Free Sewing Machine Scheme: ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಪ್ರಾರಂಭ.! ಈ ದಾಖಲೆಗಳು ಕಡ್ಡಾಯ ಬೇಕು!
Free Sewing Machine Scheme 2024: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ಮಹಿಳೆಯರು ಮನೆಯಲ್ಲೇ ಕುಳಿತುಕೊಂಡು ಕಡಿಮೆ ಬಂಡವಾಳದಲ್ಲಿ ಉದ್ಯಮ ಮಾಡಲು ಮತ್ತು ಕಡಿಮೆ ಖರ್ಚಿನಲ್ಲಿ ಉತ್ತಮ ಆದಾಯ ಮಾಡಲು ಈ ಒಂದು ಹೊಲಿಗೆ ಯಂತ್ರದಿಂದ ಮಾತ್ರ ಸಾಧ್ಯ. ಈಗ ನಮ್ಮ ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಉಚಿತ ಹೊಲಿಗೆ ಯಂತ್ರ ಅರ್ಜಿಯನ್ನು ಪ್ರಾರಂಭಿಸಿದ್ದಾರೆ.
ಹೌದು ಮಹಿಳೆಯರು ಮನೆಯಲ್ಲೇ ಕುಳಿತುಕೊಂಡು ಮನೆಯ ಖರ್ಚನ್ನು ಮತ್ತು ತಮ್ಮ ಬಡತನ ಆರ್ಥಿಕತೆಯಿಂದ ಹೊರಬರಲು ಈ ಒಂದು ಹೊಲಿಗೆ ಯಂತ್ರದಿಂದ ಸಾಕಷ್ಟು ಸಹಾಯಕವಾಗಲಿದೆ ಉಚಿತವಾಗಿ ಹೊಲಿಗೆ ಯಂತ್ರವನ್ನು ಮಹಿಳೆಯರು ಪಡೆಯಲು ಯಾವೆಲ್ಲ ದಾಖಲೆಗಳು ಬೇಕು, ಮತ್ತು ಯಾವೆಲ್ಲ ಅರ್ಹತೆಗಳನ್ನು ಹೊಂದಿರಬೇಕು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಮತ್ತು ಇನ್ನು ಹೆಚ್ಚಿನ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ.
ಉಚಿತ ಹೊಲಿಗೆ ಯಂತ್ರ ಯೋಜನೆ:
ನಮ್ಮ ರಾಜ್ಯ ಸರ್ಕಾರವು ಕುಶಲಕರ್ಮಿಗಳಿಗೆ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಈ ಒಂದು ಯೋಜನೆಯನ್ನು ಜಾರಿಗೊಳಿಸಲಾಗಿದೆ. ಎಲ್ಲರೂ ಈ ಒಂದು ಯೋಜನೆಯ ಲಾಭವನ್ನು ಪಡೆಯಬಹುದು, ಈ ಒಂದು ಆರ್ಥಿಕ ವರ್ಷದಲ್ಲಿ ವಿವಿಧ ಯೋಜನೆ ಅಡಿಗಳಲ್ಲಿ ನಿವೃತ್ತರಾದ ಗ್ರಾಮೀಣ ಗುಡಿ ಕೈಗಾರಿಕೆ ಮಾಡುತ್ತಿರುವ ಎಲ್ಲಾ ಅಭ್ಯರ್ಥಿಗಳು ಈ ಒಂದು ಯೋಜನೆ ಸೌಲಭ್ಯವನ್ನು ಪಡೆಯಬಹುದು.
ಉಚಿತ ಹೊಲಿಗೆ ಯಂತ್ರ ಪಡೆಯಲು ಬೇಕಾಗುವ ದಾಖಲೆಗಳು:
- ರೇಷನ್ ಕಾರ್ಡ್
- ಫೋಟೋ
- ಅಭ್ಯರ್ಥಿಯ ಜನ್ಮ ದಿನಾಂಕ ಅನುಮೋದಿಸಿರುವ ಯಾವುದಾದರೂ ಒಂದು ದಾಖಲೆ
- ವಿದ್ಯಾರ್ಹತೆ ಅಂಕಪಟ್ಟಿ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ತಮ್ಮ ಗ್ರಾಮ ಪಂಚಾಯತಿಯಿಂದ ಹೊಲಿಗೆ ವೃತ್ತಿ ಮಾಡುತ್ತಿರುವ ದೃಢೀಕರಣ ಪ್ರಮಾಣ ಪತ್ರ
- ಅಭ್ಯರ್ಥಿ ಕುಟುಂಬದಲ್ಲಿ ಯಾವುದೇ ಸರಕಾರಿ ನೌಕರರು ಇರಬಾರದು.
ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-11-2024 ಒಂದು ದಿನಾಂಕವು ಕೆಲವಷ್ಟು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಸೇವಾಕೇಂದ್ರ ಗಳಿಗೆ ಭೇಟಿ ನೀಡುವ ಮೂಲಕ ಮಾಹಿತಿಯನ್ನು ಪಡೆಯಬಹುದು.
ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ಮೇಲೆ ನೀಡಿರುವ ಎಲ್ಲ ದಾಖಲೆಗಳೊಂದಿಗೆ ನಿಮ್ಮ ಹತ್ತಿರದ ಸೇವಾಕೇಂದ್ರ ಅಥವಾ ಕಂಪ್ಯೂಟರ್ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಈ ಒಂದು ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸುವುದು ಸೂಕ್ತ.