gruhalakshmi scheme: ಎಲ್ಲರಿಗೂ ನಮಸ್ಕಾರ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಯಾರೆಲ್ಲ ಇದುವರೆಗೂ ಗೃಹಲಕ್ಷ್ಮಿ ಯೋಜನೆ ಕಡೆಯಿಂದ ಹಣವನ್ನು ಪಡೆಯುತ್ತಿದ್ದೀರೋ ಅಂತವರಿಗೆ ಸರ್ಕಾರದಿಂದ ಕಟ್ಟು ನಿಟ್ಟಿನ ಕ್ರಮ ಕೂಡ ಜಾರಿಯಾಗಲಿದೆ. ಆ ಕ್ರಮ ಯಾವುದು ಎಂಬುದನ್ನು ಈ ಒಂದು ಲೇಖನದ ಮುಖಾಂತರ ಸಂಪೂರ್ಣವಾಗಿ ತಿಳಿಸಲಾಗಿದೆ. ನೀವು ಕೂಡ ಲೇಖನವನ್ನು ಓದುವ ಮುಖಾಂತರ ಈ ಒಂದು ಉಪಯುಕ್ತವಾದಂತಹ ಮಾಹಿತಿಯನ್ನು ತಿಳಿದುಕೊಂಡು ನಿಮಗೂ ಇನ್ಮುಂದೆ ಹಣ ಬರಲ್ವ ಎಂದು ನೋಡಿರಿ.
ಇಂಥವರ ಖಾತೆಗೆ ಇನ್ಮುಂದೆ ಗೃಹಲಕ್ಷ್ಮಿ ಹಣ ಜಮಾ ಆಗುವುದಿಲ್ಲ.
ಹೌದು ಸ್ನೇಹಿತರೆ ಸರ್ಕಾರದ ಕಡೆಯಿಂದ ಎಲ್ಲಾ ಗೃಹಲಕ್ಷ್ಮಿ ಮಹಿಳೆಯರಿಗೆ ಹಣ ಇನ್ಮುಂದೆ ಜಮಾ ಆಗುವುದಿಲ್ಲ. ಈ ಹಿಂದೆ ಸರ್ಕಾರ ಎಲ್ಲಾ ಮಹಿಳೆಯರಿಗೂ ಕೂಡ ಹಣವನ್ನು ಜಮಾ ಮಾಡುತ್ತಿದ್ದು, ಯಾವುದೇ ರೀತಿಯ ಪರಿಶೀಲನೆಯನ್ನು ಕೂಡ ಆ ಸಂದರ್ಭದಲ್ಲಿ ನಡೆಸಿಲ್ಲದ ಕಾರಣದಿಂದ ಮಾತ್ರ ಎಲ್ಲಾ ಮಹಿಳೆಯರಿಗೂ ಹಣವನ್ನು ಜಮಾ ಮಾಡಲು ಮುಂದಾಗಿದ್ದು, ಆದರೆ ಇನ್ಕಮ್ ಟ್ಯಾಕ್ಸ್ ಪೇಯಸ್ ಮಹಿಳೆಯರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅಂತಹ ಮಹಿಳೆಯರು ಈವರೆಗೂ ಕೂಡ ಹಣವನ್ನು ಪಡೆದು ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಕೂಡ ಧಾನ್ಯಗಳನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ.
ಅಂತವರಿಗೆ ಇನ್ಮುಂದೆ ಹಣ ಕೂಡ ಜಮಾ ಆಗುವುದಿಲ್ಲ. ಹಾಗೂ ಕೆಲವರು ಒಂದೇ ಕುಟುಂಬದಲ್ಲಿ ಇದ್ದು ಮೂರ್ನಾಲ್ಕು ರೇಷನ್ ಕಾರ್ಡ್ ಗಳನ್ನು ಕೂಡ ಹೊಂದಿರುತ್ತಾರೆ. ಅಂತಹ ಕುಟುಂಬದ ಅಭ್ಯರ್ಥಿಗಳಿಗೂ ಕೂಡ ಗೃಹಲಕ್ಷ್ಮಿ ಹಣ ಜಮಾ ಆಗುವುದಿಲ್ಲ. ಮತ್ತು ಅನ್ನಭಾಗ್ಯ ಯೋಜನೆ ಕಡೆಯಿಂದ ಅಕ್ಕಿ ಹಣ ಹಾಗೂ ಧಾನ್ಯಗಳು ಕೂಡ ಉಚಿತವಾಗಿ ಸಿಗುವುದಿಲ್ಲ ಇನ್ಮುಂದೆ, ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಿದೆ ಸರ್ಕಾರ.
ಎಲ್ಲಾ ಪರಿಶೀಲನೆಯನ್ನು ಕೂಡ ಇನ್ಮುಂದೆ ನಡೆಸುತ್ತದೆ. ಅಂದರೆ ಅರ್ಜಿ ಸಲ್ಲಿಕೆ ಮಾಡುವಂತಹ ಎಲ್ಲಾ ಅಭ್ಯರ್ಥಿಗಳ ದಾಖಲಾತಿಗಳನ್ನು ಒಂದೊಂದೇ ಪರಿಶೀಲನೆ ಮಾಡುವ ಮುಖಾಂತರ ಆ ಅಭ್ಯರ್ಥಿಗಳು ಹೊಸ ರೇಷನ್ ಕಾರ್ಡ್ಗಳನ್ನು ಪಡೆಯಲು ಅರ್ಹರಾಗಿದ್ದಾರೆ ಎಂಬುದನ್ನು ಕೂಡ ಹೊಸ ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡುತ್ತದೆ. ಯಾರೆಲ್ಲಾ ಅನರ್ಹರಾಗಿ ಕಂಡು ಬರುತ್ತಾರೋ ಅಂತವರ ಅರ್ಜಿಯನ್ನು ಕೂಡ ಸ್ವೀಕೃತಿ ಮಾಡಿಕೊಳ್ಳುವುದಿಲ್ಲ.
ಗೃಹಲಕ್ಷ್ಮಿ ಹಣ ಏಕೆ ಬರುವುದಿಲ್ಲ ?
ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಹಣವನ್ನು ಪಡೆಯಬೇಕು ಎಂದರೆ, ಕುಟುಂಬದ ಒಬ್ಬ ಮಹಿಳಾ ಅಭ್ಯರ್ಥಿಯ ಹೆಸರಿನಲ್ಲಿ ರೇಷನ್ ಕಾರ್ಡ್ ಕೂಡ ಇರಬೇಕಾಗುತ್ತದೆ. ಆ ಒಂದು ರೇಷನ್ ಕಾರ್ಡ್ ಗಳನ್ನು ಹೊಂದಿದಂತಹ ಕುಟುಂಬಕ್ಕೆ ಮಾತ್ರ ಪ್ರತಿ ತಿಂಗಳು 2,000 ಹಣ ಖಾತೆಗೆ ಜಮಾ ಆಗಲಿದೆ. ಅದರಲ್ಲೂ ಮಹಿಳಾ ಫಲಾನುಭವಿಗಳ ಖಾತೆಗೆ ಮಾತ್ರ ಹಣ ಜಮಾ ಆಗುತ್ತದೆ. ಕೆಲವೊಂದು ಸಮಸ್ಯೆಗಳಿಂದ ಮಾತ್ರ ತಮ್ಮ ಪತಿಯ ಹೆಸರಿನ ಖಾತೆಯಲ್ಲೂ ಕೂಡ ಹಣ ಜಮಾ ಆದರೂ ಆಗಬಹುದು.
ನಿಮಗೆ ಕೆಲವೊಂದು ಸಮಸ್ಯೆಗಳು ಇದೆ ಎಂದರೆ ನೀವು ನಿಮ್ಮ ಅರ್ಜಿಯ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಿ, ಅಥವಾ ನಿಮ್ಮ ಸಮಸ್ಯೆ ಯಾವುದು ಎಂಬುದನ್ನು ಕೂಡ ಕಂಡುಕೊಳ್ಳಿರಿ. ಆನಂತರ ಒಂದೊಮ್ಮೆ ದಾಖಲಾತಿಗಳನ್ನು ಪರಿಶೀಲನೆ ಮಾಡಿದಾಗೆಲ್ಲವೂ, ಕೂಡ ಸರಿ ಇದೆ ಎಂದರೆ ನಿಮಗೆ ಸರ್ಕಾರದಿಂದ ಮುಂದಿನ ಕಂತಿನ ಹಣವು ಕೂಡ ಬರುತ್ತದೆ. ನೀವೇನಾದರೂ ಇನ್ಕಮ್ ಟ್ಯಾಕ್ಸ್ ಪ್ಲೇಯರ್ಸ್ ಗಳಾಗಿದ್ದರೆ ನಿಮಗೆ ಯಾವುದೇ ರೀತಿಯ ಹಣ ಜಮಾ ಆಗುವುದಿಲ್ಲ. ಹಾಗೂ ರೇಷನ್ ಕಾರ್ಡ್ಗಳನ್ನು ಹೊಂದಿಲ್ಲದಂತಹ ಅಭ್ಯರ್ಥಿಗಳಿಗೂ ಕೂಡ ಇನ್ಮುಂದೆ ಹಣ ಬರುವುದಿಲ್ಲ.
ಇಲ್ಲಿಯವರೆಗೂ ಲೇಖನವನ್ನು ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು…