IBPS PO & Clerk Recruitment 2024: ಹಲೋ ಸ್ನೇಹಿತರೆ, ibps.in IBPS ಕ್ಲರ್ಕ್ ಮತ್ತು PO ನೇಮಕಾತಿ 2024 ಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ. IBPS ಕ್ಲರ್ಕ್ ಮತ್ತು PO ನೇಮಕಾತಿ 2024 ರ ಬ್ಯಾಚ್ಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹತೆ ಹೊಂದಿರುವ ಅಭ್ಯರ್ಥಿಗಳು, ಪದವಿ ಅಥವಾ ಅರ್ಹತೆ ಮತ್ತು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ತತ್ಸಮಾನ ಪದವಿಯನ್ನು ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಪ್ಲಿಕೇಶನ್ ಪ್ರಕ್ರಿಯೆಯನ್ನು ಆನ್ಲೈನ್ನಲ್ಲಿ ನಡೆಸಲಾಗುವುದು ಮತ್ತು ಇದೇ ತಿಂಗಳ ಜೂನ್ 2024 ರಿಂದ ಅಧಿಕೃತ ವೆಬ್ಸೈಟ್ನಲ್ಲಿ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಸಕ್ರಿಯಗೊಳಿಸಲಾಗುತ್ತದೆ.
ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಆಯ್ಕೆ ಪ್ರಕ್ರಿಯೆ, ಪರೀಕ್ಷೆಯ ದಿನಾಂಕಗಳು ಮತ್ತು ಇತರ ಪ್ರಮುಖ ಮಾಹಿತಿಯ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. IBPS ಕ್ಲರ್ಕ್ ಮತ್ತು PO ನೇಮಕಾತಿ 2024 ಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಯಲು, ನೀವು ಈ ಪೋಸ್ಟ್ ಅನ್ನು ಕೊನೆಯವರೆಗೂ ಓದಿದರೆ ಸಾಂಪೂರ್ಣ ಮಾಹಿತಿಯನ್ನು ಪಡೆಯುತ್ತೀರಿ.
IBPS ಕ್ಲರ್ಕ್ ಮತ್ತು PO ನೇಮಕಾತಿ 2024 ಅಧಿಸೂಚನೆಯ ಪೂರ್ತಿ ವಿವರ:
ಬೋರ್ಡ್ ಹೆಸರು | (IBPS)ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ |
ಪೋಸ್ಟ್ ಹೆಸರು | PO (Probationary Officers) ಪೋಸ್ಟ್ ಮತ್ತು ಕ್ಲರ್ಕ್ (Clerk) ಪೋಸ್ಟ್ |
ಪೋಸ್ಟ ಗಳ ಸಂಖ್ಯೆ | PO ಹುದ್ದೆಗೆ (4000 ರಿಂದ 5000) ಪೋಸ್ಟ್ ಗಳು / Clerk ಹುದ್ದೆಗೆ (5000 ರಿಂದ 7000) ಪೋಸ್ಟ್ ಗಳು |
ಅಪ್ಲಿಕೇಷನ್ ಸಲ್ಲಿಸಲು ಪ್ರಾರಂಭದ ದಿನಾಂಕ | ಜೂನ್ 2024 |
ಅಪ್ಲಿಕೇಷನ್ ಸಲ್ಲಿಸಲು ಕೊನೆಯ ದಿನಾಂಕ | ಜುಲೈ 2024 |
IBPS ಕ್ಲರ್ಕ್ ಮತ್ತು PO ನೇಮಕಾತಿ 2024 ರ ವಯಸ್ಸಿನ ಮಿತಿ:
- PO (Probationary Officers) ಹುದ್ದೆಗೆ – 20 ವರ್ಷದಿಂದ 30 ವರ್ಷವನ್ನು ಮೀರಿರಬಾರದು.
- ಕ್ಲರ್ಕ್ (Clerk) ಹುದ್ದೆಗೆ – 20 ವರ್ಷದಿಂದ 28 ವರ್ಷವನ್ನು ಮೀರಿರಬಾರದು.
IBPS PO ನೇಮಕಾತಿಗೆ 2024 ರ ಅರ್ಹತಾ ಮಾನದಂಡಗಳು:
- ಈ IBPS PO ನೇಮಕಾತಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಮತ್ತು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಯುಜಿಸಿ (UGC) ಯಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿ ಪದವಿಯನ್ನು ಪಡೆದಿರಬೇಕು.
- ಈ IBPS PO ನೇಮಕಾತಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಮತ್ತು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಕಂಪ್ಯೂಟರ್ (Computer System) ಕೆಲಸದ ಬಗ್ಗೆ ಸಂಪೂರ್ಣ ಜ್ಞಾನವನ್ನು ಹೊಂದಿರಬೇಕು.
- ಈ IBPS PO ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಅಧಿಕೃತ ಭಾಷೆಯಲ್ಲಿ (Speaking & Writing) ಮಾತನಾಡುವ ಮತ್ತು ಬರೆಯುವವುದರಲ್ಲಿ ಪ್ರಾವೀಣ್ಯತೆಯನ್ನು ಹೊಂದಿರಬೇಕು.
IBPS ಕ್ಲರ್ಕ್ ನೇಮಕಾತಿಗೆ 2024 ರ ಅರ್ಹತಾ ಮಾನದಂಡಗಳು:
- ಈ IBPS ಕ್ಲರ್ಕ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಯುಜಿಸಿ (UGC) ಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದರಬೇಕು.
- ಈ IBPS ಕ್ಲರ್ಕ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಸಿದ್ಧವಿರುವ ಅಭ್ಯರ್ಥಿಗಳು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಅಧಿಕೃತ ಭಾಷೆಯಲ್ಲಿ ಮಾತನಾಡುವ ಮತ್ತು ಬರೆಯುವ (Speaking & Writing) ನಲ್ಲಿ ಪ್ರಾವೀಣ್ಯತೆಯನ್ನು ಹೊಂದಿರಬೇಕು.
IBPS ಕ್ಲರ್ಕ್ ಮತ್ತು PO ನೇಮಕಾತಿ 2024 ಅರ್ಜಿ ಶುಲ್ಕ ವಿವರ:
- GEN (ಜನರಲ್) /OBC (ಒಬಿಸಿ) ವರ್ಗಗಳಿಗೆ ಅರ್ಜಿಯ ಶುಲ್ಕ – 850/- ರೂ. ಗಳು
- SC/ST ವರ್ಗಗಳಿಗೆ ಅರ್ಜಿಯ ಶುಲ್ಕ – ಅರ್ಜಿ ಶುಲ್ಕ ದಿಂದ ವಿನಾಯಿತಿ ನೀಡಲಾಗಿದೆ.
IBPS ನೇಮಕಾತಿಗೆ ಇಂಟಿಮೇಶನ್ ಚಾರ್ಜ್ ವಿವರ:
GEN (ಜನರಲ್) /OBC (ಒಬಿಸಿ) ವರ್ಗಗಳಿಗೆ – 175/- ರೂ. ಗಳು
SC/ST ವರ್ಗಗಳಿಗೆ – 175/- ರೂ. ಗಳು
IBPS ಕ್ಲರ್ಕ್ PO ನೇಮಕಾತಿ ಗೆ 2024 ಹೇಗೆ ಅರ್ಜಿಯನ್ನು ಸಲ್ಲಿಸುವುದು?
- ಮೊದಲು ಅಭ್ಯರ್ಥಿಗಳು (IBPS) ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ನ ವೆಬ್ಸೈಟ್ ಪೋರ್ಟಲ್ಗೆ ಭೇಟಿ ನೀಡಿ.
- ಇತ್ತೀಚಿನ ಆಡಿಸೂಚನೆ ಯಲ್ಲಿ IBPS ನೇಮಕಾತಿ ವಿಭಾಗವನ್ನು ಹುಡುಕಿ ಆ ಪೇಜ್ ಗೆ ಹೋಗಿ.
- IBPS ನೇಮಕಾತಿ ವಿಭಾಗದಲ್ಲಿ, ಅಭ್ಯರ್ಥಿಗಳು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್ ಅನ್ನು ಕಾಣಬಹುದು ಅದರ ಮೇಲೆ ಕ್ಲಿಕ್ ಮಾಡಿ.
- ನೀವು ನಿಮ್ಮ ಎಲ್ಲಾ ಮಾಹಿತಿಯನ್ನು ಅಲ್ಲಿ ಸಂಪೂರ್ಣವಾಗಿ ಭರ್ತಿ ಮಾಡಿ ಮತ್ತು ಮುಂದಿನ (Next) ಬಟನ್ ಅನ್ನು ಕ್ಲಿಕ್ ಮಾಡಿ.
- ಅಭ್ಯರ್ಥಿಗಳು ನಿಯಮಾನುಸಾರ ಗಾತ್ರಕ್ಕೆ ಅನುಗುಣವಾಗಿ ತಮ್ಮ ಫೋಟೋ ಮತ್ತು ಹೆಬ್ಬೆರಳಿನ ಅಚ್ಚು ಅಂದರೆ (ಹೆಬ್ಬೆರಳಿನ ಇಂಪ್ರೆಶನ್) ಅನ್ನು ಅಪ್ಲೋಡ್ ಮಾಡಿ.
- ಮುಂದಿನ ಪುಟದಲ್ಲಿ, ಅಭ್ಯರ್ಥಿಗಳು ತಮ್ಮ ಅರ್ಜಿಯ ಶುಲ್ಕವನ್ನು ಠೇವಣಿ ಮಾಡಬೇಕು, ನಂತರ ನಿಮ್ಮ ಫಾರ್ಮ್ ಅನ್ನು ಸಲ್ಲಿಸಿ, ಹಾಗೂ ನಿಮ್ಮ ಅರ್ಜಿಯ ಮುದ್ರಣೆಯನ್ನು ತೆಗೆದುಕೊಳ್ಳಿ.
IBPS ಕ್ಲರ್ಕ್ PO ಅಧಿಸೂಚನೆಯ ಲಿಂಕ್ | ನೋಟಿಫಿಕೇಶನ್ ಲಿಂಕ್ |
ಅಧಿಕೃತ ವೆಬ್ಸೈಟ್ ಲಿಂಕ್ | ಇಲ್ಲಿ ಭೇಟಿ ನೀಡಿ |
ಹೆಚ್ಚಿನ ಉದ್ಯೋಗ ಮಾಹಿತಿಗಳಿಗಾಗಿ | ಇಲ್ಲಿ ಭೇಟಿ ನೀಡಿ |