Supreme Court Recruitment: ಭಾರತದ ಸುಪ್ರೀಂ ಕೋರ್ಟ್ ನಲ್ಲಿ ಜೂನಿಯರ್ ಕೋರ್ಟ್ ಅಟೆಂಡೆಂಟ್ ಗಳ 80 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 12, 2024 ರವರೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ನಿಗದಿತ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ, ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಈ ಖಾಲಿ ಹುದ್ದೆಗಳ ಸಂಪೂರ್ಣ ವಿವರಗಳು ಮತ್ತು ಎಲ್ಲಾ ಇತರ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಓದಿ ನಂತರ ಅರ್ಜಿ ಸಲ್ಲಿಸಬೇಕು.
ಈ ನೇಮಕಾತಿಯ ಪೂರ್ತಿ ವಿವರಗಳು:
ಇಲಾಖೆ ಹೆಸರು : (Supreme Court) ಭಾರತೀಯ ಸುಪ್ರೀಂಕೋರ್ಟ್
ಒಟ್ಟು ಹುದ್ದೆಗಳು : 80 ಹುದ್ದೆಗಳು
ಹುದ್ದೆಗಳ ಹೆಸರು : ಜೂನಿಯರ್ ಕೋರ್ಟ್ ಅಟೆಂಡೆಂಟ್
ಉದ್ಯೋಗ ಸ್ಥಳ : ಭಾರತಾದ್ಯಂತ (Pan India)
ಅರ್ಜಿ ಸಲ್ಲಿಸುವ ವಿಧ : ಆನ್ಲೈನ್ ನಲ್ಲಿ (Online)
ವಿದ್ಯಾರ್ಹತೆ
ಈ ನೇಮಕಾತಿ ಅಧಿಸೂಚನೆಯ ಪ್ರಕಾರ, ಈ ಪೋಸ್ಟ್ಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ನೇಮಕಾತಿ ನಿಯಮಗಳ ಪ್ರಕಾರ 10 ನೇ ತರಗತಿ (SSLC) / ಡಿಪ್ಲೊಮಾ ಕೋರ್ಸ್ ನ ವಿದ್ಯಾರ್ಹತೆಯನ್ನು ಹೊಂದಿರಬೇಕು. ವೃತ್ತಿಪರ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
ವೇತನಶ್ರೇಣಿ
ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಈ ಹುದ್ದೆಗೆ ₹20,220 ರೂ. ಗಳಿಂದ ₹51,640 ರೂ. ಗಳ ವರೆಗೆ ಮಾಸಿಕವಾಗಿ ವೇತನವನ್ನು ನೀಡಲಾಗುತ್ತದೆ.
ವಯೋಮಿತಿ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠವಾಗಿ 18 ವರ್ಷ ವಯಸ್ಸು ಮತ್ತು ಗರಿಷ್ಠ 27 ವರ್ಷಗಳ ಒಳಗಿನ ಎಲ್ಲಾ ಅರ್ಹ ಅಭ್ಯರ್ಥಿಗಳೂ ಕೂಡ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಶುಲ್ಕ
- ಈ ನೇಮಕಾತಿಯ ಮಾರ್ಗಸೂಚಿಗಳ ಪ್ರಕಾರ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಶುಲ್ಕದ ವಿವರ.
- ಇತರ ಎಲ್ಲಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ : ₹400 ರೂ.
- SC/ST/ಅಂಗವಿಕಲರು/ಮಾಜಿ ಸೈನಿಕರು/ವಿಧವೆಯರು/ವಿಚ್ಛೇದಿತ ಮಹಿಳೆಯರು ಇವರೆಲ್ಲರಿಗೂ ಅರ್ಜಿ ಶುಲ್ಕ : ₹200 ರೂ.
ಆಯ್ಕೆ ವಿಧಾನ
ಸುಪ್ರೀಂ ಕೋರ್ಟ್ ಹುದ್ದೆಯ ಅಧಿಸೂಚನೆಯ ಅಧಿಕೃತವಾದ ಸೂಚನೆಯ ಪ್ರಕಾರವಾಗಿ, ಅರ್ಜಿಸಲ್ಲಿಸುವ ಎಲ್ಲಾ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮುಖಾಂತರ, ಮತ್ತು ಸಾಮರ್ಥ್ಯ ಪರೀಕ್ಷೆ ಮುಖಾಂತರ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಪ್ರಕ್ರಿಯೆಯ ಪ್ರಮುಖ ದಿನಾಂಕಗಳು
ಅರ್ಜಿ ಹಾಕಲು ಪ್ರಾರಂಭ ದಿನಾಂಕ : ಆಗಸ್ಟ್ /23/2024
ಅರ್ಜಿ ಹಾಕಲು ಕೊನೆಯ ದಿನಾಂಕ : ಸೆಪ್ಟೆಂಬರ್/12/2024
ಪ್ರಮುಖ ಲಿಂಕುಗಳು
ನೋಟಿಫಿಕೇಶನ್ : Click Here