SSLC Exam 2 Result: ನಮಸ್ಕಾರ ಸ್ನೇಹಿತರೇ, ಇಂದಿನ ಈ ಲೇಖನಕ್ಕೆ ನಿಮಗೆಲ್ಲರಿಗೂ ತಿಳಿಸಲು ಬಯಸುವ ವಿಷಯ ಏನೆಂದರೆ, (ಕೆಎಸ್ಇಎಬಿ) KSEAB (ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಕರ್ನಾಟಕ) ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆ 2 ರ ಫಲಿತಾಂಶ 2024 ಅನ್ನು ಅತೀ ಶೀಘ್ರದಲ್ಲೇ ಮಂಡಳಿಯು ತನ್ನ ಅಧಿಕೃತವಾದ ವೆಬ್ಸೈಟ್ನಲ್ಲಿ ಫಲಿತಾಂಶದ ಲಿಂಕ್ ಅನ್ನು ಪ್ರಕಟಿಸಲು ಸಿದ್ಧವಾಗಿದೆ. (SSLC – Secondary School Leaving Certificate) 10ನೇ ತರಗತಿಯ ಪೂರಕ ಪರೀಕ್ಷೆ 2 ಕ್ಕೆ ಹಾಜರಾಗಿ ಪರೀಕ್ಷೆ ಬರೆದಿರುವ ಎಲ್ಲಾ ವಿದ್ಯಾರ್ಥಿಗಳು ತಮ್ಮ (10ನೇ ತರಗತಿಯ ಪೂರಕ ಪರೀಕ್ಷೆ 2) ರ ಫಲಿತಾಂಶಗಳನ್ನು ಮಂಡಳಿಯ ಅಧಿಕೃತವಾದ ವೆಬ್ಸೈಟ್ ನಲ್ಲಿ ಈ ಜುಲೈ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಲಿಂಕ್ ಅನ್ನು ಬಿಡಬಹುದು ವಿಧ್ಯಾರ್ಥಿಗಳು ತಮ್ಮ ಫಲಿತಾಂಶ ನೋಡಿಕೊಳ್ಳಬಹುದು. ವಿಧ್ಯಾರ್ಥಿಗಳು ಯಾವ ರೀತಿಯಾಗಿ ತಮ್ಮ ಫಲಿತಾಂಶವನ್ನು ನೋಡಬಹುದು ಎಂಬುವುದನ್ನು ತಿಳಿಯಲು ನೀವು ಈ ಲೇಖನವನ್ನು ಸರಿಯಾಗಿ ಕೊನೆವರೆಗೂ ಓದಿರಿ.
ಈ ಕ್ರಮವು (ಕೆಎಸ್ಇಎಬಿ) KSEAB ಮಂಡಳಿಯ 2024 ರ ಹೊಸ ಶಿಕ್ಷಣದ ನೀತಿಯ ಭಾಗವಾಗಿ ಬರುತ್ತದೆ. SSLC ವಿದ್ಯಾರ್ಥಿಗಳ ಒತ್ತಡವನ್ನು ಕಡಿಮೆ ಮಾಡಲೆಂದು ಈ ಪೂರಕ ಪರೀಕ್ಷೆಗಳನ್ನು ಪರೀಕ್ಷೆ 2 ಈ ಬಾರಿಯಿಂದ ಮರುನಾಮಕರಣ ಮಾಡಲಾಗಿದೆ. (ಕರ್ನಾಟಕ SSLC ಪರೀಕ್ಷೆ 2 ಫಲಿತಾಂಶ 2024) ಅನ್ನು ವಿಧ್ಯಾರ್ಥಿಗಳು ಡೌನ್ಲೋಡ್ ಮಾಡಿ ನೋಡಲು, SSLC ವಿದ್ಯಾರ್ಥಿಗಳಿಗೆ ಅವರ ಲಾಗಿನ್ ರುಜುವಾತುಗಳ ಅಗತ್ಯವಿದೆ.
ನಿಮ್ಮ ಫಲಿತಾಂಶವು ಪರಿಷ್ಕೃತ ಅಂಕಗಳನ್ನು ಸೇರಿ ಮತ್ತು ಇತರ ಎಲ್ಲಾ ಸಂಬಂಧಿತ ವಿವರಗಳೊಂದಿಗೆ ನಿಮ್ಮ ಫಲಿತಾಂಶವೂ ಪ್ರದರ್ಶಿಸುತ್ತದೆ. (ಕರ್ನಾಟಕ SSLC ಪೂರಕ ಪರೀಕ್ಷೆ 2 ರ ಫಲಿತಾಂಶ 2024 ಅನ್ನೂ ಡೌನ್ಲೋಡ್ ಮಾಡಿಕೊಂಡು ನೋಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ:
ಹಂತ 1: ಮೊದಲು ನೀವು KSEEB ನ ಅಧಿಕೃತ ವೆಬ್ಸೈಟ್ ಅಂದರೆ – karresults.nic.in ಗೆ ಅಥವಾ kseeb.karnataka.gov.in ಗೆ ಭೇಟಿ ನೀಡಿ.
ಹಂತ 2: “ಕರ್ನಾಟಕ SSLC ಪೂರಕ ಪರೀಕ್ಷೆ 2 ಫಲಿತಾಂಶ 2024” ರ ಆಯ್ಕೆಯ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
ಹಂತ 3: ಈಗ ನಿಮ್ಮ ಹಾಲ್ ಟಿಕೆಟ್ ನೋಂದಣಿ ಸಂಖ್ಯೆ (Register Number) ಮತ್ತು ನಿಮ್ಮ ಜನ್ಮ ದಿನಾಂಕವನ್ನು (Date of Birth) ಅನ್ನು ನಮೂದಿಸಿ.
ಹಂತ 4: ನಂತರ “View Your Result” ಮೇಲೆ ಕ್ಲಿಕ್ ಮಾಡಿಕೊಂಡು ನೀವು ನಿಮ್ಮ ಫಲಿತಾಂಶವನ್ನು ವೀಕ್ಷಿಸಬಹುದು.
ಹಂತ 5: ನಿಮ್ಮ(ಅಂಕ ಪಟ್ಟಿ) ಸ್ಕೋರ್ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಂಡು ಮತ್ತು ಅದನ್ನೂ ನಿಮ್ಮ ಭವಿಷ್ಯದ ದೃಷ್ಟಿಯಿಂದ ಉಳಿಸಿಕೊಳ್ಳಿ. ಕರ್ನಾಟಕ ಎಸ್.ಎಸ್. ಎಲ್. ಸಿ ಪೂರಕ ಪರೀಕ್ಷೆ 2 ರ ಫಲಿತಾಂಶ 2024 ಅನ್ನು ಪರಿಶೀಲಿಸಿಕೊಳ್ಳಬಹುದು.
ಅಂತಿಮವಾಗಿ ಕರ್ನಾಟಕ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆ 2 ರ ಉತ್ತರ ಕೀ 2024 ಅನ್ನು ಕಳೆದ ತಿಂಗಳ ಜೂನ್ 21 ರಂದು ಅಧೀಕೃತವಾಗಿ ಬಿಡುಗಡೆ ಮಾಡಲಾಗಿದೆ ಈ ಕೀ ಉತ್ತರವೂ ನಿಮ್ಮ ಪರೀಕ್ಷೆ ಬರೆದಿರುವ ಉತ್ತರಕ್ಕೂ ನೀವು ತಾಳೆ ಹಾಕಿ ನೋಡಿಕೊಳ್ಳಬಹುದು. ಕರ್ನಾಟಕ SSLC ಪೂರಕ ಪರೀಕ್ಷೆ 2 2024 ಅನ್ನು ಜೂನ್ ತಿಂಗಳ 14 ರಿಂದ ಜೂನ್ ತಿಂಗಳ 21 ರವರೆಗೆ ಪೆನ್ & ಪೇಪರ್ ಮೋಡ್ ನಲ್ಲಿ ನಡೆಸಲಾಯಿತು.
ಇತರ ವಿಷಯಗಳು:
Gruhalakshmi Amount: ಗೃಹಲಕ್ಷ್ಮಿ ₹4,000 ಪೆಂಡಿಂಗ್ ಹಣ ಇಂದು ಈ ಜಿಲ್ಲೆಗಳಲ್ಲಿ ಒಟ್ಟಿಗೆ ಬಿಡುಗಡೆಯಾಗಲಿದೆ.!!