Ration card online apply in Karnataka : ನಮಸ್ಕಾರ ಸ್ನೇಹಿತರೇ, ಈ ಲೇಖನದ ಮುಖಾಂತರ ತಮಗೆ ತಿಳಿಸಲು ಬಯಸುವ ವಿಷಯ ಏನಂದರೆ ತುಂಬಾ ಜನರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬಹಳ ಕಾತುರದಿಂದ ಕಾಯುತ್ತಿದ್ದಾರೆ, ಹಾಗೂ ರಾಜ್ಯ ಸರ್ಕಾರದ ಕಡೆಯಿಂದ ಈಗಾಗಲೇ ಬಹಳ ಬಾರಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದರು ಆದರೆ ಸರ್ವರ್ ನ ಸಮಸ್ಯೆಯಿಂದಾಗಿ ರಾಜ್ಯ ಸರ್ಕಾರವೂ ಹೊಸ ದಿನಾಂಕವನ್ನು ನಿಗದಿ ಪಡಿಸದೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಈ ದಿನಾಂಕದಂದು ಅರ್ಜಿ ಸಲ್ಲಿಸಬಹುದಾಗಿದೆ ಮತ್ತು ಅರ್ಜಿ ಹಾಕಲು ಬೇಕಾದ ದಾಖಲೆಗಳ ವಿವರ ಇಲ್ಲಿದೆ.
New Ration card online apply : ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ:
ಹೌದು ಸ್ನೇಹಿತರೆ ಹಲವು ಜನರು ತುಂಬಾ ದಿನದಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಕಾಯುತ್ತಿದ್ದಾರೆ ಅಂತವರಿಗೆ ರಾಜ್ಯ ಸರ್ಕಾರದ ಕಡೆಯಿಂದ ಹಲವು ಬಾರಿ ಅರ್ಜಿ ಹಾಕಲು ಅವಕಾಶ ಮಾಡಿಕೊಟ್ಟಿತ್ತು ಅಂದರೆ ಮೇ ತಿಂಗಳಲ್ಲಿ ಎರಡರಿಂದ ಮೂರು ಬಾರಿ ಅರ್ಜಿಯನ್ನು ಹಾಕಲು ಅವಕಾಶ ಮಾಡಿಕೊಡಲಾಗಿತ್ತು ಆದರೆ ಸರ್ವರ್ ನ ಸಮಸ್ಯೆಯಿಂದಾಗಿ ಹೆಚ್ಚಿನ ಅರ್ಜಿ ಗಳು ಸಲ್ಲಿಕೆ ಆಗಿಲ್ಲ ಹೀಗಾಗಿ ಇಂದಿನ ದಿನಗಳಲ್ಲಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿಗೆ ರಾಜ್ಯ ಸರ್ಕಾರವು ಅವಕಾಶ ಕೊಟ್ಟಿದೆ.
New Ration card online apply : ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಪ್ರಾರಂಭದ ದಿನಾಂಕ:
ಹೌದು ಗೆಳೆಯರೇ, ನೀವುಗಳೇನಾದರೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಬಯಸಿದರೆ ನಮ್ಮ ರಾಜ್ಯ ಸರ್ಕಾರದ ಕಡೆಯಿಂದ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಹೊಸ ದಿನಾಂಕವನ್ನು ನಿಗದಿ ಮಾಡಲಾಗಿದೆ ಅದು ಈಗಾಗಲೇ ಜೂನ್ ತಿಂಗಳ 6ನೇ ತಾರೀಕಿನಿಂದ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು ಎಂಬ ಮಾಹಿತಿಯನ್ನು ಖಾಸಗಿ ಮಾಧ್ಯಮಗಳಿಂದ ತಿಳಿದು ಬರುತ್ತಿದೆ.
ಸ್ನೇಹಿತರೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಜೂನ್ ಮೊದಲ ವಾರದಿಂದ ಅಥವಾ ಇದೇ ಜೂನ್ ತಿಂಗಳಲ್ಲಿ ಹೊಸ ಪಡಿತರ ಚೀಟಿ ಗಳಿಗೆ ಅರ್ಜಿ ಹಾಕಲು ಅವಕಾಶವಿರುತ್ತದೆ. ಹೀಗಾಗಿ ಸರ್ಕಾರದ ಯಾವುದೇ ಮುನ್ಸೂಚನೆ ಇರುವುದಿಲ್ಲ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕೊಡುತ್ತಿದೆ.
ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಮುಖ್ಯವಾಗಿ ಬೇಕಾಗಿರುವ ದಾಖಲೆಗಳು:-
- ಆದಾಯ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ ಮತ್ತು
- ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
- ಇತ್ತೀಚಿನ ಭಾವಚಿತ್ರ
- ಜನನದ ಪ್ರಮಾಣ ಪತ್ರ ಇದು (ಆರು ವರ್ಷ ಒಳಗಿನ ಮಕ್ಕಳಿಗೆ ಅನ್ವಯಿಸುತ್ತದೆ)
ಮೇಲೆ ನೀಡಲಾಗಿರೋ ಎಲ್ಲಾ ದಾಖಲೆಗಳು ನಿಮ್ಮ ಬಳಿ ಇದ್ದರೆ ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಲಿಂಕ್ ಅನ್ನು ಸಕ್ರಿಯವಾಗಿ ಬಿಟ್ಟಾಗ ಸರಳವಾಗಿ ಅರ್ಜಿಯನ್ನು ಸಲ್ಲಿಸಬಹುದು ಅದಕ್ಕಾಗಿಯೇ ಮೇಲಿನ ದಾಖಲೆಗಳನ್ನು ಕಡ್ಡಾಯವಾಗಿ ಸರಿಯಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ.
New Ration card online apply : ಹೊಸ ರೇಷನ್ ಕಾರ್ಡ್ ಗೆ ಹೇಗೆ ಹಾಗೂ ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು ?
ತುಂಬಾ ಫಲಾನುಭಿವಿ ಜನರಿಗೆ ಹೊಸ ರೇಷನ್ ಕಾರ್ಡ್ ಗೆ ಹೇಗೆ ಮತ್ತು ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು ಎಂಬ ಸಂಧೆಯ ಕಾಡುತ್ತಿದೆ ಅದಕ್ಕಾಗಿ ನಾವು ಈ ಕೆಳಗೆ ನೀಡಲಾಗಿರೋ ಆನ್ಲೈನ್ ನ ಸೆಂಟರ್ಸ್ ಗಳಿಗೆ ನೀವು ತೆರಳಿ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಈ ಆನ್ಲೈನ್ ನ ಸೆಂಟರ್ಸ್ ಗಳಿಗೆ ಭೇಟಿ ನೀಡಿ :-
- ಕರ್ನಾಟಕ ಒನ್
- ಬಾಪೂಜಿ ಸೇವ ಕೇಂದ್ರ
- ಗ್ರಾಮ ಒನ್
- CSS ಸೇವಾ ಕೇಂದ್ರಗಳಲ್ಲಿ
- ಬೆಂಗಳೂರು ಒನ್
ಈ ಮೇಲೆ ನೀಡಲಾಗಿರೋ ಎಲ್ಲಾ ಆನ್ಲೈನ್ ಸೆಂಟರ್ ಗಳಲ್ಲಿ ಅಥವಾ ಮೇಲೆ ನೀಡಲಾದ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಲ್ಲಿ ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.
ಸ್ನೇಹಿತರೆ ಈ ಲೇಖನ ನಿಮಗೆ ಇಷ್ಟವಾದಲ್ಲಿ ನಿಮ್ಮ ಹತ್ತಿರದ ಸ್ನೇಹಿತರಿಗೆ ಮತ್ತು ಕುಟುಂಬದ ಸದಸ್ಯರಿಗೆ ಹಂಚಿಕೊಳ್ಳಿ.