ಫೌಂಡೇಶನ್ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು.!

ಡಾ. ಅಂಬೇಡ್ಕರ್ ವಿವಾಹ ಫೌಂಡೇಶನ್ ದಲಿತರನ್ನು ಒಳಗೊಂಡಿರುವ ಜೋಡಿಗಳ ಅಂತರ್ಜಾತಿ ವಿವಾಹಗಳನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 2024 ರಲ್ಲಿ ಈ ಕಾರ್ಯಕ್ರಮವನ್ನು ಪರಿಚಯಿಸಿತು. ಈ ಯೋಜನೆಯಡಿ ನವವಿವಾಹಿತ ಅಂತರ್ಜಾತಿ ದಂಪತಿಗಳಿಗೆ ₹2.50 ಲಕ್ಷ ರೂ. ಗಳ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ. ವಿವಾಹಿತ ದಂಪತಿಗಳಲ್ಲಿ ಪತಿ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ಯಾರಾದರೂ ದಲಿತರಾಗಿರಬೇಕು ಅಂದರೆ ಮಾತ್ರ ಈ ಕೇಂದ್ರ ಸರ್ಕಾರದ ಯೋಜನೆಯ ಸೌಲಭ್ಯವನ್ನು ಪಡೆಯಬಹುದು.

ಇದರ ಜೊತೆಗೆ ಈ ಒಂದು ಕೇಂದ್ರ ಸರ್ಕಾರದ ಯೋಜನೆಯ ಲಾಭವನ್ನು ಪಡೆಯಲು ಬಯಸುವ ದಂಪತಿಗಳ ವಾರ್ಷಿಕ ಆದಾಯ ₹5 ಲಕ್ಷಕ್ಕಿಂತ ಕಡಿಮೆ ಇರಬೇಕು. ಅರ್ಹ ದಂಪತಿಗಳು ತಮ್ಮ ಹೆಸರನ್ನು ಈ ಯೋಜನೆ ಅಡಿಯಲ್ಲಿ ನೋಂದಾಯಿಸಿಕೊಂಡರೆ ಮೊದಲು ₹1.25 ಲಕ್ಷ ರೂ. ಗಳನ್ನು ಟಿಟಿಯಾಗಿ ಸ್ವೀಕರಿಸುತ್ತಾರೆ. ಅನಂತರ ಉಳಿದ ₹1.25 ಲಕ್ಷ ರೂ. ಗಳನ್ನು 5 ವರ್ಷಗಳ ನಂತರ ಕೇಂದ್ರ ಸರ್ಕಾರದಿಂದ ಫಲಾನುಭಿಗಳ ಖಾತೆಗೆ ಜಮಾ ಮಾಡಲಾಗುತ್ತದೆ.

ಇದನ್ನೂ ಓದಿ: Gruhalakshmi: ಗೃಹಲಕ್ಷ್ಮಿ ಯೋಜನೆಯ ₹6,000 ರೂ. ಹಣ ವಟ್ಟಿಗೆ ನಿಮ್ಮ ಖಾತೆಗೆ ಬರುತ್ತೆ! ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಸ್ಪಷ್ಟನೆ!

ನೀವೂ ಕೂಡ ನವವಿವಾಹಿತರಾಗಿದ್ದರೆ ಮತ್ತು ಈ ಮೇಲಿನ ಎಲ್ಲಾ ಅರ್ಹತೆಗಳನ್ನು ಹೊಂದಿದ್ದರೆ, ನೀವು ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು ಮತ್ತು ಈ ಯೋಜನೆಯ ಲಾಭವನ್ನು ಪಡೆಯಬಹುದು.

WhatsApp Group Join Now
Telegram Group Join Now

Leave a Comment

error: Don't Copy Bro !!