ಭಾರತದಲ್ಲಿ ಅತೀ ಹೆಚ್ಚಿನ ಒತ್ತನ್ನು ಶಿಕ್ಷಣಕ್ಕೆ ನೀಡಲಾಗುತ್ತದೆ. ಅದರಲ್ಲೂ ಇಂದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಣ ಎಂಬುದು ಬಹಳ ಉಪಯೋಗಕಾರಿ ಯಾಗಲಿದ್ದು ಭಾರತದಲ್ಲಿ ಶಿಕ್ಷಣ ಪಡೆಯಲು ಅತೀ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ. ಈ ದಿನಗಳಲ್ಲಿ ಉತ್ತಮ ಶಿಕ್ಷಣ ಇದ್ದರೆ ಮಾತ್ರ ಸ್ಪರ್ಧಾರ್ಥಿ ಗಳಿಗೆ ಉತ್ತಮ ಉದ್ಯೋಗದೊಂದಿಗೆ ಒಳ್ಳೆಯ ವೇತನವನ್ನು ಕೂಡ ಪಡೆಯಬಹುದು. ಹಾಗಾಗಿ ಸರಕಾರವು ಹಲವು ರೀತಿಯ ಸೌಲಭ್ಯಗಳನ್ನು ಕೂಡ ಇಂದಿನ ಮದ್ಯಮ ವರ್ಗದ ಮತ್ತು ಬಡ ಮಕ್ಕಳಿಗೂ ಶಿಕ್ಷಣ ನೀಡುವಂತೆ ಆಗಬೇಕು ಎಂದು ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ.
ಈಗಾಗಲೇ ಸರಕಾರವು ಮದ್ಯಮ ವರ್ಗದ ಮತ್ತು ಬಡ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ, ಸಮವಸ್ತ್ರ ಶೂ, ಬಿಸಿಯೂಟ, Students Scholarship ವಿದ್ಯಾರ್ಥಿ ವೇತನವನ್ನು ಕೂಡ ನೀಡುತ್ತಿದೆ, ಇದೇ ರೀತಿ ಹಲವು ಸೌಲಭ್ಯ ಗಳನ್ನು ಸರಕಾರವು ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿದೆ. ಹಾಗೆಯೇ ವಿವಿಧ ತರಗತಿಯ ವಿದ್ಯಾರ್ಥಿಗಳಿಗೆ ಅನುಗುಣ ವಾಗಿ ವಿದ್ಯಾರ್ಥಿವೇತನವು Students Scholarship ಕೂಡ ಸಿಗುತ್ತದೆ. ಈ ದಿನಗಳಲ್ಲಿ ವಿದ್ಯಾರ್ಥಿಗಳ ಶಿಕ್ಷಣದ ಹಿತದೃಷ್ಟಿಯಿಂದ ಹಲವಾರು ರೀತಿಯ ಪ್ರೋತ್ಸಾಹ ಧನಗಳು ಸಿಗಲಿದ್ದು 6ನೇ ತರಗತಿ ಯಿಂದ 10ನೇ ತರಗತಿಯ ವಿದ್ಯಾರ್ಥಿಗಳು ₹10,000 ರೂ. ವರೆಗೆ ವಿದ್ಯಾರ್ಥಿವೇತನ Students Scholarship ಅನ್ನು ಪಡೆಯಬಹುದು. ಹಾಗಿದ್ದಲ್ಲಿ ಈ ಯೋಜನೆ ಯಾವುದು ಎಂದು ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ತಿ ಓದಿ.
ವಿದ್ಯಾರ್ಥಿ ವೇತನವನ್ನು ಕ್ರೀಡೆಯಲ್ಲಿ ಆಸಕ್ತಿ ವುಳ್ಳ ಮಕ್ಕಳನ್ನು ಬೆಂಬಲವನ್ನು ನೀಡುವುದರ ಸಲುವಾಗಿ, ಹಾಗೂ ಅವರನ್ನು ಪ್ರೋತ್ಸಾಹಿಸುವ ಸಲುವಾಗಿ ಸರಕಾರದಿಂದ ನೀಡಲಾಗುತ್ತಿದೆ. ಪ್ರತಿಭಾವಂತ ಕ್ರೀಡಾಪಟು ವಿದ್ಯಾರ್ಥಿಗಳನ್ನು ಬೆಂಬಲಿಸುವ ಸಲುವಾಗಿ ಸರಕಾರದಿಂದ ಪ್ರಾಥಮಿಕ, ಹಾಗೂ ಪ್ರೌಢಶಾಲೆಯ 6ನೇ ತರಗತಿ ಯಿಂದ 10ನೇ ತರಗತಿ ಕ್ರೀಡಾಪಟು ಮಕ್ಕಳಿಗೆ ವಾರ್ಷಿಕವಾಗಿ ₹10,000/- ರೂ. ದಂತೆ ಕ್ರೀಡಾ ವಿದ್ಯಾರ್ಥಿ ವೇತನವನ್ನು Students Scholarship ಸರಕಾರದಿಂದ ನೀಡಲಾಗುತ್ತದೆ.
ಪ್ರಸ್ತುತ ಸಾಲಿನಲ್ಲಿಯು ಕೂಡ ಈ ವಿದ್ಯಾರ್ಥಿ ವೇತನದ ಯೋಜನೆಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು ಪ್ರಸ್ತುತವಾಗಿ ಪ್ರಥಮಿಕ ಅಥವಾ ಪ್ರೌಢಶಾಲೆಯಲ್ಲಿ ವಿಧ್ಯಾರ್ಥಿಗಳು ಓದುತ್ತಿರುವ ಕ್ರೀಡಾಪಟುಗಳು ಈ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯನ್ನು ಸಲ್ಲಿಸುವ ವಿದ್ಯಾರ್ಥಿಗಳು https://sevasindhuservices.karnataka.gov.in ಈ ಲಿಂಕ್ ನ ಮೂಲಕ ಸುಲಭವಾಗಿ ಆನ್ ಲೈನ್ ನಲ್ಲಿ 30/ಜೂನ್ ತಿಂಗಳ ಒಳಗಾಗಿ ತಮ್ಮ ಅರ್ಜಿಗಳನ್ನು ಸಲ್ಲಿಸಲು ಸರ್ಕಾರವು ಅವಕಾಶ ಕಲ್ಪಿಸಿದೆ.
ಈ ವಿದ್ಯಾರ್ಥಿ ವೇತನಕ್ಕೆ ಈ ಎಲ್ಲಾ ನಿಯಮಗಳು ಇರಲಿದೆ:
- ಅರ್ಜಿಯನ್ನು ಸಲ್ಲಿಸುವ ವಿಧ್ಯಾರ್ಥಿಗಳು ಪ್ರಸ್ತುತ 2023-24ನೇ ಸಾಲಿನಲ್ಲಿ ಓದುತ್ತಿರುವ ಪ್ರಾಥಮಿಕ ಅಥವಾ ಪ್ರೌಢಶಾಲೆ ಶಿಕ್ಷಣವನ್ನು ವಿಧ್ಯಾರ್ಥಿಗಳು ಪಡೆಯುತ್ತಿರಬೇಕು.
- ಅರ್ಜಿದಾರ ವಿಧ್ಯಾರ್ಥಿಗಳು (ರಾಜ್ಯ ಕ್ರೀಡಾ ಪ್ರಾಧಿಕಾರ) ದಲ್ಲಿ ನೋಂದಾಯಿತವಾದ ಕ್ರೀಡಾ ಸಂಸ್ಥೆಗಳು ನಡೆಸುವ ರಾಜ್ಯ ಮಟ್ಟದ ಆಟದ ಸ್ಪರ್ಧೆಗಳಲ್ಲಿ ವಿಧ್ಯಾರ್ಥಿಗಳು ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದಿರಬೇಕು.
- ಕ್ರೀಡಾಪಟು ವಿಧ್ಯಾರ್ಥಿಗಳು ಒಂದಕ್ಕಿಂತ ಹೆಚ್ಚಿನ ಅಂದರೆ ಹಲವು ಕ್ರೀಡೆಗಳಲ್ಲಿ ಭಾಗವಹಿಸಿದ್ದರೂ ಸಹ ವಾರ್ಷಿಕವಾಗಿ ಒಂದೇ ವಿದ್ಯಾರ್ಥಿವೇತನದ ಮೊತ್ತಕ್ಕೆ ಅಂದರೆ ₹10,000 ಕ್ಕೆ ಮಾತ್ರ ಅರ್ಹರಾಗಿರುತ್ತಾರೆ.
- ಕ್ರೀಡಾ ಸಂಸ್ಥೆಗಳು 01/ಏಪ್ರಿಲ್/2023 ರ ರಿಂದ 31/ಮಾರ್ಚ್/2024 ರ ವರೆಗೆ ರಾಜ್ಯ ಮಟ್ಟದಲ್ಲಿ ನಡೆಸಿದ ಸ್ಪರ್ಧೆಗಳಲ್ಲಿ ವಿಧ್ಯಾರ್ಥಿಗಳು ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರಬೇಕು.
ಈ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಈ ದಾಖಲೆಗಳು ಕಡ್ಡಾಯ:
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಪ್ರಸ್ತುತ ತರಗತಿ ಪ್ರವೇಶಾತಿ ದಾಖಲೆ
- ಪಾಸ್ ಪೋರ್ಟ್ ಸೈಜ್ ಪೋಟೋ
- ಕ್ರೀಡಾಪಟು ಎಂಬುದಕ್ಕೆ ಅಗತ್ಯ ದಾಖಲೆ,ಮಾಹಿತಿ
- ಅಂಕ ಪಟ್ಟಿ ಇತ್ಯಾದಿ
ಇನ್ನೂ ಹೆಚ್ಚಿನ ಮಾಹಿತಿಗಳಿಗಾಗಿ ವಿದ್ಯಾರ್ಥಿಗಳು (ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ) ಯ ಅಧಿಕೃತವಾದ ವೆಬ್ಸೈಟ್ ಗೆ https://ysd.karnataka.gov.in/ ಭೇಟಿ ನೀಡಿ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ಈ ಮೇಲಿನ ಸ್ಕಾಲರ್ಶಿಪ್ ಲೇಖನವು ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಮತ್ತು ನಿಮ್ಮ ಕುಟುಂಬ ಸದಸ್ಯರಿಗೆ ಈ ಮಾಹಿತಿಯನ್ನು ಶೇರ್ ತಪ್ಪದೆ ಮಾಡಿ. ಧನ್ಯವಾದ.