new ration card apply: ಎಲ್ಲರಿಗೂ ನಮಸ್ಕಾರ… ಈ ಒಂದು ಲೇಖನದ ಮುಖಾಂತರ ತಿಳಿಸುವಂತಹ ಮಾಹಿತಿ ಯಾವುದೆಂದರೆ, ಎಲ್ಲಾ ಕರ್ನಾಟಕದ ಜನತೆಯು ಕೂಡ ರೇಷನ್ ಕಾರ್ಡ್ ಗಳನ್ನು ಮಾಡಿಸಲು ಮುಂದಾಗಿದ್ದಾರೆ. ಲಕ್ಷಾಂತರ ಜನರು ಈ ಹೊಸ ರೇಷನ್ ಕಾರ್ಡ್ ಗಳನ್ನು ಪಡೆಯಲು ಕಾದು ಕುಳಿತಿದ್ದಾರೆ. ಅಂತವರು ಯಾವ ದಿನಾಂಕದಲ್ಲಿ ಹೊಸ ರೇಷನ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ.
ಯಾವ ದಾಖಲಾತಿಗಳು ಅರ್ಜಿ ಸಲ್ಲಿಕೆಗೆ ಬೇಕಾಗುತ್ತದೆ ಎಂಬುದರ ಎಲ್ಲಾ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದಲ್ಲಿಯೇ ತಿಳಿಸಲಾಗುತ್ತಿದೆ. ನೀವು ಕೂಡ ಹೊಸ ರೇಷನ್ ಕಾರ್ಡ್ಗಳನ್ನು ಪಡೆಯಬೇಕು ಎಂದರೆ ನೀವು ಕಡ್ಡಾಯವಾಗಿ ಯಾವ ದಾಖಲಾತಿಗಳನ್ನು ಹೊಂದಬೇಕು ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಕೂಡ ತಿಳಿದುಕೊಂಡಿರಬೇಕು. ಆದ ಕಾರಣ ಲೇಖನವನ್ನು ನೀವು ಕೂಡ ಕೊನೆವರೆಗೂ ಓದಿರಿ.
ಲಕ್ಷಾಂತರ ಜನರು ಹೊಸ ರೇಷನ್ ಕಾರ್ಡ್ ಗಳನ್ನು ಪಡೆಯಲು ಮುಂದಾಗಿದ್ದಾರೆ.
ಹೌದು ಸ್ನೇಹಿತರೆ ಕರ್ನಾಟಕದಲ್ಲಿ ಲಕ್ಷಾಂತರ ಜನರು ಹೊಸ ರೇಷನ್ ಕಾರ್ಡ್ ಗಳನ್ನು ಕೂಡ ಪಡೆಯಲು ಕಾದು ಕುಳಿತಿದ್ದಾರೆ. ಸರ್ಕಾರ ಯಾವಾಗ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಕೆಯನ್ನು ಮಾಡಲು ಅವಕಾಶವನ್ನು ನೀಡುತ್ತದೆಯೋ ಎಂದು, ಅರ್ಜಿ ಸಲ್ಲಿಕೆ ಮಾಡಲು ಅವಕಾಶವನ್ನು ನೀಡಿದ ನಂತರವೇ ನೀವು ನಿಮ್ಮ ದಾಖಲಾತಿಗಳೊಂದಿಗೆ ಅರ್ಜಿಯನ್ನು ಕೂಡ ಆನ್ಲೈನ್ ಮುಖಾಂತರವೇ ಸಲ್ಲಿಕೆ ಮಾಡಬಹುದಾಗಿದೆ.
ಈ ಹಿಂದೆ ಏಪ್ರಿಲ್ ತಿಂಗಳಿನಲ್ಲಿ ಹೊಸ ರೇಷನ್ ಕಾರ್ಡ್ ಗಳನ್ನು ಪಡೆಯಲು ಅವಕಾಶವನ್ನು ಸರ್ಕಾರ ನೀಡಿದ್ದು, ಆ ಸಂದರ್ಭದಲ್ಲಿ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಮುಂದಾದಾಗ ಸರ್ವರ್ ಸಮಸ್ಯೆಯಿಂದ ಸಾಕಷ್ಟು ಜನರು ಅರ್ಜಿ ಸಲ್ಲಿಕೆಯನ್ನು ಕೂಡ ಮಾಡಿಲ್ಲ. ಅಂತವರು ಕೂಡ ಜೂನ್ ನಾಲ್ಕನೇ ದಿನಾಂಕದ ನಂತರ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಜೂನ್ ನಾಲ್ಕರಂದು ಲೋಕಸಭಾ ಚುನಾವಣೆಯ ಫಲಿತಾಂಶವೂ ಕೂಡ ಪ್ರಕಟಣೆಯಾಗುತ್ತದೆ. ನೀವು ಆ ಪ್ರಕಟಣೆ ಆದ ದಿನಗಳ ನಂತರವೇ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಕೆಯನ್ನು ಕೂಡ ಮಾಡಬಹುದು.
ಈ ದಾಖಲಾತಿಗಳನ್ನು ಹೊಂದಿದವರಿಗೆ ಮಾತ್ರ ಹೊಸ ರೇಷನ್ ಕಾರ್ಡ್ ಗಳು ದೊರೆಯುವುದು.
- ಮನೆ ಸದಸ್ಯರ ಆಧಾರ್ ಕಾರ್ಡ್ ಗಳು
- ಆಧಾರ್ ಕಾರ್ಡ್ಗಳಿಗೆ ಲಿಂಕ್ ಆಗಿರುವಂತಹ ಮೊಬೈಲ್ ಸಂಖ್ಯೆ
- ಮುಖ್ಯಸ್ಥರ ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಐದು ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ಜನನ ಪ್ರಮಾಣ ಪತ್ರ ಕೂಡ ಬೇಕಾಗುತ್ತದೆ.
- ಆಧಾರ್ ಕಾರ್ಡ್ ಅಪ್ಡೇಟ್ ಆಗಿದೆಯಾ ಎಂಬುದನ್ನು ಪರಿಶೀಲಿಸಿಕೊಳ್ಳಿ.
ಆಫ್ಲೈನ್ ಪ್ರಕ್ರಿಯೆಯಲ್ಲಿ ಅರ್ಜಿಯನ್ನು ಈ ರೀತಿ ಸಲ್ಲಿಕೆ ಮಾಡಿ.
ಎಲ್ಲರೂ ಕೂಡ ಆಫ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಯಾರೆಲ್ಲ ಇದುವರೆಗೂ ರೇಷನ್ ಕಾರ್ಡ್ ಗಳನ್ನು ಹೊಂದಿಲ್ಲವೋ ಅಂತವರು ಮಾತ್ರ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ನೀವು ಮೊದಲಿಗೆ ಗ್ರಾಮ ಒನ್, ಅಥವಾ ಬಾಪೂಜಿ ಸೇವ ಕೇಂದ್ರ, ಇನ್ನಿತರ ಕೇಂದ್ರಕ್ಕೆ ಭೇಟಿ ನೀಡುವ ಮುಖಾಂತರ ಹೊಸ ರೇಷನ್ ಕಾರ್ಡ್ ಗಳಿಗೂ ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.
ನೀವು ಫೋನಿನ ಮುಖಾಂತರ ಅರ್ಜಿ ಸಲ್ಲಿಕೆ ಮಾಡುವಿರಿ ಎಂದರೆ ನಿಮಗೆ ಸರ್ವರ್ ಸಮಸ್ಯೆಗಳು ಕೂಡ ಬರುತ್ತವೆ. ಹಾಗೂ ಇನ್ನಿತರ ಸಮಸ್ಯೆಗಳು ಕೂಡ ಎದುರಾಗುತ್ತದೆ. ಆದ ಕಾರಣ ನೀವು ಆಫ್ಲೈನ್ ಮುಖಾಂತರ ನಿಮ್ಮ ಊರಿನಲ್ಲಿ ಇರುವಂತಹ ಗ್ರಾಮ ಒನ್, ಬಾಪೂಜಿ ಸೇವ ಕೇಂದ್ರ ಇನ್ನಿತರ ಕೇಂದ್ರಕ್ಕೆ ಭೇಟಿ ನೀಡುತ್ತಿರಿ ಎಂದರೆ ನೀವು ಸುಲಭವಾಗಿ ಅರ್ಜಿ ಸಲ್ಲಿಕೆಯನ್ನು ಕೂಡ ಮಾಡಬಹುದಾಗಿದೆ.
ಅರ್ಜಿ ಸಲ್ಲಿಕೆ ಮಾಡುವಂತಹ ಸಂದರ್ಭದಲ್ಲಿ ಮೇಲ್ಕಂಡ ದಾಖಲಾತಿಗಳನ್ನು ಕೂಡ ಸಲ್ಲಿಕೆ ಮಾಡಬೇಕು. ಈ ಮಾಹಿತಿಯಲ್ಲಿ ತಿಳಿಸಿರುವಂತಹ ದಾಖಲಾತಿಗಳನ್ನು ಒಂದೊಂದೇ ಪರಿಶೀಲನೆ ಮಾಡಿ. ನಿಮ್ಮ ಹತ್ತಿರ ಇದೆಯಾ ಇಲ್ಲವಾ ಎಂದು, ಇರದಿದ್ದರೆ ನೀವು ನಾಡಕಚೇರಿಗಳಿಗೆ ಹೋಗಿ ಆದಾಯ ಪ್ರಮಾಣ ಪತ್ರ ಅಥವಾ ಜಾತಿ ಪ್ರಮಾಣ ಪತ್ರವನ್ನು ಕೂಡ ಮಾಡಿಸಬಹುದು. ಆಧಾರ್ ಕಾರ್ಡ್ ಗಳ ಅಪ್ ಡೇಟ್ ಗಳನ್ನು ಮಾಡಿಸಲು ಕೂಡ ನಾಡಕಚೇರಿಗಳಿಗೆ ಭೇಟಿ ನೀಡಿ.
ಹೊಸ ಆದಾಯ ಪ್ರಮಾಣ ಪತ್ರ ಅಥವಾ ಜಾತಿ ಪ್ರಮಾಣ ಪತ್ರ ಹಾಗೂ ಆಧಾರ್ ಕಾರ್ಡ್ ಅಪ್ಡೇಟ್ಗಳನ್ನು ಕೂಡ ಮಾಡಿಸಬಹುದಾಗಿದೆ. ನೀವು ಜೂನ್ ನಾಲ್ಕನೇ ದಿನಾಂಕ ಬರುವ ಮುಂಚಿತ ದಿನಗಳಲ್ಲಿಯೇ ಈ ಎಲ್ಲಾ ದಾಖಲಾತಿಗಳನ್ನು ಒಂದೊಮ್ಮೆ ಪರಿಶೀಲಿಸಿಕೊಂಡು ನಿಮ್ಮಹತ್ತಿರ ಇದೆಯ ಎಂದು ಚೆಕ್ ಮಾಡಿ ದಾಖಲಾತಿಗಳನ್ನು ತೆಗೆದಿಟ್ಟುಕೊಳ್ಳಿ.
ರೇಷನ್ ಕಾರ್ಡ್ ಗಳನ್ನು ರದ್ದು ಮಾಡಿಸಿಕೊಂಡಿರುವಂತಹ ಸದಸ್ಯರು ಕೂಡ ಹೊಸ ರೇಷನ್ ಕಾರ್ಡ್ ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ನಿಮ್ಮ ದಾಖಲಾತಿಗಳನ್ನು ಸರ್ಕಾರ ಒಂದೊಮ್ಮೆ ಪರಿಶೀಲನೆ ಮಾಡಿ ನೀವು ಅರ್ಹರು ಎಂದು ಕಂಡುಬಂದರೆ ಮಾತ್ರ ಸರ್ಕಾರ ರೇಷನ್ ಕಾರ್ಡ್ ಗಳನ್ನು ನೀಡಲು ಮುಂದಾಗುತ್ತದೆ. ನೀವು ಈ ಒಂದು ರೇಷನ್ ಕಾರ್ಡ್ಗಳನ್ನು ಪಡೆಯಲು ಅರ್ಹರಾಗುವುದಿಲ್ಲ ಎಂದು ಬಂದರೆ ನೀವು ರೇಷನ್ ಕಾರ್ಡ್ ಗಳನ್ನು ಎಂದಿಗೂ ಕೂಡ ಪಡೆಯಲು ಸಾಧ್ಯವಿಲ್ಲ.
ಇತ್ತೀಚಿನ ದಿನಗಳಲ್ಲಿ ರೇಷನ್ ಕಾರ್ಡ್ ಗಳ ಬೇಡಿಕೆಯು ಕೂಡ ಹೆಚ್ಚಿದೆ ಲಕ್ಷಾಂತರ ರೇಷನ್ ಕಾರ್ಡ್ ಗಳನ್ನು ಪಡೆಯುವಂತಹ ಅಭ್ಯರ್ಥಿಗಳು ಕೂಡ ಇದ್ದಾರೆ. ಏಕೆಂದರೆ ಗ್ಯಾರಂಟಿ ಯೋಜನೆಗಳ ಪ್ರಯೋಜನಗಳು ಸಿಗಬೇಕು ಎಂಬ ಕಾರಣಾಂತರದಿಂದ ರೇಷನ್ ಕಾರ್ಡ್ ಗಳನ್ನು ಕೂಡ ಪಡೆಯಲು ಮುಂದಾಗಿದ್ದಾರೆ. ಎಲ್ಲಾ ಅಭ್ಯರ್ಥಿಗಳು ಕೂಡ ಅಂತವರು ಅರ್ಜಿ ಸಲ್ಲಿಕೆ ಮುಖಾಂತರ ರೇಷನ್ ಕಾರ್ಡ್ ಗಳನ್ನು ಕೂಡ ಪಡೆಯಬಹುದು.
ಕೆಲ ಅಭ್ಯರ್ಥಿಗಳು ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸುವುದಿಲ್ಲ ಏಕೆಂದರೆ ಅವರು ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಆದ ಕಾರಣ ಅವರು ಮುಂದಿನ ದಿನಗಳಲ್ಲಿ ರೇಷನ್ ಕಾರ್ಡ್ ಮುಖಾಂತರ ಉಚಿತ ಧಾನ್ಯಗಳನ್ನು ಕೂಡ ಪಡೆಯಬಹುದು. ಹಾಗೂ ಅನ್ನಭಾಗ್ಯ ಯೋಜನೆ ಮುಖಾಂತರ ಹಣವನ್ನು ಕೂಡ ಪಡೆಯಬಹುದು. ಮತ್ತು ಗೃಹಲಕ್ಷ್ಮಿ ಮುಖಾಂತರ ಎರಡು ಸಾವಿರ ಹಣವನ್ನು ಕೂಡ ಪಡೆಯಬಹುದಾಗಿದೆ.
ಕೊನೆವರೆಗೂ ಲೇಖನವನ್ನು ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು…