PM Vishwakarma Yojana: ನಮಸ್ಕಾರ ಸ್ನೇಹಿತರೇ, ಕರ್ನಾಟಕದ ಸಮಸ್ತ ಜನರಿಗೆ ಈ ಲೇಖನದ ಮೂಲಕ ತಿಳಿಸುವ ವಿಷಯ ಏನೆಂದರೆ ಇಂದು ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಹಾಗೂ ಶಕ್ತಿ ಯೋಜನೆ (Shakti Scheme) ಯು ನಮ್ಮ ಕರ್ನಾಟಕ ರಾಜ್ಯದಲ್ಲಿ ಸಾಕಷ್ಟು ಹೈಪ್ ಉಂಟು ಮಾಡಿದೆ. ಗೆಳೆಯರೆ ನಮ್ಮ ರಾಜ್ಯದ ಮಹಿಳೆಯರು ಎಲ್ಲರೂ ಕೂಡ ಸಕ್ರಿಯವಾಗಿ ಈ ಯೋಜನೆಗಳಿಗೆ ಧನಾತ್ಮಕವಾಗಿ ಪ್ರತಿಕ್ರಿಯೆಯನ್ನು ನೀಡುತ್ತಾ ಬರುತ್ತಾ ಇದ್ದಾರೆ.
ತಿಂಗಳಿಗೆ ಮನೆಯ ಹಿರಿಯ ಮಹಿಳೆಗೆ ತಲಾ ₹2,000 ಸಾವಿರ ರೂ. ಗಳನ್ನು ನೀಡುವ ಮೂಲಕ ಅವರ ಆರ್ಥಿಕ ಅಭಿವೃದ್ಧಿಗೆ ಈ ಯೋಜನೆವು ಬಹಳಷ್ಟು ಮಹಿಳೆಯರಿಗೆ ಎಲ್ಲಾ ರೀತಿಯಲ್ಲಿ ನೆರವಾಗುತ್ತದೆ. ಈಗಾಗಲೇ ಅರ್ಜಿ ಸಲ್ಲಿಸಿ ನೊಂದಣಿ ಮಾಡಿಕೊಂಡ ಎಲ್ಲಾ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹನ್ನೊಂದು (11ನೇ) ಕಂತಿನ ವರೆಗೆ ₹22,000 ಹಣ ಜಮಾ ಮಾಡಲಾಗಿದ್ದು ಇದೀಗ ರಾಜ್ಯದ ಹಾಗೂ ದೇಶದ ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್ ಅನ್ನು ನೀಡಲು ಕೇಂದ್ರ ಸರ್ಕಾರವು ಒಂದು ಹೊಸ ಯೋಜನೆಯನ್ನು ಜಾರಿ ಮಾಡಿದೆ. ಯಾವುದು ಆ ಯೋಜನೆ ಎಂದು ತಿಳಿದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಇಂದು ದೇಶದ ಎಲ್ಲಾ ಮಹಿಳೆಯರ ಉತ್ತೇಜನಕ್ಕಾಗಿ ಕೇಂದ್ರ ಸರ್ಕಾರವು ಸಾಕಷ್ಟು ರೀತಿಯ ಬೆಂಬಲವನ್ನೂ ಯೋಜನೆಗಳ ಮುಖೇನ ನೀಡುತ್ತಿದೆ, ಆರ್ಥಿವಾಗಿಯು ಸಹ ಮಹಿಳೆಯರಿಗೆ ಬೆಂಬಲವನ್ನ ನೀಡುತ್ತಿದೆ. ದೇಶದ ಮಹಿಳಾಮಣಿಗಳು ಉದ್ಯೋಗವಂತರಾಗಬೇಕೆಂದು ಇದಕ್ಕೆ ಸ್ವ- ಉದ್ಯಮ ತರಬೇತಿ ಮತ್ತು ಇದಕ್ಕೆ ಸಹಾಯಧನವನ್ನೂ ಮತ್ತು ಇತ್ಯಾದಿಗಳನ್ನು ಕೇಂದ್ರ ಸರ್ಕಾರವು ನೀಡುತ್ತಿದೆ. ಅದೇ ರೀತಿ ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ಮನೆಯಲ್ಲೇ ಸ್ವ- ಉದ್ಯಮ ಮಾಡಲು ವಿತರಣೆ ಕೂಡ ಮಾಡುತ್ತಿದೆ. ಈ ಕೇಂದ್ರ ಸರ್ಕಾರದ ಸೌಲಭ್ಯವನ್ನು ಈಗಾಗಲೇ ಲಕ್ಷಾಂತರ ಮಹಿಳೆಯರು ಪಡೆದುಕೊಂಡಿದ್ದಾರೆ.
ಇಂದು ಟೈಲರಿಂಗ್ ನಲ್ಲಿ ಆಸಕ್ತಿ ಹೊಂದಿರುವ ಮತ್ತು ಅದರಲ್ಲಿ ಪ್ರತಿಭೆಯನ್ನ ಹೊಂದಿರುವ ಸಾಕಷ್ಟು ಮಹಿಳೆಯರು ಇದ್ದಾರೆ. ಆದರೆ ಬಹುತೇಕ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನ ತಮ್ಮ ಖರ್ಚಿನಲ್ಲಿ ಖರೀದಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ 2023-2024 ನೇ ಸಾಲಿನಲ್ಲಿ (ವೃತ್ತಿನಿರತ ಗ್ರಾಮೀಣ ಗುಡಿ ಕೈಗಾರಿಕೆ) ಯನ್ನು ಮಾಡುತ್ತಿರುವ ಅರ್ಹ ಮಹಿಳಾ ಅಭ್ಯರ್ಥಿಗಳು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಒಂದು ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ತಾವೇ ಹೊಲಿಗೆ ಯಂತ್ರಗಳನ್ನು ಖರೀಧಿ ಮಾಡಲು ₹15,000 ರೂ. ಗಳ ವರೆಗೆ ಸಹಾಯಧನವನ್ನು ಕೇಂದ್ರ ಸರ್ಕಾರದಿಂದ ನೀಡಲಾಗುತ್ತದೆ.
PM Vishwakarma Yojane: ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಯಾವೆಲ್ಲಾ ಅರ್ಹತೆಗಳು ಬೇಕಾಗುತ್ತದೆ:
- ಅರ್ಜಿಯನ್ನು ಸಲ್ಲಿಸುವ ಅರ್ಜಿದಾರ ಅಭ್ಯರ್ಥಿಗಳ ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
- (ಉಚಿತ ಹೊಲಿಗೆ ಯಂತ್ರ) ಕ್ಕೆ ಅರ್ಜಿ ಹಾಕುವ ಅಭ್ಯರ್ಥಿಗಳೂ ಭಾರತದ ನಾಗರಿಕರಾಗಿರಬೇಕು.
- (PM Vishva Karma Yojane) ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಟೈಲರ್ ಆಗಿ ಕೆಲಸವನ್ನು ಮಾಡುವ ಫಲಾನುಭಿಗಳು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
- ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಯು ಬಡತನದ ರೇಖೆಗಿಂತಲು ಕೆಳಗಿರಬೇಕು.
- ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಯ ಕುಟುಂಬದ ಆದಾಯವು ₹12,000 ರೂ. ಗಳಿಗಿಂತ ಕಡಿಮೆ ಇರಬೇಕು.
PM Vishwakarma Yojane: ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಈ ಎಲ್ಲಾ ದಾಖಲೆಗಳು ಖಡ್ಡಾಯವಾಗಿ ಬೇಕು:
- ರೇಷನ್ ಕಾರ್ಡ್
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಹೊಲಿಗೆ ತರಬೇತಿ ಪಡೆದ ಪ್ರಮಾಣ ಪತ್ರ
- ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
PMVKY ಅಡಿಯಲ್ಲಿ (ಉಚಿತ ಹೊಲಿಗೆ ಯಂತ್ರ ಯೋಜನೆ 2024) (Free Sewing Machine Scheme 2024) ಗೆ ಅರ್ಜಿಯನ್ನು ಸಲ್ಲಿಸಲು ಮೊದಲು ನೀವು ಈ ಕೆಳಗೆ (PMVKY) ನ ಅಧಿಕೃತವಾದ ವೆಬ್ ಸೈಟ್ ಗೆ ಭೇಟಿ ನೀಡಿ ನಂತರ ಅಲ್ಲಿ ನೀವು ನೋಂದಣಿ ಮಾಡಿಕೊಳ್ಳಬೇಕು.