pan card new rules 2024 : ಪ್ಯಾನ್ ಕಾರ್ಡ್ ಗೆ ಹೊಸ ಅಪ್ಡೇಟ್ ಜಾರಿ ! ಪ್ಯಾನ್ ಕಾರ್ಡ್ ಕಳೆದು ಹೋದರೆ ಈ ರೀತಿ ಮಾಡಿ .

pan card new rules 2024 : ಎಲ್ಲರಿಗೂ ನಮಸ್ಕಾರ ಸ್ನೇಹಿತರೇ, ಈ ಲೇಖನದಲ್ಲಿ ತಿಳಿಸುತ್ತಿರುವಂತಹ ಹೊಸ ಮಾಹಿತಿ ಏನೆಂದರೆ, ಪ್ಯಾನ್ ಕಾರ್ಡ್ ಗೆ ಹೊಸ ಅಪ್ಡೇಟ್ ಜಾರಿಯಾಗಿದೆ ಏನು ಪ್ಯಾನ್ ಕಾರ್ಡ್ ಗೆ ಸರ್ಕಾರವು ತಂದಿರುವಂತಹ ಹೊಸ ರೂಲ್ಸ್ ಏನು? ಎಂಬ ಎಲ್ಲಾ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುತ್ತದೆ.

ಜೊತೆಗೆ ನಿಮ್ಮ ಪಾನ್ ಕಾರ್ಡ್ ಏನಾದರೂ ಕಳೆದು ಹೋದರೆ ಯಾವ ರೀತಿಯಾಗಿ ಹೊಸ ಪ್ಯಾನ್ ಕಾರ್ಡ್ ಅನ್ನು ಪಡೆಯಬೇಕು ಎಂಬ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಲೇಖನವನ್ನು ಕೊನೆಯವರೆಗೂ ಓದಿ ಉಪಯುಕ್ತವಾದಂತಹ ಮಾಹಿತಿಯನ್ನು ಪಡೆದುಕೊಳ್ಳಿ.

ಕೇಂದ್ರ ಸರ್ಕಾರವು ಭಾರತೀಯ ನಾಗರೀಕರಿಗಾಗಿ ಪ್ಯಾನ್ ಕಾರ್ಡ್ ಗಳನ್ನು ಜಾರಿಗೆ ತಂದಿದೆ ಪ್ಯಾನ್ ಕಾರ್ಡ್ ನ ಮುಖಾಂತರ ಹಲವಾರು ರೀತಿಯ ಪ್ರಯೋಜನಗಳು ನಾಗರೀಕರಿಗೆ ಸಿಗುತ್ತವೆ.

ಇತ್ತೀಚಿನ ದಿನಗಳಲ್ಲಂತೂ ಎಲ್ಲರ ಬಳಿಯೂ ಕೂಡ ಪ್ಯಾನ್ ಕಾರ್ಡ್ ಇರುವುದು ಕಡ್ಡಾಯ ಎಂದು ಸರ್ಕಾರವು ಕೂಡ ಆದೇಶ ನೀಡಿದೆ. ಅಪ್ಡೇಟ್ ಮಾಡಿಸದೇ ಇರುವಂತವರು ಪ್ಯಾನ್ ಕಾರ್ಡುಗಳನ್ನು ಮತ್ತು ಆಧಾರ್ ಕಾರ್ಡ್ ಗಳನ್ನು ಅಪ್ಡೇಟ್ ಮಾಡಿಸಿ ಎಂಬ ಮಾಹಿತಿಯನ್ನು ಕೂಡ ಸರ್ಕಾರವು ತಿಳಿಸಿದೆ.

ಪ್ಯಾನ್ ಕಾರ್ಡ್ ನ ಮಹತ್ವ :

ಪ್ಯಾನ್ ಕಾರ್ಡ್ ಎಂಬುದು ಪ್ರತಿಯೊಬ್ಬ ನಾಗರೀಕನಿಗೂ ಕೂಡ ಅಗತ್ಯವಾಗಿರುವಂತಹ ದಾಖಲೆ ಸರ್ಕಾರವು ಯಾವುದೇ ರೀತಿಯ ಯೋಜನೆಗಳನ್ನು ಜಾರಿಗೆ ತಂದರು ಕೂಡ ಪ್ಯಾನ್ ಕಾರ್ಡ್ ತುಂಬಾ ಮುಖ್ಯವಾಗಿರುತ್ತದೆ.

ಬ್ಯಾಂಕಿನ ವಹಿವಾಟು ನಡೆಸಲು ಅಷ್ಟೇ ಪ್ಯಾನ್ ಕಾರ್ಡ್ ತುಂಬಾ ಮುಖ್ಯ, ಬ್ಯಾಂಕಿನಲ್ಲಿ ನಾವು ಹಣವನ್ನು ವರ್ಗಾವಣೆ ಮಾಡುತ್ತೇವೆ ಅಥವಾ ಹಣವನ್ನು ಪಡೆಯುತ್ತೇವೆ ಎಂದರು ಕೂಡ ಪ್ಯಾನ್ ಕಾರ್ಡ್ ಮುಖ್ಯ ಪ್ಯಾನ್ ಕಾರ್ಡ್ ನ ಆಧಾರದ ಮೇಲೆ ಈ ಎಲ್ಲಾ ಚಟುವಟಿಕೆಗಳು ಕೂಡ ನಡೆಯುತ್ತವೆ.

ಇತ್ತೀಚಿನ ದಿನಗಳಲ್ಲಂತೂ ಪ್ಯಾನ್ ಕಾರ್ಡ್ ತುಂಬಾ ಮುಖ್ಯವಾಗಿರುವಂತಹ ದಾಖಲೆ ಪ್ರತಿಯೊಂದು ಕೆಲಸಕ್ಕೂ ಕೂಡ ಮುಖ್ಯವಾಗಿ ಪ್ರತಿಯೊಬ್ಬ ನಾಗರಿಕರಿಗೆ ಅಗತ್ಯವಾಗಿರುವ ದಾಖಲೆ ಈ ಒಂದು ದಾಖಲೆ ಆಧಾರದ ಮೇಲೆ ಹಲವಾರು ರೀತಿಯ ಕೆಲಸಗಳು ನಡೆಯುತ್ತವೆ ವಿನಹ ಪ್ಯಾನ್ ಕಾರ್ಡ್ ಇಲ್ಲ ಎಂದರೆ ಆ ಕೆಲಸಗಳೆಲ್ಲ ಸ್ಥಗಿತವಾಗುತ್ತದೆ.

ಪ್ಯಾನ್ ಕಾರ್ಡ್ ಅನ್ನು ಇನ್ಕಮ್ ಟ್ಯಾಕ್ಸ್ (ಆದಾಯ ತೆರಿಗೆ ) ಪಾವತಿ ಮಾಡಲು ಕೂಡ ಪ್ಯಾನ್ ಕಾರ್ಡ್ ತುಂಬಾ ಮುಖ್ಯವಾಗಿರುತ್ತದೆ ಹಣಕಾಸಿನ ಸ್ಥಿತಿಗತಿಯನ್ನು ಪರಿಶೀಲಿಸಲು ಕೂಡ ಪ್ಯಾನ್ ಕಾರ್ಡ್ ಮುಖ್ಯ ಅದೇ ರೀತಿಯಾಗಿ ಯಾವುದೇ ಒಂದು ರೀತಿಯ ಕೆಲಸಗಳನ್ನು ಶುರು ಮಾಡುತ್ತೇವೆ ಎಂದರು ಕೂಡ ಪಾನ್ ಕಾರ್ಡ್ ಬೇಕೇ ಬೇಕು.

ಹಾಗಿದ್ದರೆ ಇಂತಹ ಪಾನ್ ಕಾರ್ಡ್ ಏನಾದರೂ ಕಳೆದು ಹೋದರೆ ಏನು ಮಾಡಬೇಕು, ಪ್ರತಿಯೊಬ್ಬ ನಾಗರೀಕನಿಗೂ ಕೂಡ ಇಷ್ಟೆಲ್ಲ ಅನುಕೂಲವಾಗಿರುವಂತಹ ಪ್ಯಾನ್ ಕಾರ್ಡ್ ಕಳೆದು ಹೋದರೆ ಏನು ಮಾಡಬೇಕು? ಹೇಗೆ ನಾವು ಹೊಸ ಪಾನ್ ಕಾರ್ಡನ್ನು ಪಡೆಯಬೇಕು! ಎಂಬ ಮಾಹಿತಿಯನ್ನು ಕೂಡ ತಿಳಿಸುತ್ತೇನೆ,

ನಿಮ್ಮ ಪ್ಯಾನ್ ಕಾರ್ಡ್ ಕಳೆದು ಹೋದರೆ ಈ ರೀತಿ ಮಾಡಿ !

ನಿಮ್ಮ ಪಾನ್ ಕಾರ್ಡ್ ಏನಾದರೂ ಕಳೆದು ಹೋದರೆ ನೀವು ಮೊದಲಿಗೆ ನಿಮ್ಮ ಹತ್ತಿರದ ಪೊಲೀಸ್ ಸ್ಟೇಷನ್ ಗೆ ಹೋಗಿ ಕಂಪ್ಲೇಂಟ್ ಮಾಡಿ ಏಕೆಂದರೆ ಈಗಿನ ಕಾಲದಲ್ಲಿ ಪ್ಯಾನ್ ಕಾರ್ಡ್ ನ ವಂಚನೆಯೂ ಕೂಡ ನಡೆಯುತ್ತಿದೆ. ಆದ್ದರಿಂದಾಗಿ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಬಳಸಿಕೊಂಡು ವಂಚನೆಯನ್ನು ಮಾಡುವಂತವರು ಇದ್ದಾರೆ.

ಈ ರೀತಿಯ ವಂಚನೆಗಳೇ ಈಗಿನ ಕಾಲದಲ್ಲಿ ಹೆಚ್ಚಾಗಿವೆ, ಆದ್ದರಿಂದ ನೀವು ಪೊಲೀಸ್ ಸ್ಟೇಷನ್ ಗೆ ಹೋಗಿ ಒಂದು ಕಂಪ್ಲೇಂಟ್ ಅನ್ನು ಕೊಡಿ ನಂತರ ನೀವು ಡೂಪ್ಲಿಕೇಟ್ ಐಡಿಯನ್ನು ಪಡೆದುಕೊಳ್ಳಿ.

ಪ್ಯಾನ್ ಕಾರ್ಡ್ ಕಳೆದು ಹೋದರೆ ಡೂಪ್ಲಿಕೇಟ್ ಪ್ಯಾನ್ ಕಾರ್ಡ್ ಅನ್ನು ಪಡೆಯಲು ಹೊಂದಿರಬೇಕಾದಂತಹ ಮುಖ್ಯ ದಾಖಲೆಗಳು ಯಾವುವು ?

  • ನಿಮ್ಮ ಜನನ ಪ್ರಮಾಣ ಪತ್ರ
  • ಆಧಾರ್ ಕಾರ್ಡ್
  • ವೋಟರ್ ಐಡಿ ಅಥವಾ ಡ್ರೈವಿಂಗ್ ಲೈಸನ್ಸ್
  • ವಿವಾಹ ಪ್ರಮಾಣ ಪತ್ರ
  • ವಿಳಾಸ ಪುರಾವೆ ನೀಡಬೇಕಾಗುತ್ತದೆ ನಿಮ್ಮ ಆಧಾರ್ ಕಾರ್ಡ್ ನಲ್ಲಿಯೇ ವಿಳಾಸ ಎಲ್ಲ ಇರುತ್ತದೆ ಈ ಆಧಾರದ ಮೇಲೆ ಆಧಾರ್ ಕಾರ್ಡನೆ ವಿಳಾಸ ಪುರಾವೆಯಾಗಿ ಬಳಸಲಾಗುತ್ತದೆ.
ಈಗ ನಾನು ನಿಮಗೆ ತಿಳಿಸಿರುವಂತಹ ಎಲ್ಲಾ ದಾಖಲೆಗಳು ಕೂಡ ನೀವು ಹೊಸದಾಗಿ ಡೂಪ್ಲಿಕೇಟ್ ಪ್ಯಾನ್ ಕಾರ್ಡ್ ಅನ್ನು ಪಡೆಯುತ್ತೀರಿ ಎಂದರೆ ಈ ಎಲ್ಲಾ ದಾಖಲೆಗಳು ಕೂಡ ಅಗತ್ಯ.
ಈ ದಾಖಲೆಗಳನ್ನು ಬಳಸಿಕೊಂಡು ನೀವು ಯಾವ ರೀತಿಯಾಗಿ ಆನ್ಲೈನ್ ಮುಖಾಂತರವೇ ಅರ್ಜಿಯನ್ನು ಸಲ್ಲಿಸಿ ನಿಮ್ಮ ಒಂದು ಡೂಪ್ಲಿಕೇಟ್ ಪ್ಯಾನ್ ಕಾರ್ಡ್ ಅನ್ನು ಹೇಗೆ ಪಡೆಯಬೇಕು ಎಂದು ನೋಡೋಣ,

ಡೂಪ್ಲಿಕೇಟ್ ಪ್ಯಾನ್ ಕಾರ್ಡ್ ಪಡೆಯಲು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಪ್ರಕ್ರಿಯೆ :

  1. ಮೊದಲಿಗೆ ನೀವು ಡೂಪ್ಲಿಕೇಟ್ ಪ್ಯಾನ್ ಕಾರ್ಡ್ ಅನ್ನು ಪಡೆಯಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ, ಈಗ ನಾನು ನಿಮಗೆ ತಿಳಿಸಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುತ್ತೀರಿ.
  2. ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ನೀವು ಅಲ್ಲಿ ಆಧಾರ್ ಕಾರ್ಡ್ ಸಂಖ್ಯೆ, ಮೊಬೈಲ್ ಸಂಖ್ಯೆ, ಹುಟ್ಟಿದ ದಿನಾಂಕ, ಎಲ್ಲವನ್ನು ಭರ್ತಿ ಮಾಡಿ.
  3. ನಂತರ ಕ್ಯಾಪ್ಚ ಕೋಡ್ ಅನ್ನು ನಮೂದಿಸಿ, ಇದೆಲ್ಲಾ ಆದ ನಂತರ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
  4. ಸಲ್ಲಿಸಿದ ಬಳಿಕ ಒಂದು ಹೊಸ ಪುಟ ತೆರೆಯುತ್ತದೆ, ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನ ಎಲ್ಲಾ ಸಂಪೂರ್ಣ ಮಾಹಿತಿಯು ಕಾಣಿಸುತ್ತದೆ, ನಂತರ ನೀವು ಇಮೇಲ್ ಅಥವಾ ಮೊಬೈಲ್ ಸಂಖ್ಯೆ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಿ.
  5. ಯಾವುದಾದರೂ ಒಂದನ್ನು ಆಯ್ಕೆ ಮಾಡಿದ ನಂತರ ‘ಜನರೇಟ್ ಓಟಿಪಿ’ ಎಂಬುದರ ಮೇಲೆ ಕ್ಲಿಕ್ ಮಾಡಿ.
  6. ಬಂದಂತಹ ಓ ಟಿ ಪಿ ಯನ್ನು ನಮೂದಿಸಿದ ನಂತರ ನೀವು ಹೊಸ ಡೂಪ್ಲಿಕೇಟ್ ಪ್ಯಾನ್ ಕಾರ್ಡ್ ಗೆ ಅಪ್ಲೈ ಮಾಡಬಹುದು.

ನೋಡಿದ್ರಲ್ಲ ಸ್ನೇಹಿತರೇ, ಯಾವ ರೀತಿಯಾಗಿ ನಾವು ಕಳೆದು ಹೋದಂತಹ ಪ್ಯಾನ್ ಕಾರ್ಡ್ ಅನ್ನು ಪಡೆಯಬಹುದು. ಯಾವ ದಾಖಲೆಗಳು ಹೊಸ ಪ್ಯಾನ್ ಕಾರ್ಡ್ ಅನ್ನು ಪಡೆಯಲು ಅಗತ್ಯವಾಗಿರುತ್ತವೆ,

ಡ್ಯೂಪ್ಲಿಕೇಟ್ ಪಾನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆಗಳು ಯಾವುವು ಎಂಬ ಎಲ್ಲ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇನೆ.

ಇದೇ ರೀತಿಯಾದಂತಹ ಉಪಯುಕ್ತ ಮಾಹಿತಿಗಳನ್ನು ಪಡೆಯಲು ‘ಕರ್ನಾಟಕ ಟ್ರೆಂಡ್ಸ್ ‘ ಮಾಧ್ಯಮಕ್ಕೆ ಪ್ರತಿನಿತ್ಯವೂ ಕೂಡ ಭೇಟಿ ನೀಡಿ ಭೇಟಿ ನೀಡುವ ಮುಖಾಂತರ ನೀವು ಕೂಡ ಹೊಸ ಹೊಸ ಮಾಹಿತಿಗಳ ಅಪ್ಡೇಟ್ ಅನ್ನು ಪಡೆಯಬಹುದು.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಸ್ನೇಹಿತರೇ, ಮತ್ತೆ ಸಿಗೋಣ ಮುಂದಿನ ಉಪಯುಕ್ತವಾದಂತಹ ಲೇಖನದಲ್ಲಿ.

 

WhatsApp Group Join Now
Telegram Group Join Now

Leave a Comment

error: Don't Copy Bro !!