ಕಳೆದ ವರ್ಷ ವಿಧಾನಸಭೆಯ ಚುನಾವಣೆಯ ದೃಷ್ಟಿಯಿಂದ ಹೊಸ ರೇಷನ್ ಕಾರ್ಡ್ (ಪಡಿತರ ಚೀಟಿ) ಯ ವಿತರಣೆಯನ್ನು ಸರ್ಕಾರದ ವತಿಯಿಂದ ನಿಲ್ಲಿಸಲಾಗಿತ್ತು. ರಾಜ್ಯದಲ್ಲಿ ಎರಡು ವರ್ಷಗಳಿಂದ ಹೊಸ ರೇಷನ್ ಕಾರ್ಡ್ ಗೆ (ಪಡಿತರ ಚೀಟಿ) ಗೆ ಅರ್ಜಿಯನ್ನು ಸಲ್ಲಿಸಲು ತುಂಬಾ ಗ್ರಾಹಕರು ಕಾಯುತ್ತಿದ್ದಾರೆ. ರಾಜ್ಯ ಸರ್ಕಾರದ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಕೆಯ ವಿಭಾಗವನ್ನು ಬ್ಲಾಕ್ ಮಾಡಲಾಗಿತ್ತು. ರೇಷನ್ ಕಾರ್ಡ್ ನ ತಿದ್ದುಪಡಿಗೆ ಸರ್ವರ್ ಸಮಸ್ಯೆಯಿಂದ ಈಗಾಗಲೇ ಕಾರ್ಡ್ ಇದ್ದವರು ತಿದ್ದುಪಡಿ ಕೇಂದ್ರಗಳಿಗೆ ಅಲೆದಾಡುವಂತಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರದ (ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ) ಯಿಂದ ಒಂದು ಒಳ್ಳೆಯ ಗುಡ್ ನ್ಯೂಸ್ ಹೊರ ಬಂದಿದೆ ಅದೇನೆಂದರೆ ಶೀಘ್ರದಲ್ಲಿಯೇ (ಎಪಿಎಲ್ ಮತ್ತು ಬಿಪಿಎಲ್) APL & BPLರೇಷನ್ ಕಾರ್ಡ್ ಗಳಿಗೆ ಮತ್ತೇ ಹೊಸದಾಗಿ ಅರ್ಜಿಯನ್ನು ಸ್ವೀಕರಿಸಲು ಆರಂಭಿಸುವುದಾಗಿ ರಾಜ್ಯ ಸರ್ಕಾರದ (ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ) ಹೇಳಿದ್ದಾರೆ.
ಹೊಸ ರೇಷನ್ ಕಾರ್ಡ್ ನ ಅರ್ಜಿ (New Ration Card Application)
ಕಾಂಗ್ರೆಸ್ ಸರ್ಕಾರವು ವಿಧಾನಸಭೆಯ ಚುನಾವಣೆಯಲ್ಲಿ ನೀಡಿರುವ ಎಲ್ಲಾ ಐದು ಗ್ಯಾರಂಟಿಯ ಭರವಸೆಗಳ ಅನುಷ್ಠಾನಕ್ಕೆ ಫಲಾನುಭವಿಗಳನ್ನು ಗುರುತಿಸಲು BPL ಪಡಿತರ ಚೀಟಿಯನ್ನೇ ಮಾನದಂಡವಾಗಿ ನಿಗದಿಪಡಿಸಿರುವ ಕಾರಣ ಹೊಸ ರೇಷನ್ ಕಾರ್ಡ್ ಅನ್ನು ಪಡೆದುಕೊಳ್ಳುವುದಕ್ಕಾಗಿ ಜನರೆಲ್ಲರು ಮತ್ತು ಫಲಾನುಭವಿಗಳೆಲ್ಲರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರವು ಹೊಸ ರೇಷನ್ ಕಾರ್ಡ್ ಗಳ ವಿತರಣೆಯನ್ನು ಮುಂದೂಡುತ್ತಲೇ ಬರುತ್ತಿದೆ. ಈ ವಿಷಯದ ಬಗ್ಗೆ ಮಾತನಾಡಿದ (ಆಹಾರ ಮತ್ತು ನಾಗರಿಕ ಪೂರೈಕೆ) ಸಚಿವರಾದಂತಹ ಕೆ.ಎಚ್ ಮುನಿಯಪ್ಪ (K.H Muniyappa) ಅವರು ರಾಜ್ಯದ ಎಲ್ಲಾ ಜನತೆಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಶೀಘ್ರದಲ್ಲಿಯೇ ಹೊಸ ರೇಷನ್ ಕಾರ್ಡ್ (ಪಡಿತರ ಚೀಟಿ) ಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು (ಆಹಾರ ಮತ್ತು ನಾಗರಿಕ ಪೂರೈಕೆ) ಇಲಾಖೆಯ ಸಚಿವ (ಕೆ.ಎಚ್.ಮುನಿಯಪ್ಪ) ಅವರು ತಿಳಿಸಿದ್ದಾರೆ.
ಸರ್ಕಾರವು ಕೆಲವು ತುರ್ತು ಅಗತ್ಯಗಳನ್ನು ಸೇವೆಗಳನ್ನು ಪೂರೈಸಲು ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ನೀಡಿದೆ. ಈ ಯೋಜನೆಯ ಅಡಿಯಲ್ಲಿ ಈ ಕೆಳಗಿ ಎಲ್ಲರೂ ಅರ್ಜಿಯನ್ನು ಸಲ್ಲಿಸಬಹುದಾಗಿದೆ:
- ಹೊಸದಾಗಿ ಮದುವೆಯನ್ನು ಮಾಡಿಕೊಂಡು ಸಂಸಾರ ಪ್ರಾರಂಭಿಸುವ ದಂಪತಿಗಳು ಕೂಡ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಅರ್ಹರಾಗುತ್ತಾರೆ.
- ಮದುವೆಯ ನಂತರದಲ್ಲಿ ಪ್ರತ್ಯೇಕವಾಗಿ ವಾಸ ಮಾಡುವ ದಂಪತಿಗಳು ಕೂಡ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅರ್ಹರಾಗುತ್ತಾರೆ.
- ಕುಟುಂಬದಿಂದ ಬೇರೆಯಾಗಿ ಸಂಸಾರ ನಡೆಸುವ ದಂಪತಿಗಳು ಕೂಡ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅರ್ಹರಾಗುತ್ತಾರೆ.
- ಈಗಾಗಲೇ ರೇಷನ್ ಕಾರ್ಡ್ ಅನ್ನು ಹೊಂದಿರುವ ಕುಟುಂಬದಿಂದ ಬೇರೆ ಕಡೆ ಪ್ರತ್ಯೇಕವಾಗಿ ವಾಸಮಾಡಲು ಪ್ರಾರಂಭಿಸುವ ದಂಪತಿಗಳು ಕೂಡ (ಹೊಸ ರೇಷನ್ ಕಾರ್ಡ್) ಗೆ ಅರ್ಜಿಯನ್ನು ಸಲ್ಲಿಸಬಹುದು.
ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಮನೆಯ ಸದಸ್ಯರುಗಳ ಆಧಾರ್ ಕಾರ್ಡ್ ಗಳು
- ನಿವಾಸ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ನಿವಾಸದ ಪ್ರಮಾಣ ಪತ್ರ
- ಬಾಡಿಗೆದಾರರಿಗೆ ಒಪ್ಪಂದ ಪತ್ರ (ಕಡ್ಡಾಯ)
- ಮೊಬೈಲ್ ಸಂಖ್ಯೆ (ಕಡ್ಡಾಯ)
ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ:
ಬೆಂಗಳೂರು ಒನ್ (Bengaluru one), ಹಾಗೂ ಗ್ರಾಮ ಒನ್ (Grama one) ಮತ್ತು ಇತರ ಎಲ್ಲಾ ಸೇವಾ ಕೇಂದ್ರಗಳಲ್ಲಿ ಫಲಾನುಭಿಗಳು ಅರ್ಜಿಯನ್ನು ಸಲ್ಲಿಸಬಹುದು. ಆನ್ಲೈನ್ ಮುಖಾಂತರ ಸೇವಾ ಕೇಂದ್ರಗಳಲ್ಲಿ ಫಲಾನುಭಿಗಳು ಅರ್ಜಿಯನ್ನು ಸಲ್ಲಿಸಬಹುದು.
ಆನ್ಲೈನ್ (Online) ಪೋರ್ಟಲ್ ಅರ್ಜಿಯನ್ನು ಸಲ್ಲಿಸಲು ನಿರ್ದಿಷ್ಟ ಸಮಯ ಗಳಲ್ಲಿ ಮಾತ್ರವೇ ತೆರೆದಿರುತ್ತದೆ. ಬೆಂಗಳೂರು ಒನ್, ಗ್ರಾಮ ಒನ್ ಸೇವಾ ಕೇಂದ್ರಗಳ ಅಥವಾ ಬೇರೆ ಸೇವಾ ಕೇಂದ್ರಗಳ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಿ.