Ration & Aadhar Card Link: ರೇಷನ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಕೊಳ್ಳುವ ದಿನಾಂಕವನ್ನು ವಿಸ್ತರಣೆ ಆದೇಶ.!! ಇಲ್ಲಿದೆ ಪೂರ್ತಿ ವಿವರ.!!

Ration & Aadhar Card Link: ರೇಷನ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಕೊಳ್ಳುವ ದಿನಾಂಕವನ್ನು ವಿಸ್ತರಣೆ ಆದೇಶ.!! ಇಲ್ಲಿದೆ ಪೂರ್ತಿ ವಿವರ.!!

WhatsApp Group Join Now
Telegram Group Join Now

Ration & Aadhar Card Link: ನಿಮ್ಮರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಅನ್ನು ನೀವು ಲಿಂಕ್ ಮಾಡಿಕೊಳ್ಳುವ ದಿನಾಂಕವನ್ನು ನಮ್ಮ ರಾಜ್ಯ ಸರ್ಕಾರವು ಇದೀಗ ಮತ್ತೆ ವಿಸ್ತರಣೆ ಮಾಡಿದೆ, ಹೀಗಾಗಿ ರಾಜ್ಯದ ಎಲ್ಲಾ (Ration Card) ಪಡಿತರ ಚೀಟಿ ಅನ್ನು ಹೊಂದಿರುವವರಿಗೆ ನಮ್ಮ ರಾಜ್ಯ ಸರ್ಕಾರವು ಗುಡ್ ನ್ಯೂಸ್ ಅನ್ನು ಕೊಟ್ಟಂತಾಗಿದೆ. ಹೌದು ಸ್ನೇಹಿತರೇ, ಪಡಿತರ ಚೀಟಿ  (Ration Card) ಯ ಜೊತೆಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಜೋಡಣೆ (ಲಿಂಕ್) ಮಾಡಿಕೊಳ್ಳುವ ದಿನಾಂಕವನ್ನು ರಾಜ್ಯ ಸರ್ಕಾರವು ಈ ವರ್ಷದ 30/ಸೆಪ್ಟೆಂಬರ್/2024 ರ ವರೆಗೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಹಾಗಾದರೆ ನಿಮ್ಮ ರೇಷನ್ ಕಾರ್ಡ್ ನ ಜೊತೆಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಹೇಗೆ? ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕೆಳಗೆ ತಿಳಿಸಲಾಗಿದೆ ಪೂರ್ತಿಯಾಗಿ ಓದಿರಿ.

ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಹೇಗೆ.?

ಮೊದಲಿಗೆ ನಮ್ಮ ರಾಜ್ಯದಲ್ಲಿ ಇರುವ ನಾನಾ ಜಿಲ್ಲಾ ಸೇವಾ ಕೇಂದ್ರಗಳಿಗೆ ಮತ್ತು ಮುಂತಾದ ಅನೇಕ ಸೇವಾ ಕೇಂದ್ರಗಳಲ್ಲಿ ಅಂದರೆ ಬೆಂಗಳೂರು ಒನ್ ಮತ್ತು ಗ್ರಾಮ ಒನ್ ಸೇವಾ ಕೇಂದ್ರಗಳಲ್ಲಿ (ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್) ಅನ್ನು ಲಿಂಕ್ ಮಾಡಿಕೊಡಲಾಗುತ್ತದೆ. ಇನ್ನು ನೀವು ಆನ್ ಲೈನ್ ಮೂಲಕವೇ (ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್) ಅನ್ನು ಲಿಂಕ್ ಮಾಡಬಹುದಾಗಿದೆ. ಈ ಕುರಿತು ಪೂರ್ತಿ ವಿವರ ಈ ಕೆಳಗಿನಂತಿದೆ ನೋಡಿ:

Ration & Aadhar Card Link
Ration & Aadhar Card Link

ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಅನ್ನು (ಕರ್ನಾಟಕ ಆಹಾರ ಇಲಾಖೆ) ಯ ವೆಬ್ ಸೈಟ್ ನಲ್ಲಿ ಕೂಡ ಲಿಂಕ್ ಮಾಡಲು ಅವಕಾಶವಿದೆ:

  • ಹಂತ 1 : ಮೊದಲು ನೀವು (ಆಹಾರ ಇಲಾಖೆಯ) ವೆಬ್ ಸೈಟ್ ಗೆ ಭೇಟಿ ನೀಡಿ ಲಿಂಕ್ ಇಲ್ಲಿದೆ :- https://ahara.kar.nic.in/Home/EServices
  • ಹಂತ 2 : ನಂತರ (ಇ – ಸೇವೆಗಳ) ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಹಂತ 3 : ಆನಂತರ ಅಲ್ಲಿ ನಿಮಗೆ ಯುಐಡಿ (UID) ಲಿಂಕ್ ಮಾಡಿ ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
  • ಹಂತ 4 : ಅಲ್ಲಿ ಒಂದು ಹೊಸ ಪುಟವು ತೆರೆದುಕೊಳ್ಳುತ್ತದೆ ಈಗ ಅಲ್ಲಿ ನೀವು ನಿಮ್ಮ ಜಿಲ್ಲೆಯ ಹೆಸರನ್ನು ಆಯ್ಕೆ ಮಾಡಿಕೊಂಡು ನಂತರ (UID linking for RC members) ಅನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ (GO) ಎಂಬ Button ಅನ್ನು ಕ್ಲಿಕ್ ಮಾಡಿದ ಕೂಡಲೆ ಇನ್ನೊಂದು ಹೊಸ ವೆಬ್ ಪುಟವೂ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ.
  • ಹಂತ 5 : ಈಗ ಅಲ್ಲಿ ನೀಡಲಾಗಿರುವ ನಿಗದಿತ ಜಾಗದಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ (GO) ಬಟನ್ ನ ಮೇಲೆ ಕ್ಲಿಕ್ ಮಾಡಿ.
  • ಹಂತ 6 : ನಂತರ ನಿಮ್ಮ ಮೊಬೈಲ್ ಗೆ ಒಟಿಪಿ (OTP) ಒಂದು ಬರುತ್ತದೆ. ಆ OTP ಅನ್ನು ಅಲ್ಲಿ ನಮೂದಿಸಿ ನಂತರ ಅಲ್ಲೇ ನೀಡಲಾಗಿರುವ (GO) ಬಟನ್ ಮೇಲೆ ಒತ್ತಿರಿ.
  • ಹಂತ 7 : ಆನಂತರ ನೀವು ಅಲ್ಲಿ ಓಪನ್ ಆಗುವ ಮತ್ತೊಂದು ವೆಬ್ ಪುಟದಲ್ಲಿ ನಿಮ್ಮ (Ration Card Number) ಪಡಿತರ ಚೀಟಿಯ ಸಂಖ್ಯೆಯನ್ನು ಅಲ್ಲಿ ನಮೂದಿಸಲು ನಿಮಗೆ ಕೇಳಲಾಗುತ್ತದೆ.
  • ಹಂತ 8 : ಈಗ ಅಲ್ಲಿ ನಿಮಗೆ ನಿಮ್ಮ (RC Number Enter) ಎಂಬ ಚೌಕದೊಳಗೆ ನಿಮ್ಮ (Ration Card Number) ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು.
  • ಹಂತ 9 : ನಂತರ ಅಲ್ಲಿ ಇರುವ (GO) ಬಟನ್ ಅನ್ನು ಒತ್ತಿದರೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವ ನಿಮ್ಮ ಕುಟುಂಬದ ಮುಖ್ಯಸ್ಥರ ಮೊಬೈಲ್ ನಂಬರ್ ಗೆ ನೋಟಿಫಿಕೇಷನ್ ಬರುತ್ತದೆ.
  • ಹಂತ 10 : ಆ ನೋಟಿಫಿಕೇಶನ್ ನಲ್ಲಿ ನಿಮ್ಮ (ರೇಷನ್ ಕಾರ್ಡ್ ಗೆ ನಿಮ್ಮ ಆಧಾರ್ ಕಾರ್ಡ್) ಅನ್ನು ಲಿಂಕ್ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ನೀವು ಈಗ ಮುಗಿಸಿದ್ದಿರಾ ಎಂದು ತಿಳಿಸಲಾಗಿರುತ್ತದೆ. ನೀವು ಆನ್ಲೈನ್ ನಲ್ಲಿ ಈ ಪ್ರಕ್ರಿಯೆ ಮಾಡಿದರೆ ಸಾಕು ನಿಮ್ಮ ರೇಷನ್ ಕಾರ್ಡ್ ಜೊತೆಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗುತ್ತದೆ.

ಈ ಲೇಖನವು ನಿಮಗೆ ಅರ್ಥಪೂರ್ಣವಾಗಿ ರೇಷನ್ ಕಾರ್ಡ್ ಜೊತೆಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗುವುದರ ಪ್ರತಿಕ್ರಿಯೆಯನ್ನು ತಿಳಿಸಿದ್ದರೆ ಹಾಗೂ ಈ ಲೇಖನವು ನಿಮಗೆ ಉತ್ತಮ ಮಾಹಿತಿಯನ್ನು ನೀಡಿದ್ದರೆ ಈ ಲೇಖನವನ್ನೂ ನಿಮ್ಮ ಸ್ನೇಹಿತರಿಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಶೇರ್ ಮಾಡಿ. ಧನ್ಯವಾದಗಳು

ಇತರೆ ವಿಷಯಗಳು:

Gruhalakshmi Scheme Latest Update: ಗೃಹಲಕ್ಷ್ಮಿ ಯೋಜನೆಯ ಜೂನ್ & ಜುಲೈ ತಿಂಗಳ ಹಣ ಬಿಡುಗಡೆಗೆ ಹೊಸ ಅಪ್ಡೇಟ್.!! ಇಲ್ಲಿದೆ ಪೂರ್ತಿ ವಿವರ.!!

Ration Card Info: ಮೊದಲನೇ ಹಂತದ ಹೊಸ BPL ರೇಷನ್ ಕಾರ್ಡ್ಗಳು ಈ ಜಿಲ್ಲೆಗಳಿಗೆ ಬಿಡುಗಡೆ ಆಗಲಿದೆ ನೋಡಿ.!! ಪೂರ್ತಿ ವಿವರ ಇಲ್ಲಿದೆ.!!

SSLC Exam 2 Result: ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆ 2 ರ ಫಲಿತಾಂಶವು ಈ ದಿನದಂದು ಬಿಡುಗಡೆಯಾಗಲಿದೆ.!! ಇಲ್ಲಿದೆ ಪೂರ್ತಿ ವಿವರ.!!

Leave a Comment