New Ration Card: ಹೊಸ ಪಡಿತರ ಚೀಟಿ ಪಡೆಯಲು ಅರ್ಜಿ ಪ್ರಾರಂಭ.! ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕು ನೋಡಿ!

New Ration Card: ಹೊಸ ಪಡಿತರ ಚೀಟಿ ಪಡೆಯಲು ಅರ್ಜಿ ಪ್ರಾರಂಭ.! ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕು ನೋಡಿ!

New Ration Card Online: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ಹೊಸದಾಗಿ ಮದುವೆಯಾದ ನವದಂಪತಿಗಳಿಗೆ ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿಯನ್ನು ಪ್ರಾರಂಭಿಸಲಾಗಿದೆ. ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕು? ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಹತೆಗಳು ಏನೆಲ್ಲ ಇರಬೇಕು? ಹೊಸ ರೇಷನ್ ಕಾರ್ಡ್ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬುದರ ಇನ್ನೂ ಹೆಚ್ಚಿನ ಮಾಹಿತಿ ಈ ಕೆಳಗಡೆ ನೀಡಲಾಗಿದೆ ಸಂಪೂರ್ಣ ಓದಿ.

ಹೌದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ನಿಯಮದ ಪ್ರಕಾರ ಒಂದು ಕುಟುಂಬಕ್ಕೆ ಒಂದೇ ರೇಷನ್ ಕಾರ್ಡ್ ಇರಬೇಕು ಹಾಗೂ ಹೊಸದಾಗಿ ಮದುವೆಯಾದ ನವದಂಪತಿಗಳಿಗೆ ಹೊಸ ರೇಷನ್ ಕಾರ್ಡ್ ಅರ್ಜಿಯನ್ನು ಕರೆಯಲಾಗಿದ್ದು, ಕೆಳಗೆ ನೀಡಿರುವ ದಾಖಲೆ ಮುಖಾಂತರ ಆನ್ಲೈನ್ ಅರ್ಜಿ ಸಲ್ಲಿಸಲು ಅವಕಾಶವನ್ನು ಮಾಡಿಕೊಡಲಾಗಿದೆ.

ಹೊಸ ರೇಷನ್ ಕಾರ್ಡ್ ಪಡೆಯಲು ಬೇಕಾಗುವ ಅರ್ಹತೆಗಳು:

  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
  • ಅರ್ಜಿದಾರರು ಆದಾಯ ತೆರಿಗೆ ಮಾಡುತ್ತಿರಬಾರದು.
  • ಕುಟುಂಬದಲ್ಲಿ ಯಾವುದೇ ಸರಕಾರಿ ನೌಕರರು ಇರಬಾರದು.
  • ಸಹಕಾರ ಸಂಘದ ಖಾಯಂ ಸದಸ್ಯರು ರೇಷನ್ ಕಾರ್ಡಗೆ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಹೊಂದಿರುವುದಿಲ್ಲ.
  • 7.5 ಎಕರೆ ಗಿಂತ ಹೆಚ್ಚು ಜಮೀನು ಹೊಂದಿರಬಾರದು.
  • ಆರ್ಥಿಕವಾಗಿ ಹಿಂದುಳಿದವರು ಹೆೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

  • ಆಧಾರ್ ಕಾರ್ಡ್
  • ವಿಳಾಸ ದೃಢೀಕರಣ ಪತ್ರ
  • ಫೋಟೋ
  • ಆದಾಯ ಪ್ರಮಾಣ ಪತ್ರ
  • ವಿದ್ಯುತ್ ಬಿಲ್
  • ಅರ್ಜಿದಾರರ ಮೊಬೈಲ್ ಸಂಖ್ಯೆ

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅನುಸರಿಸಬೇಕಾದ ಕ್ರಮಗಳು:

ಮದುವೆಗೂ ಮುನ್ನ ತಂದೆ ತಾಯಿ ಜೊತೆಗೆ ಹೊಂದಿರುವ ರೇಷನ್ ಕಾರ್ಡ್ ಗಳಲ್ಲಿ ಹೆಸರುಗಳನ್ನು ತೆಗೆದುಹಾಕಿ ಹೊಸ ರೇಷನ್ ಕಾರ್ಡಗೆ ಅರ್ಜಿಯನ್ನು ಸಲ್ಲಿಸಬಹುದು.

ನಿಮಗೆ ಯಾವ ರೇಷನ್ ಕಾರ್ಡ್ ನೀಡಬೇಕು ಎಂಬುವುದು ನಿಮ್ಮ ಆದಾಯದ ಮೇಲೆ ನಿರ್ಧರಿಸಲಾಗುತ್ತದೆ.

ಮೇಲೆ ನಿಡುವ ಎಲ್ಲಾ ಅರ್ಹತೆ ಮತ್ತು ದಾಖಲೆಗಳೊಂದಿಗೆ ನಿಮ್ಮ ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಹೊಸ ರೇಷನ್ ಕಾರ್ಡಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Leave a Comment