ಹಲೋ ಸ್ನೇಹಿತರೇ, ಜೂನ್ 27 ಮತ್ತು 28 ರಂದು ಕರಾವಳಿ ಕರ್ನಾಟಕ ಭಾಗಕ್ಕೆ (ಭಾರತೀಯ ಹವಾಮಾನ ಇಲಾಖೆ) (IMD) ಯು ರೆಡ್ ಅಲರ್ಟ್ ಅನ್ನು ಘೋಷಿಸಿರುವುದರಿಂದ ಭಾರೀ ಮಳೆಯಿಂದಾಗಿ ಕರ್ನಾಟಕದ ದಕ್ಷಿಣ ಕನ್ನಡದಲ್ಲಿ ಎಲ್ಲಾ ಶಾಲೆಗಳಿಗೂ ರಜೆ ಕೊಟ್ಟು ಮುಚ್ಚಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಮುಲ್ಲೈ ಮುಹಿಲನ್ ಆದೇಶ ಹೊರಡಿಸಿ ಎಲ್ಲಾ ಶಾಲೆಗಳಿಗೆ, ಅಂಗನವಾಡಿಗಳು ಮತ್ತು ಕಾಲೇಜುಗಳಿಗೆ ರಜೆಯನ್ನು ಘೋಷಿಸಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶದಂತೆ ಎಲ್ಲಾ ಅಂಗನವಾಡಿಗಳು, ಅನುದಾನಿತ, ಸರ್ಕಾರಿ ಮತ್ತು ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆಲ್ಲಾ ರಜೆಯನ್ನು ಘೋಷಿಸಲಾಗಿದೆ.
ಇದನ್ನೂ ಓದಿ: KSFES Recruitment 2024: ಅಗ್ನಿಶಾಮಕ ಇಲಾಖೆಯಲ್ಲಿ ಹೊಸ ನೇಮಕಾತಿ! 10ನೇ ತರಗತಿ ಪಾಸಾದ ಅಭ್ಯರ್ಥಿಗಳು ಬೇಗ ಅರ್ಜಿ ಹಾಕಿ!
(ಭಾರತೀಯ ಹವಾಮಾನ ಇಲಾಖೆ) (IMD) ಯ ಇತ್ತೀಚಿನ ಎಲ್ಲಾ ನವೀಕರಣಗಳ ಪ್ರಕಾರ ಗಾಳಿಯು ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 35 km p/h ನಿಂದ 45 km p/h ನ ವೇಗದಲ್ಲಿ km p/h ವೇಗದ ಗಾಳಿಯು ಬೀಸುವ ಸಾಧ್ಯತೆಯಿದೆಯಂತೆ. ನಮ್ಮ ಕರ್ನಾಟಕದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ (ಭಾರತೀಯ ಹವಾಮಾನ ಇಲಾಖೆ) (IMD) ರೆಡ್ ಅಲರ್ಟ್ ಅನ್ನು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಮೀನುಗಾರರಿಗೂ ಕೂಡ ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತವು ಮೀನುಗಾರರಿಗೆ ಎಚ್ಚರಿಕೆಯನ್ನು ನೀಡಿದೆ.
ಭಾನುವಾರ ಕರಾವಳಿ ಕರ್ನಾಟಕದಾದ್ಯಂತ ಗಂಟೆಗೆ 35 km p/h ನಿಂದ 45 km p/h ನ ವೇಗದಲ್ಲಿ ವೇಗದ ಗಾಳಿಯೊಂದಿಗೆ ಕರಾವಳಿ ಕರ್ನಾಟಕದಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು (ಭಾರತೀಯ ಹವಾಮಾನ ಇಲಾಖೆ) (IMD) ಮುನ್ಸೂಚನೆ ನೀಡಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಜೂನ್ 29 ರಿಂದ ಜುಲೈ 1 ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯು ಮುಂದುವರೆಯಲಿದೆ.
ಕರ್ನಾಟಕ, ಅರುಣಾಚಲ ಪ್ರದೇಶ, ಕೇರಳ, ಒಡಿಶಾ ಮತ್ತು ಉತ್ತರ ಪ್ರದೇಶ, ಗೋವಾದಲ್ಲಿ ಇಂದು ಜೂನ್ 30 ರಂದು ಭಾರೀ ಮಳೆ ಆಗುವ ಸಾಧ್ಯತೆಗಳು ಇದೆ. (ಭಾರತೀಯ ಹವಾಮಾನ ಇಲಾಖೆ) (IMD) ಈ ಎಲ್ಲಾ ಪ್ರದೇಶಗಳಿಗೆ ಎರಡನೇ ಮಟ್ಟದ ಎಚ್ಚರಿಕೆಯ ಅಂದರೆ (ಆರೆಂಜ್) ಕಿತ್ತಳೆ ಅಲರ್ಟ್ ಎಚ್ಚರಿಕೆಯನ್ನು ನೀಡಿದೆ.
ಪತ್ರಿಕಾ ಪ್ರಕಟಣೆಯ ಜೂನ್ 28 ರಂದು, (ಭಾರತೀಯ ಹವಾಮಾನ ಇಲಾಖೆ) (IMD) ಜೂನ್ 29 ರಂದು ಕರ್ನಾಟಕ ಮತ್ತು ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ಮತ್ತು ಜೂನ್ 30 ರವರೆಗೆ ಗೋವಾ, ಮಹಾರಾಷ್ಟ್ರ, ಗುಜರಾತ್ ಮತ್ತು ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ಮಧ್ಯಪ್ರದೇಶ ಮತ್ತು ಛತ್ತೀಸ್ಗಢ ನಲ್ಲಿ ಹೆಚ್ಚು ಜೂನ್ 30 ರವರೆಗೆ ಹಾಗೂ ಮಹಾರಾಷ್ಟ್ರದಲ್ಲಿ ಜೂನ್ 29 ಹಾಗೂ ಜೂನ್ 30 ರವರೆಗೆ ಭಾರೀ ಮಳೆ ಆಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಜೂನ್ 30 ರವರೆಗೆ ರಾಜಸ್ಥಾನ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ ಎಂದು (ಭಾರತೀಯ ಹವಾಮಾನ ಇಲಾಖೆ) (IMD) ಎಚ್ಚರಿಕೆಯನ್ನು ನೀಡಿದೆ. ಮೇಲಾಗಿ, ಪಂಜಾಬ್ನಲ್ಲಿ ಹರಿಯಾಣ ಮತ್ತು ಹಿಮಾಚಲ ಪ್ರದೇಶ ದಲ್ಲಿ ಮುಂದಿನ 4 ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.