Ration Card: ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ.! ಯಾರೆಲ್ಲಾ ತಿದ್ದುಪಡಿ ಮಾಡಿಸಬಹುದು ನೋಡಿ!
Ration Card Correction: ನಮಸ್ಕಾರ ಎಲ್ಲ ಕರ್ನಾಟಕ ಜನತೆಗೆ, ರಾಜ್ಯದಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಕಾಯ್ದು ಕುಳಿತ ಜನರಿಗೆ ಆಹಾರ ಇಲಾಖೆಯಿಂದ ಸಿಹಿ ಸುದ್ದಿ ನೀಡಿದೆ. ಮತ್ತೊಮ್ಮೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಸರ್ಕಾರ ಅವಕಾಶವನ್ನು ಮಾಡಿಕೊಡಲಾಗಿದೆ. ಮತ್ತು ತಿದ್ದುಪಡಿ ಮಾಡಿಸುವವರು ಈ ಒಂದು ಅವಕಾಶವನ್ನು ಬಳಸಿಕೊಳ್ಳಬೇಕಾಗಿದೆ.
ಹೌದು ರಾಜ್ಯದಲ್ಲಿ ಹೊಸ ರೇಷನ್ ಕಾರ್ಡ್ಗಳಿಗೆ ಅರ್ಜಿಯನ್ನು ಕರೆಯಲು ಅವಕಾಶವನ್ನು ಮಾಡಿಕೊಟ್ಟಿಲ್ಲ ಮತ್ತು ಕೊನೆಯ ಸಲ ರೇಷನ್ ಕಾರ್ಡ್ ತಿದ್ದುಪಡಿ ಆದರೂ ಅವಕಾಶ ಮಾಡಿಕೊಡಿ ಎಂದು ಜನರು ಸಾಕಷ್ಟು ಆಕ್ರೋಶವನ್ನು ತೋರಿಸಿದಾಗ ಆಹಾರ ಇಲಾಖೆ ಬಿಪಿಎಲ್ ಮತ್ತು ಎಪಿಎಲ್, ಅಂತೋದಯ ರೇಷನ್ ಕಾರ್ಡ್ ಹೊಂದಿರುವ ಕುಟುಂಬದ ಸದಸ್ಯರ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವನ್ನು ಮಾಡಿಕೊಡಲಾಗಿದೆ.
ರಾಜ್ಯದಲ್ಲಿ ಇವತ್ತಿನಿಂದ ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವನ್ನು ಮಾಡಿಕೊಡಲಾಗಿದ್ದು. ಯಾವೆಲ್ಲ ಕುಟುಂಬದ ಸದಸ್ಯರು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬಹುದು, ಮತ್ತು ಏನೆಲ್ಲ ತಿದ್ದುಪಡಿ ಮಾಡಿಸಬಹುದು? ತಿದ್ದುಪಡಿ ಮಾಡಿಸಲು ಬೇಕಾಗುವ ದಾಖಲೆಗಳು? ತಿದ್ದುಪಡಿ ಎಲ್ಲಿ ಮಾಡಿಸಬೇಕು? ಎಂಬುದರ ಇನ್ನೂ ಹೆಚ್ಚಿನ ಮಾಹಿತಿ ಈ ಕೆಳಗಿನ ನೀಡಿದೆ ಓದಿ.
ರೇಷನ್ ಕಾರ್ಡ್ ನಲ್ಲಿ ಏನೆಲ್ಲ ತಿದ್ದುಪಡಿ ಮಾಡಬಹುದು:
ಕುಟುಂಬದ ಸದಸ್ಯರ ಹೆಸರು ತಿದ್ದುಪಡಿ
ಮೃತಪಟ್ಟವರ ಹೆಸರು ತಿದ್ದುಪಡಿ
ಹೊಸದಾದ ಮದುವೆಯಾದ ಹೆಂಡತಿಯ ಹೆಸರು ಸೇರ್ಪಡೆ
ನ್ಯಾಯಬೆಲೆ ಅಂಗಡಿ ಬದಲಾವಣೆ
ಇನ್ನು ಹೆಚ್ಚಿನ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವನ್ನು ಮಾಡಿಕೊಡಲಾಗಿದೆ.
ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಬೇಕಾಗುವ ದಾಖಲೆಗಳು:
ಹಳೆಯ ರೇಷನ್ ಕಾರ್ಡ್
ಅಭ್ಯರ್ಥಿಯ ಆಧಾರ್ ಕಾರ್ಡ್
ಜನನ ಪ್ರಮಾಣ ಪತ್ರ (ಐದು ವರ್ಷಕ್ಕಿಂತ ಚಿಕ್ಕ ಮಗು ಸೇರ್ಪಡೆಗೆ ಮಾತ್ರ)
ಮರಣ ಪ್ರಮಾಣ ಪತ್ರ (ಮೃತಪಟ್ಟಲ್ಲಿ ಮಾತ್ರ)
ಮೊಬೈಲ್ ಸಂಖ್ಯೆ
ರೇಷನ್ ಕಾರ್ಡ್ ತಿದ್ದುಪಡಿ ಎಲ್ಲಿ ಮಾಡಿಸಬಹುದು:
ಕುಟುಂಬದ ಅಭ್ಯರ್ಥಿಗಳು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಆಸಕ್ತಿ ಇದ್ದರೆ ಮೇಲೆ ನೀಡಿರುವ ದಾಖಲೆಗಳು ಹಾಗೂ ಅರ್ಹತೆಗಳೊಂದಿಗೆ ನಿಮ್ಮ ಹತ್ತಿರದ ಸೇವಾ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ, ರೇಷನ್ ಕಾರ್ಡ್ ನಲ್ಲಿ ನಿಮ್ಮ ಪ್ರಮುಖ ಮಾಹಿತಿಗಳನ್ನು ತಿದ್ದುಪಡಿ ಮಾಡಿಸಬಹುದಾಗಿದೆ.