ಅನ್ನಭಾಗ್ಯ ಯೋಜನೆಯ ಮೂರು ಕಂತಿನ ಹಣ ಒಂದೇ ಬಾರಿಗೆ ನಿಮ್ಮ ಖಾತೆಗೆ ಬರಲಿದೆ. ಈ ಮೂರು ಕ್ರಮಗಳನ್ನು ಕೂಡಲೇ ಪಾಲಿಸಿ
ಸ್ನೇಹಿತರೇ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರವು ರಾಜ್ಯದ ಜನತೆಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡಿತ್ತು, ಅದರ ಭಾಗವಾಗಿ ರಾಜ್ಯದ ಜನತೆಗೆ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರವು ನೀಡುತ್ತಿದ್ದ 5 ಕೆಜಿ ಉಚಿತವಾದ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರವು ಕೂಡ 5 ಕೆಜಿ ಅಕ್ಕಿಯನ್ನು ನೀಡಲಿದೆ ಎಂದು ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರವು ರಾಜ್ಯದ ಜನತೆಗೆ ಭರವಸೆಯನ್ನು ನೀಡಿತ್ತು.
ಆದರೆ ಈ ಅನ್ನಭಾಗ್ಯ ಯೋಜನೆಯ ಬೇಡಿಕೆಯನ್ನು ಕಾಂಗ್ರೆಸ್ ಸರ್ಕಾರವು ರಾಷ್ಟ್ರೀಯ ಆಹಾರ ನಿಗಮದ ಮುಂದೆ ಇಟ್ಟಾಗ ರಾಷ್ಟ್ರೀಯ ಆಹಾರ ನಿಗಮವು ನಮ್ಮ ದೇಶದಲ್ಲಿ ಆಹಾರ ಧಾನ್ಯಗಳ ಕೊರೆತೆ ಇದೆ ಎಂಬ ಕಾರಣದಿಂದ ಹೆಚ್ಚುವರಿಯಾಗಿ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಅಕ್ಕಿಯನ್ನು ನೀಡಲು ಆಗುವುದಿಲ್ಲ ಎಂದು ಹೇಳಿತು. ಇದರಿಂದ ರಾಜ್ಯ ಕಾಂಗ್ರೆಸ್ ಸರ್ಕಾರವು ಜನರಿಗೆ ಮಾರುಕಟ್ಟೆಯ ಬೆಲೆಗೆ ಪ್ರತಿ ಕೆಜಿ ಗೆ ಸುಮಾರು ₹34 ರೂ. ರಂತೆ ಹಣನ್ನು ವರ್ಗಾವಣೆ ಮಾಡಲು ನಿರ್ಧರಿಸಿತು.
ಈಗಾಗಲೇ ಕಾಂಗ್ರೆಸ್ ಸರ್ಕಾರವು ರಾಜ್ಯದ ಜನರಿಗೆ 10 ಕಂತಿನ ಹಣವನ್ನು ನೇರವಾಗಿ ರಾಜ್ಯದ ಜನರ ಖಾತೆಗಳಿಗೆ ವರ್ಗಾವಣೆ ಮಾಡಿದ್ದು 11 ನೇ ಕಂತಿನ ಹಣವನ್ನು ಅತೀ ಶೀಘ್ರದಲ್ಲೇ ಸರ್ಕಾರವು ಬಿಡುಗಡೆ ಮಾಡಲಿದೆ ಅಂತ ನಮ್ಮ ರಾಜ್ಯದ ಆಹಾರ ಮಂತ್ರಿಗಳು ತಿಳಿಸಿದ್ದಾರೆ.
ಆದರೆ ನಮ್ಮ ರಾಜ್ಯದಲ್ಲಿ ಇನ್ನು ಕೆಲವರು ಅನ್ನಭಾಗ್ಯ ಯೋಜನೆಯ ಎರಡು ಮತ್ತು ಮೂರು ತಿಂಗಳಿನ ಅನ್ನಭಾಗ್ಯ ಯೋಜನೆಯ ಹಣವನ್ನು ಪಡೆದುಕೊಂಡಿಲ್ಲ. ನೀವು ಅನ್ನಭಾಗ್ಯ ಯೋಜನೆಯ ಹಣವನ್ನು ಪಡೆದಿರಲು ಈ ಮೂರು ಕಾರಣಗಳು ಎಂದು ಹೇಳಬಹುದು.
