Gruhalakshmi: ಹಲೋ ಸ್ನೇಹಿತರೇ, ನಮ್ಮ ರಾಜ್ಯದ ಮಹಿಳೆಯರಿಗೆ ವಿಶೇಷವಾಗಿ ಅವರ ಆರ್ಥಿಕ ಅಭಿವೃದ್ಧಿಗಾಗಿ ನಮ್ಮ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಯೋಜನೆಯೇ ಈ ಗೃಹಲಕ್ಷ್ಮಿ ಯೋಜನೆಯಾಗಿದೆ. ಈ ಗೃಹಲಕ್ಷ್ಮಿ ಯೋಜನೆಯ ಮೂಖಾಂತರ ಕರ್ನಾಟಕದ ಎಲ್ಲಾ ಮನೆಯ ಮುಖ್ಯಸ್ಥೆಯಾಗಿರುವ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಪ್ರತಿ ತಿಂಗಳು ಕೂಡ ರೂ. ₹2,000 ರೂ. ಗಳನ್ನು ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.
ಗೃಹಲಕ್ಷ್ಮಿ ಯೋಜನೆಯ ಮೂಖಾಂತರ ಕರ್ನಾಟಕದ ಮಹಿಳಾ ಫಲಾನುಭವಿಗಳಿಗೆ ಈವರೆಗೂ 10 ಕಂತುಗಳ ₹20,000 ಸಾವಿರ ರೂ. ಹಣವನ್ನು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ, ಈಗ 11ನೇ ಕಂತಿನ ಹಣ ಜಮಾ ಮಾಡುವ ದಿನಾಂಕವು ಫಿಕ್ಸ್ ಆಗಿದೆ. ಗೃಹಲಕ್ಷ್ಮಿ ಯೋಜನೆಯ ಹಣದ ಮೂಲಕ ತಮ್ಮ ಮನೆಗೆ ಸಹಾಯ ಮಾಡುತ್ತ ಮನೆ ನೆಡೆಸಿಕೊಂಡು ಹೊಗುತ್ತಿರುವ, ಮನೆಯ ಮುಖ್ಯ ಸದಸ್ಯೆಯರಿಗೆ ಆರ್ಥಿಕವಾಗಿ ಸಹಾಯ ಆಗುತ್ತಿದೆ. ಈ ಗೃಹಲಕ್ಷ್ಮಿ ಯೋಜನೆಯಿಂದಾಗಿ ಬರುತ್ತಿರುವ ₹2,000 ರೂ. ಹಣದಿಂದ ಮಹಿಳೆಯರಿಗೆ ಆರ್ಥಿಕವಾಗಿ ಮನೆಯನ್ನು ನಡೆಸಿಕೊಂಡು ಹೋಗಲು ತುಂಬಾ ಅನುಕೂಲ ಹಾಗೂ ಸಹಾಯವಾಗುತ್ತಿದೆ ಎಂದು ಹಲವು ಬಡ ಕುಟುಂಬದ ಮಹಿಳೆಯರು ತಿಳಿಸಿದ್ದಾರೆ. ಇನ್ನೂ ಹೆಚ್ಚಿನ ಮಹಿಳೆಯರು ಈ ಗೃಹಲಕ್ಷ್ಮಿ ಯೋಜನೆಯ ₹2,000 ಹಣವನ್ನು ಕೂಡಿಟ್ಟು, ತಮ್ಮ ಮನೆಗಳಿಗೆ ಬೇಕಾದ ಹಲವು ವಸ್ತುಗಳನ್ನು ಹಾಗೂ ಚಿನ್ನವನ್ನು ಸಹ ಖರೀದಿ ಮಾಡುತ್ತಿದ್ದಾರೆ.
ಹೀಗೆ ಹಲವಾರು ರೀತಿಗಳಲ್ಲಿ ಈ ಗೃಹಲಕ್ಷ್ಮಿ ಯೋಜನೆಯ ಹಣವು ಎಲ್ಲಾ ಮಹಿಳಾ ಫಲಾನುಭವಿಗಳಿಗೆ ಸಹಾಯವನ್ನು ಮಾಡುತ್ತಾ ಬಂದಿದೆ. ನಮ್ಮ ಕರ್ಣಾಟಕ ರಾಜ್ಯದಲ್ಲಿ 1 ಕೋಟಿಗಿಂತಲೂ ಹೆಚ್ಚಿನ ಮಹಿಳೆಯರು ಈ ಗೃಹಲಕ್ಷ್ಮೀ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿದ್ದರು ಸಹ, ಎಲ್ಲಾ ಮಹಿಳೆಯರಿಗೆ ಈ ಗೃಹಲಕ್ಷ್ಮಿ ಯೋಜನೆಯ ಹಣದ ಸೌಲಭ್ಯವೂ ಸಿಗುತ್ತಿಲ್ಲ, ಇದಕ್ಕೆ ಕಾರಣವೂ ಕೆಲವು ತಾಂತ್ರಿಕ ಸಮಸ್ಯೆಗಳು ಉಂಟಾಗಿರುವುದು.
ಗೃಹಲಕ್ಷ್ಮಿ ಯೋಜನೆಯ ಹಣದ ಸೌಲಭ್ಯವೂ ಸಿಗದ ಮಹಿಳೆಯರು ಏನು ಮಾಡಬೇಕು.?
ಗೃಹಲಕ್ಷ್ಮಿ ಯೋಜನೆಯ ಹಣದ ಸೌಲಭ್ಯವೂ ಸಿಗದ ಮಹಿಳೆಯರು ಮೊದಲು ತಮ್ಮ ಆಧಾರ್ ಕಾರ್ಡ್ ನಲ್ಲಿ ಹಾಗೂ ತಾವು ಸಲ್ಲಿಸಿದ್ದ ದಾಖಲೆಗಳಲ್ಲಿ ಮತ್ತು ಬ್ಯಾಂಕ್ ಪಾಸ್ ಬುಕ್ ನಲ್ಲಿ ಹಾಗೂ ತಮ್ಮ ಬಿ.ಪಿಎ.ಲ್ ರೇಷನ್ ಕಾರ್ಡ್ನಲ್ಲಿ ಇರುವ ಎಲ್ಲಾ ಮಾಹಿತಿಗಳೂ ಸರಿಯಾಗಿ ಇದೆಯಾ ಎಂದು ಒಮ್ಮೆ ಚೆಕ್ ಮಾಡಿಕೊಳ್ಳುವುದು ಉತ್ತಮ. ಹಾಗೆಯೇ ನಮ್ಮ ರಾಜ್ಯದಲ್ಲಿ ಅರ್ಹತೆಯನ್ನು ಹೊಂದಿರುವ ಎಲ್ಲಾ ಮಹಿಳೆಯರಿಗೂ ಸಹ ಈ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯದ ಹಣವು ತಲುಪಬೇಕು ಎನ್ನುವುದು ನಮ್ಮ ರಾಜ್ಯ ಸರ್ಕಾರದ ಉದ್ದೇಶವೂ ಕೂಡ ಆಗಿದೆ. ಹೀಗಾಗಿ ಇನ್ನೂ ಯಾರೆಲ್ಲರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿಲ್ಲವೋ ಅವರೆಲ್ಲರೂ ಕೂಡಲೇ ಅರ್ಜಿ ಸಲ್ಲಿಕೆ ಮಾಡಬಹುದು.
ರಾಜ್ಯ ಸರ್ಕಾರವೂ ಇದುವರೆಗೂ ಸಹ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಮಾಡಲು ಕೊನೆಯ ದಿನಾಂಕವನ್ನು ನಿಗದಿ ಪಡಿಸಿಲ್ಲಾ ಇದು ಸರ್ಕಾರದ ಮಾಡಿರುವ ಒಂದು ಒಳ್ಳೆಯ ಸುದ್ದಿ ಎನ್ನಬಹುದು.
ಮತ್ತೊಂದು ಮುಖ್ಯವಾದ ವಿಚಾರ ಏನೆಂದರೆ, ಎಲೆಕ್ಷನ್ ಮತ್ತು ಇನ್ನಿತರ ಕೆಲವು ಕಾರಣಗಳಿಂದ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ₹2,000 ರೂ. ಬಿಡುಗಡೆ ಆಗುವುದಕ್ಕೆ ಸ್ವಲ್ಪ ತಡವಾಗಿತ್ತು, ಆದರೆ ಸರ್ಕಾರವು ಈಗ 11ನೇ ಕಂತಿನ ಹಣವನ್ನು ಬಿಡುಗಡೆಗೆ ಮಾಡಲು ದಿನಾಂಕವು ನಿಗದಿಯಾಗಿದ್ದು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾದ್ಯಮಕ್ಕೆ ನೀಡಿರುವ ಮಾಹಿತಿಗಳ ಅನುಸಾರ ನಾಳೆಯಿಂದ ಗೃಹಲಕ್ಷ್ಮೀ ಯೋಜನೆಯ 11ನೇ ಕಂತಿನ ಹಣವು ಎಲ್ಲಾ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ.
ಈ ಯೊಜನೆಯ ಎಲ್ಲಾ ಮಹಿಳಾ ಫಲಾನುಭವಿಗಳು ಸಹ ತಮ್ಮ ಡಿಬಿಟಿ (DBT) ಸ್ಟೇಟಸ್ ಅನ್ನು ಚೆಕ್ ಮಾದಿಕೊಳ್ಳಬಹುದು, ಜೊತೆಗೆ ಈ ಗೃಹಲಕ್ಷ್ಮಿ ಯೋಜನೆಯನ್ನು ಸರ್ಕಾರವು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ, ಮತ್ತು ಇದು ಸತತ 5 ವರ್ಷಗಳ ಕಾಲ ಮುಂದುವರಿಯಲಿದೆ ಎಂದು ಸಹ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ.