free training 2024: ಎಲ್ಲರಿಗೂ ನಮಸ್ಕಾರ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೆಂದರೆ ಹಲವಾರು ತರಬೇತಿಯನ್ನು ಸ್ವಾ ಉದ್ಯೋಗ ಸಂಸ್ಥೆಯು ಇದೇ ತಿಂಗಳಿನಲ್ಲಿ ಆರಂಭ ಮಾಡಲಿದೆ, ಉಚಿತವಾದಂತಹ ತರಬೇತಿಯನ್ನು ನೀವು ಕೂಡ ಪಡೆದುಕೊಳ್ಳಬೇಕು ಎಂದರೆ, ಒಂದು ಅರ್ಜಿ ಸಲ್ಲಿಕೆಯನ್ನು ನೀವು ಮುಕ್ತಾಯದ ದಿನದ ಒಳಗೆ ಮಾಡಬೇಕಾಗುತ್ತದೆ. ಯಾವ ರೀತಿ ಅರ್ಜಿ ಸಲ್ಲಿಕೆ ಮಾಡಬೇಕು ಎಂಬುದರ ಎಲ್ಲಾ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ನೀವು ಕೂಡ ಲೇಖನವನ್ನು ಓದುವ ಮುಖಾಂತರ ಈ ಉಚಿತ ತರಬೇತಿಯನ್ನು ಪಡೆಯಲು ಮುಂದಾಗಿರಿ.
ನಾಲ್ಕು ರೀತಿಯ ವಿವಿಧ ತರಬೇತಿ !
ಹೌದು ಸ್ನೇಹಿತರೆ ನಾಲ್ಕು ರೀತಿಯ ವಿವಿಧ ತರಬೇತಿಯನ್ನು ರುಡ್ ಸೆಟ್ ಸಂಸ್ಥೆಯು ಆಯೋಜಿಸಲು ಮುಂದಾಗಿದೆ. ಹಲವಾರು ವರ್ಷಗಳಿಂದಲೂ ಕೂಡ ಈ ರೀತಿಯ ಒಂದು ಉಚಿತ ತರಬೇತಿಯನ್ನು ಅರ್ಜಿದಾರರಿಗೆ ನೀಡಿ ಸ್ವಉದ್ಯೋಗವನ್ನು ಪ್ರಾರಂಭ ಮಾಡುವಂತಹ ವಿಚಾರಗಳನ್ನು ಕೂಡ ಇತರಬೇತಿಯಲ್ಲಿ ತಿಳಿಸಿಕೊಡಲಾಗುತ್ತದೆ.
30 ದಿನಗಳವರೆಗೂ ನೀವು ಈ ತರಬೇತಿಯನ್ನು ಪಡೆಯಬಹುದಾಗಿದೆ. ಕೆಲವೊಂದು ತರಬೇತಿಯನ್ನು 45 ದಿನಗಳವರೆಗೂ ಕೂಡ ಕಲಿಯಬಹುದು. ನಾಲ್ಕು ರೀತಿಯ ವಿವಿಧ ತರಬೇತಿ ಎಂದರೆ ಯಾವೆಲ್ಲ ತರಬೇತಿಗಳು ಈ ಒಂದು ಸಂಸ್ಥೆ ನೀಡಲು ಮುಂದಾಗಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿರಿ.
ಉಚಿತ ತರಬೇತಿಯಲ್ಲಿ ಈ ನಾಲ್ಕು ಟ್ರೈನಿಂಗ್ ಗಳು ಲಭ್ಯ !
ಸ್ನೇಹಿತರೆ ನಾಲ್ಕು ರೀತಿಯ ವಿವಿಧ ತರಬೇತಿಯಲ್ಲಿ ಮೊದಲನೇ ತರಬೇತಿಯ ಹೆಸರು ಏನೆಂದರೆ, ಕಂಪ್ಯೂಟರ್ dbt ಎಂದು, ಈ ಕಂಪ್ಯೂಟರ್ನ ಎಲ್ಲಾ ರೀತಿಯ ಮಾಹಿತಿಯನ್ನು 30 ದಿನಗಳ ಒಳಗೆ ಹೇಳಿಕೊಡಲಾಗುತ್ತದೆ. ಪುರುಷರು ಹಾಗೂ ಮಹಿಳೆಯರು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು. ನೀವು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಕೆ ಮಾಡಬಹುದು. ಅಥವಾ ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಎರಡು ವಿಧಾನದಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಂಡು ಆನಂತರ ಅರ್ಜಿ ಸಲ್ಲಿಕೆ ಮಾಡಬಹುದು. ನಿಮಗೆ ಹೆಚ್ಚಿನ ಆಸಕ್ತಿ ಈ ತರಬೇತಿಗಳ ಮೇಲೆ ಇದೆ ಎಂದರೆ ಮಾತ್ರ ಈ ಕೆಳಕಂಡ ಮಾಹಿತಿಯಲ್ಲಿ ಸಂಪರ್ಕದ ಮಾಹಿತಿಯನ್ನು ನೀಡಲಾಗಿರುತ್ತದೆ. ಆ ಒಂದು ಸಂಖ್ಯೆಗೆ ಕರೆ ಮಾಡುವ ಮುಖಾಂತರವಾದರೂ ಮಾಹಿತಿಯನ್ನು ಕೂಡ ಪಡೆದುಕೊಳ್ಳಬಹುದು. ನೀವು ಉಚಿತವಾಗಿ ತರಬೇತಿಯನ್ನು ಪಡೆಯಲು ಅರ್ಹರಾಗಿದ್ದೀರಿ ಎಂದರೆ ಮಾತ್ರ ನಿಮಗೆ ಸಂಸ್ಥೆಯು ಉಚಿತವಾಗಿ ತರಬೇತಿಯನ್ನು ನೀಡಲು ಮುಂದಾಗುತ್ತದೆ.
ಯಾರೆಲ್ಲ ಸ್ವಯಂ ಉದ್ಯೋಗವನ್ನು ಪ್ರಾರಂಭಿಸಬೇಕು ಹಾಗೂ ಮನೆಯಲ್ಲಿಯೇ ಕೆಲಸವನ್ನು ನಿರ್ವಹಿಸಬೇಕೆಂದುಕೊಂಡಿದ್ದೀರಾ ಅಂತವರಿಗೆ ಉದ್ಯೋಗಾವಕಾಶವು ಕೂಡ ಮುಂದಿನ ದಿನಗಳಲ್ಲಿ ಬರುತ್ತವೆ. ಅಥವಾ ನೀವು ನಿಮ್ಮ ಸ್ವಂತ ಉದ್ಯೋಗವನ್ನೇ ಪ್ರಾರಂಭ ಮಾಡಬಹುದು. ಆ ರೀತಿಯ ಒಂದು ಉದ್ಯೋಗವನ್ನು ಮಾಡುವಂತಹ ಮಾಹಿತಿಗಳನ್ನೆಲ್ಲ ರುಡ್ ಸಂಸ್ಥೆಯು ಸಂಪೂರ್ಣವಾಗಿ ತರಬೇತಿಯಲ್ಲಿಯೇ ತಿಳಿಸುತ್ತದೆ.
ಎರಡನೇ ತರಬೇತಿಯ ಹೆಸರು :- ಮಹಿಳೆಯರಿಗೆ ವಸ್ತ್ರ ವಿನ್ಯಾಸ ಅಂದರೆ ಟೈಲರಿಂಗ್ ಯಾರೆಲ್ಲಾ ಮಹಿಳೆಯರು ಇದ್ದಾರೋ ಅಂತವರಿಗೆ ಸಂಸ್ಥೆಯು ಟೈಲರಿಂಗ್ ಅನ್ನು ಉಚಿತವಾಗಿಯೇ ಹೇಳಿಕೊಡಲಿದೆ. ನೀವು ಹೆಚ್ಚಿನ ಆಸಕ್ತಿಯನ್ನು ಈ ಟೈಲರಿಂಗ್ ಅಲ್ಲಿ ಹೊಂದಿದ್ದೀರಿ ಎಂದರೆ ಮಾತ್ರ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬಹುದಾಗಿದೆ. ಈ ಟೈಲರಿಂಗ್ ತರಬೇತಿಯನ್ನು ಕೂಡ ಕಲಿತು ನೀವು ಮುಂದಿನ ದಿನಗಳಲ್ಲಿ ನಿಮ್ಮದೇ ಆದ ಸ್ವಂತ ಉದ್ಯಮವನ್ನು ಕೂಡ ಪ್ರಾರಂಭಿಸಬಹುದು.
ಸಾಕಷ್ಟು ಜನರು ಟೈಲರಿಂಗ್ ತರಬೇತಿಯನ್ನು ಕೂಡ ಖಾಸಗಿ ವಲಯಗಳಲ್ಲಿಯೂ ಕಲಿತು ಅವರದೇ ಆದ ಸ್ವಂತ ಟೈಲರಿಂಗ್ ಅಂಗಡಿಗಳನ್ನು ಕೂಡ ಇಟ್ಟುಕೊಂಡಿದ್ದಾರೆ. ಪ್ರತಿದಿನವೂ ಸಾವಿರಕ್ಕೂ ಹೆಚ್ಚು ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ. ನೀವು ಮನೆಯಲ್ಲಿಯೇ ಇದ್ದು ಈ ಕೆಲಸವನ್ನು ಪ್ರಾರಂಭ ಮಾಡುತ್ತೀರಿ ಎಂದರು ಕೂಡ ನಿಮಗೆ ಹಣ ಗಳಿಕೆಯಾಗುತ್ತದೆ.
ನಿಮ್ಮ ಒಂದು ನಿರ್ಧಾರದ ಮೇಲೆ ನೀವು ಮಾಡುವಂತಹ ಸ್ವಂತ ಕೆಲಸವನ್ನು ಕೂಡ ನೀವು ಅಭಿವೃದ್ದಿ ಪಡಿಸಬಹುದಾಗಿದೆ. ಇನ್ನೇಕೆ ತಡ ಮಾಡುವಿರಿ ಒಂದು ಅರ್ಜಿ ಸಲ್ಲಿಕೆಯಿಂದ ನಿಮ್ಮ ವೃತ್ತಿ ಜೀವನ ಪ್ರಾರಂಭವಾಗುತ್ತದೆ ಎಂದರೆ ತರಬೇತಿಯನ್ನು ಕೂಡ ಕಲಿಕೆ ಮಾಡಬೇಕಾಗುತ್ತದೆ.
ಸಾಕಷ್ಟು ಮಹಿಳಾ ಅಭ್ಯರ್ಥಿಗಳು ಈ ಒಂದು ವೃತ್ತಿಯನ್ನೇ ಮಾಡಿಕೊಂಡು ಹೆಚ್ಚಿನ ಆದಾಯವನ್ನು ಕೂಡ ಪ್ರತಿದಿನ ಗಳಿಕೆ ಮಾಡುತ್ತಿದ್ದಾರೆ. ನೀವು ಇತ್ತೀಚಿನ ದಿನಗಳಲ್ಲಿ ಖಾಸಗಿ ವಲಯಗಳ ಕಂಪೆನಿಗಳಿಗೆ ಹೋಗಿ ಹಣವನ್ನು ಸಂಪಾದಿಸುತ್ತೀರಿ ಎಂದರೆ ನಿಮಗೆ ಕಷ್ಟಕರವಾದ ಒತ್ತಡ ಇದ್ದೇ ಇರುತ್ತದೆ. ಆ ಒತ್ತಡ ನಿಮಗೆ ಬರಬಾರದು ಎಂದರು ಕೂಡ ನೀವು ಸ್ವಂತ ಉದ್ಯೋಗವನ್ನು ನೀವು ಮಾಡಬಹುದಾಗಿದೆ. ಆಗ ನಿಮಗೆ ಯಾವುದೇ ಮಾಲೀಕರು ಹೇಳುವ ಹಾಗಿಲ್ಲ, ನೀವು ಇಷ್ಟೇ ಬಟ್ಟೆಯನ್ನು ಹೊಲಿಗೆ ಮಾಡಬೇಕು ಎಂದು, ಇದರಲ್ಲಿ ನೀವೇ ಓನರ್ ಆಗಿ ಕೆಲಸವನ್ನು ಕೂಡ ನಿರ್ವಹಿಸಬಹುದಾಗಿದೆ. ಸ್ವಂತ ಮಾಡುವುದರಿಂದಲೂ ಕೂಡ ಒತ್ತಡವು ಕೂಡ ಕಡಿಮೆಯಾಗುತ್ತದೆ.
ಏಕೆಂದರೆ ನಿಮಗೆ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಈ ಒಂದು ಸಂಸ್ಥೆಗೆ ಹಲವಾರು ಬ್ಯಾಂಕ್ಗಳಿಂದಲೂ ಕೂಡ ಹಣವನ್ನು ಸಾಲವಾಗಿ ನಿಮಗೆ ನೀಡುತ್ತದೆ. ನೀವು ಪ್ರಾರಂಭ ಮಾಡುತ್ತಿರಿ ಎಂದರೆ ಮಾತ್ರ ಅಥವಾ ನಾವು ಯಾವುದೇ ರೀತಿಯ ಟೈಲರಿಂಗ್ ಅಂಗಡಿಯನ್ನು ಪ್ರಾರಂಭ ಮಾಡುವುದಿಲ್ಲ ಆದರೂ ಕೂಡ ಟೈಲರಿಂಗ್ ತರಬೇತಿಯನ್ನು ಕಲಿಯುತ್ತೇವೆ ಎಂದರು ಕೂಡ ನೀವು ಕಲಿಯಲು ಮುಂದಾಗಬಹುದು.
ಮೂರನೆಯ ತರಬೇತಿಯ ಹೆಸರು ಫೋಟೋಗ್ರಫಿ ಹಾಗೂ ವಿಡಿಯೋಗ್ರಫಿ !
ಸ್ನೇಹಿತರೆ ಕೊರೊನಾ ಎಂಬ ಮಹಾಮಾರಿ ಆದ ಬಳಿಕ ಫೋಟೋಗ್ರಾಫಿ ಹಾಗೂ ವಿಡಿಯೋಗ್ರಫಿಗೆ ಹೆಚ್ಚಿನ ಬೇಡಿಕೆ ಇದೆ. ಏಕೆಂದರೆ ಫೋಟೋಗ್ರಫಿಯನ್ನು ಎಲ್ಲರೂ ಕೂಡ ಇಷ್ಟಪಟ್ಟು ಮಾಡಿಸಿಕೊಳ್ಳುತ್ತಾರೆ. ಯಾವ ಕಾರಣಕ್ಕೆ ಈ ಫೋಟೋಗ್ರಾಫಿ ಬೇಕು ಎಂದರೆ ಕೆಲ ಮಕ್ಕಳ ಹುಟ್ಟು ಹಬ್ಬದಂದು ಕೂಡ ಈ ಫೋಟೋಗ್ರಾಫಿಯನ್ನು ಮಾಡಿಸುತ್ತಾರೆ. ಹುಟ್ಟು ಹಬ್ಬದ ಮುಂಚಿತ ದಿನಗಳಲ್ಲಿಯೂ ಕೂಡ ಈ ಫೋಟೋಗ್ರಾಫಿ ಬೇಕೇ ಬೇಕು. ಹಾಗೂ ಹಲವಾರು ಸೋಶಿಯಲ್ ಮೀಡಿಯಾಗಳ ಕ್ರಿಯೇಟರ್ಸ್ ಗಳಿಗೂ ಕೂಡ ಫೋಟೋಗ್ರಫಿ ಬೇಕು. ಹಾಗೂ ವಿಡಿಯೋಗ್ರಫಿಯನ್ನು ಕೂಡ ಮಾಡಿಸಿಕೊಳ್ಳುತ್ತಾರೆ.
ಇನ್ನ ಕೆಲವರು ಎಂಗೇಜ್ಮೆಂಟ್ಗಳಿಗೆ ಹಾಗೂ ಮದುವೆ ಸಂಭ್ರಮಗಳಿಗೂ ಕೂಡ ಫೋಟೋಗ್ರಫಿ ವಿಥ್ ವಿಡಿಯೋಗ್ರಫಿಯನ್ನು ಕೂಡ ಮಾಡಿಸಿಕೊಳ್ಳುತ್ತಾರೆ. ಎಲ್ಲಾ ರೀತಿಯ ಒಂದು ಕೆಲಸಗಳಿಗೂ ತರಬೇತಿ ಬಹು ಮುಖ್ಯ. ನೀವು ಈ ಕೆಲಸವನ್ನು ಪ್ರಾರಂಭ ಮಾಡುತ್ತಿರಿ ಎಂದರೆ ನಿಮಗೆ ಕಡ್ಡಾಯವಾಗಿ ತರಬೇತಿಯನ್ನು ಕೂಡ ಒಬ್ಬ ವ್ಯಕ್ತಿಯು ಹೇಳಿ ಕೊಡಬೇಕಾಗುತ್ತದೆ. ಯಾವ ರೀತಿ ಒಂದು ಫೋಟೋಗ್ರಫಿಯನ್ನು ಮಾಡಬೇಕು ವಿಡಿಯೋಗ್ರಫಿಯಲ್ಲಿ ಏನೆಲ್ಲ ಫಿಲ್ಟರ್ಸ್ಗಳು ಇರುತ್ತವೆ ಎಂಬುದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಅಭ್ಯರ್ಥಿಗಳಿಗೆ ತಿಳಿಸಿಕೊಡುವ ಮುಖಾಂತರ ತರಬೇತಿಯನ್ನು ಕೂಡ ಕಲಿಸಲಾಗುತ್ತದೆ.
ಅದು ಉಚಿತವಾಗಿಯೇ ಸಿಗುತ್ತಿದೆ ಎಂದರೆ ನೀವು ಯಾಕೆ ಈ ಒಂದು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಒಂದೊಮ್ಮೆ ಅರ್ಜಿ ಸಲ್ಲಿಕೆ ಮಾಡಿದ್ರೆ ನಿಮ್ಮ ಫೋಟೋಗ್ರಾಫಿ ಹಾಗೂ ವಿಡಿಯೋಗ್ರಫಿಯನ್ನು ಕೂಡ ಕಲಿತುಕೊಳ್ಳುತ್ತೀರಿ. ಆ ವಿಡಿಯೋಗ್ರಫಿ ಇಂದಲು ಕೂಡ ಹೆಚ್ಚಿನ ಹಣವನ್ನು ಸಂಪಾದನೆ ಮಾಡಬಹುದು. ನೀವು ನಿಮ್ಮದೇ ಆದ ಫೋಟೋ ಸ್ಟುಡಿಯೋಗಳನ್ನು ಕೂಡ ತೆರೆಯಬಹುದಾಗಿದೆ. ಆದಕಾರಣ ತರಬೇತಿಯನ್ನು ಉಚಿತವಾಗಿಯೇ ಕಲಿಯಲು ಮುಂದಾಗಿದೆ.
ನಾಲ್ಕನೇ ಉಚಿತ ತರಬೇತಿಯ ಹೆಸರು ಕಂಪ್ಯೂಟರ್ ಟ್ಯಾಲಿ (ಅಕೌಂಟಿಂಗ್)
ಸ್ನೇಹಿತರೆ ಯಾರೆಲ್ಲಾ ಅಕೌಂಟಿಂಗ್ ಕಲಿಯಬೇಕು ಎಂಬ ಆಸಕ್ತಿಯನ್ನು ಹೊಂದಿದ್ದೀರಾ ಅಂತವರು ಉಚಿತವಾಗಿಯೇ ಕಂಪ್ಯೂಟರ್ ಟ್ಯಾಲಿಯನ್ನು ಕೂಡ ಕಲಿಯಬಹುದಾಗಿದೆ. ಅಂತವರು ಈ ಕೆಳಕಂಡ ಮಾಹಿತಿಯಲ್ಲಿ ತಿಳಿಸಿರುವಂತಹ ಸಂಖ್ಯೆಗೆ ಕರೆ ಮಾಡುವ ಮುಖಾಂತರವಾದರೂ ಈ ಒಂದು ತರಬೇತಿಯ ಹೆಚ್ಚಿನ ಮಾಹಿತಿಯನ್ನು ಕೂಡ ಪಡೆಯಬಹುದು. ನೀವು ಈ ನಾಲ್ಕರಲ್ಲಿ ಯಾವುದಾದರೂ ಒಂದನ್ನು ಅಥವಾ ಈ ನಾಲ್ಕನ್ನು ಕೂಡ ಕಲಿಯಲು ಮುಂದಾಗುವಿರಿ ಎಂದರೆ, ನೀವು ಕಡ್ಡಾಯವಾಗಿ ಉಚಿತ ವಸತಿಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಹೋಗಬೇಕಾಗುತ್ತದೆ.
ಕಂಪ್ಯೂಟರ್ ಡೀಬಿಟಿ ಎಷ್ಟು ದಿನಗಳ ವರೆಗೆ ಉಚಿತ ತರಬೇತಿ ನಡೆಯುತ್ತದೆ.
ಈ ಒಂದು ಕಂಪ್ಯೂಟರ್ ಡಿ ಬಿ ಟಿ ತರಬೇತಿ 45 ದಿನಗಳ ವರೆಗೂ ಕೂಡ ನಡೆಯುತ್ತದೆ. ಇದೇ ತಿಂಗಳು ಕೊನೆಯ ವಾರದಂದು ನಡೆಯಲಿದೆ. ಜುಲೈ ತಿಂಗಳಿನಲ್ಲೂ ಕೂಡ ಮುಕ್ತಾಯಗೊಳ್ಳುತ್ತದೆ. 45 ದಿನಗಳು ಆಗುವವರೆಗೂ ಕೂಡ ನೀವು ಉಚಿತ ವಸತಿಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಇರತಕ್ಕದ್ದು. ನೀವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ಕಪಕ್ಕದ ಊರುಗಳಲ್ಲಿ ಇದ್ದೀರಿ ಎಂದರೆ ನೀವು ಮನೆಯಿಂದಲೂ ಕೂಡ ಬಂದು ಈ ಒಂದು ತರಬೇತಿಗಳನ್ನು ಕೂಡ ಕಲಿಯಬಹುದಾಗಿದೆ. ಮೇ 27ರಿಂದ ಈ ಒಂದು ತರಬೇತಿ ಪ್ರಾರಂಭವಾಗಲಿದೆ. ಜುಲೈ 10ರಂದು ಮುಕ್ತಾಯಗೊಳ್ಳುತ್ತದೆ.
ಟೈಲರಿಂಗ್ ತರಬೇತಿಯನ್ನು ಉಚಿತವಾಗಿ ಇಷ್ಟು ದಿನಗಳ ವರೆಗೆ ನಡೆಸಲಾಗುತ್ತದೆ.
ಬರೋಬ್ಬರಿ 30 ದಿನಗಳ ವರೆಗೂ ಕೂಡ ಮಹಿಳೆಯರು ಮಾತ್ರ ಟೈಲರಿಂಗ್ ತರಬೇತಿಯನ್ನು ಉಚಿತ ವಸತಿಯೊಂದಿಗೆ ಹಾಗೂ ಉಚಿತ ಊಟದೊಂದಿಗೆ ಕೂಡ ತರಬೇತಿಯನ್ನು ಕೂಡ ಕಲಿಯಬಹುದಾಗಿದೆ. ಮೇ 30 ರಿಂದ ಪ್ರಾರಂಭವಾಗುವಂತಹ ಉಚಿತ ತರಬೇತಿ ಜೂನ್ 28ಕ್ಕೆ ಮುಕ್ತಾಯಗೊಳ್ಳುತ್ತದೆ. ದಿನಾಂಕದೊಳಗೆ ನೀವು ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬೇಕು ಅಂದರೆ ಮುಂಚಿತ ದಿನಗಳಲ್ಲಿ ನೀವು ಸ್ವಉದ್ಯೋಗ ಸಂಸ್ಥೆ ಎಂದು ಹೆಸರುವಾಸಿಯಾದಂತಹ ರುಡ್ ಸಂಸ್ಥೆಗೆ ಅರ್ಜಿ ಸಲ್ಲಿಕೆ ಕೂಡ ಮಾಡಿರಬೇಕಾಗುತ್ತದೆ.
ಫೋಟೋಗ್ರಾಫಿ ಹಾಗೂ ವಿಡಿಯೋಗ್ರಫಿಯನ್ನು ಇಷ್ಟು ದಿನಗಳ ವರೆಗೂ ಆಯೋಜಿಸಲಾಗುತ್ತದೆ.
30 ದಿನಗಳ ವರೆಗೂ ಕೂಡ ಈ ಫೋಟೋಗ್ರಾಫಿ ಹಾಗೂ ವಿಡಿಯೋಗ್ರಫಿಯ ತರಬೇತಿಯನ್ನು ನಡೆಸಲಾಗುತ್ತದೆ. ಜೂನ್ 11ರಂದು ಪ್ರಾರಂಭವಾಗುವಂತಹ ಉಚಿತ ತರಬೇತಿ ಜುಲೈ 10ರವರೆಗೆ ನಡೆಯಲಿದೆ.
ಕಂಪ್ಯೂಟರ್ ಟ್ಯಾಲಿ ತರಬೇತಿಯ ಮಾಹಿತಿ !
ಸ್ನೇಹಿತರೆ ಈ ಒಂದು ತರಬೇತಿಯೂ ಕೂಡ 30 ದಿನಗಳವರೆಗೂ ನಡೆಯುತ್ತದೆ. ಈ ಎಲ್ಲಾ ಮೂರು ತರಬೇತಿಗಳು ನಡೆದ ಬಳಿಕ ಜುಲೈ 11 ರಿಂದ ತರಬೇತಿಯೂ ಕೂಡ ಪ್ರಾರಂಭವಾಗುತ್ತದೆ. ಆಗಸ್ಟ್ 9 ಮುಕ್ತಾಯಗೊಳ್ಳುವುದು ಈ 30 ದಿನಗಳಲ್ಲಿ ನೀವು ಯಾವ ರೀತಿ ಕಂಪ್ಯೂಟರ್ ಟ್ಯಾಲಿಯನ್ನು ಮಾಡಬೇಕು ಎಂಬುದರ ಎಲ್ಲಾ ಸಂಪೂರ್ಣವಾದ ಮಾಹಿತಿಯನ್ನು ಕೂಡ ತಿಳಿದುಕೊಳ್ಳುತ್ತೀರಿ.
ಈ ನಾಲ್ಕರಲ್ಲಿ ನೀವು ನಾಲ್ಕು ತರಬೇತಿಯನ್ನು ಕೂಡ ಕಲಿಯುವಂತಹ ಅವಕಾಶವನ್ನು ರುಡ್ ಸಂಸ್ಥೆ ಕಲ್ಪಿಸಿಕೊಟ್ಟಿದೆ. ಆ ಅವಕಾಶವನ್ನು ನೀವು ಸದುಪಯೋಗ ಪಡಿಸಿಕೊಳ್ಳಿ ಸದುಪಯೋಗಪಡಿಸಿಕೊಳ್ಳಲು ಮೊದಲಿಗೆ ಅರ್ಜಿ ಸಲ್ಲಿಕೆಯನ್ನು ಕೂಡ ಮಾಡಬೇಕಾಗುತ್ತದೆ. ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಕೆ ಮಾಡುವವರು ವಾಟ್ಸಾಪ್ ಮುಖಾಂತರ ಸಲಿಕೆ ಮಾಡಿರಿ. ಅಥವಾ ಇ-ಮೇಲ್ಗಳಲ್ಲಿ ನಿಮ್ಮ ಮಾಹಿತಿಯನ್ನು ಒದಗಿಸುವ ಮುಖಾಂತರವೂ ಕೂಡ ಅರ್ಜಿ ಸಲ್ಲಿಕೆ ಮಾಡಿರಿ.
ನೀವು ಈ ಒಂದು ತರಬೇತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರೆ ಒಂದೊಮ್ಮೆ ಆ ಸಂಸ್ಥೆಯ ಸಿಬ್ಬಂದಿಗಳಿಗೆ ಕರೆ ಮಾಡುವ ಮುಖಾಂತರ ಹೆಚ್ಚಿನ ಮಾಹಿತಿಯನ್ನು ಕೂಡ ತಿಳಿದುಕೊಳ್ಳಿರಿ. ತಿಳಿದುಕೊಂಡ ನಂತರವೇ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಸುವಂತಹ ಎಲ್ಲಾ ಅಭ್ಯರ್ಥಿಗಳು ಕೂಡ ಉಚಿತವಾಗಿ ನಾಲ್ಕರಲ್ಲಿ ಯಾವುದಾದರೂ ಒಂದನ್ನು ಅಥವಾ ಈ ನಾಲ್ಕು ತರಬೇತಿಗಳನ್ನು ಕೂಡ ಪಡೆಯಲು ಅರ್ಹರಾಗಿರುತ್ತಾರೆ,
ಅಂತವರು 30 ದಿನಗಳ ವರೆಗೂ ಹಾಗೂ 45 ದಿನಗಳ ವರೆಗೂ ಕೂಡ ಆ ಒಂದು ದಕ್ಷಿಣ ಕನ್ನಡ ಜಿಲ್ಲೆಯ ರುಡ್ ಸಂಸ್ಥೆಯಲ್ಲಿಯೇ ತರಬೇತಿಯನ್ನು ಕಲಿಯುವ ಮುಖಾಂತರ ಉಚಿತ ವಸತಿ ಉಚಿತ ತರಬೇತಿಯೊಂದಿಗೆ ತಮ್ಮ ಸ್ವಂತ ಉದ್ಯಮವನ್ನು ಪ್ರಾರಂಭಿಸುವಂತಹ ಮಾಹಿತಿಯನ್ನು ಕೂಡ ತಿಳಿಯಬಹುದಾಗಿದೆ.
ಸ್ವಉದ್ಯೋಗ ಸಂಸ್ಥೆಯು ಈ ಹಿಂದೆಯೂ ಕೂಡ ಉಚಿತ ತರಬೇತಿಯನ್ನು ಮಹಿಳೆಯರಿಗಾಗಿ ಆಯೋಜಿಸಿತ್ತು, ಕೆಲ ಅಭ್ಯರ್ಥಿಗಳು ಈ ಒಂದು ಮಾಹಿತಿಯನ್ನು ತಿಳಿದು ಅರ್ಜಿ ಸಲ್ಲಿಕೆ ಕೂಡ ಮಾಡಿ ದಕ್ಷಿಣ ಕನ್ನಡದ ಜಿಲ್ಲೆಗಳಿಗೆ ಹೋಗಿ ಈ ಒಂದು ಸಂಸ್ಥೆಯ ತರಬೇತಿಯನ್ನು ಕೂಡ ಪಡೆದುಕೊಂಡಿದ್ದಾರೆ. ಅವರು ತರಬೇತಿಯ ಜೊತೆಗೆ ಸ್ವಂತ ಉದ್ಯಮವನ್ನು ಪ್ರಾರಂಭಿಸುವಂತಹ ಮಾಹಿತಿಯನ್ನು ಕೂಡ ತಿಳಿದು ಸ್ವಂತ ಉದ್ಯೋಗವನ್ನು ಕೂಡ ಮಾಡುತ್ತಿದ್ದಾರೆ.
ಎಲ್ಲರಿಗೂ ಕೂಡ ಸ್ವಯಂ ಉದ್ಯೋಗವನ್ನು ಮಾಡಬೇಕು ಎಂಬ ಕನಸು ಇದ್ದೇ ಇರುತ್ತದೆ. ಆ ಒಂದು ಕನಸು ನನಸು ಆಗಬೇಕು ಎಂದರೆ ನೀವು ಯಾವುದಾದರೂ ವ್ಯಕ್ತಿ ಹತ್ತಿರ ಅಥವಾ ಅನುಭವ ಹೊಂದಿರುವಂತಹ ವ್ಯಕ್ತಿಯ ಹತ್ತಿರ ತರಬೇತಿಯನ್ನು ಕಲಿತಿರಬೇಕಾಗುತ್ತದೆ. ಆ ತರಬೇತಿಯನ್ನು ಹೊಂದಿದ ಬಳಿಕವೇ ನೀವು ಯಾವ ರೀತಿ ಉದ್ಯಮವನ್ನು ಪ್ರಾರಂಭಿಸಬಹುದು ತರಬೇತಿ ಕಲಿತ ನಂತರ ಎಂಬುದನ್ನು ಕೂಡ ತಿಳಿದುಕೊಳ್ಳಬಹುದು.
ಅಭ್ಯರ್ಥಿಗಳ ವಯೋಮಿತಿ ಎಷ್ಟಿರುತ್ತದೆ ?
18 ರಿಂದ 45 ವರ್ಷದೊಳಗಿನ ಅಭ್ಯರ್ಥಿಗಳು ಮಾತ್ರ ಈ ಉಚಿತ ತರಬೇತಿಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ನಿಮ್ಮ ಅಕ್ಕಪಕ್ಕದ ನಿಮ್ಮ ಸ್ನೇಹಿತರಿಗೂ ಕೂಡ ಈ ಒಂದು ಲೇಖನವನ್ನು ಶೇರ್ ಮಾಡಿರಿ ಅವರು ಕೂಡ ಈ ಒಂದು ವಯೋಮಿತಿಯನ್ನು ಹೊಂದಿದ್ದಾರೆ ಎಂದರೆ ಮಾತ್ರ ಶೇರ್ ಮಾಡುವ ಮುಖಾಂತರ ಈ ಮಾಹಿತಿಯನ್ನು ತಲುಪಿಸಿರಿ ಯಾರೆಲ್ಲಾ ಈ ಒಂದು ವಯೋಮಿತಿಯನ್ನು ಹೊಂದಿರುತ್ತಾರೋ ಅಂತವರಿಗೆ ಉಚಿತ ತರಬೇತಿ ಕೂಡ ದೊರೆಯುತ್ತದೆ.
ಅರ್ಜಿಯನ್ನು ಈ ರೀತಿ ಸಲ್ಲಿಕೆ ಮಾಡಿ.
- ಮೂರು ವಿಧಾನದಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
- ಮೊದಲನೇ ವಿಧಾನ ರುಡ್ ಸಂಸ್ಥೆಯ ಇಮೇಲ್ ಗೆ ನಿಮ್ಮ ಸ್ವಉದ್ಯೋಗದ ವಿವರವನ್ನು ಕಳುಹಿಸುವುದು.
- ಈ ಒಂದು ujirerudseti@gmail.com ಇಮೇಲ್ ಗೆ ನೀವು ಎಲ್ಲರೂ ಕೂಡ ಸ್ವ ಉದ್ಯೋಗದ ಮಾಹಿತಿ ಕಳಿಸಿ.
- ಎರಡನೇ ವಿಧಾನದ ಹೆಸರು ವಾಟ್ಸಪ್ ಮುಖಾಂತರ.
- ವಾಟ್ಸಪ್ ಮುಖಾಂತರ ಅರ್ಜಿ ಸಲ್ಲಿಕೆಗೂ ಕೂಡ ಅವಕಾಶವಿದೆ ಈ ಒಂದು ವಾಟ್ಸಾಪ್ 6364561982 ಸಂಖ್ಯೆಗೆ ಮೆಸೇಜನ್ನು ಕೂಡ ಮಾಡಿ ಅರ್ಜಿ ಸಲ್ಲಿಸಬಹುದು.
- ಮೂರನೇ ವಿಧಾನ ಪತ್ರದ ಮುಖಾಂತರ ಪತ್ರವನ್ನು ಕೂಡ ಬರೆದು ಈ ಒಂದು ( ನಿರ್ದೇಶಕರು ರುಡ್ ಸೆಟ್ ಸಂಸ್ಥೆ ಸಿದ್ದಾಪುರ, ಉಜಿರೆ ) ವಿಳಾಸಕ್ಕೆ ಅರ್ಜಿ ಸಲ್ಲಿಕೆ ಕೂಡ ಆಫ್ಲೈನ್ ಮುಖಾಂತರ ಮಾಡಬಹುದಾಗಿದೆ.
ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.