PUC ಪಾಸಾದವರಿಗೆ ₹40,000 ವಿದ್ಯಾರ್ಥಿವೇತನ ಸಿಗಲಿದೆ ಕೂಡಲೇ ಅರ್ಜಿ ಸಲ್ಲಿಸಿ: ₹40000 Scholarship for PUC Passed Students Apply Now.!

PUC ಪಾಸಾದವರಿಗೆ ₹40,000 ವಿದ್ಯಾರ್ಥಿವೇತನ ಸಿಗಲಿದೆ ಕೂಡಲೇ ಅರ್ಜಿ ಸಲ್ಲಿಸಿ: ₹40000 Scholorship for Puc Passed Students Apply Now.!

ದ್ವಿತೀಯ (2nd) ಪಿಯುಸಿಯಲ್ಲಿ ಉತ್ತೀರ್ಣರಾಗಿ ಪ್ರಥಮ ವರ್ಷದ ಪದವಿ (1st year Degree) ಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ (ರಮಣ ಕಾಂತ್ ಮುಂಜಾಲ್ ಫೌಂಡೇಶನ್) ನ ವತಿಯಿಂದ ವಿದ್ಯಾರ್ಥಿವೇತನವನ್ನು ₹40,000 ರೂಪಾಯಿಯಿಂದ ₹5,50,000 ರೂಪಾಯಿಯವರೆಗೆ ನೀಡಲು ಅರ್ಜಿಯನ್ನು ಕರೆಯಲಾಗಿದೆ ಆಸಕ್ತ ವಿಧ್ಯಾರ್ಥಿಗಳು ಅರ್ಜಿ ಸಲ್ಲಿಸಿ.

ವಿದ್ಯಾರ್ಥಿ ವೇತನ ದಂತಹ ಆರ್ಥಿಕ ಸಹಾಯ ಯೋಜನೆಗಳು ಪ್ರತಿಯೊಬ್ಬ ವಿದ್ಯಾರ್ಥಿಯು ಉತ್ತಮವಾದ ಶಿಕ್ಷಣವನ್ನು ಪಡೆಯಲು ಹಾಗೂ ಶಿಕ್ಷಣವನ್ನು ಮುಂದುವರಿಸಲು ಬಹು ಉಪಯೋಗವಾಗಿವೆ. ಆರ್ಥಿಕ ಸಹಾಯದ ರೂಪದಲ್ಲಿ ಬಡ ಮಕ್ಕಳಿಗೆ ಶಿಕ್ಷಣವನ್ನು ಮುಂದುವರಿಸಲು ಈ ವಿದ್ಯಾರ್ಥಿವೇತನವನ್ನ ನೀಡುವುದಕ್ಕಾಗಿ (ರಮಣ ಕಾಂತ್ ಮುಂಜಾಲ್ ಫೌಂಡೇಶನ್) ನ ವತಿಯಿಂದ ಈ ವಿದ್ಯಾರ್ಥಿವೇತನಕ್ಕಾಗಿ ವಿಧ್ಯಾರ್ಥಿಗಳಿಗೆ ಅರ್ಜಿಯನ್ನು ಕರೆಯಲಾಗಿದೆ.

Scholarship for Students: ರಾಜ್ಯ ಸರ್ಕಾರದಿಂದ 6ನೇ ತರಗತಿ ಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಕೂಡಲೆ ಇದಕ್ಕೆ ಅರ್ಜಿ ಸಲ್ಲಿಸಿ!

ಯಾವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರು? ಎಷ್ಟು ರೂಪಾಯಿಗಳ ವರೆಗೆ ಈ ವಿದ್ಯಾರ್ಥಿವೇತನ ಸಿಗಲಿದೆ? ಈ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ಎಂಬ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ. ಅರ್ಜಿಯನ್ನು ಸಲ್ಲಿಸುವ ವಿದ್ಯಾರ್ಥಿಗಳು ಕೆಳಗಿನ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಂಡು ನಂತರ ತಮ್ಮ ಅರ್ಜಿ ಸಲ್ಲಿಸಿ.

ಈ ವಿದ್ಯಾರ್ಥಿವೇತನದ ಸಂಪೂರ್ಣ ವಿವರಗಳು:

Hero FinCorp – (ಹೀರೋ ಫಿನ್ ಕಾರ್ಪ್) ನವರ ಉಪಕ್ರಮವಾದ (ರಮಣ ಕಾಂತ್ ಮುಂಜಾಲ್ ಫೌಂಡೇಶನ್) ವಿದ್ಯಾರ್ಥಿವೇತನವೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ಮತ್ತು ಅವರು ಶಿಕ್ಷಣವನ್ನು ಮುಂದುವರಿಸಲು ಆರ್ಥಿಕವಾಗಿ ಸಹಾಯವನ್ನು ನೀಡಲು ಈ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ. ಪ್ರಥಮ ವರ್ಷದ ಪದವಿಯಲ್ಲಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ವಿಧ್ಯಾರ್ಥಿಗಳು ಈ ಕೆಳಗಿನ ಕೋರ್ಸ್ ಗಳಲ್ಲಿ ದಾಖಲಾಗಿರಬೇಕು. ಬಿಎಎಫ್, ಬಿ.ಎ. (ಎಕನಾಮಿಕ್ಸ್), ಬಿಬಿಎ, ಬಿ.ಕಾಂ, ಬಿ.ಎಸ್ಸಿ (ಸ್ಮಾಟಿಸ್ಟಿಕ್ಸ್), ಬಿಎಫ್ಐಎ, ಬಿ.ಕಾಂ. (ಎಚ್.ಇ). ಬಿಬಿಎಸ್, ಬಿಬಿಐ, ಬಿಎಂಎಸ್, ಐಪಿಎಂ ಅಥವಾ ಈ ಮೇಲಿನ ಕೋರ್ಸ್ ಗಳನ್ನು ಹೊರತುಪಡಿಸಿ ಹಣಕಾಸು ವಿಷಯಕ್ಕೆ ಸಂಬಂಧಿಸಿದ ಇತರೆ ಕೋರ್ಸ್ ಗಳಲ್ಲಿ ಪದವಿ ಮಾಡುತ್ತಿರುವ ವಿಧ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಲು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:

ಈ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಗಳು SSLC (10th) ಹಾಗೂ (2nd) ದ್ವಿತೀಯ PUC ಯಲ್ಲಿ ಕನಿಷ್ಠ 80% ಅಂಕಗಳನ್ನು ಪಡೆದು ಪಾಸಾಗಿರುವುದು ಕಡ್ಡಾಯವಾಗಿರುತ್ತದೆ. ಮತ್ತು ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕದ ಆದಾಯವು 4 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು.

10th & 12th Students Scholarship

ವಿಧ್ಯಾರ್ಥಿಗಳಿಗೆ ಎಷ್ಟು ರೂಪಾಯಿ ವಿದ್ಯಾರ್ಥಿವೇತನ ಸಿಗಲಿದೆ.?

(ರಮಣ ಕಾಂತ್ ಮುಂಜಾಲ್ ಫೌಂಡೇಶನ್) ಸಂಸ್ಥೆಯ ನಿಯಮಗಳ ಅನುಸಾರ ಈ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ₹40,000 ರೂಪಾಯಿಯಿಂದ ₹5,50,000 ರೂಪಾಯಿಯವರೆಗೆ ವಿದ್ಯಾರ್ಥಿವೇತನವು ಸಿಗಲಿದೆ.

SC/ST/OBC Students Scholarship 2024: ನೀವೂ ಸಹ SC/ST ಮತ್ತು OBC ಆಗಿದ್ದರೆ ನಿಮಗೆ 48000 ರೂಪಾಯಿಗಳ ಸ್ಕಾಲರ್ಶಿಪ್ ಸಿಗುತ್ತದೆ, ಎಲ್ಲಾ ವಿವರಗಳು ಇಲ್ಲಿದೆ.!

ಈ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ವಿವರ:

ಈ (ರಮಣ ಕಾಂತ್ ಮುಂಜಾಲ್ ಫೌಂಡೇಶನ್) ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, ಅರ್ಜಿಯನ್ನು ಸಲ್ಲಿಸಲು 02/ಆಗಸ್ಟ್/2024 ನಿಗದಿಪಡಿಸಿರುವಂತಹ ಕೊನೆಯ ದಿನಾಂಕವಾಗಿದೆ ವಿದ್ಯಾರ್ಥಿಗಳು ಆದಷ್ಟು ಬೇಗನೆ ಅರ್ಜಿಯನ್ನು ಸಲ್ಲಿಸಿ ಈ ವಿದ್ಯಾರ್ಥಿವೇತನದ ಲಾಭವನ್ನು ಪಡೆದುಕೊಳ್ಳಿ.

ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಲು ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಿ ಈ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿಯನ್ನು ಸಲ್ಲಿಸುವ ಲಿಂಕ್ – http://www.b4s.in/nwmd/RMKSP4
WhatsApp Group Join Now
Telegram Group Join Now

Leave a Comment

error: Don't Copy Bro !!