PM Awas Yojana: ಉಚಿತ ಮನೆ ಪಡೆಯಲು ಅರ್ಜಿ ಪ್ರಾರಂಭ.! ಈಗಲೇ ಅಪ್ಲೈ ಮಾಡಿ, ಇಲ್ಲಿದೆ ಲಿಂಕ್!
PM Awas Yojana: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ ಮತ್ತು ತಂದಿದೆ, ಇದರಿಂದಾಗಿ ಸಾಕಷ್ಟು ಜನರಿಗೆ ಸಹಾಯಕವಾಗಿದೆ ಮತ್ತು ಇದರಲ್ಲಿ ಒಂದಾದ ಯೋಜನೆ ಪ್ರಧಾನಮಂತ್ರಿ ಅವಾಸ್ ಯೋಜನೆ ಆಗಿದೆ. ಇದರ ಅಡಿಯಲ್ಲಿ ಮನೆ ಇಲ್ಲದವರಿಗೆ ಉಚಿತ ಮನೆ ಕಟ್ಟಿಸಿಕೊಳ್ಳಲು ಸಹಾಯಧನ ಸಿಗುತ್ತಿದೆ ಮತ್ತು ವ್ಯಾಪಾರವನ್ನು ಪ್ರಾರಂಭಿಸಲು ಮತ್ತು ಉದ್ಯಮವನ್ನು ಆರಂಭಿಸಲು ಈ ಯೋಜನೆ ಅಡಿಯಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಹ ದೊರೆಯಲಿದೆ ಇದರ ಸಂಪೂರ್ಣ ಮಾಹಿತಿ ಈ ಕೆಳಗಡೆ ನೀಡಲಾಗಿದೆ.
ಹೌದು ಈ ಯೋಜನೆ ಅಡಿಯಲ್ಲಿ ಎಷ್ಟರವರೆಗೆ ಆರ್ಥಿಕ ಸಹಾಯ ಧನ ಸಿಗಲಿದೆ? ಮತ್ತು ಯಾವ ರೀತಿಯಾಗಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವುದು, ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು, ಯಾವೆಲ್ಲ ದಾಖಲೆಗಳು ಬೇಕು?ಎಂಬುದರ ಸಂಪೂರ್ಣ ಮಾಹಿತಿ ಕೆಳಗಿದೆ ಓದಿ.
PM Awas Yojana Application Online:
ಎಷ್ಟರವರೆಗೆ ಆರ್ಥಿಕ ಸಹಾಯಧನ ಸಿಗುತ್ತೆ:
ಇವಂದು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಎರಡು ರೀತಿಯ ಭಾಗಗಳನ್ನು ಮಾಡಲಾಗಿದೆ ಅದರ ಮಾಹಿತಿ ಈ ಕೆಳಗಿನಂತಿದೆ:
- ನಗರ ಪಟ್ಟಿ: ನಗರ ಪ್ರದೇಶದಲ್ಲಿ ವಾಸಿಸುವ ಜನರಿಗೆ ಉಚಿತಮನೆ ಕಟ್ಟಿಸಿಕೊಳ್ಳಲು ₹1,70,000 ಸಹಾಯಧನ ಸಿಗಲಿದೆ.
- ಗ್ರಾಮೀಣ ಪಟ್ಟಿ: ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರಿಗೆ ಉಚಿತ ಮನೆ ಕಟ್ಟಿಸಿಕೊಳ್ಳಲು 2,67,000 ಸಹಾಯಧನ ಸಿಗಲಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು:
- ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಠ 18 ವರ್ಷ ಪೂರೈಸಿರಬೇಕು.
- ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ 6 ಲಕ್ಷದ ಒಳಗಡೆ ಇರಬೇಕು.
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಮೊದಲು ಆದ್ಯತೆಯನ್ನು ಅಂಗವಿಕಲ ಮತ್ತು ಹಿರಿಯ ನಾಗರಿಕರಿಗೆ, ವಿಚ್ಛೇದನ ಮಹಿಳೆಯರಿಗೆ ನೀಡಿದೆ.
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇದಕ್ಕೂ ಮುಂಚೆ ಯಾವುದೇ ಯೋಜನೆಗಳಲ್ಲಿ ಸಾಲ ಪಡೆದಿರಬಾರದು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಫೋಟೋ
- ಮೊಬೈಲ್ ಸಂಖ್ಯೆ
ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ:
ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೇಲೆ ನೀಡಿರುವ ಎಲ್ಲಾ ಅರ್ಹತೆ ಮತ್ತು ದಾಖಲೆಗಳೊಂದಿಗೆ ನಿಮ್ಮ ಹತ್ತಿರದ ಕಂಪ್ಯೂಟರ್ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ, ಅಥವಾ ಕೆಳಗಡೆ ನೀಡಿರುವ ಲಿಂಕ್ ಮೂಲಕ ನಿಮ್ಮ ಮೊಬೈಲ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ಲಿಂಕ್: https://pmay-urban.gov.in/angikaaarevent/29