Anna Bhagya New Rules: ನಮಸ್ಕಾರ ಸ್ನೇಹಿತರೇ, ಕರ್ನಾಟಕದ ಎಲ್ಲಾ ನಮ್ಮ ಪ್ರೀತಿಯ ಜನತೆಗೆ ಈ ದಿನದ ಹೊಸ ಮಾಹಿತಿವುಳ್ಳ ಲೇಖನಕ್ಕೆ ಸ್ವಾಗತ, ಈ ಲೇಖನದ ಮುಖಾಂತರ ತಮಗೆಲ್ಲರಿಗೂ ತಿಳಿಸುವ ವಿಷಯ ಏನೆಂದರೆ, ನಮ್ಮ ರಾಜ್ಯದ ಕಾಂಗ್ರೆಸ್ ಸರ್ಕಾರವು ಚುನಾವಣೆ ಗೆದ್ದು ಅಧಿಕಾರಕ್ಕೇ ಬಂದ ನಂತರ ತಾವು ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳನ್ನು ರಾಜ್ಯಾದ್ಯಂತ ಜಾರಿಗೆ ತಂದರು. ಹಾಗೇ ಜಾರಿಗೆ ತಂದ 5 ಖಾತರಿ ಯೋಜನೆಗಳಲ್ಲಿ ಅನ್ನಭಾಗ್ಯ (Anna Bhagya Scheme) ಯೋಜನೆಯು ಸಹ ಒಂದು, ನಿಮ್ಮೆಲ್ಲರಿಗೂ ಸಹ ತಿಳಿದಿರುವ ಹಾಗೆ ಈ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಸರ್ಕಾರವು 10 kg ಅಕ್ಕಿ ನೀಡುವ ಭರವಸೆ ನೀಡಿತ್ತು.
Table of Contents
ಆದರೆ ಕಾರಣಾಂತರಗಳಿಂದ ರಾಜ್ಯದ ಜನತೆಗೆ ಸರ್ಕಾರವು 5 kg ಅಕ್ಕಿ ನೀಡಿ ಇನ್ನುಳಿದ 5 kg ಯ ಅಕ್ಕಿಯ ಹಣವನ್ನು ಪ್ರತೀ ಕೆಜಿಗೆ ₹35 ರೂ. ಗಳಂತೆ ಎಲ್ಲಾ ಫಲಾನುಭಿಗಳಿಗೆ ಜಮಾ ಮಾಡಲಾಗುವುದು ಎಂದು ಸರ್ಕಾರದಿಂದ ತೀರ್ಮಾನಿಸಲಾಗಿತ್ತು. ಅದರ ಈಗ ಈ ಒಂದು ತೀರ್ಮಾನಕ್ಕೆ ರಾಜ್ಯ ಸರಕಾರವೂ ಹೊಸ ನಿಯಮವನ್ನೂ ಜಾರಿಗೆ ತಂದಿದೆ, ಅದೇನೆಂದು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ.
Anna Bhagya Scheme New Rules: ಅನ್ನಭಾಗ್ಯ ಯೋಜನೆಗೆ ಸರಕಾರದಿಂದ ಹೊಸ ನಿಯಮ.!
ಹೌದು ಸ್ನೇಹಿತರೇ, ರಾಜ್ಯ ಸರಕಾರವೂ ನಮ್ಮ ಕರ್ನಾಟಕ ರಾಜ್ಯದಲ್ಲಿ ಜಾರಿಗೆ ತಂದಿರುವ ಈ ಅನ್ನಭಾಗ್ಯ ಯೋಜನೆಗೆ ರಾಜ್ಯಾದ್ಯಂತ ಹೊಸ ನಿಯಮವನ್ನು ಮುಂದಿನ ತಿಂಗಳಿನಿಂದ ಜಾರಿಗೆ ತರಲು ಮುಂದಾಗಿದೆ, ಅದೇನೆಂದರೆ ರಾಜ್ಯದ ಎಲ್ಲಾ ಅನ್ನಭಾಗ್ಯ ಯೋಜನೆಯ ಫಾನುಭವಿಗಳಿಗೆ ನೀಡುತ್ತಿದ್ದ 5 kg ಅಕ್ಕಿಯ ಹಣವನ್ನು ಪ್ರತೀ ಕೆಜಿಗೆ ₹35 ರೂಪಾಯಿಯಂತೆ ಎಲ್ಲಾ ಅನ್ನಭಾಗ್ಯ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಪ್ರತಿ ತಿಂಗಳು ಜಾಮಾ ಮಾಡಲಾಗುತ್ತಿತ್ತು, ಆದರೆ ರಾಜ್ಯ ಸರಕಾರವೂ ಈಗ ಈ ಒಂದು ಅಕ್ಕಿಯ ಬದಲು ಹಣವನ್ನು ಹಾಕುವ ಕ್ರಮವನ್ನು ಮುಕ್ತಾಯಗೊಳಿಸಿ ಈಗ ಅಕ್ಕಿಯ ಹಣವನ್ನು ನೀಡುವ ಬದಲು ಮುಂದಿನ ತಿಂಗಳಿನಿಂದ ಸಂಪೂರ್ಣವಾಗಿ 10 kg ಅಕ್ಕಿಯನ್ನು ನೀಡುವ ನಿರ್ಧಾರವನ್ನು ರಾಜ್ಯಸರ್ಕಾರವು ಜಾರಿಗೆ ತಂದಿದೆ.
ಇತರೆ ವಿಷಯಗಳು.!