Gruhalakshmi Status : ಎಲ್ಲರಿಗೂ ನಮಸ್ಕಾರ, ಈ ಲೇಖನದಲ್ಲಿ ನಿಮಗೆ ತಿಳಿಸುವ ವಿಷಯ ಏನೆಂದರೆ ನಮ್ಮ ಕೇಂದ್ರ ಸರ್ಕಾರ(Central Government) ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರ ಆರ್ಥಿಕ ಅಭಿವೃದ್ಧಿಗಾಗಿ ಈಗಾಗಲೇ ತುಂಬಾ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಈ ಯೋಜನೆಗಳಲ್ಲಿ ನಮ್ಮ ರಾಜ್ಯದ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯು ಕೂಡ ಒಂದಾಗಿದೆ. ಈ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ (Gruhalakshmi 11th installment) ಈಗಾಗಲೇ ಎಲ್ಲಾ ಫಲಾನುಭವಿ ಮಹಿಳೆಯರ ಖಾತೆಗೆಗಳಿಗೆ ಜಮಾ ಆಗಿದ್ದು, ಇನ್ನೂ ಕೆಲವು ಮಹಿಳಾ ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮಾ ಆಗಿಲ್ಲ. ಅಂತಹ ಮಹಿಳೆಯರು ಏನು ಮಾಡಬೇಕು ಎಂಬ ವಿಷಯದ ಬಗ್ಗೆ ಈ ಲೇಖನದಲ್ಲಿ ನಿಮಗೆ ಮಾಹಿತಿಯನ್ನು ನೀಡಿದ್ದೇವೆ.
ಈ ಗೃಹಲಕ್ಷ್ಮಿ ಯೋಜನೆಯ ಲಾಭವನ್ನು ಕರ್ನಾಟಕದಲ್ಲಿ ವಾಸ ಇರುವ 80% ಮಹಿಳೆಯರು ಈಗಾಗಲೇ ಪಡೆಯುತ್ತಿದ್ದಾರೆ. ಈ ಗೃಹಲಕ್ಷ್ಮಿ ಯೋಜನೆಯಂದ ಪ್ರತಿ ತಿಂಗಳು ರಾಜ್ಯದ ಫಲಾನುಭವಿ ಮಹಿಳೆಯರಿಗೆ ₹2000 ರೂ. ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಹಣವನ್ನು ಎಲ್ಲಾ ಮಹಿಳೆಯರು ತಮ್ಮ ಆರ್ಥಿಕ ಜೀವನೋಪಾಯಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಒಟ್ಟು 10 ಕಂತುಗಳ ₹20,000 ಹಣವನ್ನು ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ರಾಜ್ಯದ ಎಲ್ಲಾ ಮಹಿಳೆಯರು ಈಗಾಗಲೇ ಪಡೆದಿದ್ದಾರೆ. ಈಗ 11ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ₹2000 ರೂ. ಪಡೆಯಲು ಮಹಿಳೆಯರು ಕಾಯುತ್ತಿದ್ದಾರೆ. ಇನ್ನು 11ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ₹2000 ರೂ. ಹಣ ಖಾತೆಗೆ ಜಮಾ ಆಗದೇ ಇರುವ ಮಹಿಳೆಯರಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿ ಒಂದನ್ನು ನೀಡಿದೆ ಅದನ್ನು ಈ ಕೆಳಗೆ ನೀಡಲಾಗಿದೆ.
ಗೃಹಲಕ್ಷ್ಮಿ ಯೋಜನೆ 11ನೇ ಕಂತಿನ ಹಣ (Gruhalakshmi 11th installment) ವನ್ನು ನಮ್ಮ ರಾಜ್ಯದ ಮಹಿಳೆಯರಿಗೆ ಈ ತಿಂಗಳ ಕೊನೆಯವರೆಗೆ ಎಲ್ಲಾ ಮಹಿಳೆಯರ ಖಾತೆಗೆ ಹಣ ಜಮಾ ಮಾಡಲಿದ್ದೇವೆ ಎಂದು ನಮ್ಮ ರಾಜ್ಯದ ಕಾಂಗ್ರೆಸ್ ಸರ್ಕಾರವು ಭರವಸೆ ನೀಡಿದೆ. ಆದ್ದರಿಂದ ಇನ್ನೂ ಗೃಹಲಕ್ಷ್ಮಿ ಯೋಜನೆ 11ನೇಯ ಕಂತಿನ ಹಣವು ಜಮಾ ಆಗದೇ ಇರುವ ಮಹಿಳೆಯರು ಈ ತಿಂಗಳ ಕೊನೆಯವರೆಗೆ ಕಾಯಬೇಕು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೂಡ ಹೇಳಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿದ್ದರು ಕೂಡ ಇನ್ನೂ ಯಾವುದೇ ಕಂತಿನ ಹಣ ಖಾತೆಗೆ ಜಮಾ ಆಗಿಲ್ಲ, ಎಂದರೆ ನೀವು ಏನು ಮಾಡಬೇಕು ಅನ್ನುವ ಎಲ್ಲಾ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಅದನ್ನು ನೋಡಿಕೊಂಡು ಅದನ್ನು ತಪ್ಪದೆ ಪಾಲಿಸಿ.
ಗೃಹಲಕ್ಷ್ಮಿ ಯೋಜನೆಯ ಹಣವು ಬಂದಿಲ್ಲ, ಎಂದರೆ ಫಲಾನುಭವಿಗಳು ಏನು ಮಾಡಬೇಕು.?
ನೀವು ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದರು ಕೂಡ ನಿಮಗೆ ಗೃಹಲಕ್ಷ್ಮಿ ಯೋಜನೆಯ ಯಾವುದೇ ಕಂತಿನ ₹2000 ರೂ. ಹಣ ಬಂದಿಲ್ಲ ಅಂದರೆ, ನೀವು ಮೊದಲನೇಯದಾಗಿ ನೀವು ನಿಮ್ಮ ಗೃಹಲಕ್ಷ್ಮಿ ಯೋಜನೆಗೆ ಸಲ್ಲಿಸಿದ ಅರ್ಜಿಯ ಸ್ಥಿತಿಯನ್ನು ಮೊದಲು ಪರಿಶೀಲಿಸಿಕೊಳ್ಳುವುದು ಉತ್ತಮ. ಏಕೆಂದರೆ ನೀವು ನಿಮ್ಮ ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ಏನಾದರೂ ತಪ್ಪುಗಳನ್ನು ಮಾಡಿರುತ್ತಿರಾ, ಮತ್ತು ತಪ್ಪಾದ ದಾಖಲೆಗಳನ್ನು ನೀಡಿರುವ ಸಾಧ್ಯತೆ ಇರುತ್ತದೆ ಆದ್ದರಿಂದ ಅದನ್ನು ಒಮ್ಮೆ ನೀವು ಪರಿಶೀಲಿಸಿಬೇಕು.
ನೀವು ನಿಮ್ಮ ಅರ್ಜಿಯನ್ನು ಸಲ್ಲಿಸುವಾಗ ಯಾವುದೇ ರೀತಿಯ ತಪ್ಪುಗಳು ಆಗಿಲ್ಲಾ ಎಂದರೆ ನೀವು ಒಂದು ಬಾರಿ ನಿಮ್ಮ ಬ್ಯಾಂಕ್ ಖಾತೆಗೆ (KYC) ಕೆವೈಸಿ ಆಗಿದೆಯಾ ಅಥವಾ ಇಲ್ಲವೋ ಎಂಬುದನ್ನು ಚೆಕ್ ಮಾಡಿಸಿಕೊಳ್ಳಬೇಕು. ಏನಾದರೂ ನಿಮ್ಮ ಬ್ಯಾಂಕ್ ಖಾತೆಗೆ (KYC) ಕೆವೈಸಿ ಆಗಿಲ್ಲ ಅಂದರೆ ತಪ್ಪದೆ ಮೊದಲು ನಿಮ್ಮ ಬ್ಯಾಂಕ್ ಖಾತೆಗೆ (KYC) ಕೆವೈಸಿಯನ್ನು ಮಾಡಿಸಿಕೊಳ್ಳಿ.
ಗೃಹಲಕ್ಷ್ಮಿ ಯೋಜನೆಯ ಹಣ ಅರ್ಜಿಯನ್ನು ಸಲ್ಲಿಸಿದ್ದರು ಕೂಡ ಬಂದಿಲ್ಲ ಅಂದರೆ ಏನು ಮಾಡಬೇಕು ಮತ್ತು 11ನೇ ಕಂತಿನ ₹2000 ರೂ. ಹಣವನ್ನು ಸರ್ಕಾರ ಜಮಾ ಮಾಡುವ ಕೊನೆ ದಿನಾಂಕ ಯಾವುದು ಎನ್ನುವ ಪೂರ್ತಿ ಮಾಹಿತಿಯನ್ನು ಈ ಲೇಖನವು ನಿಮಗೆ ತಿಳಿಸಿದೆ ಎಂದು ಭಾವಿಸುತ್ತೇವೆ. ಧನ್ಯವಾದಗಳು.