ನಮ್ಮ ಕರ್ನಾಟಕ ರಾಜ್ಯದಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ಖಾಲಿ ಇರುವ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಈ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಆಸಕ್ತಿ ಮತ್ತು ಅರ್ಹ ಇರುವ ಎಲ್ಲಾ ಅಭ್ಯರ್ಥಿಗಳಿಗೆ ಆನೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. SSLC ಹಾಗೂ PUC ಮುಗಿಸಿದ ಎಲ್ಲಾ ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ ತಮ್ಮ ಅರ್ಜಿಯನ್ನ ಸಲ್ಲಿಸಬಹುದು. ಈ ಹುದ್ದೆಯ ಕುರಿತಾಗಿ ಪೂರ್ತಿ ಮಾಹಿತಿಯನ್ನು ಈ ಲೇಖನದಲ್ಲಿ ಕೆಳಗೆ ಕೊಡಲಾಗಿದೆ ಎಲ್ಲರೂ ತಪ್ಪದೆ ಸಂಪುರ್ಣವಾಗಿ ಓದಿರಿ.
ಇದನ್ನೂ ಓದಿ: 73,500 ರೂ. ವಿದ್ಯಾರ್ಥಿವೇತನ 10th Pass ಆದ ವಿದ್ಯಾರ್ಥಿಗಳು ಕೂಡಲೆ ಅರ್ಜಿ ಸಲ್ಲಿಸಿ.!! Kotak Junior Scholarship.!!
ಅಂಗನವಾಡಿ ಟೀಚರ್ ಹಾಗೂ ಸಹಾಯಕಿಯರ ಹುದ್ದೆಯ ವಿವರ:
ಪ್ರಸ್ತುತವಾಗಿ ಬೆಳಗಾವಿ ಜಿಲ್ಲೆಯ (ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿ) ಯ ಅಡಿಯಲ್ಲಿ ಈಗ ಖಾಲಿ ಇರುವ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳಿಗೆ ಆಸಕ್ತಿ ಮತ್ತು ಅರ್ಹ ಇರುವ ಎಲ್ಲಾ ಮಹಿಳಾ ಅಭ್ಯರ್ಥಿಗಳಿಗೆ ಆನೈನ್ ನ ಮೂಲಕ ಈ ಎಲ್ಲ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹೌದು ಸ್ನೇಹಿತರೇ, ಬೆಳಗಾವಿಯ ಗ್ರಾಮೀಣ ವ್ಯಾಪ್ತಿಯಲ್ಲಿ (7) ಅಂಗನವಾಡಿ ಕಾರ್ಯಕರ್ತೆಯರು ಹಾಗೂ (26) ಅಂಗನವಾಡಿಯ ಸಹಾಯಕಿಯರ ಹುದ್ದೆಗಳು ಈಗ ಖಾಲಿ ಇದೆ. ಎಲ್ಲಾ ಅರ್ಹ ಹಾಗೂ ಆಸಕ್ತ ಇರುವ ಎಲ್ಲಾ ಮಹಿಳಾ ಅಭ್ಯರ್ಥಿಗಳು ಕೂಡಲೇ ಈ ಹುದ್ದೆಗಳಿಗೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದು.
ವಿದ್ಯಾರ್ಹತೆಯ ವಿವರಗಳು:
(ಅಂಗನವಾಡಿ ಕಾರ್ಯಕರ್ತೆಯರು) ಹುದ್ದೆಗೆ ತಮ್ಮ ಅರ್ಜಿಯನ್ನ ಸಲ್ಲಿಸಲು ಬಯಸುವ ಅಭ್ಯರ್ಥಿಗಳು PUC ಯನ್ನು ಪೂರ್ಣಗೊಳಿಸಿ ತೇರ್ಗಡೆ ಹೊಂದಿರಬೇಕು. SSLC ಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಭಾಷೆಯಾಗಿ ಅಥವಾ ದ್ವಿತೀಯಲ್ಲಿ ಭಾಷೆಯಾಗಿ ಅಧ್ಯಯನವನ್ನೂ ಅಭ್ಯರ್ಥಿಗಳೂ ಮಾಡಿರಬೇಕು.
(ಅಂಗನವಾಡಿ ಸಹಾಯಕಿ) ಯರ ಹುದ್ದೆಗೆ ತಮ್ಮ ಅರ್ಜಿಯನ್ನ ಸಲ್ಲಿಸಲು ಬಯಸುವ ಅಭ್ಯರ್ಥಿಗಳು SSLC ಅಥವಾ ಯಾವುದಾದರೂ ತತ್ಸಮಾನವಾದ ತರಗತಿಯಲ್ಲಿ ಯನ್ನು ಪೂರ್ಣಗೊಳಿಸಿ ತೇರ್ಗಡೆ ಹೊಂದಿರಬೇಕು. SSLC ಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಭಾಷೆಯಾಗಿ ಅಥವಾ ದ್ವಿತೀಯಲ್ಲಿ ಭಾಷೆಯಾಗಿ ಅಧ್ಯಯನವನ್ನೂ ಅಭ್ಯರ್ಥಿಗಳೂ ಮಾಡಿರಬೇಕು.
ಈ ಹುದ್ದೆಗೆ ಇರಬೇಕಾದ ವಯೋಮಿತಿಯ ವಿವರಗಳು:
ಈ ಎಲ್ಲಾ ಹುದ್ದೆಗಳಿಗೆ ತಮ್ಮ ಅರ್ಜಿಯನ್ನ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿಯೂ ಕನಿಷ್ಠ 19 ವರ್ಷದವರಾಗಿರಬೇಕು ಮತ್ತು ಗರಿಷ್ಟ 35 ವರ್ಷದೊಳಗಿನವರಾಗಿರಬೇಕು ಈ ವಯೋಮಿತಿಯ ಎಲ್ಲಾ ಅರ್ಹ ಮಹಿಳಾ ಅಭ್ಯರ್ಥಿಗಳು ಮತ್ತು ಮಹಿಳಾ ಲಿಂಗತ್ವ ಹಾಗೂ ಅಲ್ಪಸಂಖ್ಯಾತ ಅಭ್ಯರ್ಥಿಗಳು ಈ ಹುದ್ದೆಗೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:
- ಅರ್ಜಿ ನಮೂನೆ (ಆನ್ಲೈನ್)
- ಜನ್ಮದಿನಾಂಕ ಇರುವ SSLC ಅಥವಾ PUC ಯ ಅಂಕಪಟ್ಟಿ
- ವಾಸಸ್ಥಳ ದೃಢೀಕರಣ ಪತ್ರ
- ನಿಗದಿತ ವಿದ್ಯಾರ್ಹತೆಯ ಅಂಕಪಟ್ಟಿ
- ಜನನ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಆಧಾರ್ ಕಾರ್ಡ್ ಅಥವಾ (Voter ID)
- ವಿಕಲಚೇತನರು, ವಿಚ್ಚೇದಿತೆಯರು, ವಿಧವೆಯರು, ಲಿಂಗತ್ವ ಅಲ್ಪಸಂಖ್ಯಾತರು, ಯೋಜನಾ ನಿರಾಶ್ರಿತರು ಸಂಬಂಧಿಸಿದ ಪ್ರಮಾಣ ಪತ್ರ
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:
ಬೆಳಗಾವಿ ಗ್ರಾಮೀಣ ವ್ಯಾಪ್ತಿಯಲ್ಲಿ : 08/ಆಗಸ್ಟ್/2024 ಕೊನೆಯ ದಿನಾಂಕ
ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ : 04/ಆಗಸ್ಟ್/2024 ಕೊನೆಯ ದಿನಾಂಕ
ಅರ್ಜಿಯನ್ನು ಸಲ್ಲಿಸುವ ವಿಧಾನ :
ಅಭ್ಯರ್ಥಿಗಳೂ ತಮ್ಮ ಅರ್ಜಿಗಳನ್ನು ಸಲ್ಲಿಸುವ ಮೊದಲು ಸಂಬಂಧಿತ ಇಲಾಖೆಯು ಹೊರಡಿಸಿರುವ ಹುದ್ದೆಯ ಅಧಿಸೂಚನೆಯನ್ನು ಸಂಪುರ್ಣವಾಗಿ ಓದಿಕೊಂಡು ನಂತರ ತಮ್ಮ ಅರ್ಜಿಯನ್ನು ಸಲ್ಲಿಸಬೇಕು.
ಈ ಕೆಳಗೆ ನೀಡಿಲಾದ ನೇರ ಲಿಂಕ್ ನ ಮುಖಾಂತರ ನೀವು ನಿಮ್ಮ ಅರ್ಜಿಎನ್ನು ಸಲ್ಲಿಸಬಹುದಾಗಿದೆ.
ಹುದ್ದೆಯ ಅರ್ಜಿಯ ಲಿಂಕ್ :- https://karnemakaone.kar.nic.in/abcd/
ಈ ಮೇಲೆ ನೀಡಲಾದ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ) ಯ ವೆಬ್ ಸೈಟ್ ನ ಲಿಂಕ್ ಅನ್ನು ಓಪನ್ ಮಾಡಿ ನಂತರ, ಅಭ್ಯರ್ಥಿಗಳೂ ಖಾಲಿ ಹುದ್ದೆಗಳು ಲಭ್ಯವಿರುವ ಜಿಲ್ಲೇ ಮತ್ತು ತಾಲೂಕು, ಅನ್ನು ಆಯ್ಕೆಮಾಡಿ ಅಧಿಸೂಚನೆ ಸಂಖ್ಯೆಯನ್ನ ಹಾಗೂ ಹುದ್ದೆಗಳ ಸಂಖ್ಯೆಯನ್ನ ಆಯ್ಕೆ ಮಾಡಿಕೊಂಡು ನಂತರ ತಮ್ಮ ಆನ್ಲೈನ್ ಅರ್ಜಿಯನ್ನು ತಪ್ಪಿಲ್ಲದೆ ಸರಿಯಾಗಿ ಭರ್ತಿ ಮಾಡಿಕೊಂಡು ಅಲ್ಲಿ ಕೇಳುವ ಅಗತ್ಯ ದಾಖಲೆಗಳನ್ನ ಅಪ್ಲೋಡ್ ಮಾಡಿದ ನಂತರ ತಮ್ಮ ಅಪ್ಲಿಕೇಶನ್ ಅನ್ನು ಸಬ್ಮಿಟ್ ಮಾಡಬೇಕು.
ಇತರೆ ವಿಷಯಗಳು: