Lakhpati Didi Yojana:ಯಾವುದೇ ಬಡ್ಡಿ ಇಲ್ಲದೆ ಮಹಿಳೆಯರಿಗೆ 20 ಲಕ್ಷದವರೆಗೆ ಸಾಲ ಸಿಗಲಿದೆ.! ಈ ಯೋಜನೆಗೆ ಹೀಗೆ ಅಪ್ಲೈ ಮಾಡಿ!
Lakhpati Didi Yojana 2024: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ನಗರ ಪ್ರದೇಶದಲ್ಲಿ ಅಥವಾ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವ ಮಹಿಳೆಯರು ತಮ್ಮ ಸ್ವಂತ ವ್ಯಾಪಾರ ಪ್ರಾರಂಭಿಸಲು ಮತ್ತು ಈಗಾಗಲೇ ವ್ಯಾಪಾರ ಪ್ರಾರಂಭಿಸಿದ ಮಹಿಳೆಯರಿಗೆ, ಸಹಾಯವಾಗಲು ಕೇಂದ್ರ ಸರ್ಕಾರ ಈ ಒಂದು ಲಖ್ಪತಿ ದೀದಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಒಂದು ಯೋಜನೆ ಅಡಿಯಲ್ಲಿ ಮಹಿಳೆಯರು ಯಾವುದೇ ಬಡ್ಡಿದರ ಇಲ್ಲದೆ 20 ಲಕ್ಷದವರೆಗೆ ಬ್ಯಾಂಕಿನ ಮೂಲಕ ಸಾಲವನ್ನು ಪಡೆಯಬಹುದು.
ಹೌದು ಈ ಒಂದು ಯೋಜನೆ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಮಾತ್ರವಾಗಿದೆ, ಯಾವೆಲ್ಲ ಮಹಿಳೆಯರು ಈ ಒಂದು ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು? ಮತ್ತು ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು? ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳು? ಮತ್ತು ಇನ್ನೂ ಹೆಚ್ಚಿನ ಮಾಹಿತಿ ಕೆಳಗಡೆ ನೀಡಲಾಗಿದೆ.
ಲಖ್ಪದಿ ದೀದಿ ಯೋಜನೆಯು ಮಹಿಳೆಯರಿಗಾಗಿ ಕೇಂದ್ರ ಸರ್ಕಾರವು ಜಾರಿಗೆ ತಂದಿರೋ ಯೋಜನೆ ಆಗಿದೆ, ಈ ಒಂದು ಯೋಜನೆ ಅಡಿಯಲ್ಲಿ ಮಹಿಳೆಯರು ಸ್ವಂತ ಉದ್ಯೋಗ ಅಥವಾ ತಮ್ಮ ಬಡತನ ರೇಖೆಯಿಂದ ಹೊರಬಂದು ಸ್ವಂತ ಉದ್ಯಮ ಪ್ರಾರಂಭಿಸುವ ಸಲುವಾಗಿ ಈ ಒಂದು ಯೋಜನೆಯಲ್ಲಿ 20 ಲಕ್ಷಕ್ಕೂ ಹೆಚ್ಚು ಸಾಲವನ್ನು ಯಾವುದೇ ಬಡ್ಡಿ ದರವಿಲ್ಲದೆ ನೀಡಲಾಗುತ್ತದೆ.
ಈ ಯೋಜನೆಯ ಅರ್ಹತೆಗಳು:
- ಈ ಒಂದು ಯೋಜನೆ ಸದುಪಯೋಗ ಪಡೆದುಕೊಳ್ಳಲು ಸ್ವಸಹಾಯ ಸಂಘದ ಸದಸ್ಯರು ಆಗಿರಬೇಕು.
- ಮಹಿಳೆಯರು ಮಾತ್ರ ಈ ಒಂದು ಯೋಜನೆ ಸದುಪಯೋಗ ಪಡೆದುಕೊಳ್ಳಬಹುದು.
- ಮಹಿಳೆಯರ ವಯಸ್ಸು ಕನಿಷ್ಠ 18 ವರ್ಷ ಗರಿಷ್ಠ 50 ವರ್ಷವನ್ನು ಮೀರಬಾರದು.
- ಅರ್ಜಿ ಸಲ್ಲಿಸುವ ಮಹಿಳೆಯರ ಕುಟುಂಬದಲ್ಲಿ ಯಾವುದೇ ಸರಕಾರಿ ನೌಕರರು ಇರಬಾರದು.
ಈ ಯೋಜನೆಯಲ್ಲಿ ಸಿಗುವ ಸಾಲ ಸೌಲಭ್ಯ:
ಈ ಒಂದು ಯೋಜನೆ ಮುಖಾಂತರ ನೀವು ಎರಡು ರೀತಿಯಾಗಿ ಸಾಲವನ್ನು ಪಡೆಯಬಹುದು, ಒಂದು ಬ್ಯಾಂಕ್ ಮುಖಾಂತರ ಸಾಲ ಪಡೆಯಬಹುದು. ಎರಡು ಸ್ವ-ಸಹಾಯ ಸಂಘದ ಹೆಸರಿನ ಮೂಲಕ ಸಾಲವನ್ನು ಪಡೆಯಬಹುದು.
ಬ್ಯಾಂಕ್ ಮೂಲಕ ಸಾಲ: ಸ್ವ-ಸಹಾಯ ಸಂಘಕ್ಕೆ ಸೇರುವ ಮಹಿಳೆಯರು ತಮ್ಮ ವ್ಯಾಪಾರ ಅಥವಾ ಉದ್ಯಮ ಮಾಡಲು ಬ್ಯಾಂಕ್ ಮೂಲಕ 20 ಲಕ್ಷಕ್ಕೂ ಹೆಚ್ಚು ಸಾಲವನ್ನು ಪಡೆಯಲು ಈ ಯೋಜನೆ ಸಹಾಯ ಮಾಡುತ್ತದೆ.
ಈ ಒಂದು ಸಾಲದ ಬಡ್ಡಿ ಪಾವತಿಸಲು ಈ ಒಂದು ಯೋಜನೆ ಅಡಿಯಲ್ಲಿ 3 ಲಕ್ಷ ಹಣವನ್ನು ಸಹಾಯಧನ ಸಿಗುತ್ತದೆ.
ಸ್ವ-ಸಹಾಯ ಸಂಘದ ಮೂಲಕ ಸಾಲ: ಮಹಿಳೆಯರು ಸ್ವಂತ ಉದ್ಯಮ ಅಥವಾ ವ್ಯಾಪಾರವನ್ನು ಆರಂಭಿಸಲು ಸಂಘದ ಮೂಲಕ 5 ಲಕ್ಷದವರೆಗೆ ಸಾಲವನ್ನು ಪಡೆಯಬಹುದು.
ಈ ಒಂದು ಸಾಲದ ಬಡ್ಡಿ ಪಾವತಿಸಲು ಈ ಒಂದು ಯೋಜನೆ ಅಡಿಯಲ್ಲಿ 1.5 ಲಕ್ಷದವರೆಗೆ ಸಹಾಯಧನ ಸಿಗುತ್ತದೆ ಒಟ್ಟಾರೆಯಾಗಿ ಮಹಿಳೆಯರು ವ್ಯಾಪಾರ ಅಥವಾ ಉದ್ಯಮ ಮಾಡಲು ಈ ಒಂದು ಯೋಜನೆ ಕಡಿಮೆ ಬಡ್ಡಿದರ ಸಾಲವು ಸಾಕಷ್ಟು ಉಪಯೋಗವಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ವ್ಯಾಪಾರ ಅಥವಾ ಉದ್ಯಮ ದೃಢೀಕರಣ ಪತ್ರ
- ಫೋಟೋ
ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಮೇಲೆ ನೀಡಿರುವ ದಾಖಲೆಗಳೊಂದಿಗೆ ನಿಮ್ಮ ತಾಲೂಕು ಪಂಚಾಯಿತಿಗೆ ಭೇಟಿ ನೀಡುವ ಮೂಲಕ ಅಲ್ಲಿನ NRLM ಯೋಜನೆ ಅಧಿಕಾರಿಗಳ ಮೂಲಕ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ, ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಿರಿ.