Diesel Pumpset Subsidy: ಡೀಸೆಲ್ ಪಂಪ್ ಸೆಟ್ ಶೇ 90 ಸಬ್ಸಿಡಿಯಲ್ಲಿ ಪಡೆಯಲು ಅರ್ಜಿ ಪ್ರಾರಂಭ.! ಈಗಲೇ ಅಪ್ಲೈ ಮಾಡಿ!
Diesel Pumpset Subsidy: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ಕರ್ನಾಟಕ ರಾಜ್ಯದ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ರೈತರು ತಮ್ಮ ಬೆಳೆಗಳನ್ನು ನೀರಾವರಿಯಾಗಿ ಮಾಡಲು ಸರ್ಕಾರ ಶೇಕಡ 90ರ ಸಬ್ಸಿಡಿಯಲ್ಲಿ ಡೀಸೆಲ್ ಪಂಪ್ಸೆಟ್ ಅರ್ಜಿಯನ್ನು ಆರಂಭಿಸಿದ್ದಾರೆ. ಕೃಷಿ ಭಾಗ್ಯ ಹಾಗೂ ರಾಷ್ಟ್ರೀಯ ತೋಟಗಾರಿಕೆ ಮಷೀನ್, ಕೃಷಿ ಯಂತ್ರೋಪಕರಣ ಈ ಮೂರು ಯೋಜನೆ ಅಡಿಯಲ್ಲಿ ಡೀಸೆಲ್ ಪಂಪ್ ಸೆಟ್ ಪಡೆಯಲು ಅವಕಾಶ ಮಾಡಿಕೊಡಲಾಗಿದ್ದು, ಅರ್ಹ ರೈತರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಮುಖಾಂತರ ಡಿಸೈಲ್ ಪಂಪ್ ಸೆಟ್ ಪಡೆಯಬಹುದಾಗಿದೆ.
ಈ ಒಂದು ಸಬ್ಸಿಡಿಯಲ್ಲಿ ಡಿಸೈನ್ ಪಂಪ್ ಸೆಟ್ ಪಡೆಯಲು ಯಾವೆಲ್ಲಾ ಅರ್ಹತೆಗಳು ಹೊಂದಿರಬೇಕು? ಮತ್ತು ಯಾವೆಲ್ಲ ದಾಖಲೆಗಳು ಬೇಕು? ಮತ್ತು ಇನ್ನಿತರ ಮಾಹಿತಿ ಕೆಳಭಾಗದಲ್ಲಿ ನೀಡಲಾಗಿದೆ.
ರೈತರು ವಿದ್ಯುತ್ ಇಲ್ಲದ ಸಮಯದಲ್ಲೂ ಕೂಡ ತಮ್ಮ ಬೆಳೆಗಳಿಗೆ ನೀರು ನೀಡಲು ಸಹಾಯಕವಾಗಲೆಂದು ಈ ಒಂದು ಸಬ್ಸಿಡಿಯಲ್ಲಿ ಡೀಸೆಲ್ ಪಂಪ್ ಸೆಟ್ ಅನ್ನು ನೀಡುತ್ತಿದ್ದಾರೆ, ಹಾಗೂ ತಮ್ಮ ಕೃಷಿ ಹೊಂಡಗಳಿಂದ ನೀರನ್ನು ಎತ್ತಲು ಶೇಕಡ 90ರ ಸಬ್ಸಿಡಿಯಲ್ಲಿ ಸರ್ಕಾರ ರೈತರಿಗೆ ಒದಗಿಸಲು ಅರ್ಜಿಯನ್ನು ಕರೆಯಲಾಗಿದೆ.
ಡೀಸೆಲ್ ಪಂಪ್ ಸೆಟ್ ಅರ್ಜಿ ಸಲ್ಲಿಸಲು ಅರ್ಹತೆಗಳು:
- ರೈತರು ಕೃಷಿ ಹೊಂಡವನ್ನು ಹೊಂದಿರಬೇಕು ಅಥವಾ ಕೃಷಿಹೊಂಡಕ್ಕೆ ಅರ್ಜಿಯನ್ನು ಸಲ್ಲಿಸಿದರೆ ಸಾಕು, ಈ ಒಂದು ಸಬ್ಸಿಡಿಯ ಸದುಪಯೋಗವನ್ನು ಪಡೆದುಕೊಳ್ಳಬಹುದು.
- ಕೃಷಿ ಜಮೀನುಗಳನ್ನು ಹೊಂದಿದ್ದರೆ ಮಾತ್ರ ಈ ಒಂದು ಸಬ್ಸಿಡಿಗೆ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ಅಭ್ಯರ್ಥಿಯ ಆಧಾರ್ ಕಾರ್ಡ್
- ಕುಟುಂಬದ ರೇಷನ್ ಕಾರ್ಡ್
- ಅಭ್ಯರ್ಥಿಯ ಫೋಟೋ
- ಬ್ಯಾಂಕ್ ಪಾಸ್ ಬುಕ್
- ಜಮೀನಿನ ಪಹಣಿ
- ನೀರಿನ ಮೂಲದ ದೃಢೀಕರಣ ಪ್ರಮಾಣ ಪತ್ರ
ಡೀಸೆಲ್ ಪಂಪ್ ಸೆಟ್ ಗೆ ಎಷ್ಟು ಸಬ್ಸಿಡಿ ನೀಡಲಾಗುತ್ತದೆ:
ಈ ಒಂದು ಸಬ್ಸಿಡಿಯ ಯೋಜನೆಗೆ ಅರ್ಜಿ ಸಲ್ಲಿಸಿದ ರೈತರಿಗೆ ಶೇಕಡಾ 90ರ ಸಬ್ಸಿಡಿಯಲ್ಲಿ ಡೀಸೆಲ್ ಪಂಪ್ ಸೆಟ್ ಪಡೆಯಬಹುದಾಗಿದೆ.
ಡೀಸೆಲ್ ಪಂಪ್ ಸೆಟ್ ಸಬ್ಸಿಡಿಗೆ ಅರ್ಜಿ ಸಲ್ಲಿಸುವುದು ಹೇಗೆ?
ಡೀಸೆಲ್ ಪಂಪ್ ಸೆಟ್ ಸಬ್ಸಿಡಿ ಪಡೆಯಲು ಬಯಸುವ ರೈತರು ತಮ್ಮ ಹತ್ತಿರದ ಹೋಬಳಿ ರೈತ ಸಂಪರ್ಕ ಕೇಂದ್ರ ಅಥವಾ ತಮ್ಮ ತಾಲೂಕಿನ ತೋಟಗಾರಿಕೆ ಇಲಾಖೆ ಮುಖಾಂತರ ಮೇಲೆ ನೀಡಿರುವ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು.