Prize Money: ನಮಸ್ಕಾರ ಸ್ನೇಹಿತರೇ, ಈ ಒಂದು ಲೇಖನದ ಮುಖಾಂತರ ನಿಮಗೆ ತಿಳಿಸಲು ಬಯಸುವ ವಿಷಯ ಏನೆಂದರೆ ರಾಜ್ಯ ಸರ್ಕಾರವು ವಿವಿಧ ಕೋರ್ಸ್ ಗಳಲ್ಲಿ ಪ್ರಥಮ ದರ್ಜೆ (1st Class) ಯಲ್ಲಿ ಪಾಸ್ ಆಗಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ನೀಡುತ್ತಿದೆ ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳು ಈ ಪ್ರೋತ್ಸಾಹಧನದ ವಿದ್ಯಾರ್ಥಿವೇತನವನ್ನು ಪಡೆದುಕೊಳ್ಳಬೇಕು. ಈ ಲೇಖನದಲ್ಲಿ, ಈ ಪ್ರೋತ್ಸಾಹಧನದ ವಿದ್ಯಾರ್ಥಿವೇತನಕ್ಕೆ ಯಾರು ಅರ್ಜಿ ಸಲ್ಲಿಸಬಹುದು, ಯಾವ ದಾಖಲೆಗಳನ್ನು ಬೇಕು ಮತ್ತು ಎಲ್ಲಿ ಅರ್ಜಿ ಸಲ್ಲಿಸಬೇಕು ಎಂಬುದರ ಕುರಿತು ನಾವು ಸಮಗ್ರ ಮಾಹಿತಿಯನ್ನು ಒದಗಿಸಿದ್ದೇವೆ. ಆದ್ದರಿಂದ ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ.
ಇದನ್ನೂ ಓದಿ: SBI Personal Loan: ಕೇವಲ 2 ನಿಮಿಷಗಳಲ್ಲಿ ಬ್ಯಾಂಕ್ ಖಾತೆಗೆ ನೇರವಾಗಿ ₹2,00,000 ರೂ.ವರೆಗಿನ SBI Personal Loan ಪಡೆಯಿರಿ.!
Prize Money: ಪ್ರೋತ್ಸಾಹಧನದ ವಿಧ್ಯಾರ್ಥಿವೇತನದ ಬಗ್ಗೆ ಸಂಪೂರ್ಣ ವಿವರ.!
ಹೌದು, ಪಿಯುಸಿ, ಪದವಿ (Degree) ಮತ್ತು ಪಿಜಿ (Post Graduation) ಕೋರ್ಸ್ಗಳಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಅಂದರೆ ಈ ವಿದ್ಯಾರ್ಥಿವೇತನಕ್ಕಾಗಿ 60% ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ (SC,ST) ಪಂಗಡದ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರವೂ ಈ ಪ್ರೋತ್ಸಾಹಧನದ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ಈ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಲು ನೀವು PUC ಅನ್ನು ಅಥವಾ ಪದವಿ/ಸ್ನಾತಕೋತ್ತರ ಪದವಿಯನ್ನು 2024ನೇ ವರ್ಷದ ಒಳಗೆ ನಿಮ್ಮ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನೂ (1st Class) ನಲ್ಲಿ ಪೂರ್ಣಗೊಳಿಸಿರಬೇಕು. ಈ ಪ್ರೋತ್ಸಾಹಧನದ ವಿದ್ಯಾರ್ಥಿವೇತನದಲ್ಲಿ ಯಾವೆಲ್ಲಾ ಕೋರ್ಸ್ ಗಳಿಗೆ ಎಷ್ಟು ಹಣ ಸಿಗಲಿದೆ ಎಂಬುದರ ಬಗ್ಗೆ ಪೂರ್ತಿ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
Prize Money: ಈ ಪ್ರೋತ್ಸಾಹಧನದಲ್ಲಿ ವಿದ್ಯಾರ್ಥಿಗಳಿಗೆ ಎಷ್ಟು ಮೊತ್ತ ಹಣ ಸಿಗುತ್ತದೆ.?
ಹೌದು ಸ್ನೇಹಿತರೇ, ಈ ವಿದ್ಯಾರ್ಥಿವೇತನವನ್ನು ಪಡೆಯಲು, ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ (SC,ST) ಗೆ ಸೇರಿದ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿವೇತನವನ್ನು ಸ್ವೀಕರಿಸುವವರ ಅರ್ಹತೆಗೆ ಅನುಗುಣವಾಗಿ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ನಾವು ಇದರ ಮಾಹಿತಿಯನ್ನು ಕೆಳಗೆ ನೀಡಿದ್ದೇವೆ.
