ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತವೂ ಪ್ರಮುಖವಾಗಿ ಪ್ರತಿ ತಿಂಗಳು ಜಾರಿಯಾಗುವ ಕೆಲವು ಖಾತರಿ ಯೋಜನೆಗಳ ಉಪಯುಕ್ತತೆಯನ್ನು ತಿಳಿದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿ ಇರುವುದು ಗೃಹಲಕ್ಷ್ಮೀ ಯೋಜನೆಯ ಕಂತು ಪ್ರತಿ ತಿಂಗಳ ನಿರ್ದಿಷ್ಟ ದಿನಾಂಕದಂದು ಸರ್ಕಾರದಿಂದ ಎಲ್ಲಾ ಫಲಾನುಭಿವಿ ಮಹಿಳೆಯರ ಖಾತೆಗೆ ವರ್ಗಾವಣೆಯಾಗುತ್ತವೆ ಎಂದು ಹೇಳಬಹುದು. ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಗೃಹಲಕ್ಷ್ಮೀ ಯೋಜನೆ ಜಾರಿಗೊಳಿಸುವ ಮೂಲಕ ಆರ್ಥಿಕವಾಗಿ ಹಿಂದುಳಿದ ಹಾಗೂ ಮಧ್ಯಮ ವರ್ಗದ ಗೃಹಿಣಿಯರಿಗೆ ನೆರವಾಗುವ ನಿಟ್ಟಿನಲ್ಲಿ ಈ ಯೋಜನೆ ಕಾರ್ಯೋನ್ಮುಖವಾಗಿದೆ ಎಂದು ಹೇಳಬಹುದು.
Table of Contents
ಗೃಹಲಕ್ಷ್ಮಿ ಯೋಜನೆಯಿಂದ ತಿಂಗಳಿಗೆ ₹2,000 ರೂ. ಗಳನ್ನು ತಮ್ಮ ಬ್ಯಾಂಕ್ ಖಾತೆಯಲ್ಲಿ ಪಡೆಯುತ್ತಾರೆ. ಅದನ್ನು ತಮ್ಮ ಮನೆಯ ಖರ್ಚು ಅಥವಾ ಉಳಿತಾಯಕ್ಕಾಗಿ ಬಳಸುತ್ತಾರೆ ಮತ್ತು ನಂತರ ತಮ್ಮ ಮಕ್ಕಳಿಗೆ ಅಥವಾ ಅವಲಂಬಿತರಿಗೆ ಸಹಾಯ ಮಾಡಲು ಕೆಲಸ ಮಾಡುತ್ತಾರೆ.
ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಸ್ಪಷ್ಟಣೆ!
ಅದರಲ್ಲೂ ಲೋಕಸಭೆ ಚುನಾವಣೆಯ ಸೋಲಿನ ನಂತರ ಸರ್ಕಾರ ಈ ಯೋಜನೆ ಜಾರಿ ಮಾಡುವ ಬಗ್ಗೆ ಆರಂಭದ ದಿನಗಳಲ್ಲಿ ವಿರೋಧ ಪಕ್ಷಗಳೂ ಸೇರಿದಂತೆ ಎಲ್ಲರಿಗೂ ಅನುಮಾನವಿತ್ತು. ಅವರು ಇನ್ನೂ ಸ್ವಲ್ಪ ದಿನಗಲ್ಲಿ ನಿಲ್ಲಿಸಲಿದ್ದಾರೆ ಎಂದು ಕೆಲ ಪಕ್ಷದ ನಾಯಕರುಗಳು ಹೇಳಿದ್ದರು, ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾವು ಅಧಿಕಾರದಲ್ಲಿರುವವರೆಗೂ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸುತ್ತೇವೆ ಎಂದು ಎಲ್ಲಾ ಜನತೆಗೆ ಭರವಸೆ ನೀಡಿದ್ದಾರೆ. ಗ್ಯಾರಂಟಿ/ಖಾತರಿ ಯೋಜನೆಗಳನ್ನು ನಾವು ನಿಲ್ಲಿಸಲು ಯಾವುದೇ ಕಾರಣದಿಂದಲೂ ಸಾಧ್ಯವಿಲ್ಲ ಎಂದು ಅವರು ಖಚಿತವಾಗಿ ಹೇಳಿದ್ದಾರೆ.
ಈಗ ಪ್ರಸ್ತುತವಾಗಿ ಫಲಾನುಭಿಗಳ ಖಾತೆಗೆ ಜಮಾ ಆಗಬೇಕಿರುವ ಗೃಹಲಕ್ಷ್ಮೀ ಯೋಜನೆಯ 11ನೇ ಹಾಗೂ 12ನೇ ಕಂತಿನ ಹಣವು ಮೊದಲ ಈ 18 ಜಿಲ್ಲೆಗಳ ಫಲಾನುಭಿಗಳ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
Gruhalakshmi Scheme Update : 11ನೇ ಹಾಗೂ 12ನೇ ಕಂತಿನ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಈ ಕೆಳಗಿನ 18 ಜಿಲ್ಲೆಗಳಲ್ಲಿ ಮೊದಲು ಜಮಾ ಮಾಡಲಾಗುವುದು!
- ಉಡುಪಿ
- ಚಿಕ್ಕಮಗಳೂರು
- ಬೆಳಗಾವಿ
- ಧಾರವಾಡ
- ದಕ್ಷಿಣ ಕನ್ನಡ
- ಹುಬ್ಬಳ್ಳಿ
- ಬೆಂಗಳೂರು ನಗರ
- ಕೊಡು
- ಮೈಸೂರು
- ಬೆಂಗಳೂರು ಗ್ರಾಮಾಂತರ
- ಕೋಲಾರ
- ದಾವಣಗೆರೆ
- ಚಿತ್ರದುರ್ಗ
- ತುಮಕೂರು
- ವಿಜಯಪುರ
- ಹಾಸನ
- ಶಿವಮೊಗ್ಗ
- ಗುಲ್ಬರ್ಗ
ಗೃಹಲಕ್ಷ್ಮಿ ಯೋಜನೆಯ 11 ಮತ್ತು 12 ನೇ ಕಂತಿನ ಮೊದಲ ಹಂತದ ಹಣವನ್ನು ಈ ಎಲ್ಲಾ ಜಿಲ್ಲೆಗಳಿಗೆ ಮೊದಲು ಜಮಾ ಮಾಡಲಾಗುತ್ತದೆ.