bara parihara list 2024 karnataka : ಮೊಬೈಲ್ ಸಂಖ್ಯೆಯ ಮುಖಾಂತರ ಬರ ಪರಿಹಾರದ ಹಣ ನಿಮ್ಮ ಖಾತೆಗೆ ಬಂದಿದ್ಯ ! ಎಂದು ಈ ರೀತಿ ಚೆಕ್ ಮಾಡಿ .

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ, ಈ ಲೇಖನದಲ್ಲಿ ತಿಳಿಸುತ್ತಿರುವಂತಹ ಹೊಸದಾದ ಮಾಹಿತಿ ಏನೆಂದರೆ ಮೊಬೈಲ್ ಸಂಖ್ಯೆ ಇದ್ದರೆ ಸಾಕು ಬರ ಪರಿಹಾರದ ಹಣವು ನಿಮ್ಮ ಖಾತೆಗೆ ಬರುತ್ತೋ ಇಲ್ವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.

ಯಾವ ರೀತಿಯಾಗಿ ಚೆಕ್ ಮಾಡಿಕೊಳ್ಳಬೇಕು ಎಂಬ ಎಲ್ಲಾ ಸಂಕ್ಷಿಪ್ತ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಲೇಖನವನ್ನು ಕೊನೆಯವರೆಗೂ ಓದಿ ಉಪಯುಕ್ತವಾದಂತಹ ಮಾಹಿತಿಯನ್ನು ಪಡೆದುಕೊಳ್ಳಿ.

ಸ್ನೇಹಿತರೇ ಈಗಾಗಲೇ ಸರ್ಕಾರವು ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಿತ್ತು, ರೈತರಿಗಾಗಿ ಸರ್ಕಾರವು ತಂದಿರುವಂತಹ ಯೋಜನೆ ಬರ ಪರಿಹಾರ ಎಂಬಂತಹ ಯೋಜನೆ ಈ ಯೋಜನೆಯ ಮುಖಾಂತರ ರೈತರಿಗೆ ಬರ ಪರಿಹಾರದ ಹಣವನ್ನು ಪ್ರತಿ ತಿಂಗಳು ನೀಡಲಾಗುತ್ತಿದೆ.

ರೈತರಿಗೆ ಸರ್ಕಾರವು ಈ ಒಂದು ಬರ ಪರಿಹಾರದ ಹಣವನ್ನು ನೀಡಲು ಮುಖ್ಯ ಕಾರಣವೇನೆಂದರೆ 2023 ಮತ್ತು 24ನೇ ಸಾಲಿನ ವರ್ಷದಲ್ಲಿ ಬರಗಾಲ ಬಂದಿತ್ತು, ಕಾರಿಫ್ ಬೆಳೆಯ ಬೆಳೆಯು ಈ ವರ್ಷದಲ್ಲಿ ತುಂಬಾ ಹಾನಿಯಾಗಿತ್ತು.

ದನ್ನೆಲ್ಲಾ ಗಮನಿಸಿದಂತಹ ಸರ್ಕಾರವು ರೈತರಿಗೆ ಆದಂತಹ ಹಾನಿಗೆ ಈ ಒಂದು ಬರ ಪರಿಹಾರದ ಮುಖಾಂತರವಾದರೂ ಹಣವನ್ನು ನೀಡಬೇಕು ಎಂಬ ಉದ್ದೇಶದಿಂದ ಈ ಒಂದು ಬರ ಪರಿಹಾರದ ಮುಖಾಂತರ ಪ್ರತಿ ತಿಂಗಳು ರೈತರಿಗೆ 2000 ಹಣವನ್ನು ನೀಡಲಾಗುತ್ತಿದೆ.

ಈಗಾಗಲೇ ಜನವರಿ 2024ನೇ ವರ್ಷದ ಮೊದಲನೇ ತಿಂಗಳಿನಿಂದಲೂ ಕೂಡ ಬರ ಪರಿಹಾರದ ಹಣವನ್ನು ರೈತರಿಗೆ ನೀಡುತ್ತಾ ಬಂದಿದೆ.

ರೈತರು ಈ ಒಂದು ಬೆಳೆ ಹಾನಿಯಿಂದ ಹಲವಾರು ನಷ್ಟವನ್ನು ಅನುಭವಿಸಿದರು ಏಕೆಂದರೆ ಉತ್ತಮ ಬೆಳೆ ಬಂದು ಫಲ ಸಿಗುತ್ತೆ ಎಂಬ ಉದ್ದೇಶದಿಂದ ರೈತರು ಬೆಳೆಗಳನ್ನು ಬೆಳೆದಿದ್ದರೂ ಆದರೆ ಬರಗಾಲದ ಒಂದು ಮಿತಿಯಿಂದ ಬೆಳೆಗಳ ಹಾನಿ ಉಂಟಾಗಿತ್ತು.

ಇದರಿಂದಾಗಿ ರೈತರಿಗೆ ಯಾವುದೇ ರೀತಿಯಾದಂತಹ ಲಾಭವಾಗಲಿಲ್ಲ. ಹೆಚ್ಚಿನದಾಯಕವಾದ ಅಂತಹ ನಷ್ಟವನ್ನು 2023 ಮತ್ತು 2024ನೇ ಸಾಲಿನಲ್ಲಿ ರೈತರು ಅನುಭವಿಸಿದ್ದಾರೆ. ಕಾರಿಫ್ ಬೆಳೆಯ ಹಾನಿಯಿಂದಾಗಿ.

ಒಟ್ಟಾರೆ ಸರ್ಕಾರವು ಈಗಾಗಲೇ ಒಂದನೇ ಕಂತಿನ ಹಣವನ್ನು 2,000 ಹಣವನ್ನು ಕೂಡ ಜಮಾ ಮಾಡಿದೆ ಜನವರಿ ತಿಂಗಳಿನಿಂದ ಹಾನಿ ಉಂಟಾದಂತಹ ಪ್ರತಿ ರೈತರಿಗೂ ಕೂಡ ಬರ ಪರಿಹಾರದ ಹಣವನ್ನು ಅವರ ಖಾತೆಗೆ ಜಮಾ ಮಾಡುತ್ತಿದೆ.

ಹಾಗಿದ್ರೆ ಬರ ಪರಿಹಾರದ ಹಣ ನಿಮ್ಮ ಖಾತೆಗೆ ಬರುತ್ತೋ ಇಲ್ವೋ ಎಂಬುದನ್ನು ನೀವು ಯಾವ ರೀತಿಯಾಗಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿ ಅಥವಾ ಸರ್ವೇ ನಂಬರ್, ಎಫ್ ಐ ಡಿ ನಂಬರ್ ಈ ಮೂರರಲ್ಲಿ ನೀವು ಯಾವುದಾದರೂ ಒಂದು ಸಂಖ್ಯೆಯನ್ನು ಬಳಸಿಕೊಂಡು ಚೆಕ್ ಮಾಡಿ.

ಪರಿಹಾರದ ಹಣ ನಿಮ್ಮ ಖಾತೆಗೆ ಬಂದಿದ್ಯೋ ಇಲ್ವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು, ಮುಂದಿನ ತಿಂಗಳು ನಿಮ್ಮ ಖಾತೆಗೆ ಹಣ ಬರುತ್ತೋ ಇಲ್ವೋ ಎಂಬುದನ್ನು ಕೂಡ ಇಲ್ಲಿ ಪರಿಶೀಲನೆ ಮಾಡಿಕೊಳ್ಳಬಹುದು.

ಬರ ಪರಿಹಾರದ ಹಣ ನಿಮ್ಮ ಖಾತೆಗೆ ಬಂದಿದ್ಯ ಎಂದು ಈ ರೀತಿ ಚೆಕ್ ಮಾಡಿ !

  • ಮೊದಲಿಗೆ ನೀವು ಬರ ಪರಿಹಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ ವೆಬ್ಸೈಟ್ ಲಿಂಕನ್ನು ನಾನು ಇಲ್ಲಿ ನೀಡಿರುತ್ತೇನೆ.
  • http://parihara.karnataka.gov.in/service92ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಕ್ಲಿಕ್ ಮಾಡಿದ ನಂತರ 2023 ಮತ್ತು 24ನೇ ವರ್ಷವನ್ನು ಆಯ್ಕೆ ಮಾಡಿಕೊಳ್ಳಿ.
  • ಬರಗಾಲ ಮತ್ತು ಋತು ಮುಂಗಾರು ಎಂದು ಆಯ್ಕೆ ಮಾಡಿಕೊಳ್ಳಿ.
  • ನಂತರ ಇಲ್ಲಿ ನಿಮಗೆ ಮೊಬೈಲ್ ಸಂಖ್ಯೆ ಅಥವಾ ಸರ್ವೆ ನಂಬರ್ F I D ನಂಬರ್ ಆಯ್ಕೆ ಕಾಣುತ್ತದೆ ಇದರ ಮೇಲೆ ನೀವು ಇದರಲ್ಲಿ ಯಾವುದಾದರು ಒಂದನ್ನು ಸೆಲೆಕ್ಟ್ ಮಾಡಿಕೊಂಡು ನಂಬರನ್ನು ನೀಡಿ.
  • ಇದೆಲ್ಲಾ ಆದ ನಂತರ, ಅಲ್ಲಿ ಕೇಳುವಂತಹ ಎಲ್ಲಾ ಮಾಹಿತಿಗಳನ್ನು ಕೂಡ ನೀವು ನೀಡಿ.
  • ಇದಾದ ನಂತರ ವಿವರ ಪಡೆಯಿರಿ ಎಂಬ ಹಸಿರು ಬಟನ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
  • ಕ್ಲಿಕ್ ಮಾಡಿದ ನಂತರವೇ ನಿಮಗೆ ಬರ ಪರಿಹಾರದ ಹಣ ಜಮಾ ಆಗಿದ್ಯೋ ಇಲ್ಲವೋ ಯಾವ ದಿನಾಂಕದಲ್ಲಿ ಜಮಾ ಆಗಿದೆ ಎಂಬ ಎಲ್ಲಾ ಸಂಪೂರ್ಣ ಮಾಹಿತಿಯನ್ನು ನೀವು ನೋಡಬಹುದು.

bara parihara list 2024 karnataka : ನೋಡಿದ್ರಲ್ಲ ಸ್ನೇಹಿತರೇ, ಯಾವ ರೀತಿಯಾಗಿ ಬರ ಪರಿಹಾರದ ಹಣ ನಿಮ್ಮ ಖಾತೆಗೆ ಜಮಾ ಆಗಿದ್ಯಾ ಇಲ್ವಾ ಎಂಬುದನ್ನು ಯಾವ ರೀತಿಯಾಗಿ ಮೊಬೈಲ್ ಮುಖಾಂತರವೇ ಚೆಕ್ ಮಾಡಬೇಕು ಎಂಬುದನ್ನು ತಿಳಿಸಿದ್ದೇನೆ.

ಇದೇ ರೀತಿಯಾದಂತಹ ಉಪಯುಕ್ತ ಮಾಹಿತಿಗಳನ್ನು ಪ್ರತಿನಿತ್ಯವೂ ಪಡೆಯಲು ‘ಕರ್ನಾಟಕ ಟ್ರೆಂಡ್ಸ್’ ಮಾಧ್ಯಮಕ್ಕೆ ಭೇಟಿ ನೀಡುವ ಮುಖಾಂತರ ನೀವು ಕೂಡ ದಿನನಿತ್ಯ ಹೊಸ ಹೊಸ ಮಾಹಿತಿಗಳ ಅಪ್ಡೇಟ್ ಅನ್ನು ಪಡೆದುಕೊಳ್ಳಬಹುದು.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಸ್ನೇಹಿತರೆ, ಮತ್ತೆ ಸಿಗೋಣ ಮುಂದಿನ ಉಪಯುಕ್ತವಾದಂತಹ ಲೇಖನದಲ್ಲಿ.

 

Leave a Comment