Swavalambi Sarathi Scheme: ವಾಹನ ಖರೀದಿಗೆ 4 ಲಕ್ಷದವರೆಗೆ ಸಹಾಯಧನ.! ಕೂಡಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ!

Swavalambi Sarathi Scheme: ವಾಹನ ಖರೀದಿಗೆ 4 ಲಕ್ಷದವರೆಗೆ ಸಹಾಯಧನ.! ಕೂಡಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ!

Swavalambi Sarathi Scheme: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ಯಾವುದೇ ಉದ್ಯೋಗ ಇಲ್ಲದ ಜನರಿಗೆ ಈ ಒಂದು ಯೋಜನೆ ಅಡಿಯಲ್ಲಿ ವಾಹನವನ್ನು ಖರೀದಿಸಲು ಶೇಕಡ 75 ರಷ್ಟು ಅಂದರೆ ನಾಲ್ಕು ಲಕ್ಷದವರೆಗೆ ಸಹಾಯಧನವನ್ನು ನೀಡುತ್ತಿದೆ. ಈ ಒಂದು ಸಹಾಯಧನದಿಂದ ಬಡತನದಲ್ಲಿರುವ ವ್ಯಕ್ತಿಗಳು 4 ಚಕ್ರದ ವಾಹನ ಅಂದರೆ (ಗೂಡ್ಸ್, ಟ್ಯಾಕ್ಸಿ ಮತ್ತು ಇತ್ಯಾದಿ ವಾಹನಗಳು) ಖರೀದಿಸಲು ಈ ಒಂದು ಯೋಜನೆ ಬಹಳ ಸಹಾಯಕವಾಗಿದೆ ಇದರ ಸಂಪೂರ್ಣ ಮಾಹಿತಿ ಕೆಳಗಡೆ ನೀಡಲಾಗಿದೆ.

ಹೌದು ಸ್ವವಲಂಬಿ ಸಾರಥಿ ಯೋಜನೆಗೆ ಯಾವ ರೀತಿಯಾಗಿ ಅರ್ಜಿ ಸಲ್ಲಿಸುವುದು ಮತ್ತು ಯಾವೆಲ್ಲ ಅರ್ಹತೆಗಳು ಬೇಕು ಮತ್ತು ಅರ್ಜಿ ಸಲ್ಲಿಸಲು ಯಾವೆಲ್ಲ ದಾಗಲು ಬೇಕು ಎಷ್ಟರ ವರೆಗೆ ಸಹಾಯಧನ ಸಿಗಲಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಕೆಳಗಡೆ ನೀಡಲಾಗಿದೆ ಓದಿ.

ಸ್ವಾವಲಂಬಿ ಸಾರಥಿ ಯೋಜನೆ ಮಾಹಿತಿ:

  • ಯೋಜನೆ ಹೆಸರು: ಸ್ವಾವಲಂಬಿ ಸಾರಥಿ ಯೋಜನೆ
  • ಸಹಾಯಧನ: ವಾಹನ ಖರೀದಿಗೆ ಶೇಕಡಾ 75 ರಷ್ಟು ಅಂದರೆ 4 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತದೆ.
  • ವಯಸ್ಸಿನ ಮಿತಿ: ಕನಿಷ್ಠ 21 ವರ್ಷ ಗರಿಷ್ಠ 45 ವರ್ಷ ಮೀರಬಾರದು.

ಸ್ವಾವಲಂಬಿ ಸಾರಥಿ ಯೋಜನೆ ಅರ್ಹತೆಗಳು:

ಈ ಯೋಜನೆಯ ಅರ್ಜಿ ಸಲ್ಲಿಸಲು ಈ ಅರ್ಹತೆಗಳನ್ನು ಹೊಂದಿರಬೇಕು:

  • ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದಲ್ಲಿ 90 ಸಾವಿರ ಇರಬೇಕು ಮತ್ತು ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಅಭ್ಯರ್ಥಿಗಳ ವಾರ್ಷಿಕ ಆದಾಯ 1.20 ಲಕ್ಷ ಇರಬೇಕು.
  • ವಾಹನ ಚಾಲನ ಪರವಾನ ಹೊಂದಿರಬೇಕು.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಯೋಜನೆಗಳಿಂದ ಸಹಾಯಧನ ಸೌಲಭ್ಯಗಳನ್ನು ಪಡೆದಿರಬಾರದು.
  • ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಈ ಒಂದು ಯೋಜನೆ ದೊರಕಲ್ಲಿದೆ.

ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

  • ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಫೋಟೋ
  • ಆದಾಯ ಪ್ರಮಾಣ ಪತ್ರ
  • ಡ್ರೈವಿಂಗ್ ಲೈಸೆನ್ಸ್
  • ಬ್ಯಾಂಕ್ ಪಾಸ್ ಬುಕ್
  • ರೇಷನ್ ಕಾರ್ಡ್

ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ:

ಮೇಲೆ ನೀಡಿರುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದರೆ ಮತ್ತು ಅದರ ಕೆಳಗಡೆ ನೀಡಿರುವ ದಾಖಲೆಗಳೊಂದಿಗೆ, 23-11-2024 ಈ ದಿನಾಂಕದ ಒಳಗಾಗಿ ನಿಮ್ಮ ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಈ ಒಂದು ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸುವ ಮುಖಾಂತರ ವಾಹನ ಖರೀದಿಗೆ ಸಹಾಯಧನವನ್ನು ಪಡೆಯಬಹುದಾಗಿದೆ.

Leave a Comment