HSRP Number Plate New Update: HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಲು ಇಂದೇ ಕೊನೆಯ ದಿನ ಇರುವಾಗಲೇ ಬಂತು ಹೊಸ ಆದೇಶ.!

HSRP Number Plate Installation New Order : ಕರ್ನಾಟಕದ ಸಮಸ್ತ ಜನರಿಗೆ ನಮಸ್ಕಾರ, ಈ ಲೇಖನದಲ್ಲಿ ನಿಮಗೆ ತಿಳಿಸುವ ವಿಷಯ ವೇನೆಂದರೆ HSRP ನಂಬರ್ ಪ್ಲೇಟ್ ನ ಅಳವಡಿಕೆಗೆ ಇಂದು ಕೊನೆಯ ದಿನ ಇರುವಾಗಲೇ ಬಂತು ಒಂದು ಹೊಸ ಆದೇಶ, ಯಾವುದು ಆ ಹೊಸ ಆದೇಶ ಎಂದು ಈ ಲೇಖನದಲ್ಲಿ ನಿಮಗೆಯೆಲ್ಲರಿಗೂ ಸಂಪೂರ್ಣವಾದ ಮಾಹಿತಿಯನ್ನು ಕೆಳಗೆ ತಿಳಿಸಿದ್ದೇವೆ ಈ ಲೇಖನವನ್ನು ಕೊನೆಯವರೆಗೂ ತಪ್ಪದೇ ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ.

ಇಂದು ವಾಹನಗಳ ಸಂಖ್ಯೆಯಂತು ದಿನದಿಂದ ದಿನಕ್ಕೆ ಹೇರಳವಾಗಿ ತುಂಬಾನೆ ಹೆಚ್ಚಳವಾಗುತ್ತಲಿದೆ. ವಾಹನ ಸವಾರರಿಗೆ ಎಷ್ಟೇ ಕಟ್ಟುನಿಟ್ಟಾದ ನಿಯಮವನ್ನು ಸರಕಾರವು ಜಾರಿಗೆ ತಂದರೂ ಕೂಡ ಇಂದು ವಾಹನಗಳ ಅಪಘಾತದ ಸಂಖ್ಯೆಯು ಕೂಡ ತುಂಬಾನೆ ಹೆಚ್ಚಾಗಿದೆ. ಅದರ ಜೊತೆ ಹೆಚ್ಚಿನ ವಾಹನಗಳ ಸವಾರರು ಕೂಡ ನಿಯಮ ಉಲ್ಲಂಘನೆಯನ್ನು ಕೂಡ ತುಂಬಾ ಮಾಡುತ್ತಿದ್ದಾರೆ. ಇದಕ್ಕೆ ಸರಕಾರವು ಟ್ರಾಫಿಕ್ ನಿಯಮ ಸಹ ಬಿಗಿಗೊಳಿಸಿದ್ದು ಎಲ್ಲಾ ವಾಹನ ಸವಾರರಿಗೆ ಎಲ್ಲಾ ರೀತಿಯ ಸೂಚನೆಯನ್ನು ನೀಡುತ್ತಲೇ ಬಂದಿದೆ. ಅದೇ ರೀತಿ ವಾಹನಗಳಿಗೆ (HSRP) ಎಚ್.ಎಸ್.ಅರ್.ಪಿ ನಂಬರ್ ಪ್ಲೇಟ್ ಸಹ ಕಡ್ಡಾಯವಾಗಿದ್ದು ಈ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗಡೆ ನೀಡಿಲಾಗಿದೆ.

HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ | HSRP Number Plate Installation New Order:

1/ಏಪ್ರಿಲ್/2023 ರ ಮೊದಲು ನೋಂದಾಯಿಸಲಾದ ವಾಹನಗಳಿಗೆ (HSRP Number Plate) ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಗಳು ಕಡ್ಡಾಯವಾಗಿ ಅಳವಡಿಸಲೇಬೇಕು ಎಂದು ಸಾರಿಗೆ ಸಂಸ್ಥೆಯು ಕೂಡ ತಿಳಿಸಿದೆ. ಅತೀ ಸುರಕ್ಷಿತವಾದ ನೋಂದಣಿ ಫಲಕ (Number Plate) ಅಳವಡಿಸಲು ಈಗಾಗಲೇ ಸಾರಿಗೆ ಸಂಸ್ಥೆಯು ಹಲವು ಭಾರಿ ಅವಕಾಶವನ್ನು ಕೂಡ ಎಲ್ಲರಿಗೂ ನೀಡಿದೆ.

ಇದೀಗ ಸಾರಿಗೆ ಸಂಸ್ಥೆಯು ನೀಡಿದ ಸಮಯಕ್ಕೆ ಇವತ್ತು ಕೊನೆಯ ದಿನ ಆಗಿದ್ದು ಇಂದು ಈ ಅವಧಿ ಮುಗಿಯಲಿದೆ. ಹೈಕೋರ್ಟ್ ನ ಆದೇಶದ ಅನ್ವಯ 12/ಜೂನ್/24 ರ ವರೆಗೆ ಅವಕಾಶವಿತ್ತು. ಈ ಒಳಗೆ ಎಲ್ಲಾ ವಾಹನಗಳು ಕೂಡ ಹೊಸ ನೋಂದಣಿ ಫಲಕವನ್ನು ಅಳವಡಿಸಿಕೊಳ್ಳುವಂತೆ ಸಾರಿಗೆ ಸಂಸ್ಥೆಯು ಈ ಮಾಹಿತಿ ನೀಡಿತ್ತು.

ಜೂನ್ 15 ರಂದು ಸಚಿವ ಸಂಪುಟದಲ್ಲಿ ಯಾವ ನಿರ್ಧಾರವನ್ನು ಕೈಗೊಳ್ಳುತ್ತಾರೋ ಎಂದು ಕಾದು ನೋಡಬೇಕಾಗಿದೆ.

HSRP ನಂಬರ್ ಪ್ಲೇಟ್ ಈ ವಾಹನಗಳಿಗೆ ಕಡ್ಡಾಯ | HSRP Number Plate Mandatory For Old Vehicle’s:

2019 ಏಪ್ರಿಲ್ ತಿಂಗಳ ಕ್ಕಿಂತ ಮೊದಲು ನೋಂದಣಿಯನ್ನು ಮಾಡಿಸಿಕೊಂಡದಂತಹ ದ್ವಿಚಕ್ರ ವಾಹನಗಳು ಹಾಗೂ ತ್ರಿಚಕ್ರ ವಾಹನಗಳು ಮತ್ತು ಮಧ್ಯಮ ಹಾಗೂ ಭಾರಿ ವಾಣಿಜ್ಯ ವಾಹನಗಳು ಮತ್ತು ಟ್ರ್ಯಾಕ್ಟರ್ ಗಳು ಮತ್ತು ಪ್ರಯಾಣಿಕರ ಕಾರು ಸೇರಿ ಎಲ್ಲಾ ಹಳೆಯ ವಾಹನಗಳಿಗೆ ಈ HSRP ನಂಬರ್ ಪ್ಲೇಟ್ ಗಳ ಅಳವಡಿಕೆ ಕಡ್ಡಾಯವಾಗಿದೆ. ಈಗಾಗಲೇ ಈ ಅವಧಿಯು ಮುಗಿದರೂ HSRP ಹೆಚ್​ಎಸ್​ಆರ್​​ಪಿ ನಂಬರ್ ಪ್ಲೇಟ್ (karnataka hsrp number plate) ಅಳವಡಿಸಿಕೊಳ್ಳದಿದ್ದವರಿಗೆ ದಂಡವನ್ನು ವಿಧಿಸಲಾಗುತ್ತದೆ ಎಂದು ಸಾರಿಗೆ ಸಂಸ್ಥೆಯು ಈಗಾಗಲೇ ಮಾಹಿತಿಯನ್ನು ಕೂಡ ನೀಡಿದೆ ಹಾಗೂ (HSRP) ಎಚ್ಎಸ್ಆರ್ಪಿ ಅಳವಡಿಸದವರಿಗೆ ಮೊದಲ ಬಾರಿಗೆ ₹500 ರೂಪಾಯಿಗಳ ದಂಡವನ್ನು ವಿಧಿಸಲಾಗುವುದು ಮತ್ತು ನಂತರವೂ ಅವರು (HSRP) ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸದಿದ್ದರೆ, ಅಂತಹ ವಾಹನ ಚಾಲಕರಿಗೆ ₹1,000 ರೂಪಾಯಿಗಳ ದಂಡವನ್ನು ವಿಧಿಸಲಾಗುವುದು.

HSRP Number Plate New Update

ನಕಲಿ ನಂಬರ್ ಪ್ಲೇಟ್ ಅನ್ನು ಯಾವುದೇ ಕಾರಣಕ್ಕೂ ಅಳವಡಿಕೆ ಮಾಡಬೇಡಿ | Don’t Use Duplicate Number Plate:


ಎಲ್ಲಾ ವಾಹನ ಸವಾರರು ಸರಕಾರದ ಈ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ https://transport.karnataka.gov.in ಅಥವಾ www.siam.in ಮೂಲಕ ಮಾತ್ರವೇ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಳ್ಳಬೇಕು (HSRP Number Plate ಬುಕ್ಕಿಂಗ್). ಯಾವುದೇ ಬೇರೆ ತೆರೆದ ಮಾರುಕಟ್ಟೆಯಲ್ಲಿನ ನಕಲಿಯಾದ ಹಾಲೋಗ್ರಾಮ್ ಆನು ಕೆತ್ತಲಾದತ ಅಥವಾ ಕೆತ್ತಿದಂತಹ ಅನುಕರಣೆಯುಳ್ಳ HSRP ನಂಬರ್ ಪ್ಲೇಟ್ಗಳನ್ನು ವಾಹನಗಳಿಗೆ ಅಳವಡಿಸುವಂತಿಲ್ಲ.

ಸಾರ್ವಜನಿಕರು ಮತ್ತು ವಾಹನ ಚಾಲಕರು ಆನ್ ಲೈನ್ ನ ಮೂಲಕವೆ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ಗಳನ್ನು ಪಡೆದುಕೊಳ್ಳಲು ಸಾರಿಗೆ ಇಲಾಖೆಯು ಸೂಚಿಸಿದೆ. ಸಾರ್ವಜನಿಕರು ಅಥವಾ ವಾಹನ ಚಾಲಕರಿಗೆ ಏನಾದರು ತೊಂದರೆಗಳಾದಲ್ಲಿ ಸಾರಿಗೆ ಇಲಾಖೆಯು ದೂರವಾಣಿ ಸಂಖ್ಯೆಯನ್ನು ನೀಡಿದೆ ಮೊದಲ ದೂರವಾಣಿ ಸಂಖ್ಯೆ 94498 63429 / ಎರಡನೇ ದೂರವಾಣಿ ಸಂಖ್ಯೆ 94498 63426 ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಕೊಂಡು ಎಲ್ಲಾ ಮಾಹಿತಿಯನ್ನು ಪಡೆಯಬಹುದಾಗಿದೆ.

ನಿಮ್ಮ ವಾಹನಗಳಿಗೆ ಎಚ್.ಎಸ್.ಆರ್.ಪಿ ನಂಬರ್ ಪ್ಲೇಟಗಳನ್ನು ಅಧಿಕೃತ ವೆಬ್ಸೈಟ್ ಗಳಿಂದ ಮಾತ್ರವೇ ಬುಕಿಂಗ್ ಮಾಡಿ. ನಕಲಿ ಕ್ಯೂಆರ್ ಕೋಡ್ ಇರುವ ಹಾಗೂ ಬೇರೆ ಲಿಂಕ್ಗಳ ಮೂಲಕ ಬುಕಿಂಗ್ ಅನ್ನು ಮಾಡಿ ಯಾರು ಕೂಡ ಮೋಸ ಹೊಗಬೇಡಿ.

ಈ ಲೇಖನವು ನಿಮಗೆ ಇಷ್ಟವಾದಲ್ಲಿ ನಿಮ್ಮ ಕುಟುಂದವರಿಗೂ ಮತ್ತು ನಿಮ್ಮ ಸ್ನೇಹಿತರಿಗೂ ತಪ್ಪದೇ ಶೇರ್ ಮಾಡಿ.

WhatsApp Group Join Now
Telegram Group Join Now

Leave a Comment

error: Don't Copy Bro !!