Gruha Lakshmi Scheme: ನೀವು ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೂ ಇನ್ನೂ ನಿಮಗೆ ಸರ್ಕಾರದಿಂದ ₹2,000 ಹಣವೂ ಜಮಾ ಆಗದಿದ್ದರೆ, ನಿಮ್ಮ ದಾಖಲೆಗಳಲ್ಲಿನ ಯಾವುದೇ ರೀತಿಯಾದ ಸಮಸ್ಯೆಗಳಿದ್ದರೆ ನೀವು ತಕ್ಷಣವೇ ಪರಿಹರಿಸಿಕೊಳ್ಳಬೇಕು.
ಜೂನ್ ತಿಂಗಳಿನ ₹2,000 ರೂ. ಇನ್ನೂ ತಮ್ಮ ಖಾತೆಗಳಿಗೆ ಜಮಾ ಆಗದೆ ಇರುವ ಎಲ್ಲಾ ಮನೆಯ ಯೆಜಮಾನಿಯರಿಗೆ ಒಂದು ಒಳ್ಳೆಯ ಸುದ್ದಿ ಇದೆ. ಅನೇಕ ಜನರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ ಆದರೆ ಅವರು ಆಧಾರ್ ಅನ್ನು ತಮ್ಮ ಬ್ಯಾಂಕ್ ಅಕೌಂಟ್ ಗೆ ಸೀಡಿಂಗ್ ಮಾಡಿಲ್ಲ. ಖಾತೆಗೆ ಸಂಬಂಧಿಸಿದ ಎಲ್ಲಾ ನ್ಯೂನತೆಗಳನ್ನು ಸರಿಪಡಿಸಿದ ನಂತರ ತಮ್ಮ ಪಾಲಿನ ₹2,000 ರೂ. ಹಣವನ್ನು ನೀಡಲಾಗುತ್ತದೆ.
ಇದನ್ನೂ ಓದಿ: ಗೃಹಲಕ್ಷ್ಮಿ ₹2,000 ಹಣಕ್ಕೆ ಸರ್ಕಾರದಿಂದ ಹೊಸ ನಿಯಮ ಜಾರಿಯಾಗಿದೆ.!! Gruhalakshmi Scheme New Rules.!!
Gruhalakshmi Scheme: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಐದು ಭರವಸೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯೂ ಒಂದು. ಸರ್ಕಾರ ಈಗಾಗಲೇ ಜೂನ್ ತಿಂಗಳ ಹಣವನ್ನು ಬ್ಯಾಂಕ್‌ಗೆ ಜಮಾ ಮಾಡಿದೆ. ಆದರೆ ಕ್ರಮೇಣ ಹಂತ ಹಂತವಾಗಿ ಮಹಿಳೆಯರ ಖಾತೆಗಳಿಗೆ ಹಣ ಬರುತ್ತದೆ. ಈ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಕಳೆದ ಜೂನ್ ಕಂತುಗಳ ₹2,000 ರೂ. ಖಾತೆಗೆ ಜಮೆಯಾಗದ ಎಲ್ಲಾ ಮಹಿಳಾ ಫಲಾನುಭವಿಗಳಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ನೀವು ನಿಮ್ಮ ಅಗತ್ಯ ಇರುವ ಎಲ್ಲಾ ದಾಖಲೆಗಳನ್ನು ಸರಿಪಡಿಸಿದರೆ, ನಿಮ್ಮ ಖಾತೆಗೆ ನೀವು ಹಣವನ್ನು ಸಹ ಸ್ವೀಕರಿಸುತ್ತೀರಿ. ಹೌದು, ಬ್ಯಾಂಕ್ ಖಾತೆ ಹೊಂದಿದ್ದವರೂ ಹಲವರು ಆಧಾರ್ ಸೆಡಿಂಗ್ ಮಾಡುವುದಿಲ್ಲ. ಆದ್ದರಿಂದ, ಅವರು ಯಾವುದೇ ಹಣವನ್ನು ಸ್ವೀಕರಿಸಲಿಲ್ಲ.
ನಿಮ್ಮ ಬ್ಯಾಂಕ್ ವಿವರಗಳು ತಪ್ಪಾಗಿದ್ದರೆ, ದಯವಿಟ್ಟು ತಕ್ಷಣ ನಿಮ್ಮ ಬ್ಯಾಂಕ್‌ನಲ್ಲಿ ಹೊಸ ಖಾತೆಯನ್ನು ತೆರೆಯಿರಿ. ಒಮ್ಮೆ ನೀವು ಈ ಬ್ಯಾಂಕ್ ಖಾತೆಯನ್ನು ಗೃಹಲಕ್ಷ್ಮಿ ಯೋಜನೆಗೆ ಲಿಂಕ್ ಮಾಡಿದರೆ, ಉಳಿದ ಎಲ್ಲಾ ನಿಮ್ಮ ಪೆಂಡಿಂಗ್ ಹಣವು ನಿಮ್ಮ ಹೊಸ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ.