Ration Card Info: ಮೊದಲನೇ ಹಂತದ ಹೊಸ BPL ರೇಷನ್ ಕಾರ್ಡ್ಗಳು ಈ ಜಿಲ್ಲೆಗಳಿಗೆ ಬಿಡುಗಡೆ ಆಗಲಿದೆ ನೋಡಿ.!! ಪೂರ್ತಿ ವಿವರ ಇಲ್ಲಿದೆ.!!
ನಮಸ್ಕಾರ ಸ್ನೇಹಿತರೇ, ನಿವೇನಾದರೂ ಹೊಸ ರೇಷನ್ ಕಾರ್ಡ್ಗೆ ಅರ್ಜಿಯನ್ನು ಸಲ್ಲಿಸಿ ಹಾಗೂ ಹೊಸ ಬಿಪಿಎಲ್ (BPL) ರೇಷನ್ ಕಾರ್ಡ್ ಅನ್ನು ಪಡೆಯುವ ನಿರೀಕ್ಷೆಯಲ್ಲಿದ್ದರೆ, ಇದೋ ಇಲ್ಲಿದೆ ನಿಮಗೊಂದು ಖುಷಿ ಕೊಡೋ ಶುಭ ಸುದ್ದಿ. ಈ ಹಿಂದೆ ಎಲ್ಲಾ ಅರ್ಜಿದಾರರು ಹೊಸ ಬಿಪಿಎಲ್ ರೇಷನ್ ಕಾರ್ಡ್ಗಾಗಿ ಅರ್ಜಿಯನ್ನು ಸಲ್ಲಿಸಿದ ಎಲ್ಲಾ ಅರ್ಜಿಯನ್ನು ಹಾಕಿದ ಫಲಾನುಭಿಗಳಿಗೆ ಹೊಸ ಬಿಪಿಎಲ್ ರೇಷನ್ ಕಾರ್ಡ್ (ಪಡಿತರ ಚೀಟಿ) ಯನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಲಿದ್ದು, ಯಾವೆಲ್ಲಾ ಜಿಲ್ಲೆಗಳ ಅರ್ಜಿದಾರರಿಗೆ ಮೊದಲ ಹಂತದಲ್ಲಿ ಈ ಎಲ್ಲಾ ಬಿಪಿಎಲ್ ರೇಷನ್ ಕಾರ್ಡ್ ಗಳು ಬಿಡುಗಡೆ ಆಗಲಿದೆ ಲಿದೆ ಎನ್ನುವ ಪೂರ್ತಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಸಂಪೂರ್ಣವಾಗಿ ಓದಿರಿ.
ನಮ್ಮ ರಾಜ್ಯ ಸರಕಾರದಿಂದ ಮತ್ತು ನಮ್ಮ ಕೇಂದ್ರ ಸರ್ಕಾರದಿಂದ ನೀಡಲಾಗುವ ಎಲ್ಲಾ ವಿವಿಧ ಯೋಜನೆಗಳ ಲಾಭವನ್ನು ನೀವು ಪಡೆದುಕೊಳ್ಳಲು ನಿಮ್ಮ ಬಳಿ ರೇಷನ್ ಕಾರ್ಡ್ (Ration Card) ಇರುವುದು ತುಂಬಾ ಮುಖ್ಯವಾಗಿದೆ. ರೇಷನ್ ಕಾರ್ಡ್ (Ration Card) ಒಂದು ಪ್ರಮುಖ ದಾಖಲೆಯಾಗಿದ್ದು, ಯಾವ ಜನರೂ ಬಡತನದ ರೇಖೆಗಿಂತಲೂ ಕೂಡ ಕೆಳಗೆ ಇರುವ ಕುಟುಂಬದವರಿಗೆ ಸರ್ಕಾರದಿಂದ ಈ ರೇಷನ್ ಕಾರ್ಡ್ ದಾಖಲೆಯನ್ನು ವಿತರಣೆ ಮಾಡಲಾಗುತ್ತದೆ.
ಇದನ್ನೂ ಓದಿ: KSRTC ಉಚಿತ ಬಸ್ ಅನ್ನು ಹತ್ತುವ ಎಲ್ಲಾ ಮಹಿಳೆಯರಿಗೆ ಬಂತು ಮುಂಜಾನೆ ಒಂದು ಕಹಿ ಸುದ್ದಿ.!!
ನಮ್ಮ ರಾಜ್ಯ ಸರ್ಕಾರವು ಲೋಕಸಭಾ ಚುನಾವಣೆಯ ಕಾರಣದಿಂದಾಗಿ ಹೊಸ (BPL) ಬಿಪಿಎಲ್ ರೇಷನ್ ಕಾರ್ಡ್ಗಳ ವಿತರಣೆಯನ್ನು ಸರಕಾರದಿಂದ ನಿಲ್ಲಿಸಲಾಗಿತ್ತು. ಆದರೆ ಇದೀಗ ರಾಜ್ಯ ಸರ್ಕಾರವು ಮತ್ತೆ ಎಲ್ಲಾ ಅರ್ಹ ಅರ್ಜಿದಾರರಿಗೂ ಸಹ ಹೊಸ ರೇಷನ್ ಕಾರ್ಡ್ಗೆ ಅರ್ಜಿಯನ್ನು ಸಲ್ಲಿಸಲು ಸರ್ಕಾರವು ಅವಕಾಶವನ್ನು ಮಾಡಿಕೊಟ್ಟಿದ್ದು, ರಾಜ್ಯ ಸರ್ಕಾರವು ಕೆಲವು ದಿನಗಳ ಹಿಂದೆಯೇ ಹೊಸದಾಗಿ ಮನೆಯನ್ನು ಕಟ್ಟಸಿದವರಿಗೆ ಹಾಗೂ ಹೊಸದಾಗಿ ಮದುವೆಯಾದ ಎಲ್ಲಾ ಅರ್ಹ ಫಲಾನುಭವಿಗಳಿಗೆ ಈ ಅರ್ಜಿ ಸಲ್ಲಿಸುವ ಅವಕಾಶವನ್ನು ನೀಡಿತ್ತು.
ಇನ್ನೂ ಎಷ್ಟು ಹೊಸ ರೇಷನ್ ಕಾರ್ಡ್ಗಳ ಅರ್ಜಿಯ ವಿಚಾರಣೆ ಬಾಕಿಯಿದೆ.?
ಸ್ನೇಹಿತರೇ, ಈ ಹಿಂದೆ ಸಮಯದಲ್ಲಿ ಹೊಸ ರೇಷನ್ ಕಾರ್ಡ್ಗಳಿಗಾಗಿ ಅರ್ಜಿಯನ್ನು ಸಲ್ಲಿಸಿದ ಎಲ್ಲಾ ಸದಸ್ಯರಿಗೆ ಮೊದಲಿಗೆ ರೇಷನ್ ಕಾರ್ಡ್ ವಿತರಣೆಯನ್ನು ಮಾಡಿ ಅದಾದ ನಂತರ ಎಲ್ಲಾ ಬಾಕಿ ಉಳಿದ ಅಥವಾ ಹೊಸದಾಗಿ ಅರ್ಜಿಯನ್ನು ಸಲ್ಲಿಸಿದ ಎಲ್ಲಾ ಅರ್ಹ ಫಲಾನುಭವಿಗಳಿಗೆ ರೇಷನ್ ಕಾರ್ಡ್ಗಾಳನ್ನು ನೀಡಲಾಗುವುದು ಎಂದು ರಾಜ್ಯ ಸರ್ಕಾರವು ತಿಳಿಸಿದೆ. ನಮ್ಮ ರಾಜ್ಯ ಸರ್ಕಾರದ ವರದಿಯ ಪ್ರಕಾರ ನೋಡುವುದಾದರೆ ಇನ್ನೂ ಕೂಡ 2.3 ಲಕ್ಷ ಅರ್ಹ ಅರ್ಜಿಗಳಿಗೆ ಬಿಪಿಎಲ್ ಕಾರ್ಡ್(BPL Ration Card) ವಿತರಣೆ ಮಾಡುವ ಕೆಲಸ ಬಾಕಿ ಉಳಿದಿದೆ ಎಂದು ರಾಜ್ಯ ಸರ್ಕಾರವು ವರದಿಯಲ್ಲಿ ತಿಳಿಸಿದೆ.
ಹೊಸ ರೇಷನ್ ಕಾರ್ಡ್ಗಳು ಮೊದಲು ಸಿಗಲಿರುವ ಎಲ್ಲಾ ಜಿಲ್ಲೆಗಳ ಪಟ್ಟಿ:
ರಾಜ್ಯ ಸರ್ಕಾರವು ಬಾಕಿ ಉಳಿದಿರುವ ಎಲ್ಲಾ ಹಳೆಯ (BPL) ಬಿಪಿಎಲ್ ರೇಷನ್ ಕಾರ್ಡ್ ವಿತರಣೆ ಬಳಿಕ ಎಲ್ಲಾ ಹೊಸ ಬಿಪಿಎಲ್ ಕಾರ್ಡ್ ಗಳನ್ನು ಈ ಜಿಲ್ಲೆಗಳಿಗೆ ಮೊದಲು (BPL) ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ವಿತರಿಸಬಹುದು ಎನ್ನಲಾಗಿದೆ. ಜಿಲ್ಲೆಗಳ ಹೆಸರು ಈ ಕೆಳಗಿನಂತಿದೆ:
- ಚಿತ್ರದುರ್ಗ,
- ದಾವಣಗೆರೆ,
- ದಕ್ಷಿಣ ಕನ್ನಡ,
- ಬಾಗಲಕೋಟೆ,
- ಹಾವೇರಿ,
- ಬೀದರ್,
- ರಾಯಚೂರು,
- ಕೊಪ್ಪಳ,
- ಯಾದಗಿರಿ,
- ವಿಜಯಪುರ,
ಮೊದಲು ಈ ಜಿಲ್ಲೆಗಳಲ್ಲಿ ಹೊಸ (BPL) ಬಿಪಿಎಲ್ ಪಡಿತರ ಚೀಟಿಗಳನ್ನು ಅತೀ ಶೀಘ್ರದಲ್ಲೇ ರಾಜ್ಯ ಸರ್ಕಾರವು ವಿತರಣೆ ಮಾಡಲಿದೆ.