ಹಲೋ ಸ್ನೇಹಿತರೆ, ರಾಜ್ಯ ಸರ್ಕಾರದ ಯೋಜನೆಯಾಗಿರುವ (ಸರ್ವರಿಗೂ ಸೂರು ಯೋಜನೆಯ) ಅಡಿಯಲ್ಲಿ ಬಡವರಿಗೆ ಸರ್ಕಾರವು ಬಂಪರ್ ಗಿಫ್ಟ್ ಒಂದನ್ನೂ ನೀಡಿದೆ. ಸುಮಾರು 1.30 ಲಕ್ಷ ಫಲಾನುಭವಿಗಳಿಗೆ ನಮ್ಮ ರಾಜ್ಯದ ಕಾಂಗ್ರೆಸ್ ಸರ್ಕಾರವು ಒಟ್ಟು 5 ಲಕ್ಷ ರೂ. ಗಳನ್ನು ಭರಿಸಲು ಸರಕಾರ ತೀರ್ಮಾನಿಸಿದೆ. ಅಂದರೆ ಫಲಾನುಭವಿಗಳಿಗೆ 2 ಲಕ್ಷ ರೂ. ಗಳ ಸಬ್ಸಿಡಿಯ ಜೊತೆಗೆ ಹೆಚ್ಚುವರಿಯಾಗಿ 3 ಲಕ್ಷ ರೂ. ಗಳನ್ನು ರಾಜ್ಯ ಸರ್ಕಾರವೂ ಭರಿಸುವುದಾಗಿ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ತಿಯಾಗಿ ಕೊನೆವರೆಗೂ ಓದಿ.
ಈ ಸರ್ವರಿಗೂ ಸೂರು ಯೋಜನೆಯ ಅಡಿಯಲ್ಲಿ (ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ) ಮತ್ತು (ರಾಜೀವ್ ಗಾಂಧಿ ವಸತಿ) ಯೋಜನೆಯಿಂದ ಎಲ್ಲಾ ಬಡ ಕುಟುಂಬಗಳಿಗೆ ವಾದಗಿಸಲಾಗುತ್ತಿರುವ ಒಟ್ಟಾರೆ 1,29,457 ಸಾವಿರ ಮನೆಗಳಿಗೆ ಎಲ್ಲಾ ಫಲಾನುಭವಿಗಳ ವಂತಿಗೆಯನ್ನು ಸರ್ಕಾರವು ಭರಿಸಲು ತೀರ್ಮಾನವನ್ನು ಕೈಗೊಂಡಿದೆ. ಈ ಮುಖಾಂತರ ಸುಮಾರು ವರ್ಷಗಳಿಂದ ನೆನೆಗುದಿಗೆಯಿಂದ ಬಿದ್ದಿರುವ ಎಲ್ಲಾ ಮನೆಗಳ ನಿರ್ಮಾಣ ಕಾರ್ಯಕ್ಕೆ ಸರ್ಕಾರವೂ ಮುಕ್ತಿ ನೀಡಲು ತೀರ್ಮಾನಿಸಿದೆ.
ಈ ಒಂದು ಸರ್ವರಿಗೂ ಸೂರು ಯೋಜನೆಯ ಅಡಿಯಲ್ಲಿ ಪ್ರಸ್ತುತವಾಗಿ ಪ್ರತೀ ಮನೆಗಳ ನಿರ್ಮಾಣಕ್ಕೆ ಒಟ್ಟಾರೆಯಾಗಿ ₹7.5 ಲಕ್ಷ ರೂ. ಗಳು ಖರ್ಚಾಗುತ್ತದೆ. ಈ ಹಣದಲ್ಲಿ ಕೇಂದ್ರ ಸರ್ಕಾರದಿಂದ ₹1.5 ಲಕ್ಷ ರೂ. ಗಳನ್ನು ಮತ್ತು ರಾಜ್ಯ ಸರ್ಕಾರದಿಂದ ಸುಮಾರು ₹2 ಲಕ್ಷ ರೂಪಾಯಿಯ ಸಬ್ಸಿಡಿಯ ರೂಪದಲ್ಲಿ ಫಲಾನುಭವಗಳಿಗೆ ಸಿಗುತ್ತದೆ. ಉಳಿದ ಎಲ್ಲಾ ಹಣವನ್ನು ಕೂಡ ಫಲಾನುಭವಿಯೇ ಕಟ್ಟಬೇಕಾದ ಸ್ಥಿತಿ ಇತ್ತು. ಆದರೆ ಈಗ ಹಾಗಿಲ್ಲ ಆ ಹಣದಲ್ಲಿ ₹1 ಲಕ್ಷ ರೂ. ಗಳನ್ನು ಎಲ್ಲಾ ಫಲಾನುಭವಿಗಳು ಪಾವತಿಸಿದರೆ ಸಾಕು, ಉಳಿದಿರುವ ₹3 ಲಕ್ಷ ರೂಪಾಯಿಗಳನ್ನು ಸರ್ಕಾರವೇ ಭರಿಸಲು ನಿರ್ಧರಿಸಿದೆ. ಈ ಮೂಖಾಂತರ ಸರ್ಕಾರವು ಒಟ್ಟಾರೆ ₹5 ಲಕ್ಷ ರೂ. ಗಳನ್ನು ಭರಿಸಿದಂತೆ ಆಗುತ್ತದೆ.
ಈ (ಸರ್ವರಿಗೂ ಸೂರು ಯೋಜನೆ) ಯ ಅಡಿಯಲ್ಲಿ ನಿರ್ಮಿಸಲಾಗುವ ಎಲ್ಲಾ ಮನೆಗಳ ನಿರ್ಮಾಣದ ಖರ್ಚಿನ ಹಣವನ್ನು ಸರ್ಕಾರವೇ ಭರಿಸಲು ಮುಂದಾಗಿ ಒಪ್ಪಿಗೆಯನ್ನು ಸೂಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಿರ್ಮಾಣದ ಹಂತದಲ್ಲಿರುವ 1,29,000 ಸಾವಿರ ಮನೆಗಳಿಗೆ ಎಷ್ಟು ಖರ್ಚು & ವೆಚ್ಚ ಆಗುತ್ತದೆ. ಈ ವರ್ಷದಲ್ಲಿ ಗರಿಷ್ಠ ಎಷ್ಟು ಹಣವನ್ನು ಕೊಡಬಹುದು.? ಹಾಗೂ ಮುಂದಿನ ವರ್ಷದಲ್ಲಿ ಎಷ್ಟು ಹಣವನ್ನು ಕೊಡಬಹುದು.? ಎಂಬ ಬಗ್ಗೆ ಪರಿಶೀಲಿಸುವಂತೆ ಮುಖ್ಯಮಂತ್ರಿಗಳು ಹಣಕಾಸು ಇಲಾಖೆ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
(ಕೊಳೆಗೇರಿಗಳ ಅಭಿವೃದ್ಧಿ ಮಂಡಳಿ) ಯ ವತಿಯಿಂದ 2ನೇಯ ಹಂತದಲ್ಲಿ 39, 966 ಸಾವಿರ ಮನೆಗಳ ಹಂಚಿಕೆ ಮಾಡಲು ಸರ್ಕಾರವು ಸಿದ್ಧವಿದ್ದು ₹862 ಕೋಟಿ ರೂ. ಗಳ ಹಣವೂ ಅಗತ್ಯವಿದೆ. ಅದೇ ರೀತಿಯಲ್ಲಿ (ರಾಜೀವ್ ಗಾಂಧಿ ವಸತಿ) ಯೋಜನೆಯ ನಿಗಮದ ವತಿಯಿಂದ ಮೊದಲನೇಯ ಹಂತದಲ್ಲಿ ಹಂಚಿಕೆಯನ್ನು 11,406 ಸಾವಿರ ಮನೆಗಳು ಸಿದ್ಧವಿದ್ದು, ₹529 ಕೋಟಿ ರೂ. ಹಣದ ಅವಶ್ಯಕತೆಯು ಇದೆ ಎಂದು ಸಚಿವರಾದ (ಜಮೀರ್ ಅಹ್ಮದ್ ಖಾನ್) ಅವರು ಸಭೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ಈ ವಿಷಯವನ್ನು ತಂದರು. ಈ ಮೊದಲಿಗೆ (ಕೊಳೆಗೇರಿ ಅಭಿವೃದ್ಧಿ ಮಂಡಳಿಯ) ಯೋಜನೆಗೆ ಸರಕಾರದಿಂದ ಅನುಮತಿಯು ದೊರೆತಿತ್ತು. ಬುಧವಾರದ ಸಭೆಯಲ್ಲಿ (ರಾಜೀವ್ ಗಾಂಧಿ ವಸತಿ) ನಿಗಮದ ಯೋಜನೆಗೂ ಕೂಡ ಅನ್ವಯವನ್ನು ಮಾಡಲು ತಾತ್ವಿಕವಾಗಿ ಒಪ್ಪಿಗೆಯು ದೊರೆಯಿತು.
ಇತರೆ ವಿಷಯಗಳು: