Anna Bhagya Amount :- ನಮಸ್ಕಾರ ಸ್ನೇಹಿತರೆ, ಈ ಲೇಖನದ ಮೂಲಕ ನಿಮಗೆ ತಿಳಿಸುವ ವಿಷಯವೇನೆಂದರೆ ನಮ್ಮ ರಾಜ್ಯದ ಕಾಂಗ್ರೆಸ್ ಸರ್ಕಾರವು ಅನ್ನಭಾಗ್ಯ ಯೋಜನೆಯ ಹಣವನ್ನು ಯಾವ ದಿನಾಂಕದಂದು ಫಲಾನುಭಿಗಳ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಈ ಲೇಖನದಲ್ಲಿ ತಿಳಿಯೋಣ. ಅನ್ನಭಾಗ್ಯ ಯೋಜನೆಯ ಹಣ ಖಾತೆಗೆ ಜಮಾ ಆಗಿದೆ ಎಂದು ಯಾವ ರೀತಿ ಚೆಕ್ ಮಾಡಬೇಕು ಮತ್ತು ಯಾವಾಗ ಸರಕಾರ ಬಿಡುಗಡೆ ಮಾಡಲಿದೆ ಎಂಬ ಮಾಹಿತಿಯನ್ನು ಈ ಕೆಳಗೆ ನೋಡೋಣ.
ಸ್ನೇಹಿತರೆ, ನಮ್ಮ ರಾಜ್ಯದಲ್ಲಿ ಪಂಚ (5) ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆಯು ಕೂಡ ಬಹಳಷ್ಟು ಫಲಾನುಭಿಗಳಿಗೆ ಸಹಕಾರಿಯಾಗಿದೆ ಹೌದು ಆಹಾರ ಇಲಾಖೆಯು ಮಧ್ಯಮ ವರ್ಗದ, ಮತ್ತು ಬಡವರ್ಗದ ಜನರಿಗಾಗಿ ಆಹಾರ ಧಾನ್ಯಗಳನ್ನು ವಿತರಣೆಯನ್ನು ಮಾಡುವ ಮೂಲಕ ರಾಜ್ಯ ಸರ್ಕಾರವು ನೆರವಾಗುತ್ತಿದೆ ಅಂತ ಪಡಿತರ ಚೀಟಿದಾರರು ಬಹಳಷ್ಟು ರೀತಿಯ ಸೌಲಭ್ಯಗಳನ್ನು ಈಗಾಗಲೇ ಪಡೆಯುತ್ತಿದ್ದಾರೆ ಅದರ ಜೊತೆಗೆ ಅನ್ನಭಾಗ್ಯ ಯೋಜನೆಯ ಹಣವು ಕೂಡ ಫಲಾನುಭಿಗಳ ಬ್ಯಾಂಕ್ ಖಾತೆಗೆ ಜಮಾ ಆಗುತ್ತಾ ಇದೆ ಇದೀಗ ಆಹಾರ ಸಚಿವರು ಜುಲೈ (July) ತಿಂಗಳ ಅನ್ನಭಾಗ್ಯ ಹಣದ ಕುರಿತಾಗಿ ಸಿಹಿ ಸುದ್ಧಿ ಒಂದನ್ನು ನೀಡಿದ್ದಾರೆ.
Anna Bhagya Amount: ಅನ್ನಭಾಗ್ಯ ಯೋಜನೆ ಹಣದ ವಿವರ:
ಕಳೆದ ವರ್ಷದ ಜುಲೈ ತಿಂಗಳಿನಲ್ಲಿಯೇ ಅನ್ನಭಾಗ್ಯ ಯೋಜನೆಯನ್ನು ಕಾಂಗ್ರೆಸ್ಸ್ ಸರ್ಕಾರವು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ರಾಜ್ಯದ ಎಲ್ಲಾ ಫಲಾನುಭಿಗಳಿಗೆ ಪ್ರತೀ ತಿಂಗಳು 10 KG ಅಕ್ಕಿಯನ್ನು ನೀಡುವ ಭರವಸೆಯನ್ನು ರಾಜ್ಯದ ಕಾಂಗ್ರೆಸ್ ಸರ್ಕಾರವು ನೀಡಿತ್ತು ಆದರೆ ರಾಜ್ಯ ಹಾಗೂ ಕೇಂದ್ರದಲ್ಲಿ ಅಕ್ಕಿಯ ಕೊರತೆಯಿಂದಾಗಿ 5 KG ಅಕ್ಕಿಯನ್ನು ನೀಡುತ್ತಿದ್ದು ಇನ್ನುಳಿದ 5 KG ಯ ಅಕ್ಕಿಯ ಬದಲಿಗೆ ಹಣವನ್ನು ಎಲ್ಲಾ ಫಲಾನುಭವಿಗಳ ಬ್ಯಾಂಕ್ ನ ಖಾತೆಗೆ ಜಮಾ ಮಾಡುತ್ತಾ ಇದೆ ಕೆಜಿಗೆ ₹34 ರೂಪಾಯಿಗಳು ಮತ್ತು ಐದು ಕೆಜಿಗೆ ₹170 ರೂ. ಹಣವನ್ನು ಮನೆಯ ಸದಸ್ಯರಿಗೆ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಜಮಾ ಮಾಡಲಾಗುತ್ತಿದೆ.
ಆಹಾರ ಸಚಿವರಾದ ಕೆ.ಹೆಚ್ ಮುನಿಯಪ್ಪನವರು ಅನ್ನಭಾಗ್ಯ ಯೋಜನೆಯ ಹಣ ಅತಿ ಶೀಘ್ರದಲ್ಲಿ ಫಲಾನುಭಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ತಿಳಿಸಿದ್ದರು. ಗುಣಮಟ್ಟದ ಅಕ್ಕಿಯನ್ನು ರಾಜ್ಯದ ಜನತೆಗೆ ನಾವು ಒದಗಿಸುತ್ತೇವೆ ಡಿಬಿಟಿ ಮೂಲಕ ಪ್ರತಿ ತಿಂಗಳು ಹಣವನ್ನು ಕೊಡುತ್ತೇವೆ ಮತ್ತು ಈಗಾಗಲೇ ಬಾಕಿ ಇದ್ದ ಹಣವನ್ನು ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು. ಜುಲೈ ತಿಂಗಳ ಹಣವನ್ನು ಯಾವುದೇ ಬಾಕಿ ಇಲ್ಲದೆ ಹಣವನ್ನು ಖಾತೆಗೆ ವರ್ಗಾವಣೆ ಮಾಡುತ್ತೇವೆ ಎಂದು ಭರವಸೆಯನ್ನು ನೀಡಿದ್ದಾರೆ. ಸಚಿವ ಎಸ್ ಮುನಿಯಪ್ಪನವರು ಸ್ಪಷ್ಟನೆ ನೀಡಿದ್ದು ಜುಲೈ 10ಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿದ್ದು ಯಾವುದೇ ಬಾಕಿಯ ಹಣ ಇರಲ್ಲ ಎಂದು ತಿಳಿಸಿದ್ದಾರೆ.
Anna Bhagya Amount: ಅನ್ನಭಾಗ್ಯ ಯೋಜನೆ ಹಣದ ಬದಲು ಅಕ್ಕಿ ವಿತರಣೆ.?
ಸ್ನೇಹಿತರೆ, ರಾಜ್ಯದಲ್ಲಿ ಹಣದ ಬದಲು ಅಕ್ಕಿಯನ್ನು ವಿತರಣೆ ಮಾಡಲು ಈಗಾಗಲೇ ಸರ್ಕಾರವು ಚರ್ಚೆಯನ್ನು ಸಹ ಮಾಡಿದೆ ಅಕ್ಕಿಯ ಕೊರತೆಯ ಹಿನ್ನೆಲೆ ಅಕ್ಕಿಯನ್ನು ವಿತರಣೆ ಮಾಡಲು ಆಗುತ್ತಿಲ್ಲ ಹಾಗಾಗಿ ಅಕ್ಕಿಯ ಬದಲು ಧಾನ್ಯಗಳನ್ನು ನೀಡುವ ಪ್ರಸ್ತಾವನೆಯನ್ನು ಕೂಡ ಕೇಂದ್ರದ ಮುಂದೆ ಪ್ರಸ್ತಾವನೆ ಇಟ್ಟಿದೆ ಎಂದು ಹೇಳಿದರು.
ಇದನ್ನೂ ಓದಿ: Gruhalakshmi Scheme: ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಹಣವು ಈ 20 ಜಿಲ್ಲೆಗಳಲ್ಲಿ ಒಟ್ಟಿಗೆ ಖಾತೆಗೆ ಜಮಾ ಆಗಲಿದೆ.!
ಅನ್ನಭಾಗ್ಯ ಯೋಜನೆ ಹಣ ಖಾತೆಗೆ ಯಾವಾಗ ಜಮಾ ಆಗುತ್ತದೆ.?
ಈ ತಿಂಗಳ ಅನ್ನ ಭಾಗ್ಯ ಯೋಜನೆಯ ಹಣ ಈಗಾಗಲೇ ಕೆಲವು ಫಲಾನುಭವಿಗಳ ಜೊತೆ ಬಿಡುಗಡೆ ಮಾಡಲಾಗಿದ್ದು ಜುಲೈ ತಿಂಗಳ 10 ತಾರೀಕಿನ ವರೆಗೆ ಎಲ್ಲಾ ದಾಖಲೆಗಳು ಸರಿಯಿದ್ದ ಎಲ್ಲಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವುದಾಗಿ ತಿಳಿಸಿದ್ದಾರೆ. ಅನ್ನಭಾಗ್ಯ ಯೋಜನೆ ಹಣವನ್ನು ಜಮೆಯಾಗೆದೆಯೇ ಎಂಬ ಬಗ್ಗೆ ತಿಳಿಯಲು (ಕರ್ನಾಟಕ ಆಹಾರ ಇಲಾಖೆ) ಯ ಅಧಿಕೃತ ವೈಬ್ ಸೈಟ್ ಗೆ ಭೇಟಿ ನೀಡಿ ವೆಬ್ ಸೈಟ್ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.