Ration Card Apply: ಎಲ್ಲರಿಗೂ ನಮಸ್ಕಾರ, ಈ ಲೇಖನದಲ್ಲಿ ತಿಳಿಸುತ್ತಿರುವ ಮಾಹಿತಿ ಏನೆಂದರೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಅಗತ್ಯವಿರುವಂತಹ ದಾಖಲೆಗಳು ಯಾವ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಏನು ಅರ್ಜಿಯನ್ನು ಯಾವ ರೀತಿಯಾಗಿ ಸಲ್ಲಿಸಬೇಕು ಇದಕ್ಕೆ ಯಾವ ರೀತಿಯ ಕ್ರಮಗಳನ್ನು ಅನುಸರಿಸಬೇಕು ಎಂಬ ಎಲ್ಲ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಲೇಖನವನ್ನು ಕೊನೆಯವರೆಗೂ ಓದಿ ಉಪಯುಕ್ತವಾದಂತಹ ಮಾಹಿತಿಯನ್ನು ಪಡೆದುಕೊಳ್ಳಿ.
ಹೊಸ ರೇಷನ್ ಕಾರ್ಡ್ ಗೆ ಸರ್ಕಾರವು ಅರ್ಜಿಯನ್ನು ಆರಂಭ ಮಾಡಿದೆ ಯಾವಾಗ ಅರ್ಜಿಯನ್ನು ಸಲ್ಲಿಸಬೇಕು, ಎಂದರೆ ಜೂನ್ 4ನೇ ತಾರೀಕಿನಂದು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸುವ ಲಿಂಕ್ ಓಪನ್ ಆಗುತ್ತದೆ. ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬೇಕು ಎಂದರೆ ನೀವು ಜೂನ್ 4ನೇ ತಾರೀಕಿನ ಮೇಲೆ ಅರ್ಜಿಯನ್ನು ಸಲ್ಲಿಸಬೇಕು. ಜೂನ್ 4ನೇ ಒಳಗೆ ಅರ್ಜಿಯನ್ನು ಸಲ್ಲಿಸಲು ಲಿಂಕ್ ಓಪನ್ ಕೂಡ ಆಗುವುದಿಲ್ಲ.
ನಿಮ್ಮ ಅರ್ಜಿ ಕೂಡ ಸಂಪೂರ್ಣವಾಗಿ ಆಗುವುದಿಲ್ಲ, ಜೂನ್ 4ನೇ ತಾರೀಕಿನ ಮೇಲೆ ಸರ್ಕಾರ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಿದೆ. ಹೊಸ ರೇಷನ್ ಕಾರ್ಡಿಗೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಇದಕ್ಕೆ ಅಗತ್ಯವಿರುವಂತಹ ದಾಖಲೆಗಳು ಇದರ ಜೊತೆಗೆ ರೇಷನ್ ಕಾರ್ಡ್ ಹೇಗೆ ಬೇಕಾಗುತ್ತದೆ ರೇಷನ್ ಕಾರ್ಡ್ ನ ಉಪಯೋಗಗಳು ಏನು ಎಂದು ತಿಳಿದುಕೊಳ್ಳೋಣ.
ರೇಷನ್ ಕಾರ್ಡ್ ನಿಂದ ಸಿಗುವಂತಹ ಉಪಯೋಗಗಳು ಏನು?
ರೇಷನ್ ಕಾರ್ಡ್ ಎಂಬುದು ಪ್ರತಿಯೊಬ್ಬರಿಗೂ ಕೂಡ ಅಗತ್ಯವಾಗಿರುವಂತಹ ದಾಖಲೆಯಾಗಿದೆ ರೇಷನ್ ಕಾರ್ಡ್ ನಿಂದ ಉಚಿತವಾದಂತಹ ಅಕ್ಕಿಯನ್ನು ಪಡೆದುಕೊಳ್ಳಬಹುದು, ಜೊತೆಗೆ ದವಸ ಧಾನ್ಯಗಳನ್ನು ಕೂಡ ಪಡೆಯಬಹುದು ಇದಲ್ಲದೆ ಸರ್ಕಾರದ ಯೋಜನೆಗಳ ಪ್ರಯೋಜನವನ್ನು ಕೂಡ ಪಡೆಯಬಹುದು, ಸರ್ಕಾರವು ತರುವಂತಹ ಯಾವುದೇ ಯೋಜನೆಯ ಆದರೂ ಅಷ್ಟೇ ಅದಕ್ಕೆ ರೇಷನ್ ಕಾರ್ಡ್ ಎಂಬುದು ತುಂಬಾ ಮುಖ್ಯವಾಗಿರುತ್ತದೆ, ಅದರಲ್ಲಿಯೂ ಕೂಡ ಬಿಪಿಎಲ್ ರೇಷನ್ ಕಾರ್ಡ್ಗಳಿಗೆ ಹೆಚ್ಚಿನದಾಯಕವಾಗಿ ಸರ್ಕಾರವು ತರುವಂತಹ ಯೋಜನೆಗಳ ಪ್ರಯೋಜನವು ಸಿಗಲಿದೆ ಯಾರು ಬಿಪಿಎಲ್ ರೇಷನ್ ಕಾರ್ಡುಗಳನ್ನು ಹೊಂದಿರುತ್ತಾರೋ ಅಂತವರಿಗೆ ಸರ್ಕಾರದ ಎಲ್ಲಾ ಯೋಜನೆಗಳ ಪ್ರಯೋಜನವು ಸಿಗುತ್ತವೆ.
ರೇಷನ್ ಕಾರ್ಡ್ ಇದ್ದರೆ ಹಲವಾರು ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಬಿಪಿಎಲ್ ರೇಷನ್ ಕಾರ್ಡನ್ನು ಒಂದಿದ್ದರೆ ಮೋದಿ ಸರ್ಕಾರವು ತಂದಿರುವಂತಹ ಹೆಲ್ತ್ ಕಾರ್ಡ್ಗಳನ್ನು ಕೂಡ ಮಾಡಿಸಿಕೊಳ್ಳಬಹುದು ಇದರಲ್ಲಿಯೂ ಕೂಡ ಹಲವಾರು ರೀತಿಯ ಪ್ರಯೋಜನಗಳಿವೆ ಹೆಲ್ತ್ ಕಾರ್ಡ್ ನ ಮುಖಾಂತರ ಉಚಿತವಾಗಿ ಆರೋಗ್ಯ ಆಸ್ಪತ್ರೆಗಳಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಉಚಿತ ಸೇವೆಗಳನ್ನು ಪಡೆದುಕೊಳ್ಳಬಹುದು.
ಇದೆಲ್ಲಾ ಅಲ್ಲದೆ ಕಾಂಗ್ರೆಸ್ ಸರ್ಕಾರವು ತಂದಿರುವಂತಹ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಗೆ ರೇಷನ್ ಕಾರ್ಡ್ ತುಂಬಾ ಮುಖ್ಯವಾಗಿ ಬೇಕಾಗುತ್ತದೆ ಇದರ ಜೊತೆಗೆ ಗೃಹಜ್ಯೋತಿ ಯೋಜನೆಯು ಅಷ್ಟೇ ಗೃಹಜ್ಯೋತಿ ಯೋಜನೆಗೂ ಕೂಡ ಈ ಒಂದು ರೇಷನ್ ಕಾರ್ಡ್ ತುಂಬಾ ಅಗತ್ಯವಾಗಿರುತ್ತದೆ.
ಕಾಂಗ್ರೆಸ್ ಸರ್ಕಾರವು ತಂದಿರುವಂತಹ ಯೋಜನೆಗಳಲ್ಲಿ ಯಾವ ರೀತಿಯಾಗಿ ಪ್ರಯೋಜನ ಸಿಗುತ್ತದೆ ಎಂದರೆ :
ಗೃಹಲಕ್ಷ್ಮಿ ಯೋಜನೆ :- ಗೃಹಲಕ್ಷ್ಮಿ ಯೋಜನೆಯು ಕಾಂಗ್ರೆಸ್ ಸರ್ಕಾರವು ತಂದಿರುವಂತ ಗ್ಯಾರೆಂಟಿ ಯೋಜನೆಗಲ್ಲಿ ಒಂದಾದ ಯೋಜನೆಯಾಗಿದೆ ಗೃಹಲಕ್ಷ್ಮಿ ಯೋಜನೆಯು ಅತಿಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಇತ್ತೀಚಿನ ದಿನಗಳಲ್ಲಂತೂ ಗೃಹಲಕ್ಷ್ಮಿ ಯೋಜನೆಯ ಅಬ್ಬರ ಮುಗಿಲು ಮುಟ್ಟಿದೆ ಎಂದು ಹೇಳಬಹುದು ಏಕೆಂದರೆ ಗೃಹಲಕ್ಷ್ಮಿ ಯೋಜನೆಯಿಂದ ಎಲ್ಲಾ ಮಹಿಳೆಯರಿಗೂ ಕೂಡ ಉಚಿತವಾಗಿ 2000 ರೂಪಾಯಿಯನ್ನು ನೀಡಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯು ತನ್ನದೇ ಆದ ಒಂದು ಸೆನ್ಸೇಶನ್ ಅನ್ನು ಕ್ರಿಯೇಟ್ ಮಾಡಿದೆ, ಯಾಕೆ ಈ ರೀತಿಯ ಸೆನ್ಸೇಶನ್ ಅನ್ನು ಕ್ರಿಯೇಟ್ ಮಾಡಿದ್ದೆ ಎಂದರೆ,
ಅತಿ ಹೆಚ್ಚಿನ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿರುವಂತಹ ಮಹಿಳೆಯರ ಸಂಖ್ಯೆ ಅಧಿಕವಾಗಿದೆ. ಸರ್ಕಾರವು ತಂದಿರುವಂತಹ ಯೋಜನೆಗಳಿಗೆಲ್ಲಾ ಹೋಲಿಸಿದರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿರುವ ಸಂಖ್ಯೆಯೂ ಕೂಡ ಹೆಚ್ಚು ಅದೇ ರೀತಿಯಾಗಿ ಪ್ರಯೋಜನವನ್ನು ಪಡೆಯುತ್ತಿರುವ ಸಂಖ್ಯೆಯು ಕೂಡ ಹೆಚ್ಚು ಇದರ ಒಂದು ಮಹತ್ವ ತುಂಬಾ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
ರೇಷನ್ ಕಾರ್ಡ್ ಗೃಹಲಕ್ಷ್ಮಿ ಯೋಜನೆಗೆ ಯಾಕೆ ಮುಖ್ಯವಾಗಿ ಬೇಕು ಎಂದು ನೀವು ಕೇಳುವುದಾದರೆ ಗೃಹಲಕ್ಷ್ಮಿ ಯೋಜನೆಗೆ ಮುಖ್ಯ ಆಧಾರವಾಗಿ ರೇಷನ್ ಕಾರ್ಡ್ ಇರಲೇಬೇಕು ರೇಷನ್ ಕಾರ್ಡ್ ನ ಮುಖ್ಯ ಸದಸ್ಯೆಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನವನ್ನು ನೀಡಲಾಗುತ್ತಿದೆ ರೇಷನ್ ಕಾರ್ಡ್ ನಲ್ಲಿ ಇರುವಂತಹ ಕುಟುಂಬದ ಸದಸ್ಯೆಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣವನ್ನು ನೀಡಲಾಗುತ್ತದೆ.
ಅದೇ ರೇಷನ್ ಕಾರ್ಡ್ ನ ಕುಟುಂಬದ ಮುಖ್ಯಸ್ಥ ಪುರುಷರಿದ್ದರೆ ಅವರಿಗೆ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನವು ಸಿಗುವುದಿಲ್ಲ ಮಹಿಳೆಯರೇ ಗೃಹಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯಬೇಕು ಎಂದರೆ ರೇಷನ್ ಕಾರ್ಡ್ ನ ಮುಖ್ಯ ಸದಸ್ಯೆಯಾಗಿರಬೇಕು.
ಅನ್ನಭಾಗ್ಯ ಯೋಜನೆ :- ಅನ್ನಭಾಗ್ಯ ಯೋಜನೆಗೂ ಕೂಡ ರೇಷನ್ ಕಾರ್ಡ್ ತುಂಬಾ ಮುಖ್ಯವಾಗಿರುವಂತಹ ದಾಖಲೆ,ಕಾಂಗ್ರೆಸ್ ಸರ್ಕಾರವು ಅನ್ನಭಾಗ್ಯ ಯೋಜನೆಯ ಮುಖಾಂತರ ಜನಗಳಿಗೆ 10 ಕೆಜಿ ಅಕ್ಕಿಯನ್ನು ನೀಡುತ್ತೇವೆ ಎಂಬ ಒಂದು ಆಹ್ವಾನವನ್ನು ಚುನಾವಣೆಗೂ ಮುಂಚೆ ನೀಡಿದ್ದು ಅದೇ ರೀತಿಯಾಗಿ 5 ಕೆಜಿ ಅಕ್ಕಿಯನ್ನು ನೀಡುತ್ತಿದೆ, ಇದರ ಜೊತೆಗೆ 5 ಕೆಜಿ ಅಕ್ಕಿ ಹಣವನ್ನು ಎಲ್ಲರ ಖಾತೆಗೂ ಕೂಡ ಜಮಾ ಮಾಡುತ್ತಿದೆ ರೇಷನ್ ಕಾರ್ಡ್ ನ ಮುಖಾಂತರ, ಕಾಂಗ್ರೆಸ್ ಸರ್ಕಾರವು ಚುನಾವಣೆಗೆ ಮುಂಚೆ ಈ ರೀತಿಯಾಗಿ ಒಂದು ಆಶ್ವಾಸನೆಯನ್ನು ನೀಡಿದ್ದು, ಆದರೆ ನುಡಿದಂತೆ ನಡೆದಿದೆ ಎಂದು ಹೇಳಬಹುದು.
ಯಾಕೆ ಸರ್ಕಾರವು 10 ಕೆಜಿ ಅಕ್ಕಿಯನ್ನು ನೀಡದೆ 5 ಕೆಜಿ ಅಕ್ಕಿಯನ್ನು ಮಾತ್ರ ನೀಡಿ ಇನ್ನು ಉಳಿದ 5 ಕೆಜಿ ಅಕ್ಕಿ ಹಣವನ್ನು ನೀಡುತ್ತಿದೆ ಎಂದರೆ ಅಕ್ಕಿ ಸಮಸ್ಯೆ ಉಂಟಾಗಿರುವುದರಿಂದ ಅಕ್ಕಿ ಸಿಗುತ್ತಿಲ್ಲ ಆದ್ದರಿಂದ 5 ಕೆಜಿ ಅಕ್ಕಿಯನ್ನು ಮಾತ್ರ ನೀಡಿ ಇನ್ನುಳಿದ 5 ಕೆಜಿ ಅಕ್ಕಿ ಕೂಡ ಜಮಾ ಮಾಡುತ್ತಿದೆ. ಮುಂದಿನ ದಿನಗಳಲ್ಲಿ 10 ಕೆಜಿ ಅಕ್ಕಿಯನ್ನು ನೀಡುತ್ತೇವೆ ಸಾಧ್ಯವಾದರೆ ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದಾರೆ.
ಗೃಹಜ್ಯೋತಿ ಯೋಜನೆ :- ಗೃಹಜ್ಯೋತಿ ಯೋಜನೆಗೂ ಅಷ್ಟೇ ರೇಷನ್ ಕಾರ್ಡ್ ನ ಆಧಾರದ ಮೇಲೆ ಉಚಿತವಾದಂತಹ 200 ಯೂನಿಟ್ ಕರೆಂಟ್ ಅನ್ನು ನೀಡಲಾಗುತ್ತಿದೆ, ಎಲ್ಲರೂ ಕೂಡ ರೇಷನ್ ಕಾರ್ಡ್ ನ ಆಧಾರದ ಮೇಲೆ ಗೃಹಜೋತಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ.
ನೋಡಿದ್ರಲ್ಲ ಸ್ನೇಹಿತರೇ ಯಾವುದೇ ಒಂದು ರೀತಿಯ ಸರ್ಕಾರದ ಯೋಜನೆಯ ಪ್ರಯೋಜನವನ್ನು ಪಡೆಯಬೇಕು ಎಂದರೆ ರೇಷನ್ ಕಾರ್ಡ್ ತುಂಬಾ ಮುಖ್ಯವಾಗಿರುವಂತಹ ದಾಖಲೆಯಾಗಿರುತ್ತದೆ ಸರ್ಕಾರದ ಎಲ್ಲಾ ಯೋಜನೆಗಳಿಗೂ ಕೂಡ ರೇಷನ್ ಕಾರ್ಡ್ ಕಡ್ಡಾಯ, ಆಗಿದ್ದರೆ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಅಗತ್ಯವಿರುವಂತಹ ದಾಖಲೆಗಳು ಯಾವುವು ಎಂಬ ಎಲ್ಲಾ ಮಾಹಿತಿಯನ್ನು ತಿಳಿಯೋಣ,
ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಹೊಂದಿರಬೇಕಾದಂತಹ ದಾಖಲೆಗಳು ಯಾವುವು ಎಂದರೆ :-
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
- ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಆ ಮಕ್ಕಳ ಜನನ ಪ್ರಮಾಣ ಪತ್ರ
- ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರುವಂತಹ ಮೊಬೈಲ್ ಸಂಖ್ಯೆ
- ನಿಮ್ಮ ಕುಟುಂಬದ ಮುಖ್ಯಸ್ಥರ ಫೋಟೋ
- ಈಗ ತಿಳಿಸಿದಂತಹ ಎಲ್ಲಾ ದಾಖಲೆಗಳು ಕೂಡ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಅಗತ್ಯವಾಗಿ ಹೊಂದಿರಬೇಕಾದಂತಹ ದಾಖಲೆಗಳಾಗಿರುತ್ತವೆ.
ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ನೀವು ಜೂನ್ ತಿಂಗಳಿನಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಏಕೆಂದರೆ ಸರ್ಕಾರವು ಜೂನ್ ನಾಲ್ಕನೇ ತಾರೀಖಿನಿಂದ ಅರ್ಜಿಯನ್ನು ಸಲ್ಲಿಸಲು ಆರಂಭಿಸಲಾಗುತ್ತದೆ ಆದ್ದರಿಂದ ಅರ್ಜಿ ಸ್ವೀಕಾರವು ಜೂನ್ ನಾಲ್ಕನೇ ತಾರೀಕಿನಿಂದ ನಡೆಯುತ್ತದೆ ನೀವು ಜೂನ್ ತಿಂಗಳಿನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ ಅಥವಾ ಸರ್ಕಾರವು ಮುಂದೂಡಿಕೆ ಮಾಡಿದರೆ ಆ ದಿನಗಳಲ್ಲೇ ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬಹುದು.
ಸರ್ಕಾರವು ರೇಷನ್ ಕಾರ್ಡನ್ನು ಜಾರಿಗೆ ತಂದಿರುವಂತಹ ಮುಖ್ಯ ಉದ್ದೇಶವೇನೆಂದರೆ ಹಿಂದುಳಿದ ಬಡ ಕುಟುಂಬಗಳಿಗೆ ಹೊಟ್ಟೆ ತುಂಬಾ ಆಹಾರ ಸಿಗಲಿ ಎಂಬ ಒಂದು ಉದ್ದೇಶದಿಂದ ಬಡವರು ಸರ್ಕಾರವು ರೇಷನ್ ಕಾರ್ಡನ್ನು ಜಾರಿಗೆ ತಂದಿದೆ, ಬಡ ರೇಖೆಗಿಂತ ಕೆಳಗಿರುವಂತಹ ಕುಟುಂಬಗಳು ಹೊಟ್ಟೆಗೆ ಊಟವಿಲ್ಲದೆ ಹಸಿವಿನಿಂದ ನರಳುತ್ತಿರುತ್ತಾರೆ,ಇಂತಹ ಪರಿಸ್ಥಿತಿ ಗಳನ್ನೆಲ್ಲ ಗಮನಿಸಿದ ಸರ್ಕಾರವು ರೇಷನ್ ಕಾರ್ಡನ್ನು ನೀಡುವ ಮುಖಾಂತರವಾದರೂ ಹಿಂದುಳಿದ ಬಡ ಕುಟುಂಬ ರೇಖೆಗಳಿಗಿಂತ ಕೆಳಗಿರುವವರಿಗೆ ಈ ರೀತಿಯ ರೇಷನ್ ಕಾರ್ಡುಗಳನ್ನು ನೀಡುವ ಮುಖಾಂತರವಾದರೂ ಊಟವನ್ನು ನೀಡಬೇಕು ಎಂಬ ಉದ್ದೇಶದಿಂದ ರೇಷನ್ ಕಾರ್ಡ್ ಅನ್ನು ಜಾರಿಗೆ ತಂದಿದೆ.
ಸರ್ಕಾರವು ಇತ್ತೀಚಿನ ದಿನಗಳಲ್ಲಿ ಕೆಲವೊಂದು ರೇಷನ್ ಕಾರ್ಡುಗಳನ್ನು ರದ್ದುಗೊಳಿಸಿದೆ, ಕೆಲವೊಂದು ಎನ್ನುವುದಕ್ಕಿಂತ ಸಾವಿರಾರು ರೇಷನ್ ಕಾರ್ಡುಗಳನ್ನು ರದ್ದುಗೊಳಿಸಿದೆ ಯಾರಿಗೆ ರೇಷನ್ ಕಾರ್ಡ್ ಅವಶ್ಯಕತೆ ಇದೆಯೋ ಅಂತವರಿಗೆ ಮಾತ್ರ ರೇಷನ್ ಕಾರ್ಡ್ ಅನ್ನು ಪಡೆದುಕೊಳ್ಳುವಂತಹ ಅಧಿಕಾರವಿದೆ.
ಆದರೆ ರೇಷನ್ ಕಾರ್ಡ್ ಗಳನ್ನು ಅನಗತ್ಯವಾಗಿ ಬಳಸಿಕೊಂಡು, ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದರು ಆದರೆ ಸರ್ಕಾರವು ಇದಕ್ಕೆಲ್ಲ ಬ್ರೇಕ್ ನೀಡಿ ಇಂಥವರ ರೇಷನ್ ಕಾರ್ಡುಗಳನ್ನು ರದ್ದುಗೊಳಿಸಿ ಯಾರಿಗೆ ರೇಷನ್ ಕಾರ್ಡ್ ನ ಅಗತ್ಯವಿದೆಯೋ ಅಂತವರು ಅರ್ಜಿಯನ್ನು ಸಲ್ಲಿಸಿ ಎಂದು ಸರ್ಕಾರವು ಇನ್ನು ಹೆಚ್ಚಿನ ರೀತಿಯಲ್ಲಿ ಅರ್ಜಿಯನ್ನು ಸಲ್ಲಿಸುವಂತಹ ಅವಕಾಶಗಳನ್ನು ಜನಸಾಮಾನ್ಯರಿಗೆ ನೀಡಿದೆ.
ಹೊಸ ರೇಷನ್ ಕಾರ್ಡಿಗೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ವಾದಂತಹ ವಿವರ.
ಮೊದಲಿಗೆ ನೀವು ಹತ್ತಿರದ ಬೆಂಗಳೂರು ಒನ್, ಕರ್ನಾಟಕ ಒನ್, ಸೇವಾ ಕೇಂದ್ರಗಳಲ್ಲಿ ಅಥವಾ ಗ್ರಾಮ ಒನ್, ಇತರ ಆನ್ಲೈನ್ ಸೆಂಟರ್ ಗಳಲ್ಲಿ ನೀವು ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಬಹುದು. ರೇಷನ್ ಕಾರ್ಡ್ ಗೆ ನೀವು ಅರ್ಜಿಯನ್ನು ಸಲ್ಲಿಸಬೇಕು ಎಂದರೆ ಈಗ ತಿಳಿಸಿರುವಂತಹ ಯಾವುದಾದರೂ ಒಂದು ಕೇಂದ್ರಕ್ಕೆ ಭೇಟಿ ನೀಡಿ ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬಹುದು ಎಲ್ಲಾ ಕೇಂದ್ರಕ್ಕೂ ಭೇಟಿ ನೀಡುವ ಬದಲು ನಿಮಗೆ ಯಾವುದು ಅನುಕೂಲವಾಗಿರುತ್ತದೆ ಆ ಕೇಂದ್ರಕ್ಕೆ ಹೋಗಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಿ. ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬೇಕು ಎಂದರೆ ಜೂನ್ ತಿಂಗಳಿನಲ್ಲಿ ಅರ್ಜಿಯನ್ನು ಸಲ್ಲಿಸಿ.
ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಲು ವಂಚನೆಯಿಂದ ರೇಷನ್ ಕಾರ್ಡ್ ಗಳನ್ನು ಕೂಡ ಪಡೆದುಕೊಳ್ಳುತ್ತಾರೆ ಇದರಿಂದ ಸರ್ಕಾರದ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಪಡೆದುಕೊಂಡು, ಬಿಪಿಎಲ್ ರೇಷನ್ ಕಾರ್ಡುಗಳನ್ನು ವರ್ಗದ ಜನರು ಮಾಡಿಸಿಕೊಳ್ಳಲು ಜೊತೆಗೆ ಹಿಂದುಳಿದ ಕುಟುಂಬಗಳು ಬಿಪಿಎಲ್ ರೇಷನ್ ಕಾರ್ಡನ್ನು ಪಡೆಯಲಿ ಎಂಬ ಉದ್ದೇಶದಿಂದ ಸರ್ಕಾರವು ಆದೇಶವನ್ನು ತಿಳಿಸಿದರೆ
ಎಲ್ಲ ಇರುವಂತವರೆ ಬಿಪಿಎಲ್ ರೇಷನ್ ಕಾರ್ಡನ್ನು ಪಡೆದುಕೊಂಡಿದ್ದಾರೆ ಅತಿ ಹೆಚ್ಚಿನದಾಗಿ ಹಣಕಾಸು ಇರುವಂತವರೇ ಬಿಪಿಎಲ್ ರೇಷನ್ ಕಾರ್ಡ್ಗಳನ್ನು ಪಡೆಯುತ್ತಿದ್ದಾರೆ ಈ ರೀತಿಯಾಗಿ ಅನಗತ್ಯವಾಗಿ ರೇಷನ್ ಕಾರ್ಡ್ಗಳನ್ನು ಬಳಸುತ್ತಿರುವುದರಿಂದ ಹಿಂದುಳಿದ ಮತ್ತು ಬಡ ಕುಟುಂಬದ ವರ್ಗಗಳಿಗೆ ಮತ್ತು ಬಡತನ ರೇಖೆಗಿಂತ ಕಡಿಮೆ ಇರುವವರಿಗೆ ಬಿಪಿಎಲ್ ರೇಷನ್ ಕಾರ್ಡ್ ದೊರೆಯುತ್ತಿಲ್ಲ.
ಸರ್ಕಾರವು ಇದನ್ನೆಲ್ಲ ಗಮನಿಸಿ ಯಾರು ರೇಷನ್ ಕಾರ್ಡುಗಳನ್ನು ಈ ರೀತಿಯಾಗಿ ಪಡೆಯುತ್ತಿದ್ದಾರೋ ಅಂತಹ ರೇಷನ್ ಕಾರ್ಡುಗಳನ್ನು ಕೂಡ ರದ್ದುಗೊಳಿಸಿದೆ, ಇದರ ಜೊತೆಗೆ ನಕಲಿ ರೇಷನ್ ಕಾರ್ಡುಗಳನ್ನು ಸೃಷ್ಟಿ ಮಾಡಿ ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ, ಕೆಲವೊಬ್ಬರು ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಹೊಂದಿದ್ದರು ಕೂಡ ಮೂರು ನಾಲ್ಕು ಐದು ತಿಂಗಳಾದರೂ ಕೂಡ ರೇಷನ್ ಅನ್ನು ತೆಗೆದುಕೊಂಡು ಬಂದಿಲ್ಲ.
ರೇಷನ್ ಅಂಗಡಿಗೆ ಹೋಗಿ ಪ್ರತಿ ತಿಂಗಳು ಅಕ್ಕಿಯನ್ನೇ ಪಡೆದುಕೊಳ್ಳುತ್ತಿಲ್ಲ ಇವರು ಬರಿ ಸರ್ಕಾರಿ ಯೋಜನೆಗಳಿಗೆ ಮಾತ್ರ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಮಾಡಿಸಿಕೊಂಡಿದ್ದಾರೆ ವಿನಹ ರೇಷನ್ ಕಾರ್ಡ್ ನ ರೇಷನ್ ಗಾಗಿ ಅಲ್ಲ, ಯಾರು ರೇಷನ್ ಕಾರ್ಡ್ ನ ಮುಖಾಂತರ ಅಕ್ಕಿಯನ್ನು ತೆಗೆದುಕೊಂಡು ಮೂರು ನಾಲ್ಕು ಐದು ಆರು ತಿಂಗಳಾಗಿದೆಯೋ ಇಂತಹ ರೇಷನ್ ಕಾರ್ಡ್ಗಳನ್ನು ಕೂಡ ಸರ್ಕಾರವು ಈಗ ರದ್ದು ಮಾಡಿದೆ.
ಈ ರೀತಿಯಾಗಿ ರದ್ದು ಮಾಡುವುದರಿಂದ ಆದರೂ ಈ ರೀತಿಯಾಗಿ ವಂಚನೆ ಮಾಡುವಂಥವರ ಸಂಖ್ಯೆ ಕಡಿಮೆಯಾಗಲಿ ಎಂಬ ಉದ್ದೇಶದಿಂದ ಇಂಥವರ ರೇಷನ್ ಕಾರ್ಡುಗಳನ್ನು ಪೆದ್ದುಗೊಳಿಸಲಾಗಿದೆ ಇವರು ಮತ್ತೆ ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸುತ್ತೇವೆ ಎಂದರೆ ಇದಕ್ಕೂ ಕೂಡ ಅವಕಾಶ ಸಿಗುವುದಿಲ್ಲ ಒಮ್ಮೆ ರೇಷನ್ ಕಾರ್ಡ್ ರದ್ದಾದರೆ ಮುಗೀತು ಮತ್ತೆ ರೇಷನ್ ಕಾರ್ಡನ್ನು ಪಡೆಯಲು ಸಾಧ್ಯವೇ ಇಲ್ಲ.
ಈಗ ಬಡವರ್ಗದ ಜನಗಳಿಗೆ ಬಿಪಿಎಲ್ ರೇಷನ್ ಕಾರ್ಡ್ ಅನ್ನೇ ಪಡೆಯಲಿ ಎಂಬ ಉದ್ದೇಶದಿಂದ ಈ ರೀತಿಯ ಅನಗತ್ಯವಾಗಿ ರೇಷನ್ ಕಾರ್ಡ್ ಉಪಯೋಗಿಸುತ್ತಿದ್ದಂತವರ ರೇಷನ್ ಕಾರ್ಡನ್ನೆಲ್ಲ ರದ್ದುಗೊಳಿಸಿ ಇಂಥವರಿಗೆ ಸರ್ಕಾರವು ಈಗ ಅವಕಾಶವನ್ನು ಮಾಡಿಕೊಟ್ಟಿದೆ. ಈಗಾಗಲೇ ಎರಡು ವರ್ಷಗಳಿಂದ ಯಾವುದೇ ರೀತಿಯಾದಂತಹ ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸುವಂತಹ ಅಧಿಕಾರವನ್ನು ಸರ್ಕಾರವು ಜನಸಾಮಾನ್ಯರಿಗೆ ನೀಡಿರಲಿಲ್ಲ ಆದರೆ ಈಗ ಜೂನ್ ತಿಂಗಳಿನಿಂದ ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸುವಂತಹ ಅವಕಾಶಗಳು ಆರಂಭವಾಗಿದೆ
ನೋಡಿದ್ರಲ್ಲ ಸ್ನೇಹಿತರೇ, ಯಾವ ರೀತಿಯಾಗಿ ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಬೇಕು ಇದಕ್ಕೆ ಅಗತ್ಯವಿರುವಂತಹ ದಾಖಲೆಗಳ ಪಟ್ಟಿ ಯಾರು ಏನು ಅರ್ಜಿಯನ್ನು ಸಲ್ಲಿಸುವ ಹಂತಗಳು ಏನು ರೇಷನ್ ಕಾರ್ಡ್ ಇಂದ ನಮಗೆ ಯಾವ ರೀತಿಯ ಅನುಕೂಲಗಳು ಇರುತ್ತವೆ ರೇಷನ್ ಕಾರ್ಡ್ ನ ಮಹತ್ವವೇನು ಎಂಬ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇನೆ, ಈ ಲೇಖನವನ್ನು ನಿಮ್ಮ ಫ್ರೆಂಡ್ಸ್ ಮತ್ತು ಫ್ಯಾಮಿಲಿಗೂ ಶೇರ್ ಮಾಡುವ ಮುಖಾಂತರ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸುವ ಬಗ್ಗೆ ಮಾಹಿತಿಯನ್ನು ತಿಳಿಸಿ.
ಈ ನಮ್ಮ ಕರ್ನಾಟಕ ಟ್ರೆಂಡ್ಸ್ ಮಾಧ್ಯಮದಲ್ಲಿ ಸರ್ಕಾರವು ತರುವಂತಹ ಎಲ್ಲಾ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪ್ರತಿನಿತ್ಯವೂ ಕೂಡ ಅಪ್ಲೋಡ್ ಮಾಡಲಾಗುತ್ತದೆ, ರೈತರಿಗೆ ಸಂಬಂಧಪಟ್ಟಂತಹ ಯೋಜನೆಗಳು,ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಸ್ಕಾಲರ್ಶಿಪ್ ಗಳ ಬಗ್ಗೆ ಮಾಹಿತಿಯನ್ನಾಗಲಿ, ಸಾರ್ವಜನಿಕರಿಗೆ ಅನುಕೂಲ ವಾಗುವಂತಹ ಮಾಹಿತಿಗಳನ್ನು, ಮಹಿಳೆಯರಿಗೆ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪ್ರತಿನಿತ್ಯವೂ ಕೂಡ ಈ ನಮ್ಮ ಕರ್ನಾಟಕ ಟ್ರೆಂಡ್ಸ್ ಮಾಧ್ಯಮದಲ್ಲಿ ಅಪ್ಲೋಡ್ ಮಾಡಲಾಗುತ್ತದೆ ದಿನನಿತ್ಯವು ಕರ್ನಾಟಕ ಟೆಂತ್ ಮಾಧ್ಯಮವನ್ನು ವೀಕ್ಷಣೆ ಮಾಡಿ.
ಈ ಲೇಖನವನ್ನು ಕೊನೆಯವರೆಗೂ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಸ್ನೇಹಿತರೆ ಮತ್ತೆ ಸಿಗೋಣ ಮುಂದಿನ ಉಪಯುಕ್ತವಾದಂತ ಲೇಖನದಲ್ಲಿ.