ಮಹಿಳೆಯರ ಖಾತೆಗೆ ₹5000 ರೂ.!! ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ಜಾರಿಗೆ.!! ಸಂಪೂರ್ಣ ಮಾಹಿತಿ ಇಲ್ಲಿದೆ.!!
PMMVY: ನಮಸ್ಕಾರ ಸ್ನೇಹಿತರೇ, ಇಂದಿನ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಆದರವಾದ ಸ್ವಾಗತ, ಈ ಲೇಖನದ ಮುಖಾಂತರ ತಮಗೆಲ್ಲರಿಗೂ ತಿಳಿಸುವ ವಿಷಯ ಏನೆಂದರೆ ನಮ್ಮ ಕೇಂದ್ರ ಸರಕಾರವು ದೇಶದ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಈಗಾಗಲೇ ಜಾರಿಗೊಳಿಸಿದೆ. ಈ ಯೋಜನೆಗಳಲ್ಲಿ (ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆ) PMMVY ಯು ಸಹ ಒಂದಾಗಿದೆ. ಈ PMMVY ಯೋಜನೆಯಡಿಯಲ್ಲಿ, ಕೇಂದ್ರ ಸರ್ಕಾರವು ನೇರವಾಗಿ ದೇಶದ ಮಹಿಳೆಯರಿಗೆ ಆರ್ಥಿಕವಾಗಿ ಅವರಿಗೆ ಪ್ರಯೋಜನಗಳನ್ನು ಒದಗಿಸುವ ಕೆಲಸವನ್ನು ಮಾಡುತ್ತದೆ. ಈ (ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆ) PMMVY ಯೊಜನೆಯ ಬಗ್ಗೆ ನೀವು ಇನ್ನಷ್ಟು ಮಾಹಿತಿಗಳನ್ನೂ ತಿಳಿದುಕೊಳ್ಳಲು ಈ ಲೇಖನವನ್ನು ನೀವು ತಪ್ಪದೇ ಕೊನೆಯವರೆಗೂ ಸಂಪೂರ್ಣವಾಗಿ ಓದಿರಿ.
Table of Contents
ನಮ್ಮ ದೇಶದಲ್ಲಿ ಕೇಂದ್ರ ಸರ್ಕಾರವು ವಿವಿಧ ರೀತಿಯ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಈ ಎಲ್ಲಾ ಯೋಜನೆಗಳಲ್ಲಿ ಹೆಚ್ಚಿನವುಗಳು ಮಹಿಳಾ ಸಬಲೀಕರಣವನ್ನು ಹಾಗೂ ಮಹಿಳೆಯರ ಅಭಿವೃದ್ಧಿಯನ್ನು ಸಾಧಿಸುವ ನಿಟ್ಟಿನಲ್ಲಿ ಮತ್ತು ಉತ್ತಮ ಗುರಿಗಳೊಂದಿಗೆ ಹಾಗೂ ಮಹಿಳೆಯರಿಗೆ ತುಂಬಾ ಪ್ರಯೋಜನಗಳನ್ನು ನೀಡುವ ಯೋಜನೆಗಳೇ ಆಗಿವೆ. ಮಹಿಳಾ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರವು ವಿಶೇಷ ರೀತಿಗಳ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಇದನ್ನ ಎಲ್ಲವನ್ನೂ ಸಹ ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರವು ದೇಶದ ಮಹಿಳೆಯರಿಗಾಗಿಯೇ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ. (ಪ್ರಧಾನ ಮಂತ್ರಿ ಮಾತೃ ವಂದನ್ ಯೋಜನೆ) PMMVY ಯು ಸಹ ಈ ಯೋಜನೆಗಳಲ್ಲಿ ಒಂದಾಗಿದೆ. ಈ PMMVY ಯೋಜನೆಯಡಿಯಲ್ಲಿ, ಕೇಂದ್ರ ಸರ್ಕಾರವು ನೇರವಾಗಿ ದೇಶದ ಮಹಿಳೆಯರಿಗೆ ಆರ್ಥಿಕವಾಗಿ ಅಭಿವೃದ್ಧಿ ಆಗುವ ಪ್ರಯೋಜನಗಳನ್ನು ಒದಗಿಸುತ್ತದೆ ಹಾಗೂ ಅವರ ಮಹಿಳೆಯರ ಖಾತೆಗಳಿಗೆ ₹5,000 ರೂಪಾಯಿಯನ್ನು ಜಮಾ ಮಾಡುತ್ತದೆ.
PMMVY: ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆ ಎಂದರೆ ಏನು.?
PMMVY: ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಅಡಿಯಲ್ಲಿ ಗರ್ಭಿಣಿ ಮಹಿಳೆಯರಿಗೆ ₹5,000 ರೂ. ಗಳನ್ನ ಆರ್ಥಿಕ ನೆರವಿಗಾಗಿ ಕೇಂದ್ರ ಸರ್ಕಾರದಿಂದ ನೀಡಲಾಗುತ್ತಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರವು 2017 ನೇಯ ವರ್ಷದಲ್ಲಿ ಜಾರಿ ಗೊಳಿಸಿತು, ವಿಶೇಷವಾಗಿ ಈ ಯೋಜನೆಯನ್ನು ಬಡ ಕುಟುಂಬದ ಮಹಿಳೆಯರಿಗೆ ಮತ್ತು ಆರ್ಥಿಕವಾಗಿ ದುರ್ಬಲರಾಗಿರುವ ಮಹಿಳೆಯರಿಗಾಗಿ ಜಾರಿಗೊಳಿಸಲಾಯಿತು. ಈ ಹಣದ ಮೊತ್ತವನ್ನು ಗರ್ಭಿಣಿ ಮಹಿಳೆಯರಿಗೆ ಸರ್ಕಾರದಿಂದ ಮೂರು ಕಂತುಗಳಲ್ಲಿ ಖಾತೆಗೆ ನೇರವಾಗಿ ಜಮಾ ಮಾಡುಲಾಗುತ್ತದೆ.
ಈ ಯೋಜನೆಯ ಅಡಿಯಲ್ಲಿ ಯಾವೆಲ್ಲಾ ಮಹಿಳೆಯರೂ ಅರ್ಜಿ ಸಲ್ಲಿಸಿದ ನಂತರ ಆ ಎಲ್ಲಾ ನೋಂದಣಿಯಾದಂತಹ ಅರ್ಜಿಗಳನ್ನೂ ಪರಿಶೀಲಿಸಿ ನಂತರ ಇಲಾಖೆಯ ಅಧಿಕಾರಿಗಳು ಮಹಿಳೆಯರ ಖಾತೆಗಳಿಗೆ ನೇರವಾಗಿ ಮೊದಲನೆಯ ಕಂತಿನ ₹1,000 ರೂ. ಗಳನ್ನೂ ಜಮಾ ಮಾಡುತ್ತಾರೆ. ಅನಂತರ ಮಹಿಳೆ ಗರ್ಭಿಣಿಯಾದ 6 ತಿಂಗಳು ಕಳೆದ ಮೇಲೆ ಎರಡನೇಯ ಕಂತಿನ ₹2,000 ರೂ. ಹಣವನ್ನು ಫಲಾನುಭಿವಿ ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತದೆ. ಇದಾದ ನಂತರ ಮಗುವಿನ ಜನನ ಆದ ಮೇಲೆ ಉಳಿದಿರುವ ಕೊನೆಯ ಕಂತಿನ ₹2,000 ರೂ. ಹಣವನ್ನು ಸರ್ಕಾರದಿಂದ ನೀಡಲಾಗುವುದು.
PMMVY: ಈ ಯೋಜನೆಗೆ ಅರ್ಜಿಯನ್ನ ಸಲ್ಲಿಸುವುದು ಹೇಗೆ.?
- ಈ PMMVY ಯೋಜನೆಯ ಅಡಿಯಲ್ಲಿ ಪ್ರಯೋಜನಗಳನ್ನು ದೇಶದ ಮಹಿಳೆಯರು ಪಡೆಯಲು ಅವರ ವಯಸ್ಸು 19 ವರ್ಷ ಮೇಲ್ಪಟ್ಟಿರಬೇಕಾಗಿರುತ್ತದೆ. ಈ (ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆ) PMMVY ಯೋಜನೆಯ ಪ್ರಯೋಜನವನ್ನು ಪಡೆಯಲು ಬಯಸುವ ಮಹಿಳೆಯರೂ, ನೀವು ಮೊದಳಿಗೆ ಈ ಯೋಜನೆಯ ಅಧಿಕೃತವಾದ ವೆಬ್ ಸೈಟ್ https://pmmvy.wcd.gov.in/ ಗೆ ಬೇಟಿ ನೀಡಬೇಕು.
- ಇದಾದ ನಂತರದಲ್ಲಿ ಅಲ್ಲಿ ನೀವು ಸಾರ್ವಜನಿಕ ಲಾಗಿನ್ ಅನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿಕೊಂಡು, ನಿಮ್ಮ ಮೊಬೈಲ್ ಸಂಖ್ಯೆಯನ್ನು ಅಲ್ಲಿ ನಮೂದಿಸಬೇಕು ಈ ಮೂಲಕ ನೀವು ವೆಬ್ ಸೈಟ್ ಗೆ ಲಾಗಿನ್, ಮತ್ತು ನಿಮ್ಮ ಪಾಸ್ವರ್ಡ್ ಅನ್ನು ಹಾಗೂ ಇತ್ಯಾದಿಗಳನ್ನು ರಚಿಸಿಕೊಳ್ಳಬೇಕು. ಇದರ ನಂತರ ನೀವುಗಳು ಡೇಟಾ ಎಂಟ್ರಿ ಎಂಬ ಆಯ್ಕೆಯ ಮೇಲೆ ಒತ್ತಬೇಕು ಹಾಗೂ ಫಲಾನುಭವಿಗಳ ನೋಂದಣಿ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
- ಇದೆಲ್ಲಾ ಆದ ನಂತರದಲ್ಲಿ ನೀವು ಯಾವ ಮತ್ತು ಎಷ್ಟನೇ ಮಗುವಿನ ಅರ್ಜಿಯನ್ನೂ ಹಾಕುತ್ತಿದ್ದೀರಿ.? ಅಂದರೆ ಇದು ನಿಮ್ಮ ಮೊದಲ ಮಗುವಿನ ಜನ್ಮವೇ ಅಥವಾ ಎರಡನೇ ಮಗುವಿನ ಜನ್ಮವೇ ಎಂಬುದರ ಬಗ್ಗೆ ನೀವು ಅಲ್ಲಿ ಮಾಹಿತಿಯನ್ನು ದಾಖಲಿಸಬೇಕು. ಅನಂತರ ನೀವು ನಿಮ್ಮ ಆಧಾರ್ ಕಾರ್ಡ್ ನ ನಂಬರ್, ವಯಸ್ಸು, ಹುಟ್ಟಿದ ದಿನಾಂಕ ಮತ್ತು ನಿಮ್ಮ ವರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕು.
- ಇದಾದ ನಂತರದಲ್ಲಿ ಅಲ್ಲಿ ನೀವು, ಅಲ್ಲಿ ನಿಮ್ಮ ವಿಳಾಸದ ಪುರಾವೆ ಹಾಗೂ ಗುರುತಿನ ಚೀಟಿಯ ಪುರಾವೆಯೊಂದಿಗೆ ನಿಮ್ಮ ಮೊಬೈಲ್ ನಂಬರನ್ನು ನಮೂದಿಸಬೇಕಾಗುತ್ತದೆ. ನೀವು ಅಂತಿಮವಾಗಿ, ಅಲ್ಲಿ ಕೇಳಿದ ಎಲ್ಲಾ ಮಾಹಿತಿಗಳನ್ನು ನಮೂದಿಸಿದ ನಂತರ ನಿಮ್ಮ ಅರ್ಜಿಯನ್ನು ನೀವು ಸಲ್ಲಿಸಿದ ನಂತರ ಈ ಯೋಜನೆಗೆ ನಿಮ್ಮ ಅರ್ಜಿಯ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ. ನೀವು ಇನ್ನೂ ಹೆಚ್ಚಿನ ಮಾಹಿತಿಗೆ ಗ್ರಾಮೀಣ ಪ್ರದೇಶದಲ್ಲಿ ಇರುವ ಆಯಾ ಎಲ್ಲಾ ಗ್ರಾಮದ ಅಂಗನವಾಡಿಗಳಲ್ಲಿ ಈ ಯೋಜನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನೂ ಪಡೆಯಬಹುದು.
ಈ ಮೇಲಿನ ಲೇಖನವು ನಿಮಗೆ ಉತ್ತಮ ಮಾಹಿತಿಯನ್ನು ನೀಡಿದ್ದರೆ, ಈ ಲೇಖನವನ್ನೂ ನಿಮ್ಮ ಕುಟುಂಬ ಸದಸ್ಯರಿಗೂ ಮತ್ತು ನಿಮ್ಮ ಸ್ನೇಹಿತರಿಗೂ ಸಹ ತಪ್ಪದೆ ಶೇರ್ ಮಾಡಿ. ಕೊನೆಯವರೆಗೂ ಸಂಪೂರ್ಣವಾಗಿ ಓದಿದ್ದಕ್ಕೆ ನಿಮಗೆಲ್ಲರಿಗೂ. ಧನ್ಯವಾದಗಳು
ಇತರೆ ವಿಷಯಗಳು:
LPG ಗ್ಯಾಸ್ ಸಿಲಿಂಡರ್ ಬಳಸುವ ಗ್ರಾಹಕರಿಗೆ ಸಿಹಿ ಸುದ್ದಿ.!! LPG ಗ್ಯಾಸ್ ಸಿಲಿಂಡರ್ ದರದಲ್ಲಿ 300 ರೂ. ಇಳಿಕೆ.!!