New Ration Card Application:- ನಮಸ್ಕಾರ ಸ್ನೇಹಿತರೆ, ಕರ್ನಾಟಕದ ನಮ್ಮ ಎಲ್ಲಾ ಜನರಿಗೆ ಈ ಲೇಖನದ ಮೂಲಕ ತಿಳಿಸುವ ವಿಷಯ ಏನೆಂದರೆ ನೀವು ಹೊಸ ರೇಷನ್ ಕಾರ್ಡ್ಗೆ ಅರ್ಜಿಯನ್ನು ಹಾಕಬೇಕು ಎಂದು ಅಂದುಕೊಂಡಿದ್ದರೆ ಹಾಗೂ ನಿಮ್ಮ ರೇಷನ್ ಕಾರ್ಡ್ ನಲ್ಲಿ ನಿಮ್ಮ ಕುಟುಂಬದ ಅಥವಾ ನಿಮ್ಮ ಮನೆಯ ಸದಸ್ಯರ ಹೆಸರು ಸೇರ್ಪಡೆ ಮಾಡಬೇಕು ಅಂದುಕೊಂಡಿದ್ದರೆ ನೀವು ನಮ್ಮ ಈ ಇಡೀ ಲೇಖನವನ್ನು ಸಂಪೂರ್ಣವಾಗಿ ಓದಿ ನಿಮಗೆ ಈ ಲೇಖನದಲ್ಲಿ ಹೊಸ ರೇಷನ್ ಕಾರ್ಡ್ಗೆ ಅರ್ಜಿಯನ್ನು ಹಾಕಲು ಯಾವಾಗ ದಿನಾಂಕ ಬಿಡುತ್ತಾರೆ ಮತ್ತು ಅರ್ಜಿಯನ್ನು ಸಲ್ಲಿಸಲು ಯಾವೆಲ್ಲಾ ದಾಖಲಾತಿಗಳು ಬೇಕು ಎಂಬ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಸಿ ಕೊತ್ತಿದ್ದೇವೆ ಹಾಗಾಗಿ ಈ ಒಂದು ಲೇಖನನ್ನು ನೀವು ಪೂರ್ತಿಯಾಗಿ ಓದಿ.
Table of Contents
ಹೊಸ ರೇಷನ್ ಕಾರ್ಡ್ ಗೆ (New Ration Card Application Info) ಅರ್ಜಿಯ ಬಗ್ಗೆ ಮಾಹಿತಿ.?
ಹೌದು ಸ್ನೇಹಿತರೆ, ಹೊಸ ರೇಷನ್ ಕಾರ್ಡ್ಗೆ ಅರ್ಜಿಯನ್ನು ಸಲ್ಲಿಸಬೇಕು ಹಾಗೂ ಅವರ ರೇಷನ್ ಕಾರ್ಡ್ ನಲ್ಲಿ ತಮ್ಮ ಕುಟುಂಬದ ಇತರ ಸದಸ್ಯರ ಹೆಸರನ್ನು ಸೇರ್ಪಡೆ ಮಾಡಿಸಬೇಕು ಎಂದು ತುಂಬಾ ಜನರು ಈಗಾಗಲೇ ಕಾಯುತ್ತಿದ್ದಾರೆ ಎಂದು ಹೇಳಬಹುದಾಗಿದೆ, ಆದರೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರದ ಕಡೆಯಿಂದ ಎರಡು – ಮೂರು ತಿಂಗಳಿಂದ ಎಲ್ಲಾ ರೀತಿಯಾದ ಹೊಸ ರೇಷನ್ ಕಾರ್ಡ್ಗೆ ಅರ್ಜಿಯನ್ನು ಸಲ್ಲಿಸಲು ಮತ್ತು ರೇಷನ್ ಕಾರ್ಡ್ಗೆ ಕುಟುಂಬದ ಸದಸ್ಯರನ್ನು ಸೇರ್ಪಡೆ ಮಾಡಲು ಅವಕಾಶವನ್ನು ಕೊಟ್ಟಿದೆ ಆದರೆ ಸರ್ವರ್ ಸಮಸ್ಯೆಯಿಂದಾಗಿ ಯಾವುದೇ ಹೊಸ ರೇಷನ್ ಕಾರ್ಡ್ಗೆ ಅರ್ಜಿಯನ್ನು ಹಾಕಲು ಮತ್ತು ಕುಟುಂಬದ ಸದಸ್ಯರ ಸೇರ್ಪಡೆಗೆ ಸಾಧ್ಯವಾಗುತ್ತಿಲ್ಲಾ.
ಇದನ್ನೂ ಓದಿ: KSFES Recruitment 2024: ಅಗ್ನಿಶಾಮಕ ಇಲಾಖೆಯಲ್ಲಿ ಹೊಸ ನೇಮಕಾತಿ! 10ನೇ ತರಗತಿ ಪಾಸಾದ ಅಭ್ಯರ್ಥಿಗಳು ಬೇಗ ಅರ್ಜಿ ಹಾಕಿ!
ಹೀಗಾಗಿ ಸರ್ಕಾರವು ಈ ಹಿಂದೆ ನಡೆದ ಲೋಕಸಭೆ ಚುನಾವಣೆಗಳ ಕಾರಣವನ್ನು ಕೊಟ್ಟು ಈ ನಿಗಧಿ ಪಾಡಿಸಲಾದ ದಿನಾಂಕವನ್ನು ಸರ್ಕಾರದಿಂದ ಮುಂದೂಡಲಾಗಿತ್ತು ಹಾಗೂ ಈ ಜೂನ್ ತಿಂಗಳಿನಲ್ಲಿ ಹೊಸ ರೇಷನ್ ಕಾರ್ಡ್ಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಕೊಡಲಾಗುತ್ತದೆ ಎಂಬ ಮಾಹಿತಿ ಒಂದು ಹರಿದಾಡಿತ್ತು ಆದರೆ ರೇಷನ್ ಕಾರ್ಡ್ಗೆ ಅರ್ಜಿಯನ್ನು ಸಲ್ಲಿಸಲು ಸರಕಾರ ಅವಕಾಶ ಕೊಡಲಿಲ್ಲ ಇದರ ಬಗ್ಗೆ ನಮ್ಮ ರಾಜ್ಯದ (ಆಹಾರ ಸಚಿವ) ರಾದಂತಹ ಕೆ.ಎಚ್ ಮುನಿಯಪ್ಪನವರು ಈ ಕೆಳಗಿನ ರೀತಿಯಲ್ಲಿ ತಿಳಿಸಿದ್ದಾರೆ.
ನಮ್ಮ ರಾಜ್ಯದ ಆಹಾರ ಸಚಿವರಾದಂತಹ K.H ಮುನಿಯಪ್ಪ ಅವರ ಸ್ಪಷ್ಟನೆ.?
ಹೌದು ಸ್ನೇಹಿತರೆ, ಹೊಸ ರೇಷನ್ ಕಾರ್ಡ್ಗೆ ಅರ್ಜಿಯನ್ನು ಸಲ್ಲಿಸಲು ನಮ್ಮ ರಾಜ್ಯದ ತುಂಬಾ ಜನರು ಈಗಾಗಲೇ ಕಾಯುತ್ತಿದ್ದಾರೆ ಮತ್ತು ಜನರು ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ ಎಂದು ಈ ಬಗ್ಗೆ ಮಾಹಿತಿಯ ಪ್ರಶೆಗಳನ್ನು (ಆಹಾರ ಸಚಿವ) ರಾದಂತಹ ಕೆ.ಎಚ್ ಮುನಿಯಪ್ಪನವರಿಗೆ ಕೇಳಿದಾಗ ಅವರು ಸ್ಪಷ್ಟಣೆಯಲ್ಲಿ ಈ ರೀತಿಯಾಗಿ ತಿಳಿಸಿದ್ದಾರೆ “ಸದ್ಯದ ಸ್ಥಿತಿಯಲ್ಲಿ ಸುಮಾರು 2,36,000 (2.36 ಲಕ್ಷ) ಹೊಸ ರೇಷನ್ ಕಾರ್ಡ್ಗೆ ಅರ್ಜಿಯನ್ನು ರಣರು ಸಲ್ಲಿಸಿದ್ದು ಈ ಪೈಕಿ ಸುಮಾರು 56,000 ಸಾವಿರಕ್ಕಿಂತಲು ಹೆಚ್ಚು ರೇಷನ್ ಕಾರ್ಡ್ಗಳು ಮೇ (May) ತಿಂಗಳಿನಲ್ಲಿ ವಿತರಣೆಯನ್ನು ಮಾಡಲಾಗಿದೆ ಹಾಗೂ ಇನ್ನುಳಿದ ಎಲ್ಲಾ ರೇಷನ್ ಕಾರ್ಡ್ಗಳನ್ನು ಸದ್ಯಕ್ಕೆ ಎಲ್ಲಾ ದಾಖಲಾತಿಗಳನ್ನು ಪರಿಶೀಲನೆ ಮಾಡಿ ವಿತರಣೆ ಮಾಡಲಾಗುತ್ತದೆ ಎಂದರು.
ಹಾಗೂ ಈ ಹೊಸ ಅರ್ಜಿಯನ್ನು ಸಲ್ಲಿಸಿದಂತಹ ರೇಷನ್ ಕಾರ್ಡ್ಗಳ ವಿತರಣೆಯು ಮುಗಿದ ನಂತರ ಜುಲೈ (July) ತಿಂಗಳಿನಲ್ಲಿ ಅಥವಾ ಸೆಪ್ಟೆಂಬರ್ (September) ತಿಂಗಳಿನಲ್ಲಿ ಹೊಸ ರೇಷನ್ ಕಾರ್ಡ್ಗಳಿಗೆ ಅರ್ಜಿಯನ್ನು ಸಲ್ಲಿಸಲು ಹಾಗೂ ತಿದ್ದುಪಡಿಯನ್ನು ಮಾಡಿಕೊಳ್ಳಲು ಅವಕಾಶವನ್ನೂ ನೀಡಲಾಗುತ್ತದೆ ಎಂದು ನಮ್ಮ ರಾಜ್ಯದ (ಆಹಾರ ಸಚಿವ) ರಾದಂತಹ ಕೆ.ಎಚ್ ಮುನಿಯಪ್ಪನವರು ತಿಳಿಸಿದ್ದಾರೆ.
New Ration Card Application: ರೇಷನ್ ಕಾರ್ಡ್ಗೆ ಅರ್ಜಿಯನ್ನು ಸಲ್ಲಿಸಲು ಹಾಗೂ ತಿದ್ದುಪಡಿ ಮಾಡಲು ಬೇಕಾಗುವ ದಾಖಲಾತಿಗಳು.?
- ಆಧಾರ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ಜನನ ಪ್ರಮಾಣ ಪತ್ರ (ಆರು ವರ್ಷದ ಒಳಗಿನ ಮಕ್ಕಳಿಗೆ)
- ಇತ್ತೀಚಿನ ಫೋಟೋ
ಹೌದು ಸ್ನೇಹಿತರೆ, ನೀವು ಹೊಸ ರೇಷನ್ ಕಾರ್ಡ್ಗೆ ಅರ್ಜಿಯನ್ನು ಸಲ್ಲಿಸಲು ಅಥವಾ ರೇಷನ್ ಕಾರ್ಡ್ ನಲ್ಲಿ ನಿಮ್ಮ ಕುಟುಂಬದ ಇತರ ಸದಸ್ಯರ ಹೆಸರು ಸೇರ್ಪಡೆಗೆ ಈ ಮೇಲೆ ನೀಡಲಾದಂತಹ ಎಲ್ಲಾ ಪ್ರಮುಖ ದಾಖಲಾತಿಗಳು ಬೇಕಾಗುತ್ತವೆ ಹಾಗೂ ನಿಮ್ಮ ಮಕ್ಕಳು ಆರು ವರ್ಷದ ಒಳಗಿನವರಾಗಿದ್ದರೆ ಅವರ ಜನನ ಪತ್ರವನ್ನು ಕೇಳಲಾಗುತ್ತದೆ.