Gruhalakshmi Scheme: ಗೃಹಲಕ್ಷ್ಮಿ ₹2,000 ಹಣ ಇನ್ಮುಂದೆ ಈ ಪಟ್ಟಿಯಲ್ಲಿ ಹೆಸರಿದ್ದವರಿಗೆ ಮಾತ್ರ ಜಮಾ.! ಈ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಹೀಗೆ ಚೆಕ್ ಮಾಡಿ!
Gruhalakshmi Scheme: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ರಾಜ್ಯದಲ್ಲಿನ ಗೃಹಲಕ್ಷ್ಮಿ ಯೋಜನೆ ಹಣದಿಂದ ಸಾಕಷ್ಟು ಮಹಿಳಾ ಪಲಾನುಭವಿಗಳಿಗೆ ತಮ್ಮ ಮನೆ ಖರ್ಚುಗಳನ್ನು ನಿಭಾಯಿಸಲು ಹಾಗೂ ಸ್ವಂತ ಉದ್ಯಮ ಮಾಡಲು ತುಂಬಾ ಸಹಾಯವಾಗಿದೆ. ಇದೀಗ ಮಹಿಳಾ ಫಲಾನುಭವಿಗಳಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಹಿ ಸುದ್ದಿಯನ್ನು ನೀಡಿದ್ದಾರೆ. ಇದರ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಿದೆ ಓದಿ.
ಹೌದು ಗೃಹಲಕ್ಷ್ಮಿ ಯೋಜನೆ, ಫಲಾನುಭವಿಗಳಿಗೆ ಇದೊಂದು ಮಾಹಿತಿ ಕಹಿ ಸುದ್ದಿಯಾಗಿದೆ, ಯಾಕೆಂದರೆ ನೀವು ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸಿ ಹಣ ಪಡೆಯಬೇಕಾದರೆ ರೇಷನ್ ಕಾರ್ಡ್ ಮುಖ್ಯ ದಾಖಲೆ ಆಗಿದೆ. ಈಗ ರಾಜ್ಯ ಸರ್ಕಾರ ಸುಳ್ಳು ದಾಖಲೆ ನೀಡಿದ ರೇಷನ್ ಕಾರ್ಡ್ ರದ್ದು ಪಕ್ರಿಯೆಯನ್ನು ಪ್ರಾರಂಭಿಸಿದೆ ಹಾಗೂ ರದ್ದಾದ ಪಟ್ಟಿ ಸಹ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೂ ಕೂಡ ಗೃಹಲಕ್ಷ್ಮಿ ಹಣ ಬರುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ.
ರೇಷನ್ ಕಾರ್ಡ್ ರದ್ದಾದ ಪಟ್ಟಿ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಎಂದು ಕೇವಲ ನಿಮ್ಮ ಮೊಬೈಲ್ ನಲ್ಲಿ ನೀವು ಕೂಡ ಚೆಕ್ ಮಾಡಬಹುದು ಯಾವ ರೀತಿಯಾಗಿ ಚೆಕ್ ಮಾಡುವುದು ಎಂಬುದರ ಸಂಪೂರ್ಣ ವಿವರ ಈ ಕೆಳಗಡೆ ನೀಡಿದೆ.
ರೇಷನ್ ಕಾರ್ಡ್ ರದ್ದಾದ ಪಟ್ಟಿ ಲಿಸ್ಟ್ ಚೆಕ್ ಮಾಡುವ ವಿಧಾನ:
ನೀವು ಗೃಹಲಕ್ಷ್ಮಿ ಹಣ ಪಡೆಯಲು ಅರ್ಹರು ಅಥವಾ ಅನರ್ಹರು ಎಂದು ತಿಳಿಯಲು ಈ ಕೆಳಗಡೆ ನೀಡಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.
ನಂತರ ಮೇಲೆ ನೀಡಿರುವ ಮೂರು ಗೆರೆಗಳ ಆಪ್ಷನ್ ಮೇಲೆ ಕ್ಲಿಕ್ ಮಾಡಿ, ಮತ್ತು ಈ ರೇಷನ್ ಕಾರ್ಡ್ ಆಯ್ಕೆ ಮಾಡಿಕೊಂಡು, ನಂತರ ಶೋ ಯುವರ್ ವಿಲೇಜ್ ಲಿಸ್ಟ್ ಆಯ್ಕೆ ಮಾಡಿಕೊಳ್ಳಿ. ಮುಂದಿನ ಹಂತದಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತ್ ಮತ್ತು ನಿಮ್ಮ ಹಳ್ಳಿಯನ್ನು ಆಯ್ಕೆ ಮಾಡಿ Go ಆಪ್ಷನ್ ಮೇಲೆ ಕ್ಲಿಕ್ ಮಾಡಿ.
ನಂತರ ಒಂದು ಪಟ್ಟಿ ಲಿಸ್ಟ ತೆರೆಯುತ್ತದೆ ಅದರಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೂ ಕೂಡ ಗೃಹಲಕ್ಷ್ಮಿ ಯೋಜನೆ ಹಣ ಇನ್ನು ಮುಂದಿನಿಂದ ಬರುವುದಿಲ್ಲ ಎಂದರ್ಥ, ಮತ್ತು ನಿಮ್ಮ ಹೆಸರು ಮುಂದೆ ಯಾವ ಕಾರಣಕ್ಕೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಎಂಬುದರ ಮಾಹಿತಿಯನ್ನು ಸಹ ನೀಡಿರುತ್ತಾರೆ.
ಪಟ್ಟಿ ಚೆಕ್ ಮಾಡುವ ಲಿಂಕ್: https://ahara.kar.nic.in/Home/EServices