ಎಲ್ಲರಿಗೂ ನಮಸ್ಕಾರ, ನಿಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಅನ್ನು ನೀವು ಇನ್ನೂ ಅಳವಡಿಸಿ ಕೊಂಡಿಲ್ಲವಾದರೆ, ಇಲ್ಲಿದೆ ನೋಡಿ ನಿಮಗೆಲ್ಲಾ ಒಂದು ಒಳ್ಳೆಯ ಸುದ್ದಿ, ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ HSRP ನಂಬರ್ ಪ್ಲೇಟ್ ಅನ್ನು ಅಳವಡಿಸುವುದು ಕಡ್ಡಾಯ ಮಾಡಲಾಗಿದೆ. ಜೂನ್ 12 ರಂದು HSRP ನಂಬರ್ ಪ್ಲೇಟ್ ಅಳವಡಿಸಲು ಕಡೆಯ ದಿನವಾಗಿತ್ತು, ಆದರೆ ಇದೀಗ ವಾಹನ ಮಾಲೀಕರಿಗೆ, ವಾಹನ ಸವಾರರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ವಾಹನ ಚಾಲಕರಿಗೆ ಎಷ್ಟೇ ಕಟ್ಟುನಿಟ್ಟಾದ ನಿಯಮಗಳನ್ನು ಸರಕಾರವು ತಂದರೂ ಕೂಡ ವಾಹನಗಳ ಅಪಘಾತದ ಸಂಖ್ಯೆಯು ತುಂಬಾನೆ ಹೆಚ್ಚಾಗುತ್ತಿದೆ. ಅದರ ಜೊತೆಗೆ ವಾಹನಗಳ ಸವಾರರು ಕೂಡ ತುಂಬಾ ನಿಯಮಗಳನ್ನು ಉಲ್ಲಂಘನೆ ಕೂಡ ಮಾಡುತ್ತಿದ್ದಾರೆ. ಇದಕ್ಕೆ ಸರಕಾರವು ಟ್ರಾಫಿಕ್ ನಿಯಮವನ್ನು ಸಹ ಬಿಗಿಗೊಳಿಸಿದ್ದು ಎಲ್ಲಾ ವಾಹನ ಚಾಲಕರಿಗೆ ಸೂಚನೆಯನ್ನು ನೀಡುತ್ತಲೇ ಬಂದಿದೆ. ಅದೇ ರೀತಿ ವಾಹನಗಳಿಗೆ ಎಚ್.ಎಸ್.ಅರ್.ಪಿ ನಂಬರ್ ಪ್ಲೇಟ್ ಸಹ ಸರ್ಕಾರವು ಕಡ್ಡಾಯಗೊಳಿಸಿದೆ. HSRP ನಂಬರ್ ಪ್ಲೇಟ್ ಅಳವಡಿಸಲು Last Date ವಿಸ್ತರಣೆಯ ಈ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗಡೆ ನೀಡಿಲಾಗಿದೆ.
HSRP ನಂಬರ್ ಪ್ಲೇಟ್ ಅಳವಡಿಸಲು Last Date ವಿಸ್ತರಣೆ?
HSRP ನಂಬರ್ ಪ್ಲೇಟ್ ಅನ್ನು ಇನ್ನೂ ವಾಹನ ಸವಾರರು ಯಾರು ಇನ್ನೂ ತಮ್ಮ ವಾಹನಗಳಿಗೆ ಅಳವಡಿಸಿಲ್ಲವೋ ಅಂತಹ ವಾಹನ ಚಾಲಕರಿಗೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳಲು ನೀಡಿದ್ದ ಗಡುವು ದಿನಾಂಕವನ್ನು ವಿಸ್ತರಿಸಲಾಗಿದೆ. ಹೆಚ್.ಎಸ್.ಆರ್.ಪಿ HSRP ನಂಬರ್ ಪ್ಲೇಟ್ ಅನ್ನು ಅಳವಡಿಸುವುದಕ್ಕೆ (August) ಅಥವಾ (September) ತಿಂಗಳ ವರೆಗೆ ಗಡುವು ವಿಸ್ತರಿಸಲು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಬುಧವಾರ ದಂದು ಅನುಮತಿ ನೀಡಿದೆ.
ಬಿಎನ್ಡಿ (BNDA) ಎನರ್ಜಿ ಲಿಮಿಟೆಡ್ ಹಾಗೂ ಮತ್ತಿತರರು ಹೈಕೋರ್ಟ್ ಗೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಲು ಕಾಲಾವಕಾಶವನ್ನು ವಿಸ್ತರಿಸುವಂತೆ ಕೋರಿ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿಗಳಾದ (ಎನ್.ವಿ ಅಂಜಾರಿಯಾ) ಮತ್ತು ನ್ಯಾಯಮೂರ್ತಿ (ಕೆ.ವಿ ಅರವಿಂದ) ಅವರನ್ನು ಒಳಗೊಂಡ ನ್ಯಾಯಪೀಠವು ವಿಚಾರಣೆಯನ್ನು ನಡೆಸಿತು.
ಕರ್ಣಾಟಕ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವಕೇಟ್ ಜನರಲ್ (ವಿಕ್ರಮ್ ಹುಯಿಲಗೋಳ) ಅವರು “HSRP ಅಳವಡಿಕೆಗೆ ನೀಡಲಾಗಿರುವ ಗಡುವನ್ನು ಕರ್ನಾಟಕ ಸರ್ಕಾರ ಆಗಸ್ಟ್ ಅಥವಾ ಸೆಪ್ಟೆಂಬರ್ವರೆಗೆ ವಿಸ್ತರಣೆ ಮಾಡಲು ನಿರ್ಧರಿಸಿದೆ. ಆದರೆ, ಕಾರಣಾಂತರಗಳಿಂದ ರಾಜ್ಯ ಸರ್ಕಾರಕ್ಕೆ ಗಡುವು ವಿಸ್ತರಿಸಿ ಅಧಿಸೂಚನೆ ಹೊರಡಿಸಲು ಸಾಧ್ಯವಾಗಿಲ್ಲ.
ಆದ್ದರಿಂದ, ಮೇ 21ರ ಆದೇಶದಲ್ಲಿ ವಿಸ್ತರಿಸಲಾದ ದಿನಾಂಕ ವನ್ನು ಮಾರ್ಪಾಡು ಮಾಡಬೇಕು. ಪೀಠವು ಅನುಮತಿ ನೀಡಿದರೆ ಗಡುವು ವಿಸ್ತರಿಸಿ ಒಂದು ವಾರದ ಒಳಗೆ ಅಧಿಸೂಚನೆ ಹೊರಡಿಸಲಾಗುವುದು” ಎಂದರು. ವಾದವನ್ನು ಮತ್ತು ಪ್ರತಿವಾದವನ್ನು ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಿತು.
HSRP Number Plate Registration Online:
ಕರ್ಣಾಟ ಸಾರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ http://transport.karnataka.gov.in ಅಥವಾ ಅಧಿಕೃತ ವೆಬ್ಸೈಟ್ www.siam.in ಗೆ ಭೇಟಿ ನೀಡಿ ನಿಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಗಾಳನ್ನು ಅಳವಡಿಸಿಕೊಳ್ಳಲು ಆನ್ಲೈನ್ ಮೂಲಕವೇ ನೋಂದಣಿ ಮಾಡಿಕೊಳ್ಳಬಹುದು.
ವಾಹನ ಚಾಲಕರು ನಿಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟಗಳನ್ನು ಸಾರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ ಗಳಿಂದ ಮಾತ್ರವೇ ಬುಕಿಂಗ್ ಮಾಡಿಕೊಳ್ಳಿ. ನಕಲಿ ವೆಬ್ಸೈಟ್ ಗಳಿಂದ ಹಾಗೂ ಬೇರೆ ಲಿಂಕ್ಗಳ ಮೂಲಕ ಬುಕಿಂಗ್ ಅನ್ನು ಮಾಡಿಕೊಂಡು ಯಾರು ಕೂಡ ಮೋಸ ಹೊಗಬೇಡಿ.
ಈ ಲೇಖನವು ನಿಮಗೆ ಇಷ್ಟವಾಗಿದಲ್ಲಿ ನಿಮ್ಮ ಕುಟುಂದವರಿಗೂ ಮತ್ತು ನಿಮ್ಮ ಸ್ನೇಹಿತರಿಗೂ ಹಾಗೂ ಅಗತ್ಯವಿರುವವರಿಗೆ ತಪ್ಪದೇ ಶೇರ್ ಮಾಡಿ.