Ration Card Cancellation: 22 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ರದ್ದು.!
Ration Card Cancellation: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, 22 ಲಕ್ಷಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ದೊಡ್ಡ ಶಾಕ್ ನೀಡಿದೆ. ಅಂದರೆ ಇಷ್ಟು ಜನರ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲು ಮುಂದಾಗಿದೆ ಯಾವ ಕಾರಣಕ್ಕೆ ರದ್ದು ಮಾಡಲಾಗುತ್ತಿದೆ, ಮತ್ತು ಯಾವ್ಯಾವ ಎಲ್ಲ ಸೌಲಭ್ಯಗಳು ಸಿಗಲಿವೆ, ಮತ್ತು ಸಿಗಲ್ಲ ಎಂಬುದರ ಸಂಪೂರ್ಣ ಮಾಹಿತಿ ಕೆಳಗಡೆ ನೀಡಲಾಗಿದೆ ಓದಿ.
ಕರ್ನಾಟಕ ರಾಜ್ಯದಲ್ಲಿ ಸಾಕಷ್ಟು ಬಿಪಿಎಲ್ ರೇಷನ್ ಕಾರ್ಡ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಹೊಂದಿದ ಸಾಕಷ್ಟು ಜನರು ಇದ್ದು, 22 ಲಕ್ಷಕ್ಕೂ ಹೆಚ್ಚು ಜನರ ರೇಷನ್ ಕಾರ್ಡ್ ಗಳನ್ನು ಬಂದ್ ಮಾಡಲು ಸರ್ಕಾರ ಮುಂದಾಗಿದೆ. ಯಾಕೆಂದರೆ ಇವರು ಸುಳ್ಳು ದಾಖಲೆಗಳನ್ನು ನೀಡಿ ರೇಷನ್ ಕಾರ್ಡ್ ಪಡೆದಿರುವ ವಿಷಯ ಸರ್ಕಾರ ಗಮನಕ್ಕೆ ಬಂದಿದೆ. ಅದರಲ್ಲಂತೂ ಬ್ಯಾಂಕ್ ಸಾಲ ಮತ್ತು ವಾರ್ಷಿಕ ವರಮಾನ ಪರಿಶೀಲನೆ ಮಾಡಿ ಲಿಸ್ಟ್ ಮಾಡಲಾಗಿದೆ.
ರೇಷನ್ ಕಾರ್ಡ್ ರದ್ದು:
ರಾಜ್ಯದಲ್ಲಿ ಕೆಲವಷ್ಟು ತಪ್ಪು ಮಾಹಿತಿಗಳನ್ನು ನೀಡಿ ಅಥವಾ ಶ್ರೀಮಂತರಾಗಿದ್ದು ಬಡವರೆಂದು ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡಿರುವ ಮಾಹಿತಿ ತಿಳಿದಿದೆ. ಸರ್ಕಾರದ ಇನ್ನೂ ಹೆಚ್ಚು ನಿಯಮಗಳನ್ನು ತೆಗೆದುಕೊಳ್ಳದೆ ಬಿಪಿಎಲ್ ರೇಷನ್ ಕಾರ್ಡ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಮಾಡಿಸಿರುವ ವ್ಯಕ್ತಿಗಳನ್ನು ಪತ್ತೆ ಮಾಡುತ್ತಿದೆ. ಇದೀಗ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಆಹಾರ ಮತ್ತು ನಾಗರಿಕ ಸರಬರಾಜು ಒಟ್ಟು 22,000 ಅಂತ್ಯೋದಯ ಮತ್ತು ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದು ಖಚಿತವಾಗಿದೆ.
ರಾಜ್ಯ ಸರ್ಕಾರ ಸುಳ್ಳು ದಾಖಲೆಗಳನ್ನು ನೀಡಿ ಪಡೆದುಕೊಂಡಿರುವ ರೇಷನ್ ಕಾರ್ಡ್ ಗಳನ್ನು ಪತ್ತೆ ಮಾಡಲು ಈ ಕೆ ವೈ ಸಿ ಮಾರ್ಗವನ್ನು ಬಳಸಿತ್ತು ಇದರಲ್ಲಿ 1.2ಲಕ್ಷಕ್ಕೂ ಹೆಚ್ಚು ಆದಾಯ ಹೊಂದಿದವರು ಬಹಳಷ್ಟು ಕಂಡು ಬಂದಿದ್ದಾರೆ.
ರೇಷನ್ ಕಾರ್ಡ್ ಪ್ರಮುಖ ಮಾಹಿತಿ:
ರಾಜ್ಯ ಸರ್ಕಾರವು ಅನರ್ಹ ರೇಷನ್ ಕಾರ್ಡ್ ಗಳನ್ನು ಏಕಕಾಲಕ್ಕೆ ರದ್ದು ಮಾಡುವುದಿಲ್ಲ, ಇವರು ಪಡೆಯುವ ಎಲ್ಲಾ ಯೋಜನೆ ಸೌಲಭ್ಯಗಳನ್ನು ಬಂದ್ ಮಾಡುವುದಾಗಿ ಹೇಳಿದ್ದಾರೆ ಮತ್ತು ಅನ್ನಭಾಗ್ಯ ಅಕ್ಕಿ ಸಹ ಸಿಗುವುದಿಲ್ಲ, ಕೆಲವೊಂದು ಬಿಪಿಎಲ್, ಅಂತ್ಯೋದಯ ರೇಷನ್ ಕಾರ್ಡ್ ಗಳನ್ನು ಎಪಿಎಲ್ ರೇಷನ್ ಕಾರ್ಡಗೆ ವರ್ಗಾಯಿಸಲಾಗುತ್ತದೆ ಎಂದು ಸಹ ಹೇಳಿದೆ. ಈಗ ಯಾವುದೇ ರೇಷನ್ ಕಾರ್ಡ್ ಗಳು ರದ್ದಾಗುವುದಿಲ್ಲ, ಇನ್ನು ಸುಳ್ಳು ದಾಖಲೆಗಳು ಅಥವಾ ಸುಳ್ಳು ಮಾಹಿತಿ ನೀಡಿ ಪಡೆದುಕೊಂಡಿರುವ ರೇಷನ್ ಕಾರ್ಡ್ ಗಳು ಸಾಕಷ್ಟು ಇವೆ. ಅವುಗಳನ್ನು ಪತ್ತೆಹಚ್ಚಲು ಯಾವುದಾದರು ಮಾರ್ಗವನ್ನು ಬಳಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.