pradhan mantri awas yojana: ಬಾಡಿಗೆ ಮನೆ ಹೊಂದಿದವರಿಗೆ ಸರ್ಕಾರದಿಂದ ಉಚಿತ ಮನೆಗಳು ದೊರೆಯುತ್ತವೆ. ಕೂಡಲೇ ಅರ್ಜಿ ಸಲ್ಲಿಸಿ.

pradhan mantri awas yojana: ಎಲ್ಲರಿಗೂ ನಮಸ್ಕಾರ… ಈ ಒಂದು ಲೇಖನದ ಮುಖಾಂತರ ಬಾಡಿಗೆ ಮನೆಗಳಲ್ಲಿ ಯಾರೆಲ್ಲ ಇದ್ದೀರೋ ಅಂತವರು ಸ್ವಂತ ಮನೆಗಳನ್ನು ಸರ್ಕಾರದಿಂದ ಯಾವ ರೀತಿ ಪಡೆದುಕೊಳ್ಳಬೇಕು ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಸಲಾಗುತ್ತಿದೆ. ನೀವು ಕೂಡ ಈ ಒಂದು ಮನೆಗಳನ್ನು ಪಡೆಯಬೇಕು ಎಂದರೆ ಸಂಪೂರ್ಣವಾದ ಮಾಹಿತಿಯನ್ನು ಕಡ್ಡಾಯವಾಗಿ ತಿಳಿದುಕೊಳ್ಳಬೇಕಾಗುತ್ತದೆ.

ತಿಳಿದುಕೊಂಡ ಮಾಹಿತಿಯಂತೆ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಕೆ ಮಾಡಲು ಯಾವೆಲ್ಲಾ ದಾಖಲಾತಿಗಳನ್ನು ಅಭ್ಯರ್ಥಿಗಳು ಹೊಂದಿರಬೇಕು ಹಾಗೂ ಯಾರ ಹೆಸರಿನಲ್ಲಿ ಈ ಒಂದು ಮನೆಯಗಳನ್ನು ಉಚಿತವಾಗಿ ಪಡೆಯಬೇಕು ಎಂಬುದರ ಎಲ್ಲಾ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ಒದಗಿಸಲಾಗಿದೆ ಕೊನೆವರೆಗೂ ಲೇಖನವನ್ನು ಓದಿರಿ.

ಪ್ರಧಾನಮಂತ್ರಿ ಆವಾಸ್ ಯೋಜನೆ 2024 ! {pradhan mantri awas yojana}

ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಜೂನ್ ತಿಂಗಳಿನಲ್ಲಿ 2015 ನೇ ಸಾಲಿನಲ್ಲಿ ಜಾರಿಗೊಳಿಸಲಾಯಿತು. ಈ ಒಂದು ಯೋಜನೆಯನ್ನು ಮರುನಾಮಕರಣ ಮಾಡಲಾಗಿದೆ. ಆದರೆ ಈ ಯೋಜನೆಯನ್ನು 1985ರಿಂದಲೂ ಕೂಡ ರಾಜೀವ್ ಗಾಂಧಿಯವರು ಮೊಟ್ಟಮೊದಲನೆಯ ಬಾರಿಗೆ ಜಾರಿಗೊಳಿಸಿದರು. ಆ ರಾಜೀವ್ ಗಾಂಧಿ ಯೋಜನೆ ಮುಖಾಂತರವೂ ಕೂಡ ಸಾಕಷ್ಟು ಲಕ್ಷಾಂತರ ಕುಟುಂಬವೂ ಉಚಿತ ಮನೆಗಳನ್ನು ಕೂಡ ಪಡೆದುಕೊಂಡಿದೆ.

ರಾಜೀವ್ ಗಾಂಧಿ ಆವಾಸ್ ಯೋಜನೆ ಮರುನಾಮಕರಣವಾಗಿ ಬದಲಾಗಿದ್ದು ಏಕೆ ?

ಸ್ನೇಹಿತರೆ ಇದು ಸಾಕಷ್ಟು ವರ್ಷಗಳಿಂದಲೂ ಕೂಡ ಜಾಗರಿಯಲ್ಲಿರುವಂತಹ ಯೋಜನೆಯಾಗಿದೆ. ಈ ಯೋಜನೆಯನ್ನು ರಾಜೀವ್ ಗಾಂಧಿಯವರು 1985 ರಂದು ಜಾರಿಗೊಳಿಸಿದರು. ಅಂದಿನಿಂದಲೂ ಕೂಡ 2015 ನೇ ಸಾಲಿನವರೆಗೂ ರಾಜೀವ್ ಗಾಂಧಿ ಆವಾಸ್ ಯೋಜನೆ ಎಂಬ ಹೆಸರಿನಲ್ಲಿಯೇ ಎಲ್ಲಾ ಸಾಮಾನ್ಯ ಅಭ್ಯರ್ಥಿಗಳಿಗೆ ಮನೆಯನ್ನು ಕೂಡ ನೀಡುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಯಾವಾಗ ಬಂತು ಆ ಸಂದರ್ಭದಲ್ಲಿ ಈ ಯೋಜನೆಯ ಹೆಸರನ್ನೇ ಮೋದಿ ಅವರು ಬದಲಾವಣೆ ಮಾಡಿದರು.

