pradhan mantri ujjwala yojana : ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಈ ದಿನದಂದು ಅರ್ಜಿ ಆರಂಭ ! ಉಚಿತವಾಗಿ ಪಡೆಯಿರಿ ಗ್ಯಾಸ್ ಮತ್ತು ಸ್ಟವ್ .

pradhan mantri ujjwala yojana : ಎಲ್ಲರಿಗೂ ನಮಸ್ಕಾರ ಸ್ನೇಹಿತರೇ, ಈ ಲೇಖನದಲ್ಲಿ ತಿಳಿಸುತ್ತಿರುವಂತಹ ಮಾಹಿತಿ ಏನೆಂದರೆ, ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಈ ದಿನದಂದು ಅರ್ಜಿ ಆರಂಭವಾಗುತ್ತದೆ.ಉಚಿತವಾಗಿ ಗ್ಯಾಸ್ ಅನ್ನು ನೀಡುತ್ತಿದ್ದಂತಹ ಈ ಯೋಜನೆಯ ಮುಖಾಂತರ ಉಚಿತವಾಗಿ ಸ್ಟೌವ್ವನ್ನು ಕೂಡ ನೀಡಲಾಗುತ್ತಿದೆ.

ಮಹಿಳೆಯರಿಗೆ ಡಬಲ್ ಧಮಾಕ ಎಂದು ಹೇಳಬಹುದು ಏಕೆಂದರೆ ಬರಿ ಗ್ಯಾಸ್ ಮಾತ್ರ ನೀಡುತ್ತಿದ್ದರು ಆದರೆ ಈಗ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಗ್ಯಾಸ್ ಮತ್ತು ಸ್ಟವ್ ಅನ್ನು ಕೂಡ ನೀಡಲಾಗುತ್ತಿದೆ.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ಈಗಾಗಲೇ ಮಹಿಳೆಯರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ, ಈ ಯೋಜನೆಯ ಮುಖಾಂತರ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬಹುದು ಆರ್ಥಿಕ ಪರಿಸ್ಥಿತಿಯನ್ನು ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಎದುರಿಸಿ ನಿಲ್ಲಬಹುದು.

ಮಹಿಳೆಯರಿಗಾಗಿ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತರುವ ಮುಖಾಂತರ ಮಹಿಳೆಯರನ್ನು ಪ್ರೋತ್ಸಾಹಿಸಿದೆ ಮಹಿಳೆಯರಿಗಾಗಿ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಕೂಡ ಜಾರಿಗೆ ತಂದಿದೆ ಈ ಯೋಜನೆಯ ಮುಖಾಂತರ ಪ್ರತಿ ತಿಂಗಳು 2000 ನೀಡುತ್ತಿದೆ.

ಸರ್ಕಾರ ಈ ವಿಷಯ ನಿಮಗೆ ಗೊತ್ತಿರಬಹುದು ಈ ರೀತಿಯಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಮುಖಾಂತರ ಮಹಿಳೆಯರನ್ನು ಪ್ರೋತ್ಸಾಹಿಸಿದೆ ಸ್ವಾವಲಂಬಿಗಳಾಗಿ ಬದುಕಲು ಅವಕಾಶವನ್ನು ಕಲ್ಪಿಸಿದೆ.

ಇದರ ಜೊತೆಗೆ ಕೆಲಸವನ್ನು ಮಾಡುತ್ತೇವೆ ಎಂಬಂತಹ ಮಹಿಳೆಯರಿಗೂ ಕೂಡ ಕೆಲಸಕ್ಕೆ ಬೇಕಾಗುವಂತಹ ಹಣವನ್ನು ಒದಗಿಸುವ ಮುಖಾಂತರ ಪ್ರೋತ್ಸಾಹ ನೀಡಿದೆ.

ತಂತ್ರಜ್ಞಾನ ತರಬೇತಿಗಳನ್ನು ನೀವು ಕೂಡ ಪ್ರೋತ್ಸಾಹಿಸಿದೆ ಈಗ ಈ ಒಂದು ಪ್ರಧಾನಮಂತ್ರಿ ಯೋಜನೆಯ ಮುಖಾಂತರ ಮಹಿಳೆಯರು ಅಡುಗೆಯನ್ನು ಸುಲಭವಾಗಿ ಮಾಡಿಕೊಂಡು ತಮ್ಮ ಸಮಯವನ್ನು ಉಳಿಸಿಕೊಂಡು ಮತ್ತೊಂದು ಕೆಲಸಕ್ಕೆ ಅದನ್ನು ಬಳಸುವ ಮುಖಾಂತರ ಪ್ರಯೋಜನವನ್ನು ಈ ಒಂದು ಯೋಜನೆಯ ಮುಖಾಂತರ ಮಾಡಿಕೊಡಲಾಗುತ್ತಿದೆ.

ಏಕೆಂದರೆ ಎಷ್ಟೋ ಜನ ಮಹಿಳೆಯರು ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಾರೆ ಇಂತಹ ಮಹಿಳೆಯರು ಮನೆಗೆ ಬಂದು ಅಡುಗೆ ಏನು ಮಾಡಲು ತುಂಬಾ ಕಷ್ಟವಾಗುತ್ತದೆ ಕಟ್ಟಿಗೆಯ ಮುಖಾಂತರ ಅಡುಗೆ ಮಾಡುತ್ತೇವೆ ಎಂದರೆ ಹೆಚ್ಚಿನ ಸಮಯವು ವ್ಯರ್ಥವಾಗುತ್ತದೆ.

ಇದರಿಂದಾಗಿ ಸರ್ಕಾರವು ಇದನ್ನೆಲ್ಲಾ ಗಮನಿಸಿ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಮುಖಾಂತರ ಮಹಿಳೆಯರಿಗಾಗಿ ಉಚಿತ ಗ್ಯಾಸ್ ಮತ್ತು ಸ್ಟವ್ ಒಲೆಗಳನ್ನು ನೀಡುತ್ತಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ :

ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಮಹಿಳೆಯರಿಗಾಗಿ ಜಾರಿಗೆ ತಂದಿದೆ ಏಕೆಂದರೆ ಮಹಿಳೆಯರಿಗೆ ಅಡುಗೆ ಮಾಡಲು ತುಂಬಾ ಅನುಕೂಲವಾಗುತ್ತದೆ.

ಎನ್ನುವ ಉದ್ದೇಶದಿಂದ ಮಹಿಳೆಯರ ಕಷ್ಟವನ್ನು ನೋಡಿ ಈ ಒಂದು ಪ್ರಧಾನಮಂತ್ರಿ ಉಜ್ವಲ ಯೋಜನೆಯ ಮುಖಾಂತರ ಉಚಿತ ಗ್ಯಾಸ್ ಅನ್ನು ನೀಡಲಾಗುತ್ತದೆ ಜೊತೆಗೆ ಸ್ಟವ್ ಅನ್ನು ಕೂಡ ನೀಡಲಾಗುತ್ತದೆ.

603 ರೂಪಾಯಿಗೆ ಸಿಲಿಂಡರನ್ನು ಖರೀದಿ ಮಾಡಿದರೆ 300 ಸಬ್ಸಿಡಿ ನಿಮಗೆ ಸಿಗುತ್ತದೆ, ವರ್ಷಕ್ಕೆ 12 ಸಿಲೆಂಡರ್ ಗಳನ್ನು ಖರೀದಿ ಮಾಡಬಹುದು ಜೊತೆಗೆ 300 ಸಬ್ಸಿಡಿಯನ್ನು 12 ತಿಂಗಳು ಪಡೆಯಬಹುದು.

ನೀವು ಸಿಲೆಂಡರ್ ಅನ್ನು ಖರೀದಿ ಮಾಡಿದರೆ ಮಾತ್ರ ನಿಮಗೆ ರೂ.300 ಸಬ್ಸಿಡಿಯನ್ನು ಪ್ರತಿ ತಿಂಗಳು ನೀಡಲಾಗುತ್ತದೆ ನೀವೇನಾದರೂ ಖರೀದಿ ಮಾಡಿಲ್ಲ ಎಂದರೆ 300 ಸಬ್ಸಿಡಿಯನ್ನು ನೀಡುವುದಿಲ್ಲ.

ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಹೊಂದಿರಬೇಕಾದಂತಹ ಅರ್ಹತೆಗಳು ಯಾವುವು ?

  • ನಿಮ್ಮ ಬಳಿ ಈಗಾಗಲೇ ಗ್ಯಾಸ್ ಇದ್ದರೆ ನೀವು ಮತ್ತೊಮ್ಮೆ ಗ್ಯಾಸ್ ಅನ್ನು ಪಡೆಯಲು ಅರ್ಜಿ ಸಲ್ಲಿಸುವ ಅವಕಾಶ ಇಲ್ಲ.
  • 18 ವರ್ಷ ಮೇಲ್ಪಟ್ಟವರಾಗಿರಬೇಕು.
  • ಮಹಿಳೆಯರ ಹೆಸರಿನಲ್ಲಿ ಮಾತ್ರ ಈ ಗ್ಯಾಸ್ ಕನೆಕ್ಷನ್ ಅನ್ನು ನೀಡಲಾಗುತ್ತದೆ. ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡನ್ನು ಹೊಂದಿರುವಂತಹ ಅಭ್ಯರ್ಥಿಗಳು ಕೂಡ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
  • ಹಿಂದುಳಿದ ಬಡ ಕುಟುಂಬಗಳು ಮತ್ತು ಬಡತನ ರೇಖೆಗಿಂತ ಕಡಿಮೆ ಇರುವವರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
  • ಮೇಲೆ ತಿಳಿಸಿರುವಂತಹ ಎಲ್ಲಾ ಅರ್ಹತೆಗಳನ್ನು ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿಯನ್ನು ಸಲ್ಲಿಸುವಂತಹ ಅಭ್ಯರ್ಥಿಗಳು ಹೊಂದಿರಬೇಕಾಗುತ್ತದೆ.

ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಈ ರೀತಿ ಅರ್ಜಿ ಸಲ್ಲಿಸಿ !

  1. ಮೊದಲಿಗೆ ನೀವು ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
  2. ಈ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡುವ ಮುಖಾಂತರ ನೀವು ಅರ್ಜಿಯನ್ನು ಸಲ್ಲಿಸಬಹುದು.
  3. ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ, ಅಲ್ಲಿ ಕೇಳುವಂತಹ ಎಲ್ಲ ಮಾಹಿತಿಗಳನ್ನು ಒದಗಿಸಿ ಅಗತ್ಯವಿರುವಂತಹ ದಾಖಲೆಗಳನ್ನು ಅಪ್ಲೋಡ್ ಮಾಡಿ.
  4. ನಿಮಗೆ ಯಾವ ಏಜೆನ್ಸಿಯ ಗ್ಯಾಸ್ ಬೇಕು ಅದನ್ನು ಸೆಲೆಕ್ಟ್ ಮಾಡಿಕೊಂಡು ಸಬ್ಮಿಟ್ ಮಾಡಿ.

ನೋಡಿದ್ರಲ್ಲ ಸ್ನೇಹಿತರೇ, ಯಾವ ರೀತಿಯಾಗಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು ಎಂಬ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇನೆ.

ಇದೇ ರೀತಿಯಾದಂತಹ ಉಪಯುಕ್ತ ಮಾಹಿತಿಗಳನ್ನು ದಿನನಿತ್ಯವೂ ಪಡೆಯಲು ‘ಕರ್ನಾಟಕ ಟ್ರೆಂಡ್ಸ್’ ಮಾಧ್ಯಮಕ್ಕೆ ಭೇಟಿ ನೀಡಿ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಸ್ನೇಹಿತರೇ, ಮತ್ತೆ ಸಿಗೋಣ ಮುಂದಿನ ಲೇಖನದಲ್ಲಿ.

 

Leave a Comment