ರಾಜ್ಯದ ಜನರಿಗೆ ಅನ್ನಭಾಗ್ಯ ಯೋಜನೆಯ ಹಣ ಇನ್ನೂ ಬರದಿರುವುದಕ್ಕೆ ಕಾರಣಗಳು:
- ಅನ್ನಭಾಗ್ಯ ಯೋಜನೆಯ ಹಣ ಬರದಿರುವುದಕ್ಕೆ ಮೊದಲ ಕಾರಣ ನೀವೂ ಇನ್ನೂ ನಿಮ್ಮ ಬ್ಯಾಂಕ್ ಖಾತೆಯ NPCI ಮಾಡಿಸದೆ ಇರುವುದು. ಹಾಗಾಗಿ ಕೂಡಲೇ ನಿಮ್ಮ ಬ್ಯಾಂಕ್ ಖಾತೆಯ NPCI ಮಾಡಿಸಿಕೊಳ್ಳಿ.
- ಅನ್ನಭಾಗ್ಯ ಯೋಜನೆಯ ಹಣ ಬರದಿರುವುದಕ್ಕೆ ಎರಡನೇ ಕಾರಣ ನಿಮ್ಮ ಬಿಪಿಎಲ್ (BPL) ಕಾರ್ಡ್ ನ ಜೊತೆಗೆ ಪ್ರಚಲಿತ ಮೊಬೈಲ್ ನಂಬರ್ ಮತ್ತು ಆಧಾರ್ ನಂಬರ್ ಅನ್ನು ಲಿಂಕ್ ಮಾಡದೆ ಇರುವುದು ಮಾಡಿಸಿಕೊಳ್ಳಿ.
- ಅನ್ನಭಾಗ್ಯ ಯೋಜನೆಯ ಹಣ ಬರದಿರುವುದಕ್ಕೆ ಮೂರನೇ ಕಾರಣ ನಿಮ್ಮ ಬಿಪಿಎಲ್ ಕಾರ್ಡಿ ನಲ್ಲಿರುವ ಎಲ್ಲಾ ಸದಸ್ಯರ (E-KYC) ಇ-ಕೆವೈಸಿ ಮಾಡಿಸದೆ ಇರುವುದು. ಹಾಗಾಗಿ ಕೂಡಲೇ ಎಲ್ಲಾ ಸದಸ್ಯರ (E-KYC) ಆಗಿದಿಯೋ ಎಂದು ಖಚಿತಪಡಸಿಕೊಳ್ಳಿ.
ಈ ಮೂರು ಕ್ರಮಗಳನ್ನು ನೀವು ಪಾಲಿಸಿದರೆ ನಿಮಗೆ ನಿಮ್ಮ ಬಾಕಿ ಇರುವ ಅನ್ನಭಾಗ್ಯ ಯೋಜನೆಯ ಹಣ 9 ಮತ್ತು 10 ಕಂತಿನ ಹಣ ಹಾಗೂ 11 ನೇ ಕಂತಿನ ಹಣವು ಒಟ್ಟಿಗೆ ಅತೀ ಶೀಘ್ರದಲ್ಲೇ ಬರುವುದು. ಈ ಮೇಲಿನ ಮೂರು ಕ್ರಮಗಳನ್ನು ಸರಿಯಾಗಿ ವೀಕ್ಷಿಸಿ ಹಾಗೂ ನಿಮಗೆ ಅನ್ನಭಾಗ್ಯ ಯೋಜನೆಯ ಹಣ ಇನ್ನೂ ಬಂದಿಲ್ಲವೆಂದರೆ ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಮತ್ತು ಅಲ್ಲಿನ ಅಧಿಕಾರಿಗಳೊಂದಿಗೆ ನಿಮ್ಮ ಸಮಸ್ಯೆಯನ್ನು ಹೇಳಿಕೊಳ್ಳಿ ಅವರು ಪರಿಶೀಲಿಸುತ್ತಾರೆ.
ಅನ್ನಭಾಗ್ಯ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿರಿತಿಗಾಗಿ ರಾಜ್ಯ ಸರ್ಕಾರದ ಅಧಿಕೃತ ವೆಬ್ಸೈಟ್ ಪೋರ್ಟಲ್ ಗೆ ಭೇಟಿ ನೀಡಿ ಲಿಂಕ್ ಕೆಳಗೆ ನೀಡಲಾಗಿದೆ.
ಅನ್ನಭಾಗ್ಯ ಯೋಜನೆಯ ಅಧಿಕೃತ ವೆಬ್ಸೈಟ್ ಲಿಂಕ್ | ಅಧಿಕೃತ ವೆಬ್ಸೈಟ್ |
ಗೆಳೆಯರೆ ಈ ಮೇಲಿನ ಲೇಖನವು ನಿಮಗೆ ಉಪಯುಕ್ತ ಮಾಹಿತಿ ನೀಡಿದ್ದಲ್ಲಿ ಈ ಲೇಖನವನ್ನು ನಿಮ್ಮ ಸ್ನೇಹಿತರೊಂದಿಗೂ ಸಹ ಹಂಚಿಕೊಳ್ಳಿ