ಜನರಿಗಾಗಿ ಒಳಿತು ಆಗಬೇಕು, ಜನರಿಗಾಗಿ ಸಾಕಷ್ಟು ಯೋಜನೆಗಳ ಸೌಲಭ್ಯಗಳು ಕೂಡ ದೊರೆಯಬೇಕು ಎಂಬ ನಿಟ್ಟಿನಲ್ಲಿ ಈ ಯೋಜನೆ ಜಾರಿಯಾಗಿದೆ. ಎಲ್ಲರಿಗೂ ಕೂಡ ನೆಮ್ಮದಿಯಾಗಿ ಇರಲು ಒಂದು ಮನೆ ಕೂಡ ಬೇಕಾಗುತ್ತದೆ. ಏಕೆಂದರೆ ಮನೆಯಲ್ಲಿ ನೆಮ್ಮದಿ ಆದಂತಹ ನಿದ್ದೆ ಬಂದೇ ಬರುತ್ತದೆ. ಆ ನೆಮ್ಮದಿಯಾದಂತಹ ನಿದ್ದೆಯನ್ನು ಮಾಡಲು ನಾವು ಸ್ವಂತ ಮನೆಗಳನ್ನು ಪಡೆಯಬೇಕು ಎಂದಲ್ಲ ಬಾಡಿಗೆ ಮನೆಯಲ್ಲೂ ಕೂಡ ನೆಮ್ಮದಿ ಆಗಿ ಜೀವನವನ್ನು ಸಾಗಿಸಬಹುದು. ಆದರೆ ಬಾಡಿಗೆ ಮನೆಗಳಲ್ಲಿ ಪ್ರತಿ ತಿಂಗಳು ಹಣವನ್ನು ಕೂಡ ಮಾಲೀಕರಿಗೆ ನೀಡಬೇಕಾಗುತ್ತದೆ.

ಆ ರೀತಿಯ ಒಂದು ಹಣವನ್ನು ನೀವು ಕಟ್ಟುವಂತಿಲ್ಲ ಇನ್ಮುಂದೆ ನೀವೇನಾದರೂ ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ನಿಮಗೆ ಮುಂದಿನ ವರ್ಷದ ಒಳಗೆ ಉಚಿತ ಸ್ವಂತ ಮನೆಗಳು ಕೂಡ ದೊರೆಯುತ್ತವೆ. ನೀವೇನಾದರೂ ಹೊಸ ಸ್ವಂತ ಮನೆಯನ್ನು ಖರೀದಿ ಮಾಡಬೇಕು ಅಥವಾ ನಿಮ್ಮ ಹತ್ತಿರ ಹಣ ಇದೆ ಈ ದುಬಾರಿ ದುನಿಯಾದಲ್ಲಿ ಮನೆ ಖರೀದಿ ಮಾಡಲು ಹೆಚ್ಚಿನ ಮೊತ್ತ ನಿಮ್ಮ ಹತ್ತಿರ ಇಲ್ಲ, ಅಂತವರಿಗೆ ಸರ್ಕಾರವೇ ಮನೆಗೆ ಹಣವನ್ನು ನೀಡುತ್ತದೆ.

ಅಥವಾ ನಿಮ್ಮ ಹತ್ತಿರದಲ್ಲಿರುವಂತಹ ಹಣವನ್ನು ನೀವು ನಿಮ್ಮ ಸ್ವಂತ ಮನೆ ಕಟ್ಟಿಸಲು ಬಳಕೆ ಮಾಡಿರಿ. ಸರ್ಕಾರವು ಕೂಡ ನಿಮಗೆ ಎರಡು ಲಕ್ಷದ ವರೆಗೂ ಕೂಡ ಮನೆ ನಿರ್ಮಾಣಕ್ಕೆ ಹಣವನ್ನು ಕೂಡ ಒದಗಿಸುತ್ತದೆ. ಈ ಎರಡು ಲಕ್ಷ ಹಣದಲ್ಲಿ ಸಬ್ಸಿಡಿ ಹಣವಾಗಿ ಕೂಡ ನಿಮಗೆ ದೊರೆಯುತ್ತದೆ. ಇನ್ನು ಉಳಿದಂತಹ ಹಣವನ್ನು ಸರ್ಕಾರಕ್ಕೆ ಮರುಪಾವತಿ ಮಾಡಬೇಕಾಗುತ್ತದೆ. ಸಾಲವಾಗಿಯೂ ಹಣವನ್ನು ಪಡೆದು ನೀವು ಮುಂದಿನ ದಿನಗಳಲ್ಲಿ ನಿಮಗೆ ಅನುಕೂಲವಾಗುವಂತಹ ಹಣದಿಂದ ಮರುಪಾವತಿ ಮಾಡಬಹುದಾಗಿದೆ.

ಇದುವರೆಗೂ ಪ್ರಧಾನಮಂತ್ರಿ ಆವಾಸ್ ಯೋಜನೆ ಮುಖಾಂತರ ಇಷ್ಟು ಮನೆಗಳು ನಿರ್ಮಾಣವಾಗಿದೆ.

ಈ ವರ್ಷದ ಬಜೆಟ್ ಮಂಡನೆಯಲ್ಲಿ ನಿರ್ಮಲ ಸೀತಾರಾಮನ್ ರವರು 2025 ನೇ ಸಾಲಿನ ಒಳಗೆ ಎರಡು ಕೋಟಿಗೂ ಹೆಚ್ಚಿನ ಅಧಿಕವಾದ ಮನೆಗಳನ್ನು ನಿರ್ಮಾಣ ಮಾಡಬೇಕು ಎಂದು ಮಂಡನೆ ಮಾಡಿದ್ದಾರೆ. ಅದೇ ರೀತಿ ಈ ಪ್ರಸ್ತುತ ದಿನಗಳಲ್ಲಿ ಮನೆಗಳನ್ನು ನಿರ್ಮಾಣ ಮಾಡಲು ಸರ್ಕಾರ ಕೈಗೊಂಡಿದೆ. ಆದಕಾರಣ ಎಲ್ಲರಿಗೂ ಕೂಡ ಮನೆಗಳು ಉಚಿತವಾಗಿಯೇ ದೊರೆಯಬೇಕು. ಹಣವನ್ನು ಕೂಡ ಸರ್ಕಾರವೇ ನೀಡುತ್ತದೆ.

ಆ ಒಂದು ಹಣದಿಂದ ನೀವು ನಿಮ್ಮ ಕನಸಿನ ಮನೆಯನ್ನು ಕೂಡ ಕಟ್ಟಿಕೊಂಡು ಆವಾಸ್ ಯೋಜನೆ ಅಡಿಯಲ್ಲಿ ಸಹಾಯವನ್ನು ಕೂಡ ಪಡೆದುಕೊಳ್ಳಿರಿ. ಆ ಒಂದು ಹಣ ನಿಮಗೂ ಕೂಡ ದೊರೆಯಬೇಕು ಎಂದರೆ, ನೀವು ಕಡ್ಡಾಯವಾಗಿ ಒಂದು ಅರ್ಜಿ ಸಲ್ಲಿಕೆಯನ್ನು ಕೂಡ ಮಾಡಬೇಕಾಗುತ್ತದೆ. ಅರ್ಜಿ ಸಲ್ಲಿಕೆಗೆ ಕೆಲವೊಂದು ಅರ್ಹತಾ ಮಾನದಂಡಗಳು ಕೂಡ ಇವೆ. ಆ ಎಲ್ಲಾ ಅರ್ಹತಾ ಮಾನದಂಡಗಳನ್ನು ಯಾವ ಅಭ್ಯರ್ಥಿಗಳು ಪಾಲಿಸಿ ಅರ್ಜಿಯನ್ನು ಸರಿಯಾಗಿ ಸಲ್ಲಿಕೆ ಮಾಡಿರುತ್ತಾರೋ ಅಂತವರಿಗೆ ಮನೆಗಳನ್ನು ನಿರ್ಮಾಣ ಮಾಡಲು ಹಣ ಕೂಡ ಸರ್ಕಾರದ ಕಡೆಯಿಂದ ನಿಮ್ಮ ಖಾತೆಗೆ ಜಮಾ ಆಗುತ್ತದೆ.

1985 ನೇ ಸಾಲಿನಲ್ಲಿ ರಾಜೀವ್ ಗಾಂಧಿ ಆವಾಸ್ ಯೋಜನೆಯು ಕೂಡ ಅಸ್ತಿತ್ವದಲ್ಲಿತ್ತು. ಆ ಒಂದು ಸಾಲಿನಲ್ಲಿಯೇ ಜಾರಿಯಾಗಿದೆ. ಅವತ್ತಿನಿಂದ ಇವತ್ತಿನವರೆಗೂ ಕೂಡ 20 ಮಿಲಿಯನ್ ಮನೆಗಳು ನಿರ್ಮಾಣವಾಗಿದೆ ಎಂಬ ವರದಿಯೂ ಕೂಡ ಈಗಾಗಲೇ ಇದೆ. ಆ ವರದಿಯನ್ನು ನೋಡಿದರೆ 20 ಮಿಲಿಯನ್ ಕುಟುಂಬಕ್ಕೆ ಸರ್ಕಾರ ಮನೆಗಳನ್ನು ಕೂಡ ನಿರ್ಮಾಣ ಮಾಡಿದೆ ಎಂದು ಹೇಳಬಹುದು. ಸಾಕಷ್ಟು ಜನರು ಮನೆಗಳಿಲ್ಲದೆ ಬಾಡಿಗೆ ಮನೆಗಳಲ್ಲೂ ಕೂಡ ಪ್ರಸ್ತುತ ದಿನಗಳಲ್ಲಿ ವಾಸ ಮಾಡುತ್ತಿದ್ದಾರೆ. ಹಾಗೂ ಭೋಗ್ಯ ಮನೆಗಳನ್ನು ಕೂಡ ಭೋಗಿಗೆ ಹಾಕಿಸಿಕೊಂಡು ಮನೆಯಲ್ಲಿ ವಾಸ ಮಾಡುತ್ತಿದ್ದಾರೆ.

ಈ ರೀತಿ ಇರುವುದು ಉತ್ತಮವಲ್ಲ. ಏಕೆಂದರೆ ಸಾಕಷ್ಟು ಕುಟುಂಬದ ಅಭ್ಯರ್ಥಿಗಳು ಈಗಾಗಲೇ ಸ್ವಂತ ಮನೆಗಳನ್ನು ಕೂಡ ಹೊಂದಿದ್ದಾರೆ. ಹಲವಾರು ಜನರು ನಾಲ್ಕೈದು ಸ್ವಂತ ಮನೆಗಳನ್ನು ಕೂಡ ಹೊಂದಿರುತ್ತಾರೆ, ಆ ರೀತಿ ಸ್ವಂತ ಮನೆ ಹೊಂದಿರುವುದರಿಂದ ಅವರು ಯಾವುದೇ ರೀತಿಯ ಮನೆ ಬಾಡಿಗೆಯನ್ನು ಕೂಡ ಕಟ್ಟುವಂತಿಲ್ಲ. ಇನ್ನು ಮನೆಯ ಬಾಡಿಗೆಯಿಂದಲೂ ಕೂಡ ಆದಾಯವನ್ನು ಗಳಿಸಬಹುದು. ಆದರೆ ನೀವು ಪ್ರಸ್ತುತ 2024ನೇ ಸಾಲು ಕಾರ್ಯನಿರ್ವಹಿಸುತ್ತಿದೆ.

