new ration card apply karnataka 2024 date : ಎಲ್ಲರಿಗೂ ನಮಸ್ಕಾರ ಸ್ನೇಹಿತರೇ, ಈ ಲೇಖನದಲ್ಲಿ ತಿಳಿಸುತ್ತಿರುವಂತಹ ಮಾಹಿತಿ ಏನೆಂದರೆ ಹೊಸ ರೇಷನ್ ಕಾರ್ಡಿಗೆ ಯಾವ ನಿಗದಿ ದಿನಾಂಕದಂದು ಅರ್ಜಿ ಆರಂಭವಾಗುತ್ತದೆ ಸರ್ಕಾರದಿಂದ ರೇಷನ್ ಕಾರ್ಡ್ಗೆ ತಿದ್ದುಪಡಿಗೂ ಕೂಡ ಅವಕಾಶ ನೀಡಿದೆ.
ಹೊಸ ರೇಷನ್ ಕಾರ್ಡಿಗೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಎಂಬ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಲೇಖನವನ್ನು ಕೊನೆಯವರೆಗೂ ಓದಿ ಉಪಯುಕ್ತವಾದಂತಹ ಮಾಹಿತಿಯನ್ನು ಪಡೆದುಕೊಳ್ಳಿ.
ಸ್ನೇಹಿತರೇ ಸರ್ಕಾರವು ಈಗಾಗಲೇ ಹೊಸ ರೇಷನ್ ಕಾರ್ಡಿಗೆ ಅರ್ಜಿ ಆರಂಭವನ್ನು ಮಾಡಿದೆ ಆದರೆ ಸರ್ಕಾರವು ಮಾಡಿರುವಂತಹ ನಿಗದಿ ದಿನಾಂಕದ ಮೇರೆಗೆ ಅಭ್ಯರ್ಥಿಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬಹುದು. ಹೊಸ ರೇಷನ್ ಕಾರ್ಡ್ ಗೆ ಯಾರು ಅರ್ಜಿಯನ್ನು ಸಲ್ಲಿಸಿದರು ಅಂತವರಿಗೆ ಮೇ 21ನೇ ತಾರೀಕು ಕಾಡುಗಳ ವಿತರಣೆಯಾಗಿದೆ.
ಅದೇ ರೀತಿಯಾಗಿ ರೇಷನ್ ಕಾರ್ಡ್ ನ ತಿದ್ದುಪಡೆಗೂ ಕೂಡ ಸರ್ಕಾರವು ಅವಕಾಶ ಮಾಡಿಕೊಟ್ಟಿದೆ ಮೇ 21ನೇ ತಾರೀಕು ರೇಷನ್ ಕಾರ್ಡ್ ನ ತಿದ್ದುಪಡೆ ಮಾಡಲು ಅವಕಾಶವನ್ನು ಸರ್ಕಾರವು ನೀಡಿತ್ತು.
ಹಾಗಿದ್ದರೆ ಹೊಸ ರೇಷನ್ ಕಾರ್ಡ್ ಗೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಇದಕ್ಕೆ ಅಗತ್ಯವಾಗಿರುವಂತಹ ದಾಖಲೆಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ರೇಷನ್ ಕಾರ್ಡ್ ನ ಮಹತ್ವ :
ರೇಷನ್ ಕಾರ್ಡ್ ಎಂಬುದು ಪ್ರತಿಯೊಬ್ಬರಿಗೂ ಕೂಡ ಅಗತ್ಯವಾಗಿರುವಂತಹ ದಾಖಲೆ ಏಕೆಂದರೆ ರೇಷನ್ ಕಾರ್ಡ್ ನ ಮುಖಾಂತರ ಜನಗಳಿಗೆ ಹಲವಾರು ಉಪಯೋಗಗಳಿವೆ. ಇದರಿಂದಾಗಿ ಪ್ರತಿಯೊಬ್ಬ ನಾಗರೀಕನಿಗೂ ಕೂಡ ಹೆಚ್ಚಿನದಾಯಕವಾದಂತಹ ಪ್ರಯೋಜನ ಸಿಗುತ್ತದೆ.
ಏನಪ್ಪಾ! ಪ್ರಯೋಜನ ಎಂದರೆ ಸರ್ಕಾರವು ತರುವಂತಹ ಯಾವುದೇ ಯೋಜನೆಗಳ ಪ್ರಯೋಜನವನ್ನು ಪಡೆಯಬಹುದು ಇದರ ಜೊತೆಗೆ ಸರ್ಕಾರವು ತರುವಂತಹ ಯೋಜನೆಗಳಿಗೆ ಅಗತ್ಯವಾಗಿ ರೇಷನ್ ಕಾರ್ಡ್ ಎಂಬ ದಾಖಲೆ ಮುಖ್ಯವಾಗಿರುತ್ತದೆ.
ಸರ್ಕಾರವು ಈಗಾಗಲೇ ಜಾರಿಗೆ ತಂದಿರುವಂತಹ ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಗೆ ರೇಷನ್ ಕಾರ್ಡ್ ಎಂಬುದು ಅತಿ ಮುಖ್ಯವಾದ ದಾಖಲೆಯಾಗಿದೆ ಈ ದಾಖಲೆ ಆಧಾರದ ಮೇಲೆ ಆ ಯೋಜನೆಗಳ ಪ್ರಯೋಜನವನ್ನು ಪಡೆಯಬಹುದಾಗಿದೆ.
ಒಟ್ಟಾರೆ ರೇಷನ್ ಕಾರ್ಡ್ ಎಲ್ಲರಿಗೂ ಕೂಡ ಅಗತ್ಯವಾಗಿರುವಂತಹ ದಾಖಲೆ ಇದರಿಂದಾಗಿ ಉಚಿತವಾದಂತಹ ರೇಷನ್ ಸಿಗುತ್ತದೆ. ಅನ್ನ ಭಾಗ್ಯ ಯೋಜನೆಯ ಮುಖಾಂತರ ಪ್ರತಿಯೊಬ್ಬ ವ್ಯಕ್ತಿಗೂ ಕೂಡ 10 ಕೆಜಿ ಅಕ್ಕಿಯನ್ನು ನೀಡಲು ಸರ್ಕಾರವು ನಿರ್ಧರಿಸಿತು.
ಆದರೆ ಅಕ್ಕಿಯ ಬರ ಇರುವುದರಿಂದ 5 ಕೆಜಿ ಅಕ್ಕಿಯನ್ನು ನೀಡಿ ಮತ್ತು 5 ಕೆಜಿ ಅಕ್ಕಿಯ ಬದಲು ಪ್ರತಿಯೊಬ್ಬ ನಾಗರೀಕರ ಖಾತೆಗೂ ಕೂಡ ಪ್ರತಿ ತಿಂಗಳು ಅಕ್ಕಿಯ ಹಣವನ್ನು ನೀಡುತ್ತಿದೆ ಸರ್ಕಾರ.
ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಹೊಂದಿರಬೇಕಾದಂತಹ ದಾಖಲೆಗಳು !
- ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
- ಜನನ ಪ್ರಮಾಣ ಪತ್ರ (ನಿಮ್ಮ ಮನೆಯಲ್ಲಿ ಆರು ವರ್ಷದ ಚಿಕ್ಕ ಮಕ್ಕಳು ಇದ್ದರೆ ಮಾತ್ರ ಕಡ್ಡಾಯ ಜನನ ಪ್ರಮಾಣ ಪತ್ರ )
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಪಾಸ್ವರ್ಡ್ ಅಳತೆಯ ಭಾವಚಿತ್ರ
- ನಿಮ್ಮ ಮೊಬೈಲ್ ಸಂಖ್ಯೆ (ಆಧಾರ್ ಕಾರ್ಡ್ ನಲ್ಲಿ ಲಿಂಕ್ ಆಗಿರುವಂತಹ ಮೊಬೈಲ್ ಸಂಖ್ಯೆ)
ಈ ಮೇಲೆ ನೀಡಿರುವಂತಹ ಎಲ್ಲಾ ದಾಖಲೆಗಳು ಕೂಡ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಅಗತ್ಯವಾಗಿರುವಂತಹ ದಾಖಲೆಗಳಾಗಿವೆ.
ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಈ ದಿನಾಂಕದಂದು ಸಲ್ಲಿಸಿ !
ಸರ್ಕಾರವು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಎರಡು ವರ್ಷವಾದ ನಂತರ ಜನಗಳಿಗೆ ಅವಕಾಶವನ್ನು ನೀಡಿದೆ, ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಿ.
ಎಂಬುವಂತಹ ಅವಕಾಶವನ್ನು ಎಲ್ಲರಿಗೂ ಕೂಡ ನೀಡಿದೆ.ಸರ್ಕಾರ ಆದರೆ ಯಾವ ದಿನಾಂಕದಂದು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬೇಕು.
ಎಂದರೆ ಜೂನ್ 10ನೇ ತಾರೀಖಿನ ನಂತರ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸುವಂತಹ ಲಿಂಕ್ ಓಪನ್ ಆಗುತ್ತದೆ ಸರ್ಕಾರವು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಈ ದಿನಾಂಕಗಳಲ್ಲಿ ಅವಕಾಶವನ್ನು ಪ್ರಾರಂಭಿಸುತ್ತದೆ.
ಹೊಸ ರೇಷನ್ ಕಾರ್ಡ್ ಗೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು !
ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ನೀವು ಮೇಲೆ ತಿಳಿಸಿದಂತಹ ಎಲ್ಲಾ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಿ ನಿಮ್ಮ ಹತ್ತಿರದ ಗ್ರಾಮ ಒನ್ ಅಥವಾ CSC ಸೆಂಟರ್ಗಳಿಗೆ ಭೇಟಿ ನೀಡಿ ನೀವು ಹೊಸ ಸೆಂಟರ್ ಗಳಿಗೆ ಭೇಟಿ ನೀಡಿ ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬಹುದು.
ನೋಡಿದ್ರಲ್ಲ ಸ್ನೇಹಿತರೆ, ಹೊಸ ರೇಷನ್ ಕಾರ್ಡ್ ಗೆ ಯಾವ ದಿನಾಂಕದಂದು ಸರ್ಕಾರವು ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಿದೆ. ಅಗತ್ಯವಾಗಿರುವಂತಹ ದಾಖಲೆಗಳು ಯಾವುವು ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು, ಎಂಬ ಎಲ್ಲ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇನೆ.
ಇದೇ ರೀತಿಯಾದಂತಹ ಉಪಯುಕ್ತವಾದಂತಹ ಮಾಹಿತಿಗಳ ವಿವರವನ್ನು ಪ್ರತಿನಿತ್ಯವೂ ಕೂಡ ಪಡೆಯಲು ‘ಕರ್ನಾಟಕ ಟ್ರೆಂಡ್ಸ್ ‘ ಮಾಧ್ಯಮಕ್ಕೆ ಭೇಟಿ ನೀಡುವ ಮುಖಾಂತರ ನೀವು ಕೂಡ ಪ್ರತಿನಿತ್ಯ ಹೊಸ ಹೊಸ ಮಾಹಿತಿಗಳ ಅಪ್ಡೇಟ್ ಅನ್ನು ಪಡೆಯಿರಿ.
ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಸ್ನೇಹಿತರೇ, ಮತ್ತೆ ಸಿಗೋಣ ಮುಂದಿನ ಲೇಖನದಲ್ಲಿ.