Guarantee Schemes New Update: ಗ್ಯಾರಂಟಿಗಳು ಕ್ಯಾನ್ಸಲ್ ಭೀತಿಯ ಬೆನ್ನಲ್ಲೇ ಗೃಹಲಕ್ಹ್ಮೀ ಮತ್ತು ಬೇರೆ ಯೋಜನೆಗಳಿಗೆ ಸೇರಿದಂತೆ ಎಲ್ಲಾ ಯೋಜನೆಗೂ ಹೊಸ ರೂಲ್ಸ್.!

ಈಗಾಗಲೇ ರಾಜ್ಯ ಸರಕಾರವು ಬಡ ವರ್ಗದ ಜನತೆಗಾಗಿ ಐದು ಗ್ಯಾರಂಟಿ ಯೋಜನೆಗಳನ್ನು (Guarantee Schemes) ಗಳನ್ನು ಜಾರಿಗೆ ತಂದಿದೆ. 1. ಗೃಹಲಕ್ಷ್ಮಿ ಯೋಜನೆ (Gruha Lakshmi), 2. ಗೃಹಜ್ಯೋತಿ ಯೋಜನೆ (Gruha Jyothi), 3. ಯುವನಿಧಿ ಯೋಜನೆ (Yuva Nidhi), 4. ಶಕ್ತಿ ಯೋಜನೆ (Shakti Scheme), 5. ಅನ್ನಭಾಗ್ಯ ಯೋಜನೆ (Anna Bhagya Yojana) ಹೀಗೆ ಐದು ಗ್ಯಾರಂಟಿಗಳನ್ನು ರಾಜ್ಯ ಸರಕಾರವು ಜಾರಿಗೆ ತಂದಿದ್ದು ಈ ಎಲ್ಲಾ ಯೋಜನೆಗಳ ಬಗ್ಗೆ ಈಗಾಗಲೇ ಜನತೆಯಲ್ಲಿ ಧನಾತ್ಮಕ ಪ್ರತಿಕ್ರಿಯೆ ಒಳಗೊಂಡಿದೆ. ಮೊನ್ನೆ ತಾನೆ ಲೋಕಸಭೆ ಚುನಾವಣೆಯ ಫಲಿತಾಂಶ ಸಹ ಬಂದಿದ್ದು ಕಾಂಗ್ರೆಸ್ ಪಕ್ಷವು ಕಡಿಮೆ ಮತಗಳನ್ನು ಗಳಿಸಿದೆ.

ಹೀಗಾಗಿ ಈ ಗ್ಯಾರಂಟಿ ಯೋಜನೆಗಳು ಇನ್ನೇನು ಸ್ಥಗಿತ ಆಗಲಿದೆ ಎಂದು ಹೆಚ್ಚಿನ ಜನರು ಸಹ ಮಾತನಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ ಈ ಎಲ್ಲಾ ಗ್ಯಾರಂಟಿ ಯೋಜನೆಗಳ ಸೌಲಭ್ಯ ಸಿಗಬೇಕಾದರೆ ಈ ಕೆಲಸವನ್ನು ಕಡ್ಡಾಯ ಮಾಡಬೇಕು ಎಂದು ರಾಜ್ಯ ಸರಕಾರವು ಸೂಚನೆ ನೀಡಿದೆ.

ಆಧಾರ್ ಕಾರ್ಡ್ ಕಡ್ಡಾಯವಾಗಿ ಅಪ್ಡೇಟ್ ಮಾಡಬೇಕು:

ಈಗಾಗಲೇ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಮೂಲಕ ಅರ್ಜಿ ಸಲ್ಲಿಸಿರುವ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಎರಡು ಸಾವಿರ ರೂಪಾಯಿಗಳನ್ನು ಖಾತೆಗೆ ಜಮೆ ಯಾಗುತ್ತಿದೆ. ಅನ್ನಭಾಗ್ಯದ ಯೋಜನೆಯ (Anna Bhagya Yojana) ಮೂಲಕ ಕೂಡ ಹಣ ಈಗಾಗಲೇ ಖಾತೆಗೆ ಜಮೆ ಆಗುತ್ತಿದೆ. ಆದರೆ ಅರ್ಜಿ ಸಲ್ಲಿಸಿದ್ದ ಕೆಲವು ನೊಂದಣಿದಾರರಿಗೆ ಈ ಸೌಲಭ್ಯ ಸಿಗುತ್ತಾ ಇಲ್ಲ. ಈ ಸೌಲಭ್ಯ ದಿಂದ ಸಿಗಬೇಕಾದ ಹಣ ಅವರಿಗೆ ಸಿಗುತ್ತಿಲ್ಲಾ. ಇದಕ್ಕೆ ಕಾರಣ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಇರಲಿದೆ.

ಅರ್ಜಿ ಸಲ್ಲಿಸಿರುವ ನಿಮಗೆ ಇನ್ನೂ ಕೂಡ ಗೃಹಲಕ್ಷ್ಮಿ (Gruha Lakshmi) ಯೋಜನೆಯ ಹಣ, ಮತ್ತು ಅನ್ನಭಾಗ್ಯ ಯೋಜನೆಯ (Anna Bhagya Yojana) ಹಣ ಸರಿಯಾಗಿ ಸಿಗುತ್ತಿಲ್ಲ ಎಂದರೆ ಮೊದಲನೆಯದಾಗಿ ನೀವು ಮಾಡ್ಬೇಕಾದ ಕೆಲಸ ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಿ, ಇಂದು ಆಧಾರ್ ಕಾರ್ಡ್ ನವೀಕರಣವು ಬಹಳ ಮುಖ್ಯವಾಗಿದ್ದು ನೀವು ಈ ಕೆಲಸ ಮೊದಲು ಮಾಡಿ. ಕಳೆದ 10 ವರ್ಷದಿಂದ ಯಾರೆಲ್ಲಾ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ (Aadhaar Card Update) ಮಾಡಿಸಿಕೊಂಡಿಲ್ಲವೋ ಅವರೆಲ್ಲರೂ ಕೂಡ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು.

Guarantee Schemes New Update

ಆಧಾರ್ ಕಾರ್ಡ್ ಅಪ್ಡೇಟ್ ಅನ್ನು ಉಚಿತವಾಗಿ ಮಾಡಬಹುದು:

ಇಂದಿನ ದಿನದಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ (Aadhaar Card Update) ಅನ್ನು ಮಾಡಿಸುವುದು ಕಡ್ಡಾಯವಾಗಿದ್ದು ಉಚಿತವಾಗಿ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಸಹ ಮಾಡಬಹುದಾಗಿದೆ. ಆಧಾರ್ ಕಾರ್ಡ್ ಅನ್ನು ಮಾಡಲು ಜೂನ್ 14 ರಂದು ಕೊನೆಯ ದಿನ ವಾಗಿದೆ. ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಆಧಾರ್ ಕಾರ್ಡ್ ಡೇಟಾದಲ್ಲಿ ತಮ್ಮ ವೈಯಕ್ತಿಕ ಗುರುತಿನ ಪುರಾವೆಯನ್ನು ಮತ್ತು ವಿಳಾಸದ ಪುರಾವೆಯನ್ನು ಹುಟ್ಟಿದ ದಿನಾಂಕವನ್ನು, ತಮ್ಮ ಮೊಬೈಲ್ ಸಂಖ್ಯೆ ಇತ್ಯಾದಿ ಮಾಹಿತಿಗಳನ್ನು ನವೀಕರಿಸಬಹುದು.

ಆಧಾರ್ ಕಾರ್ಡ್ ಅಪ್ಡೇಟ್ ಅನ್ನು ಹೀಗೆ ಮೊಬೈಲ್ ಮೂಲಕ ಮಾಡಿ:

ಮೊದಲಿಗೆ https://myaadhaar.uidai.gov.in ಈ ಲಿಂಕ್ ನಲ್ಲಿ ಹೋಗಿ Login ಬಟನ್ ಮೇಲೆ ಕ್ಲಿಕ್ ಮಾಡಿ, ನಂತರ ನಿಮ್ಮ ಮೊಬೈಲ್ ನಂಬರ್ ಅನ್ನು ಹಾಕಿ, ನಂತರ ಕ್ಯಾಪ್ಚ ಕೋಡ್ ಅನ್ನು ಹಾಕಿ, ಇದಾದ ನಂತರ ಓಟಿಪಿ ಪಡೆದು ಲಾಗಿನ್ ಮಾಡಿಕೊಳ್ಳಿ. ಬಳಿಕ Document Update ಎನ್ನುವ ಆಪ್ಷನ್ ಅನ್ನು ಹುಡುಕಿ ಸೆಲೆಕ್ಟ್ ಮಾಡಿ, ನಂತರ Next ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ. ನೀವು ನೀಡಿದ ಮಾಹಿತಿಯು ಸರಿ ಇದೆಯಾ ಎಂದು ನೋಡಿಕೊಳ್ಳಿ, ಇದರಲ್ಲಿ ನಿಮ್ಮ ಹೆಸರು, ಹುಟ್ಟಿದ ದಿನ, ಅಡ್ರೆಸ್, ಮತ್ತು ವರ್ಷವನ್ನು ಎಲ್ಲವೂ ಇರಲಿದ್ದು ಸರಿ ಇದೆಯಾ ನೋಡಿಕೊಳ್ಳಿ.

ಈಗ ನಿಮ್ಮ ಎಲ್ಲಾ ವಿವರಗಳು ಸರಿ ಇದ್ದರೆ, Verify Above Details ಎನ್ನುವ ಬಟನ್ ಅನ್ನು ಸೆಲೆಕ್ಟ್ ಮಾಡಿ, ನಂತರ ಅಲ್ಲಿ ಕೇಳುವ ನಿಮ್ಮ ಎಲ್ಲಾ ಡಾಕ್ಯುಮೆಂಟ್ ಗಳನ್ನು ಅಪ್ಲೋಡ್ ಮಾಡಿಕೊಳ್ಳಿ. ನಂತರ Next ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡು, ಬಳಿಕ Submit ಬಟನ್ ಕ್ಲಿಕ್ ಮಾಡಿದರೆ ಆಯಿತು.

Leave a Comment