ಆದರೂ ಕೂಡ ನೀವು ಒಂದು ಸ್ವಂತ ಮನೆಯನ್ನು ಹೊಂದಿಲ್ಲ ಎಂದರೆ ನಿಮಗಿದು ದುಃಖಕರವಾದ ವಿಷಯವೇ, ಯಾಕೆಂದರೆ ಸಾಕಷ್ಟು ವರ್ಷಗಳಿಂದಲೂ ಕೂಡ ಜನರು ತಮ್ಮ ಸ್ವಂತ ಮನೆಗಳನ್ನು ಹೊಂದಬೇಕು ಎಂಬುವುದು ಎಲ್ಲಾ ಮಾನವನ ಕನಸಾಗಿರುತ್ತದೆ. ಆ ಒಂದು ಕನಸನ್ನು ನನಸು ಮಾಡಲು ಹೋದರೆ ಅದು ಬೆಂಗಳೂರಿನಲ್ಲಿ ನನಸು ಮಾಡಲು ಹೋದರೆ ಅದು ಸಾಧ್ಯವೇ ಇಲ್ಲ. ಅದಕ್ಕಾಗಿ ಸರ್ಕಾರವೇ ನಿಮಗೆ ಹಣವನ್ನು ಕೂಡ ಒದಗಿಸುತ್ತದೆ.

ಆ ಒಂದು ಹಣವನ್ನು ಬಳಕೆ ಮಾಡಿಕೊಂಡು ನಿಮ್ಮ ಕನಸಿನ ಮನೆಯನ್ನು ಕೂಡ ನಿರ್ಮಾಣ ಮಾಡಬಹುದು. ನಿಮ್ಮ ಹತ್ತಿರ ಹೆಚ್ಚಿನ ಪ್ರಮಾಣದ ಹಣ ಇದೆ ಎಂದರು ಕೂಡ ಈ ಒಂದು ಮನೆಯನ್ನು ನಿರ್ಮಾಣ ಮಾಡಬಹುದು. ನಿಮ್ಮ ಹತ್ತಿರದಲ್ಲಿರುವಂತಹ ಹಣವನ್ನು ಕೂಡ ಈ ಸಾಲದ ಹಣಕ್ಕೆ ಜೋಡಣೆ ಮಾಡಿ, ಸ್ವಂತ ಮನೆಗಳನ್ನು ಕೂಡ ನಿರ್ಮಾಣ ಮಾಡಿಕೊಳ್ಳಬಹುದುದಾಗಿದೆ.

ಯಾವ ಅರ್ಹತೆ ಹೊಂದಿದ ಅಭ್ಯರ್ಥಿಗಳು ಈ ಆವಾಸ್ ಯೋಜನೆಯಲ್ಲಿ ಹಣ ಪಡೆಯುತ್ತಾರೆ.
  • 18ರಿಂದ 58 ವರ್ಷದೊಳಗಿನ ವಯೋಮಿತಿಯನ್ನು ಹೊಂದಿರುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
  • ಬಡತನ ವರ್ಗದ ಅಭ್ಯರ್ಥಿಗಳಾಗಿರಬೇಕು. ಹಾಗೂ ಬಡ ಕುಟುಂಬಸ್ಥರಾಗಿರಬೇಕು ಅಂತವರಿಗೆ ಮಾತ್ರ ಸರ್ಕಾರ ಸಾಲವನ್ನು ಒದಗಿಸುತ್ತದೆ.
  • ವಾರ್ಷಿಕ ಆದಾಯವನ್ನು ನೋಡಿದರೆ 6 ಲಕ್ಷಕ್ಕಿಂತ ಕಡಿಮೆ ಇರಬೇಕಾಗುತ್ತದೆ.
  • ಸರ್ಕಾರ ಬಡವನೆಂದು ಗುರುತಿಸುವುದು ಯಾವ ರೀತಿ ಎಂದರೆ ಆದಾಯ ಪ್ರಮಾಣವನ್ನು ಕೂಡ ನೋಡುತ್ತದೆ. ಆ ಒಂದು ಆದಾಯ ಪ್ರಮಾಣದಲ್ಲಿ 3 ಲಕ್ಷಕ್ಕಿಂತ ಕಡಿಮೆ ಇರುವಂತಹ ಅಭ್ಯರ್ಥಿಗಳನ್ನು ಬಡತನದ ರೇಖೆಗಿಂತ ಕೆಳಗಿರುವವರು ಎಂದು ಗುರುತಿಸುತ್ತದೆ. ಹಾಗೂ 6 ಲಕ್ಷಕ್ಕಿಂತ ಕಡಿಮೆ ಇರುವಂತಹ ವ್ಯಕ್ತಿಗಳನ್ನು ಕೂಡ ಇದೇ ರೀತಿಯ ಹೆಸರಿನಲ್ಲಿಯೇ ಕರೆಯಲ್ಪಡುತ್ತದೆ.
  • ಇದುವರೆಗೂ ಸ್ವಂತ ಮನೆಗಳನ್ನು ಹೊಂದಿರಬಾರದು.
  • ಸ್ವಂತ ಮನೆ ಇಲ್ಲದವರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು.
  • ರೇಷನ್ ಕಾರ್ಡ್ಗಳನ್ನು ಹೊಂದಿರತಕ್ಕದ್ದು.
  • ಸ್ನೇಹಿತರೆ ರೇಷನ್ ಕಾರ್ಡ್ ಗಳಲ್ಲಿ ಮೂರು ವಿವಿಧ ರೇಷನ್ ಕಾರ್ಡ್ ಗಳು ಲಭ್ಯವಿರುತ್ತದೆ. ಮೊದಲನೆಯದಾಗಿ ಎಪಿಎಲ್ ರೇಷನ್ ಕಾರ್ಡ್ ಗಳು ಹಾಗೂ ಬಿಪಿಎಲ್ ರೇಷನ್ ಕಾರ್ಡ್ ಗಳು ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಗಳು, ಈ ಮೂರು ರೀತಿಯ ವಿವಿಧ ರೇಷನ್ ಕಾರ್ಡ್ ಗಳಲ್ಲಿ ಯಾವುದಾದರೂ ಒಂದನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ.
  • ಈ ಒಂದು ಯೋಜನೆಯು ಮೊದಲ ಆದ್ಯತೆಯನ್ನು ನೀಡುವುದು ಅಂಗವಿಕಲ ಅಭ್ಯರ್ಥಿಗಳಿಗೆ ಹಾಗೂ ವಿದೇಯರಿಗೆ ಮತ್ತು ವಯೋಮಿತಿ ಹೆಚ್ಚಿನ ಪ್ರಮಾಣದಲ್ಲಿ ಆಗಿರುವಂತವರಿಗೆ.
ಪ್ರಧಾನಮಂತ್ರಿಯ ಆವಾಸ್ ಯೋಜನೆಯು ಎರಡು ವಿಭಾಗವನ್ನು ವಿಭಜಿಸಿದೆ.

ಮೊದಲನೇ ವಿಭಾಗವಾಗಿರುವಂತಹ ಹೆಸರು :- ಪ್ರಧಾನ ಮಂತ್ರಿ ಆವಾಸ್ ಯೋಜನೆ ನಗರ ಪಟ್ಟಿಯೆಂದು ಈ ರೀತಿಯ ಒಂದು ಹೆಸರಿನಲ್ಲಿ ಸಾಕಷ್ಟು ಲಕ್ಷಾಂತರ ಅಭ್ಯರ್ಥಿಗಳು ಮನೆಗಳನ್ನು ಕೂಡ ಪಡೆದುಕೊಂಡಿದ್ದಾರೆ. ಯಾರೆಲ್ಲ ನಗರ ಪ್ರದೇಶದಲ್ಲಿ ಕಡುಬಡತನವನ್ನು ನೋಡುತ್ತಿದ್ದಾರೋ ಅಂತವರು ನಗರದಲ್ಲಿಯೇ ಮನೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು. ಅಂತಹ ಅಭ್ಯರ್ಥಿಗಳಿಗೆ ಬರೋಬ್ಬರಿ 2 ಲಕ್ಷದವರೆಗೂ ಕೂಡ ಮನೆ ನಿರ್ಮಾಣಕ್ಕೆ ಹಣವನ್ನು ಒದಗಿಸುತ್ತದೆ ಸರ್ಕಾರ.

ಎರಡನೇ ವಿಭಾಗವಾಗಿರುವಂತಹ ಹೆಸರು :- ಪ್ರಧಾನಮಂತ್ರಿ ಆವಾಸ್ ಯೋಜನೆ ಗ್ರಾಮೀಣ ಪಟ್ಟಿಯೆಂದು. ಗ್ರಾಮೀಣ ಪ್ರದೇಶದಲ್ಲಿ ಯಾರೆಲ್ಲ ಪ್ರಸ್ತುತ ದಿನಗಳಲ್ಲಿ ವಾಸ ಮಾಡುತ್ತಿದ್ದರೊ, ಅಂತಹ ರೈತ ಕುಟುಂಬದ ಅಭ್ಯರ್ಥಿಗಳು ಕೂಡ ಸ್ವಂತ ಮನೆಗಳನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಅರ್ಜಿ ಸಲ್ಲಿಕೆಯನ್ನು ಆನ್ಲೈನ್ ಮುಖಾಂತರವಾದರೂ ಮಾಡಬಹುದು.

ಅಥವಾ ಆಫ್ ಲೈನ್ ಮುಖಾಂತರವಾದರೂ ಮಾಡಬಹುದು. ಈ ಎರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಂಡು ಅರ್ಜಿಯನ್ನು ಯಾವುದಾದರೂ ಒಂದು ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ. ಹೆಚ್ಚಿನ ಮೊತ್ತವನ್ನು ಗ್ರಾಮೀಣ ಪ್ರದೇಶದಲ್ಲಿ ಇರುವಂತಹ ಅಭ್ಯರ್ಥಿಗಳಿಗೆ ಸರ್ಕಾರ ನೀಡುತ್ತದೆ.

ಅರ್ಜಿ ಸಲ್ಲಿಕೆಗೆ ಕಡ್ಡಾಯವಾಗಿರುವಂತಹ ದಾಖಲಾತಿಗಳಿವು.

ಮೊದಲನೆಯ ದಾಖಲಾತಿಯ ಹೆಸರು ಆಧಾರ್ ಕಾರ್ಡ್ :- ಯಾವುದೇ ಸರ್ಕಾರಿ ಯೋಜನೆಯ ಪ್ರಯೋಜನಗಳನ್ನು ಪಡೆಯಬೇಕು ಎಂದರೆ, ಕಡ್ಡಾಯವಾಗಿ ಅಭ್ಯರ್ಥಿಯ ಗುರುತಿನ ಚೀಟಿಯಾಗಿ ಆಧಾರ್ ಕಾರ್ಡ್ ಗಳನ್ನು ಕೂಡ ಒದಗಿಸತಕ್ಕದ್ದು. ಇದು ಕೂಡ ಈ ಒಂದು ಯೋಜನೆಗೆ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಆದ್ದರಿಂದ ಯಾರೆಲ್ಲಾ ಸ್ವಂತ ಮನೆಗಳನ್ನು ಪಡೆಯಬೇಕೆಂದು ಕೊಂಡಿದ್ದೀರಿ, ಅಂತಹ ಮನೆಯ ವ್ಯಕ್ತಿಯೊಬ್ಬರು ಮಾತ್ರ ಆಧಾರ್ ಕಾರ್ಡ್ ಗಳನ್ನು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸಲಿಕೆ ಮಾಡಬೇಕು.

ಎರಡನೇ ದಾಖಲಾತಿಯ ಹೆಸರು ರೇಷನ್ ಕಾರ್ಡ್ :- ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರೂ ಕೂಡ ರೇಷನ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಕೆ ಮಾಡುವವರೇ ಕಾಣುತ್ತಾರೆ. ಆದ ಕಾರಣ ಯಾರೆಲ್ಲಾ ರೇಷನ್ ಕಾರ್ಡ್ ಗಳನ್ನು ಹೊಂದಿರುತ್ತಾರೋ ಅಂತವರು ಕೂಡ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಕೆ ಮಾಡಿ ಮನೆ ನಿರ್ಮಾಣಕ್ಕೆ ಹಣವನ್ನು ಕೂಡ ಪಡೆಯಬಹುದಾಗಿದೆ. ಆದ್ದರಿಂದ ನೀವು ಕೂಡ ಕಡ್ಡಾಯವಾಗಿ ರೇಷನ್ ಕಾರ್ಡ್ ಗಳನ್ನು ಕೂಡ ಹೊಂದಿರಬೇಕು ಮೂರು ವಿವಿಧ ರೇಷನ್ ಕಾರ್ಡ್ ಗಳಲ್ಲಿ ಯಾವುದಾದರೂ ಒಂದನ್ನು ಹೊಂದಬೇಕಾಗುತ್ತದೆ.

ಮೊದಲನೇದಾಗಿ ಎಪಿಎಲ್ ರೇಷನ್ ಕಾರ್ಡ್ ಗಳು ಕೂಡ ಇರುತ್ತದೆ. ಹಾಗೂ ಬಿಪಿಎಲ್ ರೇಷನ್ ಕಾರ್ಡ್ ಗಳು ಕೂಡ ಕಡ್ಡಾಯವಾಗಿ ಎಲ್ಲಾ ಅಭ್ಯರ್ಥಿಗಳು ಹೊಂದಿರುತ್ತಾರೆ ಅಥವಾ ಅಂತ್ಯೋದಯ ರೇಷನ್ ಕಾರ್ಡ್ ಗಳನ್ನು ಹೊಂದಿರುತ್ತಾರೆ. ಈ ಮೂರರಲ್ಲಿ ಒಂದನ್ನು ಹೊಂದಿದಂತಹ ಅಭ್ಯರ್ಥಿಗಳಿಗೆ ಈ ಆವಾಸ್ ಯೋಜನೆ ಸಾಲವನ್ನು ನೀಡುತ್ತದೆ, ಹಾಗೂ ಸಬ್ಸಿಡಿ ಹಣವನ್ನು ಕೂಡ ನೀಡುತ್ತದೆ. ನೀವು ರೇಷನ್ ಕಾರ್ಡ್ಗಳನ್ನು ಹೊಂದಿಲ್ಲವೆಂದರೆ ನಿಮಗೆ ಈ ಒಂದು ಸಬ್ಸಿಡಿ ಹಣ ಕೂಡ ದೊರೆಯುವುದಿಲ್ಲ.

ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ :- ಜಾತಿ ಪ್ರಮಾಣ ಪತ್ರವನ್ನು ಸರ್ಕಾರ ಏಕೆ ಕೇಳುತ್ತಿದೆ ಎಂದರೆ, ಸ್ನೇಹಿತರೆ ಜಾತಿ ಪ್ರಮಾಣ ಪತ್ರದಲ್ಲಿ ಅಭ್ಯರ್ಥಿಗಳು ಯಾವ ವರ್ಗಕ್ಕೆ ಸೇರುತ್ತಾರೆ ಎಂಬುವುದು ಕೂಡ ಖಚಿತವಾಗಿಯೇ ತಿಳಿಯುತ್ತದೆ. ಆದ ಕಾರಣ ಜಾತಿ ಪ್ರಮಾಣ ಪತ್ರವನ್ನು ಕೇಳಲಾಗುತ್ತದೆ. ಹಾಗೂ ಆದಾಯ ಪ್ರಮಾಣ ಪತ್ರವನ್ನು ಏಕೆ ಕೇಳುತ್ತಿದ್ದಾರೆ ಎಂದರೆ, ಆದಾಯ ಪ್ರಮಾಣ ಪತ್ರದಲ್ಲಿ ನಿಮಗೆ ವಾರ್ಷಿಕವಾಗಿ ಎಷ್ಟು ಆದಾಯವಾಗುತ್ತದೆ ಪ್ರತಿ ವರ್ಷ ಎಂಬುದು ಕೂಡ ಅಲ್ಲಿ ಖಚಿತವಾದ ಮಾಹಿತಿ ಲಭ್ಯವಿರುತ್ತದೆ. ಆದ್ದರಿಂದ ಆದಾಯ ಪ್ರಮಾಣ ಪತ್ರವೂ ಕೂಡ ಬೇಕು.

ಆಧಾರ್ ಲಿಂಕ್ ಆಗಿರುವಂತಹ ಮೊಬೈಲ್ ಸಂಖ್ಯೆ :- ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವಂತಹ ಮೊಬೈಲ್ ಸಂಖ್ಯೆ ಯಾಕೆ ಬೇಕು ಅಂದರೆ, ಸರ್ಕಾರ ನಿಮಗೆ ಈ ಅರ್ಜಿ ಸಲ್ಲಿಕೆ ಮಾಡಿಕೊಂಡ ಬಳಿಕ ಆ ಒಂದು ಸಂಖ್ಯೆಗೆ ಹೊಸ ಮಾಹಿತಿಯನ್ನು ಕೂಡ ಒದಗಿಸುತ್ತದೆ. ನಿಮಗೆ ಯಾವಾಗ ಮನೆ ನಿರ್ಮಾಣ ಮಾಡಲು ಹಣ ದೊರೆಯುತ್ತದೆ ಎಂಬುದನ್ನು ಕೂಡ ಅಪ್ಡೇಟ್ ಮಾಡುವ ಸಲುವಾಗಿ ಆ ಲಿಂಕ್ ಆಗಿರುವಂತಹ ಮೊಬೈಲ್ ಸಂಖ್ಯೆಯನ್ನು ಕೂಡ ಕೇಳುತ್ತದೆ.

ಬ್ಯಾಂಕ್ ಖಾತೆ ಮಾಹಿತಿ ಕೂಡ ಬೇಕಾಗುತ್ತದೆ :- ಸ್ನೇಹಿತರೆ ಬ್ಯಾಂಕ್ ಖಾತೆಯನ್ನು ಏಕೆ ಕೇಳುತ್ತದೆ ಸರ್ಕಾರ ಎಂದರೆ, ಅರ್ಜಿ ಸಲ್ಲಿಕೆ ಮಾಡುವಂತಹ ಸಂದರ್ಭದಲ್ಲಿ ನೀವು ಯಾವ ಬ್ಯಾಂಕ್ ಖಾತೆಯನ್ನು ನೀಡಿರುತ್ತಾರೆ, ಆ ಬ್ಯಾಂಕ್ ಖಾತೆಗೆ ಹಣ ಕೂಡ ಮಂಜೂರಾಗುತ್ತದೆ. ಆದ ಕಾರಣ ಬ್ಯಾಂಕ್ ಖಾತೆ ಎಲ್ಲಾ ಅಭ್ಯರ್ಥಿಗಳಿಗೂ ಕೂಡ ಕಡ್ಡಾಯವಾಗಿದೆ.

ಭಾವಚಿತ್ರ ಕೂಡ ಬೇಕು :- ಯಾರು ತಮ್ಮ ಹೆಸರಿನಲ್ಲಿ ಅರ್ಜಿ ಸಲ್ಲಿಕೆ ಮಾಡುತ್ತಾರೋ ಅಂತಹ ವ್ಯಕ್ತಿಯ ಭಾವಚಿತ್ರವನ್ನು ಕೂಡ ಸರ್ಕಾರ ಅರ್ಜಿ ಸಲ್ಲಿಕೆಗೆ ಕೇಳುತ್ತದೆ. ಏಕೆಂದರೆ ಅರ್ಜಿ ಸಲ್ಲಿಕೆ ಮಾಡಿದ ಬಳಿಕ ಅರ್ಜಿಯ ದಾಖಲಾತಿಗಳನ್ನೆಲ್ಲ ಒಂದು ಬಾರಿಯಾದರೂ ಸರ್ಕಾರ ಪರಿಶೀಲನೆ ಮಾಡುತ್ತದೆ. ಆ ಪರಿಶೀಲನೆ ಮಾಡುವಂತಹ ಸಂದರ್ಭದಲ್ಲಿ ಯಾವ ವ್ಯಕ್ತಿ ಈ ಒಂದು ಸಾಲವನ್ನು ಪಡೆಯುತ್ತಿದ್ದಾರೆ ಮನೆಗಳನ್ನು ಪಡೆಯಲು ಎಂಬುದನ್ನು ಕೂಡ ತಿಳಿಯಲು ಭಾವಚಿತ್ರವನ್ನು ಕಡ್ಡಾಯಗೊಳಿಸಿದೆ.

ಅರ್ಜಿಯನ್ನು ಯಾವ ರೀತಿ ಸಲ್ಲಿಕೆ ಮಾಡಬೇಕು ?

ಅರ್ಜಿಯನ್ನು ಎರಡು ವಿಧಾನದಲ್ಲಿ ಸಲ್ಲಿಕೆ ಮಾಡಬಹುದು. ಮೊದಲನೇ ವಿಧಾನದ ಹೆಸರು ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವುದು ಎಂದು, ಇನ್ನು ಎರಡನೇ ವಿಧಾನದ ಹೆಸರು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವುದು ಎಂದು ಸ್ನೇಹಿತರೆ ಈ ಎರಡರಲ್ಲಿ ಯಾವುದಾದರೂ ಒಂದನ್ನು ನೀವು ಆಯ್ಕೆ ಮಾಡಿಕೊಂಡು ಆ ಒಂದು ವಿಧಾನದಲ್ಲಿ ನೀವು ಅರ್ಜಿ ಸಲ್ಲಿಕೆ ಕೂಡ ಮಾಡಬಹುದು. ನೀವೇನಾದರೂ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಕೆ ಮಾಡುತ್ತೀರಿ ಎಂದರೆ ನಿಮಗೆ ಒಂದು ಫೋನ್ ಇದ್ದರೆ ಸಾಕು ಫೋನಿನ ಮುಖಾಂತರವಾದರೂ ಅರ್ಜಿ ಸಲ್ಲಿಕೆ ಮಾಡಬಹುದು.

ಅಥವಾ ಲ್ಯಾಪ್ಟಾಪ್ ಗಳ ಮುಖಾಂತರವೂ ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ ಅರ್ಜಿ ಸಲ್ಲಿಕೆ ಮಾಡಲು ಒಂದು ಅಧಿಕೃತ ವೆಬ್ಸೈಟ್ ಕೂಡ ಬೇಕಾಗುತ್ತದೆ ಸರ್ಕಾರವೇ ಈ ಒಂದು ಅಧಿಕೃತ ವೆಬ್ಸೈಟ್ ಅನ್ನು ಕೂಡ ಆ ಒಂದು ವೆಬ್ ಸೈಟ್ ನಲ್ಲಿ ನೀವು ಅರ್ಜಿಯನ್ನು ಆನ್ಲೈನಲ್ಲಿ ಮಾಡಬಹುದಾಗಿದೆ.

ಆನ್ಲೈನ್ ವಿಧಾನದ ಪ್ರಕ್ರಿಯೆ ಹೀಗಿದೆ !

ಆನ್ಲೈನ್ ಅರ್ಜಿ ಸಲ್ಲಿಕೆ ಮಾಡುವವರು ಈ https://pmaymis.gov.in/ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿರಿ. ಭೇಟಿ ನೀಡಿದ ಬಳಿಕ ಹಲವಾರು ಪುಟದಲ್ಲಿ ಈ ಒಂದು ಯೋಜನೆಯ ಮಾಹಿತಿಯು ಕೂಡ ಲಭ್ಯವಿರುತ್ತದೆ ಆ ಮಾಹಿತಿ ಯಾವ ರೀತಿ ಇರುತ್ತದೆಯೋ ಅದನ್ನು ಪಾಲಿಸುವ ಮುಖಾಂತರ ನೀವು ಅರ್ಜಿ ನಮೂನೆ ತೆರೆದುಕೊಳ್ಳುವಂತಹ ಪುಟದವರೆಗೂ ಕೂಡ ಬರಬೇಕು.

ಆನಂತರ ಅರ್ಜಿ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಎಲ್ಲಾ ದಾಖಲಾತಿಗಳನ್ನೆಲ್ಲ ಸಲ್ಲಿಕೆ ಮಾಡತಕ್ಕದ್ದು ನಾವು ತಿಳಿಸಿರುವಂತಹ ದಾಖಲಾತಿಗಳನ್ನೆಲ್ಲ ಇಲ್ಲಿ ಒದಗಿಸಬೇಕು ಒದಗಿಸಿದ ನಂತರವೇ ನೀವು ಸಬ್ಮಿಟ್ ಎಂಬ ಆಪ್ಷನ್ ಅನ್ನು ಕ್ಲಿಕ್ಕಿಸಿ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬೇಕಾಗುತ್ತದೆ ಈ ಒಂದು ವಿಧಾನ ಎರಡನೇ ವಿಧಾನವಾಗಿ ಕಂಡು ಬರುತ್ತದೆ.

ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೀಗಿದೆ !

ನೀವೇನಾದರೂ ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಕೆ ಮಾಡಬೇಕು ಎಂದಿಕೊಂಡಿದ್ದಲ್ಲಿ ನೀವು ನಿಮ್ಮ ಹತ್ತಿರದ ಗ್ರಾಮ ಒನ್, ಬಾಪೂಜಿ ಸೇವ ಕೇಂದ್ರ, ಸಿಎಸ್ಸಿ ಕೇಂದ್ರಗಳಿಗೆ ಹೋಗಿ ಭೇಟಿ ನೀಡಬಹುದು ಅಥವಾ ಸೈಬರ್ ಸೆಂಟರ್ಗಳಿಗೂ ಕೂಡ ಹೋಗಬಹುದು ನಿಮಗೆ ಅರ್ಜಿ ಸಲ್ಲಿಸುವಂತಹ ಮಾಹಿತಿ ತಿಳಿಯದಿದ್ದರೆ ಮಾತ್ರ ಈ ರೀತಿಯ ಕೇಂದ್ರಕ್ಕೆ ಭೇಟಿ ನೀಡಿ ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಕೆ ಮಾಡಿರಿ.

ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು…

Leave a Comment