- 2nd PUC (ದ್ವಿತೀಯ ಪಿಯುಸಿ) ವಿದ್ಯಾರ್ಥಿಗಳಿಗೆ ಮತ್ತು Diploma (ಡಿಪ್ಲೊಮಾ) ವಿದ್ಯಾರ್ಥಿಗಳಿಗೆ -₹ 20,000/-
- ಪದವಿ (Degree) ವಿದ್ಯಾರ್ಥಿಗಳಿಗೆ: ₹25,000/- (ಉದಾಹರಣೆ: B.A, BSc, B.Com ಮತ್ತು ಯಾವುದೇ ಇತರ ಪದವಿ)
- ಸ್ನಾತಕೋತ್ತರ ಪದವಿ (Post Graduate)ಯ ವಿದ್ಯಾರ್ಥಿಗಳಿಗೆ: – ₹30,000/- (ಉದಾಹರಣೆ: – M.A, MSc ಇತ್ಯಾದಿ ಸ್ನಾತಕೋತ್ತರ ವಿದ್ಯಾರ್ಥಿಗಳ ವಿಧ್ಯಾರ್ಥಿಗಳು ಅನ್ವಯಿಸುತ್ತಾರೆ)
- ಅಗ್ರಿಕಲ್ಚರ್, ಪಶುವೈದ್ಯಕೀಯ, ಎಂಜಿನಿಯರಿಂಗ್, MBBS: – ₹35,000.
ಇದನ್ನೂ ಓದಿ: 1 ಕೋಟಿ ಮನೆ ನಿರ್ಮಾಣ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಹೊಸ ಯೋಜನೆ.!! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!!
Prize Money: ಈ ಪ್ರೋತ್ಸಾಹಧನದಲ್ಲಿ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು.?
ಈ ಪ್ರೋತ್ಸಾಹಧನದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ (SC,ST) ವರ್ಗಕ್ಕೆ ಸೇರಿದವರಾಗಿರಬೇಕು.
ಪ್ರೋತ್ಸಾಹಧನದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ತಮ್ಮ ಪ್ರಸ್ತುತ ತರಗತಿಯಲ್ಲಿ ಕನಿಷ್ಠ 60%(1st Class) ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಸಾಧಿಸಿರಬೇಕು.
ಈ ಪ್ರೋತ್ಸಾಹಧನದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ತಮ್ಮ ಪ್ರಸ್ತುತ ಕೋರ್ಸ್ ಗಳಲ್ಲಿ ಮೊದಲ ಬಾರಿಯಲ್ಲಿ(1st Attempt) ನಲ್ಲಿ ಉತ್ತೀರ್ಣರಾಗಿರಬೇಕು.
ಈ ಪ್ರೋತ್ಸಾಹಧನದ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಲು ಬೇಕಾಗುವ ದಾಖಲೆಗಳು.!
- ಆಧಾರ್ ಕಾರ್ಡ್
- ಹತ್ತನೇ ತರಗತಿ ಮಾರ್ಕ್ಸ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಹತ್ತನೇ ತರಗತಿ ಮಾರ್ಕ್ಸ್ ಕಾರ್ಡ್
- ಇತ್ತೀಚಿನ ಭಾವಚಿತ್ರ
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್
- ಮಾರ್ಕ್ಸ್ ಕಾರ್ಡ್
- ಮೊಬೈಲ್ ನಂಬರ್
ಇದನ್ನೂ ಓದಿ: BPL Ration Card New Rules : BPL ರೇಷನ್ ಕಾರ್ಡ್ ನಲ್ಲಿ ಕೇಂದ್ರದಿಂದ ಹೊಸ ನಿಯಮ ಭಾರಿ ಬದಲಾವಣೆ.?
ಈ ಪ್ರೋತ್ಸಾಹಧನದ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಹೇಗೆ ಸಲ್ಲಿಸುವುದು.?
ಸ್ನೇಹಿತರೇ, ನೀವು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬೇಕು ಎಂದು ನೀವು ಭಾವಿಸಿದರೆ, ನೀವು ಕಲ್ಯಾಣ ಇಲಾಖೆಯ ಅಧಿಕೃತವಾದ ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ಈ ವಿದ್ಯಾರ್ಥಿವೇತನಕ್ಕಾಗಿ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಯಾವುದಾದರೂ ಆನ್ಲೈನ್ ಕೇಂದ್ರಗಳಿಗೆ ಭೇಟಿ ನೀಡಿ ಮತ್ತು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ಕೆಳಗೆ ನಾವು ಇದಕ್ಕೆ ಬೇಕಾಗುವ ಪ್ರಮುಖ ಲಿಂಕ್ ಗಳನ್ನು ಒದಗಿಸಿದ್ದೇವೆ ಪರಿಶೀಲಿಸಿ.! ಧನ್ಯವಾದಗಳು
ಅರ್ಜಿಯನ್ನು ಸಲ್ಲಿಸಲು ಪ್ರಮುಖ ಲಿಂಕ್ ಗಳು.!
ST ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
SC ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ವೆಬ್ ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |