ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಂದ ರಾಜ್ಯದ ಎಲ್ಲಾ ರೈತರಿಗೆ ಮತ್ತೊಂದು ಗುಡ್ ನ್ಯೂಸ್ : ರೈತರ ಖಾತೆಗೆ ಜಮೆ ನೇರವಾಗಿ ₹3,000ರೂ.| Kharif Bara Parihara Karnataka 3rd Installment Released
ಕನ್ನಡ ಟ್ರೆಂಡ್ಸ್ ಜಾಲತಾಣಕ್ಕೆ ನಿಮಗೆಲ್ಲರಿಗೂ ಸ್ವಾಗತ. ಕಳೆದ ವರ್ಷದ ಮುಂಗಾರು ಬೆಳೆಯು ರೈತರಿಗೆ ಕೈಕೊಟ್ಟ ಕಾರಣ ರಾಜ್ಯದ ರೈತರೆಲ್ಲರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಆದ ಕಾರಣ ರೈತರಿಗೆ ಸಹಾಯ ಮಾಡಲು ಕರ್ನಾಟಕ ರಾಜ್ಯ ಸರ್ಕಾರವು ಈಗಾಗಲೇ ರೈತರಿಗೆ ಎರಡು ಕಂತುಗಳಲ್ಲಿ ಬರ ಪರಿಹಾರದ ಹಣವನ್ನು ರೈತರಿಗೆ ನೀಡಿದ್ದು, ಇದೀಗ ಉಳಿದ ಕಂತಿನ ಹಣವನ್ನು ರಾಜ್ಯದ ಪ್ರತಿಯೊಬ್ಬ ರೈತರಿಗೆ ಬರ ಪರಿಹಾರದ ಹಣ ₹2,800 ರೂಪಾಯಿ ಯಿಂದ ₹3,000 ರೂಪಾಯಿಗಳ ವರೆಗೆ ಮತ್ತೊಂದು ಕಂತಿನಲ್ಲಿ ನೀಡಲು ರಾಜ್ಯ ಸರ್ಕಾರವು ತೀರ್ಮಾನಿಸಿದೆ.
Kharif Bara Parihara Karnataka:
Bele Parihara Karnataka 2024 : ರೈತರ ಕುರಿತು ಮಾತನಾಡಿರುವಂತಹ ರಾಜ್ಯದ ಕಂದಾಯ ಸಚಿವರಾದಂತಹ ಕೃಷ್ಣ ಬೈರೇಗೌಡರವರು ”ರಾಜ್ಯದ 27.5 ಲಕ್ಷ ರೈತರಿಗೆ ಹಂಚಲು ಸುಪ್ರೀಂ ಕೋರ್ಟಿ ನಿಂದ ನಾವು ಬರ ಪರಿಹಾರವನ್ನು ಪಡೆದುಕೊಂಡು ಬಂದಿದ್ದೇವೆ ಎಂದರು. ಮುಂದಿನ ಒಂದು ವಾರದೊಳಗೆ ರಾಜ್ಯ ಸರ್ಕಾರವು ಬರದಿಂದ ತತ್ತರಿಸಿದಂತಹ ರಾಜ್ಯದ ಎಲ್ಲಾ ರೈತರಿಗೆ ರಾಷ್ಟ್ರೀಯ ವಿಪತ್ತು ನಿಧಿಯ ಹಾಗೂ ಜೀವನೋಪಾಯದ ಭತ್ಯೆಗೆ ಅನ್ವಯವಾಗುವಂತೆ ₹2,800 ರೂ. ನಿಂದ ₹3,000 ರೂ. ವರೆಗೆ ನೇರವಾಗಿ ಎಲ್ಲಾ ರೈತರ ಖಾತೆಗೆ ಜಮಾ ಮಾಡಲಿದ್ದೇವೆ ಎಂದು ಕೃಷ್ಣ ಬೈರೇಗೌಡರವರು ಹೇಳಿದರು.
ರಾಜ್ಯದ ಎಲ್ಲಾ ಸಣ್ಣ ಮತ್ತು ಅತೀ ಸಣ್ಣ ರೈತರ 17.09 ಲಕ್ಷ ಕುಟುಂಬಗಳಿಗೆ ಅನುಕೂಲವಾಗುವಂತೆ ಮುಂದಿನ ಒಂದು ವಾರದ ಒಳಗಾಗಿ ರೈತರ ಖಾತೆಗೆ ನೇರವಾಗಿ ಜಮೆ ಮಾಡಲಿದ್ದಾರೆ. ವರದಿಗಳ ಪ್ರಕಾರ ರಾಷ್ಟ್ರೀಯ ವಿಪತ್ತು ನಿಧಿಯಡಿಯಲ್ಲಿ ಸುಮಾರು ₹3,454 ಕೋಟಿ ರೂಪಾಯಿಗಳು ಕರ್ನಾಟಕ ರಾಜ್ಯಕ್ಕೆ ಬಿಡುಗಡೆಯಾಗಿತ್ತು.
ಇದರಲ್ಲಿ ಸುಮಾರು ₹2,451 ಕೋಟಿ ರೂಪಾಯಿಗಳನ್ನು ಕಳೆದ ಮೇ ತಿಂಗಳ ಮೊದಲ ವಾರದಲ್ಲಿಯೆ ರಾಜ್ಯದ ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗಿತ್ತು. ಇದರಲ್ಲಿ ಉಳಿದ ಮೊತ್ತದ ಹಣವನ್ನು ಹಾಗೂ ರಾಜ್ಯ ಸರ್ಕಾರದಿಂದ ಇನ್ನೂ ಸ್ವಲ್ಪ ಹಣ ಮೊತ್ತವನ್ನು ಸೇರಿಸಿ ಇದೀಗ ಮತ್ತೊಂದು ಬಾರಿ ಎಲ್ಲಾ ರೈತರಿಗೆ ಬರ ಪರಿಹಾರವನ್ನು ಜಮಾ ಮಾಡಲಿದ್ದಾರೆ.
ಬರ ಪರಿಹಾರದಿಂದ ರಾಜ್ಯದ 7 ಲಕ್ಷ ರೈತರ ಕುಟುಂಬಗಳಿಗೆ ಪ್ರಯೋಜನ:
ಪರಿಹಾರ ಸಿಗದೇ ಇರುವಂತಹ ಮಳೆಯಾಶ್ರಿತ ಬೆಳೆಗಳ ರೈತರಿಗೆ ಮೊದಲ ಹಂತದಲ್ಲಿನ ಬೆಳೆಯ ಮತ್ತು ನಾಲೆಯ ಕೊನೆಯ ಭಾಗದಲ್ಲಿರುವಂತಹ ರೈತರಿಗೆ ಈ ಮೊದಲ ಹಂತದ ಪರಿಹಾರದ ಹಣವನ್ನು ನೀಡಲು ಸರ್ಕಾರವು ತೀರ್ಮಾನಿಸಿದೆ ಎಂದು ವರದಿಗಳು ಹೇಳಿವೆ. ರಾಜ್ಯ ಸರ್ಕಾರದ ಈ ಒಂದು ನಿರ್ಧಾರದಿಂದ ರಾಜ್ಯದ 7 ಲಕ್ಷ ರೈತರಿಗೆಲ್ಲ ಪ್ರಯೋಜನ ಆಗಲಿದೆ.
ಬರ ಪರಿಹಾರದ ಹಣ ಜಮಾ ಆಗಲು ಆರಂಭ:
ಮುಂಬರುವ ಒಂದು ವಾರದದೋಳಗೆ ರಾಜ್ಯದ ರೈತರ ಖಾತೆಗೆ ನೇರವಾಗಿ ಪರಿಹಾರದ ಹಣ ಜಮೆ ಮಾಡುವಂತೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಕಂದಾಯ ಸಚಿವ ಕೃಷ್ಣ ಭೈರೇಗೌಡರು ಈಗಾಗಲೇ ಸೂಚಿಸಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ರಾಜ್ಯದ ಹಲವು ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳಿಗೆ ಪ್ರಯೋಜನವಾಗಲಿದೆ. ಇದನ್ನು ಹೊರತುಪಡಿಸಿ ರಾಜ್ಯದ ರೈತರಿಗೆ ಬೆಳೆ ವಿಮೆಯ ಮುಖಾಂತರವೂ ಕೂಡ ರೈತರಿಗೆ ₹1,654 ಕೋಟಿ ರೂಪಾಯಿಯ ಪರಿಹಾರ ಸಿಗುತ್ತಿದೆ. ಇದರಲ್ಲಿ ರೈತರಿಗೆ ವರ್ಗಾವಣೆ ಮಾಡಲು ಇನ್ನೂ ₹136 ಕೋಟಿ ರೂಪಾಯಿಗಳು ಬಾಕಿಯಿದೆ.
Kharif Bara Parihara Karnataka 3rd Installment (Status Check) : ಇಲ್ಲಿ ಕ್ಲಿಕ್ ಮಾಡಿ
ರೈತರ ಖಾತೆಗೆ ಮುಂದಿನ ಒಂದು ವಾರದ ಒಳಗೆ ಪರಿಹರದ ಹಣವನ್ನು ಜಮಾ ಮಾಡಬಹುದಾದ ಸಂಪೂರ್ಣ ಸಾಧ್ಯತೆಗಳಿದ್ದು, ಎಲ್ಲಾ ರೈತರು ತಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿಕೊಳ್ಳಿ. ನಮ್ಮ ಈ ಜಾಲತಾಣದ ಲೇಖನದ ಮಾಹಿತಿಗಳು ನಿಮಗೆ ಉಪಯುಕ್ತವೆನಿಸಿದರೆ ಈ ಕೂಡಲೇ ನಿಮ್ಮ ಸ್ನೇಹಿತರಿಗೂ ಮತ್ತು ಎಲ್ಲಾ ರೈತ ಬಾಂಧವರಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಿ.